Home
ಸುದ್ದಿಜಾಲ

BSNLನ ಈ ಪ್ಲ್ಯಾನ್ ರೀಚಾರ್ಜ್‌ ಮಾಡಿದ್ರೆ, 1GB ಡೇಟಾ ಬೆಲೆ ಬರೀ 1.42ರೂ. ಮಾತ್ರ!

ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಹಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸಿ ಗ್ರಾಹಕರನ್ನು ಆಕರ್ಷಿಸಿದೆ. ಹಾಗೆಯೇ ಖಾಸಗಿ ಟೆಲಿಕಾಂಗಳಿಗೆ ಪೈಪೋಟಿ ನೀಡುತ್ತಾ ಸಾಗಿದ್ದು, ಸಂಸ್ಥೆಯ ಕೆಲವೊಂದು ಯೋಜನೆಗಳು ಖಾಸಗಿ ಟೆಲಿಕಾಂಗಳ ನೇರ ಟಾಂಗ್ ನೀಡುವಂತಿವೆ. ಸಂಸ್ಥೆಯ ಪ್ರೀಪೇಯ್ಡ್‌ ಯೋಜನೆಗಳು ಅಧಿಕ ಡೇಟಾ, ವ್ಯಾಲಿಡಿಟಿ ಮತ್ತು ವಾಯಿಸ್‌ ಕರೆಗಳ ಸೌಲಭ್ಯಗಳನ್ನು ಪಡೆದಿವೆ. ಹಾಗೆಯೇ ಬಿಎಸ್‌ಎನ್‌ಎಲ್‌ ಬಳಕೆದಾರರಿಗೆ 1GB ಡೇಟಾವನ್ನು 1.42ರೂ.ಗಳಿಗೆ ಮಾತ್ರ ನೀಡುತ್ತಿದೆ.

ಡೇಟಾವನ್ನು

ಹೌದು, ಬಿಎಸ್‌ಎನ್‌ಎಲ್‌ ಬಳಕೆದಾರರಿಗೆ 1GB ಡೇಟಾವನ್ನು 1.42ರೂ.ಗಳಿಗೆ ಮಾತ್ರ ನೀಡುತ್ತಿದೆ ಎಂದರೇ ಅಚ್ಚರಿ ಎನಿಸಲಿದೆ. ಜಿಯೋ ಮತ್ತು ಏರ್‌ಟೆಲ್‌ ಆಪರೇಟರ್‌ಗಳು ತಮ್ಮ ದೀರ್ಘಾವಧಿಯ ಪ್ರಿಪೇಯ್ಡ್ ಯೋಜನೆಗಳೊಂದಿಗೆ ಅತ್ಯಂತ ಆರ್ಥಿಕ ಡೇಟಾ ದರಗಳನ್ನು ನೀಡುತ್ತಿರುವಾಗ, ಬಿಎಸ್‌ಎನ್‌ಎಲ್‌ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಭಾರತದಲ್ಲಿ ಅಗ್ಗದ ಡೇಟಾ ಪ್ರಿಪೇಯ್ಡ್ ಯೋಜನೆಯನ್ನು ನೀಡುತ್ತಿದೆ. ಬರೀ 1.42ರೂ.ಗಳಿಗೆ 1GB ಡೇಟಾ ಲಭ್ಯವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಯೋಜನೆಯು

ಬಿಎಸ್‌ಎನ್‌ಎಲ್‌ ಬಳಕೆದಾರರಿಗೆ 599ರೂ. ಪ್ರಿಪೇಯ್ಡ್ ಯೋಜನೆಯನ್ನು ಒದಗಿಸಿದೆ. ಈ ಯೋಜನೆಯನ್ನು 'STV_WFH_599' ಎಂದು ಕರೆಯಲಾಗುತ್ತದೆ. ಈ ಯೋಜನೆಯು ಬಳಕೆದಾರರಿಗೆ 84 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಈ ಯೋಜನೆಯೊಂದಿಗೆ, ಬಳಕೆದಾರರು ಅನಿಯಮಿತ ವಾಯಿಸ್ ಕರೆ, ಪ್ರತಿದಿನ 100 ಎಸ್‌ಎಮ್‌ಎಸ್‌ ಹಾಗೂ ದಿನಕ್ಕೆ 5GB ದೈನಂದಿನ ಡೇಟಾವನ್ನು ಪಡೆಯುತ್ತಾರೆ. ಇದರರ್ಥ ಈ ಪ್ಲಾನ್ ಬಳಕೆದಾರರಿಗೆ ನೀಡುವ ಒಟ್ಟು ಡೇಟಾ 420GB ಆಗಿದೆ.

ಬಳಕೆದಾರರಿಗೆ

ಹಾಗೆಯೇ ಬಿಎಸ್‌ಎನ್‌ಎಲ್‌ 599ರೂ. ಪ್ರಿಪೇಯ್ಡ್ ಯೋಜನೆಯು 84 ದಿನಗಳವರೆಗೆ ಬಳಕೆದಾರರಿಗೆ ವ್ಯಾಲಿಡಿಟಿ ಲಭ್ಯವಾಗಿಸಿದೆ. ಈ ಅವಧಿಗೆ ಒಟ್ಟು 420GB ಡೇಟಾವನ್ನು ನೀಡುತ್ತದೆ. ಬಳಕೆದಾರರಿಗೆ ಪ್ರತಿ 1GB ಡೇಟಾಕ್ಕೆ ತಗಲುವ ಶುಲ್ಕ ಕೇವಲ 1.42ರೂ. ಆಗಿದೆ. ಹಾಗೆಯೇ ಈ ಯೋಜನೆಯಲ್ಲಿ ಬಳಕೆದಾರರಿಗೆ ಉಚಿತ ಜಿಂಗ್‌ ಆಪ್ ಆಕ್ಸಸ್‌ ಪ್ರಯೋಜನ ಸಹ ದೊರೆಯಲಿದೆ.

ಬಿಎಸ್‌ಎನ್‌ಎಲ್‌ 499ರೂ. ಪ್ರಿಪೇಯ್ಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 499ರೂ. ಪ್ರಿಪೇಯ್ಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ ಈ SVT 499ರೂ. ಪ್ಲ್ಯಾನ್ ದೀರ್ಘಾವಧಿಯ ಯೋಜನೆ ಆಗಿದ್ದು, ಒಟ್ಟು 90 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಿದ್ದು, ಒಟ್ಟು ಪೂರ್ಣ ಅವಧಿಗೆ 180GB ಡೇಟಾ ಸಿಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಹ ದೊರೆಯಲಿದೆ. ಹಾಗೆಯೇ ಡೈಲಿ 100 ಎಸ್‌ಎಮ್‌ಎಸ್‌ ಸಹ ಸಿಗುತ್ತದೆ. ಹೆಚ್ಚುವರಿಯಾಗಿ ಬಿಎಸ್‌ಎನ್‌ಎಲ್‌ ಟ್ಯೂನ್ ಮತ್ತು Zing ಪ್ರಯೋಜನ ಲಭ್ಯ.

ಬಿಎಸ್‌ಎನ್‌ಎಲ್‌ 2399ರೂ. ವಾರ್ಷಿಕ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 2399ರೂ. ವಾರ್ಷಿಕ ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ ಈ ಪ್ಲ್ಯಾನ್ ಒಟ್ಟು 600 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 250 FUP ನಿಮಿಷಗಳ ಮಿತಿಯಲ್ಲಿ ಉಚಿತ ವಾಯಿಸ್‌ ಕರೆಗಳ ಪ್ರಯೋಜನವನ್ನು ಒದಗಿಸಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದ್ದು, 60 ದಿನಗಳಿಗೆ ಬಿಎಸ್‌ಎನ್‌ಎಲ್‌ ಟ್ಯೂನ್‌ ಸೌಲಭ್ಯವು ಸಿಗಲಿದೆ. ಆದರೆ ಯಾವುದೇ ಡೇಟಾ ಪ್ರಯೋಜನ ಲಭ್ಯ ಇರುವುದಿಲ್ಲ. ಡೇಟಾ ಅಗತ್ಯ ಇರದ ಹಾಗೂ ವಾಯಿಸ್ ಕರೆ ಮತ್ತು ಹೆಚ್ಚಿನ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಪ್ಲ್ಯಾನ್ ಉತ್ತಮ ಆಯ್ಕೆ ಆಗಿದೆ.

Best Mobiles in India

English summary
BSNL Offering 1GB Data For Rs 1.42 With Rs 599 Prepaid Plan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+