ಜಿಯೋ ಫೈಬರ್‌ಗೆ ಕುತ್ತು ತಂದ ಬಿಎಸ್‌ಎನ್‌ಎಲ್‌ನ 849ರೂ.ಬ್ರಾಡ್‌ಬ್ಯಾಂಡ್ ಪ್ಲ್ಯಾನ್!
ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಕೇವಲ ಟೆಲಿಕಾಂ ಸಂಸ್ಥೆಯಾಗಿ ಉಳಿದಿಲ್ಲ. ಬದಲಿಗೆ ಬ್ರಾಡ್‌ಬ್ಯಾಂಡ್ ಸೇವೆಯಿಂದಲೂ ಗುರುತಿಸಿಕೊಂಡಿದೆ. ಸದ್ಯ, 100mbps ವೇಗದ ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುವ ಸಂಸ್ಥೆಗಳಲ್ಲಿ ಬಿಎಸ್‌ಎನ್‌ಎಲ್ ಸಹ ಒಂದಾಗಿದ್ದು, ಖಾಸಗಿ ಬ್ರಾಡ್‌ಬ್ಯಾಂಡ್ ಸಂಸ್ಥೆಗಳಿಗೆ ಪ್ರಬಲ ಎದುರಾಳಿ ಆಗಿದೆ. ಇದೀಗ ಜನಪ್ರಿಯ ಜಿಯೋ ಸಂಸ್ಥೆಯ ಗಿಗಾಫೈಬರ್ ಸೇವೆಗೆ ಕಠಿಣ ಪೈಪೋಟಿ ನೀಡುವ ಪ್ಲ್ಯಾನ್‌ವೊಂದನ್ನು ಲಾಂಚ್ ಮಾಡಿದೆ.

ಹೌದು, ಬಿಎಸ್‌ಎನ್‌ಎಲ್ ಸಂಸ್ಥೆಯು 849ರೂ.ಗಳ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ವೊಂದನ್ನು ಪರಿಚಯಿಸಿದ್ದು, ಈ ಪ್ಲ್ಯಾನ್‌ನಲ್ಲಿ ಇಂಟರ್ನೆಟ್ ವೇಗವು 50Mbps ಸಾಮರ್ಥ್ಯದಲ್ಲಿರಲಿದ್ದು, ಒಟ್ಟು 600GB ಡೇಟಾ ಸೌಲಭ್ಯ ಸಿಗಲಿದೆ. ಬಿಎಸ್‌ಎನ್‌ಎಲ್‌ನ ಈ ಪ್ಲ್ಯಾನ್ ಜಿಯೋ ಗಿಗಾಫೈಬರ್‌ನ ಸಿಲ್ವರ್ ಪ್ಲ್ಯಾನಿಗೆ ನೇರ ಫೈಟ್ ನೀಡಲಿದೆ. ಹಾಗಾದರೇ ಬಿಎಸ್‌ಎನ್‌ಎಲ್‌ನ 849ರೂ. ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದೆ ತಿಳಿಯೋಣ ಬನ್ನಿರಿ.

ಬಿಎಸ್‌ಎನ್‌ಎಲ್ 849ರೂ. ಪ್ಲ್ಯಾನ್
ಬಿಎಸ್‌ಎನ್‌ಎಲ್ ಈ ಬ್ರಾಡ್‌ಬ್ಯಾಂಡ್ ಪ್ಲ್ಯಾನಿನಲ್ಲಿ ಒಟ್ಟು 600GB ಡೇಟಾ ನಿಗದಿ ಮಾಡಲಾಗಿದ್ದು, 50Mbps ವೇಗದಲ್ಲಿ ಇಂಟರ್ನೆಟ್ ಕೆಲಸ ಮಾಡಲಿದೆ. ನಿಗದಿ ಮಾಡಿರುವ ಡೇಟಾ ಬಳಕೆ ಮುಗಿದ ಬಳಿಕ 2Mbps ವೇಗದಲ್ಲಿ ಇಂಟರ್ನೆಟ್ ಸೇವೆ ಮುಂದುವರೆಯಲಿದೆ. ಇದರೊಂದಿಗೆ ಅನಿಯಮಿತ ಉಚಿತ ಲ್ಯಾಂಡ್‌ಲೈನ್ ಕರೆಗಳ ಸೌಲಭ್ಯ ಸಿಗಲಿದ್ದು, ಹಾಗೆಯೇ ಉಚಿತವಾಗಿ ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವ ಸಹ ದೊರೆಯಲಿದೆ.

ಜಿಯೋ 849ರೂ. ಪ್ಲ್ಯಾನ್
ಜನಪ್ರಿಯ ಖಾಸಗಿ ಟೆಲಿಕಾಂ ಸಂಸ್ಥೆ ಜಿಯೋ ಸಹ 849ರೂ. ಪ್ಲ್ಯಾನ್‌ವೊಂದನ್ನು ಪರಿಚಯಿಸಿದ್ದು, ಈ ಪ್ಲ್ಯಾನ್ 200GB ಡೇಟಾ ಸೌಲಭ್ಯ ಹೊಂದಿದೆ. ಆದರೆ ಹೊಸ ಗ್ರಾಹಕರಿದ್ದರೇ ಮೊದಲ ಆರು ತಿಂಗಳ 200GB ಅಡಿಷನಲ್ ಡೇಟಾ ಲಭ್ಯವಾಗಲಿದ್ದು, ಹೀಗಾಗಿ ಒಟ್ಟು 400GB ಸಿಗಲಿದೆ. ಇಂಟರ್ನೆಟ್ ವೇಗವು 100Mbps ಆಗಿದೆ. ಉಳಿದಂತೆ ಅನಿಯಮಿತ ಉಚಿತ ಲ್ಯಾಂಡ್‌ಲೈನ್ ಕರೆಗಳು ಹಾಗೂ ಉಚಿತ ಜಿಯೋ ಸಿನಿಮಾ, ಜಿಯೋ ಸಾವನ್, ಮೂರು ತಿಂಗಳ ಕಾಲ ಉಚಿತ OTT ಆಪ್ಸ್‌ಗಳ ಸೇವೆಯು ದೊರೆಯಲಿದೆ.

ಇನ್‌ಸ್ಟಾಲ್ ಮತ್ತು ಭದ್ರತಾ ಠೇವಣಿ
ಜಿಯೋ ಗಿಗಾಫೈಬರ್ ಮತ್ತು ಬಿಎಸ್‌ಎನ್‌ಎಲ್ ಎರಡು ಸಹ 849ರೂ. ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಹೊಂದಿವೆ. ಆದರೆ ಈ ಎರಡು ಪ್ಲ್ಯಾನ್‌ಗಳ ಪ್ರಯೋಜನೆಗಳು ಭಿನ್ನವಾಗಿವೆ. ಜಿಯೋ ಸಂಸ್ಥೆಯು ಬ್ರಾಡ್‌ಬ್ಯಾಂಡ್ ಸೇವೆಯ ಭದ್ರತಾ ಠೇವಣಿಯಾಗಿ 1,500ರೂ ಮತ್ತು ಇನ್‌ಸ್ಟಾಲೇಶನ್ ಶುಲ್ಕವಾಗಿ 1,000ರೂ ಗಳು ಒಟ್ಟು 2,500ರೂ.ಗಳನ್ನು ಗ್ರಾಹಕರಿಂದ ಪಡೆಯುತ್ತದೆ. ಇನ್ನು ಬಿಎಸ್‌ಎನ್‌ಎಲ್ ಸಂಸ್ಥೆಯು ಭದ್ರತಾ ಠೇವಣಿಯಾಗಿ 849ರೂ.ಗಳನ್ನು ಮತ್ತು ಇನ್‌ಸ್ಟಾಲೇಶನಗೆ 250.ರೂ ಶುಲ್ಕ ಮಾಡುತ್ತದೆ.

ಇತರೆ ಪ್ರಯೋಜನಗಳು
ಜಿಯೋ ಗಿಗಾಫೈಬರ್ ಇನ್‌ಸ್ಟಾಲೇಶನ್ ನೊಂದಿಗೆ 2.4 GHz ಸಾಮರ್ಥ್ಯದ ರೋಟರ್ ಲಭ್ಯವಾಗಲಿದ್ದು, ಅಕೌಂಟ್ ಕ್ಲೋಸ್ ಮಾಡುವ ಸಮಯದಲ್ಲಿ ಹಿಂಪಡೆಯುತ್ತಾರೆ. ಹಾಗೆಯೇ ವಾರ್ಷಿಕ್ ಪ್ಲ್ಯಾನ್ ರೀಚಾರ್ಜ್ ಮೇಲೆ ವಿಶೇಷ ಪ್ರಯೋಜನೆಗಳ ಆಯ್ಕೆ ಸಿಗಲಿದೆ. ಇನ್ನು ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಸ್ಮಾರ್ಟ್‌ಹೋಮ್ ವೈಫೈ ONT ಡಿವೈಸ್ ಸಿಗಲಿದ್ದು, ಹಾಗೆಯೇ ವಾರ್ಷಿಕ ರೀಚಾರ್ಜ್‌ಗಳ ಮೇಲೆ ಶೇ.20% ಕ್ಯಾಶ್‌ಬ್ಯಾಕ್ ಸಹ ದೊರೆಯಲಿದೆ.


Click it and Unblock the Notifications








