Just In
Don't Miss
- Sports
ಅಸಾಧಾರಣ ಆಟಗಾರರಿಂದಾಗಿ ಭಾರತದ ವಿರುದ್ಧ ಇಂಗ್ಲೆಂಡ್ ಗೆಲ್ಲಲಿದೆ: ಆ್ಯಂಡಿ ಫ್ಲವರ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 28ರ ದರ
- News
ಫೆ.28ರವರೆಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನ ಸಂಚಾರಕ್ಕೆ ನಿರ್ಬಂಧ
- Automobiles
ಮೆಕ್ಸಿಕೋ ಮಾರುಕಟ್ಟೆಗೆ ಕಾಲಿಡಲಿದೆ ಹೀರೋ ಮೋಟೊಕಾರ್ಪ್
- Movies
ರಾಬರ್ಟ್, ಪೊಗರು, ಕೋಟಿಗೊಬ್ಬ 3 ಬಗ್ಗೆ ಪುನೀತ್ ರಾಜ್ಕುಮಾರ್ ಮಾತು
- Lifestyle
ಶನಿ ಸಂಚಾರ 2021: ನಿಮ್ಮ ರಾಶಿಯ ಮೇಲೆ ವರ್ಷ ಪೂರ್ತಿ ಇರಲಿದೆ ಶನಿಯ ಪ್ರಭಾವ
- Education
KVAFSU Bidar Recruitment 2021: 9 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
BSNL ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಕೊಡುಗೆ : ಒಟ್ಟು 1275GB ಡಾಟಾ!
ಸದ್ಯ ದೇಶಿಯ ಟೆಲಿಕಾಂ ವಲಯವು ಪೈಪೋಟಿಯಲ್ಲಿದ್ದು, ಖಾಸಗಿ ಟೆಲಿಕಾಂಗಳ ಅಬ್ಬರ ಬಲು ಜೋರಾಗಿದೆ. ಹಾಗಂತ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಂಸ್ಥೆಯು ಪೈಪೋಟಿಯಿಂದ ಹಿಂದೆ ಉಳಿದಿಲ್ಲ. ಇತ್ತೀಚಿಗೆ ಬಿಎಸ್‌ಎನ್‌ಎಲ್ ಕೆಲವು ಹಬ್ಬ, ವಿಶೇಷ ದಿನಗಳಂದೂ ಅತ್ಯುತ್ತಮ ಆಫರ್‌ಗಳನ್ನು ಬಿಡುಗಡೆ ಮಾಡಿ ಖಾಸಗಿ ಟೆಲಿಕಾಂಗಳಿಗೆ ಶಾಕ್ ನೀಡುತ್ತಾ ಸಾಗಿದೆ. ಅದೇ ರೀತಿ ಕ್ರಿಸ್‌ಮಸ್ ಹಬ್ಬಕ್ಕೂ ಈಗ ಭರ್ಜರಿ ಕೊಡುಗೆ ನೀಡಿದೆ.

ಹೌದು, ಬಿಎಸ್‌ಎನ್‌ಎಲ್ ಸಂಸ್ಥೆಯು ಕ್ರಿಸ್‌ಮಸ್ ಮತ್ತು ಹೊಸ ವರ್ಷ 2020ರ ಪ್ರಯುಕ್ತ ತನ್ನ 1999ರೂ. ಪ್ರೀಪೇಡ್ ಪ್ಲ್ಯಾನಿನಲ್ಲಿ ಹೆಚ್ಚುವರಿ ಪ್ರಯೋಜನಗಳನ್ನು ನೀಡಿದೆ ಹಾಗೂ ಇನ್ನು ಕೆಲವು ಪ್ಲ್ಯಾನ್‌ಗಳಲ್ಲಿ ಗ್ರಾಹಕರಿಗೆ ಸರ್‌ಪ್ರೈಸ್ ನೀಡಿದೆ. ಈ ಮೂಲಕ ಜಿಯೋ ಟೆಲಿಕಾಂ ಸಂಸ್ಥೆಯು ಬಿಡುಗಡೆ ಮಾಡಿರುವ ಹ್ಯಾಪಿ ನ್ಯೂ ಇಯರ್ ಪ್ಲ್ಯಾನಿಗೆ ಪ್ರಬಲ ಎದುರುತ್ತರ ನೀಡಿದೆ. ಹಾಗಾದರೇ ಬಿಎಸ್‌ಎನ್‌ಎಲ್‌ನ ಹೊಸ ಕೊಡುಗೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಆಫರ್
ಬಿಎಸ್‌ಎನ್ಎಲ್ ಕ್ರಿಸ್‌ಮಸ್ ಮತ್ತು ಹೊಸ ವರ್ಷ-2020ರ ಪ್ರಯುಕ್ತ ಹೊಸ ಕೊಡುಗೆಗಳನ್ನು ಘೋಷಿಸಿದೆ. 1,999 ರೂ.ಗಳ ವಾರ್ಷಿಕ ಪ್ರಿಪೇಯ್ಡ್ ರೀಚಾರ್ಜ್‌ನ ವ್ಯಾಲಿಡಿಟಿಯಲ್ಲಿ 60 ದಿನಗಳನ್ನು ಹೆಚ್ಚಿಸಿದೆ. ಹಾಗೂ ಬಿಎಸ್‌ಎನ್‌ಎಲ್‌ನ 450 ರೂ ಮತ್ತು 250ರೂ. ರೀಚಾರ್ಜ್‌ಗಳಿಗೆ ಹೆಚ್ಚುವರಿ ಟಾಕ್‌ಟೈಮ್ ಪ್ರಯೋಜನ ಒದಗಿಸುವುದಾಗಿ ಹೇಳಿಕೊಂಡಿದೆ.

ಬಿಎಸ್‌ಎನ್‌ಎಲ್-1,999ರೂ. ಕೊಡುಗೆ
ಬಿಎಸ್ಎನ್ಎಲ್ ಟೆಲಿಕಾಂನ ಜನಪ್ರಿಯ 1,999ರೂ. ಪ್ರೀಪೇಡ್ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಆದರೆ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಪ್ರಯುಕ್ತವಾಗಿ ವ್ಯಾಲಿಡಿಟಿಯಲ್ಲಿ ಒಟ್ಟು 60 ದಿನ ಹೆಚ್ಚಳ ಮಾಡಿದ್ದು, ಹೀಗಾಗಿ ಆಫರ್ ಅವಧಿಯಲ್ಲಿ 1999ರೂ. ರೀಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರಿಗೆ ಒಟ್ಟು 425 ದಿನಗಳ ವ್ಯಾಲಿಡಿಟಿ ಅವಧಿ ಲಭ್ಯವಾಗಲಿದೆ.

1,999ರೂ. ಪ್ಲ್ಯಾನ್ ಪ್ರಯೋಜನಗಳು
ಬಿಎಸ್‌ಎನ್‌ಎಲ್‌ನ 1,999ರೂ. ಪ್ಲ್ಯಾನ್ ಇದೀಗ ಆಫರ್‌ನಲ್ಲಿ ಲಭ್ಯ ಇದೆ. ಈ ಪ್ಲ್ಯಾನಿನಲ್ಲಿ ಭಾರತದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ವಾಯಿಸ್ ಕರೆಗಳು, ಪ್ರತಿದಿನ 3GB ಡೇಟಾ ಸೌಲಭ್ಯ ಸಹ ದೊರೆಯಲಿದೆ (ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 1275GB ಡಾಟಾ). ಇದರೊಂದಿಗೆ ಪ್ರತಿದಿನ 100 ಎಸ್‌ಎಂಎಸ್ ಜೊತೆಗೆ ಬಿಎಸ್ಎನ್ಎಲ್ ಟ್ಯೂನ್ಸ್ ಮತ್ತು ಬಿಎಸ್ಎನ್ಎಲ್ ಟಿವಿ ಚಂದಾದಾರಿಕೆಯು ಸಹ ಉಚಿತವಾಗಿ ಲಭ್ಯವಾಗಲಿವೆ.

ಸೀಮಿತ ಅವಧಿಯ ಕೊಡುಗೆ
ಬಿಎಸ್ಎನ್ಎಲ್ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಅಂಗವಾಗಿ ಘೋಷಿಸಿರುವ ಹೊಸ ಆಫರ್ ಸೀಮಿತ ಅವಧಿಯ ಕೊಡುಗೆ ಆಗಿದೆ. ಇನ್ನು ಈ ಹೊಸ ಕೊಡುಗೆಯು ಇದೇ ಡಿಸೆಂಬರ್ 25ರಿಂದ (ಇಂದಿನಿಂದ), ಇದೇ ಡಿಸೆಂಬರ್ 31ರ ವರೆಗೂ ಮಾತ್ರ ಗ್ರಾಹಕರಿಗೆ ಲಭ್ಯವಾಗಲಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190