Home
ಸುದ್ದಿಜಾಲ

BSNLನ ಈ ಪ್ಲ್ಯಾನಿನಲ್ಲಿ ಸಿಗುತ್ತೆ 2GB ಡಾಟಾ ಮತ್ತು 54 ದಿನ ವ್ಯಾಲಿಡಿಟಿ!

ದೇಶದ ಟೆಲಿಕಾಂ ಕ್ಷೇತ್ರದಲ್ಲಿಗ ಟಾರೀಫ್ ಪ್ಲ್ಯಾನ್‌ಗಳ ಬೆಲೆ ಏರಿಕೆಯದ್ದೇ ಸುದ್ದಿ. ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಪ್ರೀಪೇಡ್ ಪ್ಲ್ಯಾನುಗಳ ದರ ಹೆಚ್ಚಳ ಮಾಡಿದ್ದು, ಗ್ರಾಹಕರಿಗೆ ಹೊರೆ ಅನಿಸಿದೆ. ಖಾಸಗಿ ಟೆಲಿಕಾಂಗಳು ಈಗಾಗಲೇ ದರ ಹೆಚ್ಚಳದೊಂದಿಗೆ ಹೊಸ ಪ್ಲ್ಯಾನ್ಗಳನ್ನು ಪರಿಚಯಿಸಿದ್ದು, ಆದ್ರೆ, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್ ಈ ವರೆಗೂ ಯಾವುದೇ ಪ್ಲ್ಯಾನ್‌ಗಳ ಬೆಲೆಯಲ್ಲಿ ಏರಿಕೆ ಮಾಡಿಲ್ಲ.

ಬಿಎಸ್‌ಎನ್ಎಲ್

ಹೌದು, ಬಿಎಸ್‌ಎನ್ಎಲ್ ಸಂಸ್ಥೆಯ ಸಹ ಬೆಲೆ ಏರಿಕೆ ಮಾಡಲಿದೆ ಎನ್ನುವ ಮಾತುಗಳು ಇದ್ದವು ಆದರೆ, ಆ ಬಗ್ಗೆ ಸಂಸ್ಥೆಯು ಇನ್ನು ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ಇನ್ನು ಖಾಸಗಿ ಟೆಲಿಕಾಂಗಳ ರೀಚಾರ್ಜ್ ಪ್ಲ್ಯಾನ್‌ಗಳಲ್ಲಿ ಶೇ.40% ರಿಂದ ಶೇ.47% ಪರ್ಸೆಂಟ್ ವರೆಗೂ ದರ ಹೆಚ್ಚಳ ಆಗಿದ್ದು, ಗ್ರಾಹಕರಿಗೆ ದುಬಾರಿ ಅನಿಸಿವೆ. ಅಧಿಕ ವ್ಯಾಲಿಡಿಟಿಯ ಮತ್ತು ಡಾಟಾ ಪ್ಲ್ಯಾನ್‌ಗಳ ಬೆಲೆಯು ಹೆಚ್ಚಿವೆ. ಈ ನಡುವೆ ಬಿಎಸ್‌ಎನ್ಎಲ್‌ನ 200ರೂ. ಒಳಗಿನ 56 ದಿನಗಳ ವ್ಯಾಲಿಡಿಟಿ ಪ್ಲ್ಯಾನ್‌ಗಳು ಆಕರ್ಷಿಸಿವೆ. ಹಾಗಾದರೇ ಆ ಪ್ಲ್ಯಾನ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಬಿಎಸ್‌ಎನ್ಎಲ್ 197ರೂ. ಪ್ಲ್ಯಾನ್

ಬಿಎಸ್‌ಎನ್ಎಲ್ 197ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ 197ರೂ. ಪ್ಲ್ಯಾನ್ 200ರೂ. ಒಳಗಿನ ಆಕರ್ಷಕ ಪ್ಲ್ಯಾನ್‌ಗಳಲ್ಲಿ ಒಂದಾಗಿದ್ದು, ಈ ಪ್ಲ್ಯಾನ್ ಒಟ್ಟು 54 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಅದರೊಂದಿಗೆ ಪ್ರತಿದಿನ 2GB ಉಚಿತ ಡಾಟಾ ಸೌಲಭ್ಯವನ್ನು ಪಡೆದಿದೆ. ಆದರೆ ಈ ಪ್ಲ್ಯಾನ್‌ ಅನಿಯಮಿತ ಉಚಿತ ಕರೆಗಳ ಸೌಲಭ್ಯವನ್ನು ಒಳಗೊಂಡಿಲ್ಲ. ಕಡಿಮೆ ಬೆಲೆಯಲ್ಲಿ ಅಧಿಕ ವ್ಯಾಲಿಡಿಟಿ ಮತ್ತು ಡಾಟಾ ಬಯಸುವ ಗ್ರಾಹಕರಿಗೆ ಈ ಪ್ಲ್ಯಾನ್ ಉತ್ತಮ ಅನಿಸಲಿದೆ.

ಬಿಎಸ್‌ಎನ್‌ಎಲ್‌ನ 399ರೂ. ಪ್ಲ್ಯಾನ್‌

ಬಿಎಸ್‌ಎನ್‌ಎಲ್‌ನ 399ರೂ. ಪ್ಲ್ಯಾನ್‌

ಬಿಎಸ್‌ಎನ್‌ಎಲ್‌ನ 399ರೂ. ಪ್ಲ್ಯಾನ್‌ ಅಧಿಕ ಡಾಟಾ ಮತ್ತು ಉಚಿತ ಕರೆ ಸೌಲಭ್ಯಗಳನ್ನು ಹೊಂದಿರುವ ಈ ಫ್ಲ್ಯಾನ್ ಒಟ್ಟು 80 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಈ ವಾಯ್ದೆಯ ಅವಧಿಯಲ್ಲಿ ಪ್ರತಿದಿನ 250 ನಿಮಿಷಗಳ ಉಚಿತ ಕರೆಗಳ ಸೌಲಭ್ಯವನ್ನು ಒಳಗೊಂಡಿದೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಹಾಗೂ ಪ್ರತಿದಿನ 1GB ಡಾಟಾ ಪ್ರಯೋಜನಗಳನ್ನು ಸಹ ಪಡೆದಿದೆ. ಹಾಗೆಯೇ PRBT ಪ್ರಯೋಜನಗಳನ್ನು ಒದಗಿಸಲಿದೆ.

ಖಾಸಗಿ ಟೆಲಿಕಾಂ 56 ದಿನಗಳ ವ್ಯಾಲಿಡಿಟಿ ಪ್ಲ್ಯಾನ್

ಖಾಸಗಿ ಟೆಲಿಕಾಂ 56 ದಿನಗಳ ವ್ಯಾಲಿಡಿಟಿ ಪ್ಲ್ಯಾನ್

ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್ ಸಂಸ್ಥೆಗಳ 56 ದಿನಗಳ ವ್ಯಾಲಿಡಿಟಿ ಪ್ಲ್ಯಾನ್‌ಗಳು ಸುಮಾರು 400ರೂ. ಆಸುಪಾಸಿನಲ್ಲಿವೆ. ಏರ್‌ಟೆಲ್‌ 399ರೂ. ಪ್ಲ್ಯಾನ್‌ 56 ದಿನಗಳ ವ್ಯಾಲಿಡಿಟಿ ಅವಧಿ ಪಡೆದಿದ್ದು, ಪ್ರತಿದಿನ 1.5GB ಡಾಟಾ ನೀಡುತ್ತದೆ. ವೊಡಾಫೋನ್ ಸಹ 399ರೂ.ಗೆ 56 ದಿನಗಳ ವ್ಯಾಲಿಡಿಟಿ ಒದಗಿಸುತ್ತದೆ. ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡಾಟಾ ಲಭ್ಯ. ಇನ್ನು ಜಿಯೋ ಸಹ 399ರೂ. ಪ್ಲ್ಯಾನಿನಲ್ಲಿ 56 ದಿನಗಳ ವ್ಯಾಲಿಡಿಟಿ ಹೊಂದಿದೆ.

Best Mobiles in India

English summary
BSNL is shipping 54 days validity data voucher for Rs 197. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+