Home
ಸುದ್ದಿಜಾಲ

BSNL ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಈಗ 3GB ಉಚಿತ ಡೇಟಾ!..ರೀಚಾರ್ಜ್‌ ಮಾಡಿಸ್ತೀರಾ?

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಸಂಸ್ಥೆ ಇತ್ತೀಚಿಗೆ ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿದೆ. ಸಂಸ್ಥೆಯು ಕೆಲವು ಅತ್ಯುತ್ತಮ ಪ್ರೀಪೇಯ್ಡ್‌ ಯೋಜನೆಗಳ ಮೂಲಕ ತನ್ನ ಪ್ರತಿಸ್ಪರ್ಧಿಗಳಿಗೆ ನೇರ ಪೈಪೋಟಿ ನೀಡುತ್ತಾ ಮುನ್ನಡೆದಿದೆ. ಆ ಪೈಕಿ ಬಿಎಸ್‌ಎನ್‌ಎಲ್‌ ಕಂಪನಿಯ ಬಹುತೇಕ ರೀಚಾರ್ಜ್‌ ಪ್ಲ್ಯಾನ್‌ಗಳು ಅನಿಯಮಿತ ವಾಯಿಸ್ ಕರೆ, ದೈನಂದಿನ ಡೇಟಾ ಸೌಲಭ್ಯ ಪಡೆದಿವೆ. ಅದೇ ರೀತಿ ಬಿಎಸ್‌ಎನ್‌ಎಲ್‌ನ ಕೆಲವು ಬಜೆಟ್‌ ದರದ ಪ್ಲ್ಯಾನ್‌ ಗಳ ಪೈಕಿ 499 ರೂ. ಯೋಜನೆಯು ಚಂದಾದಾರರ ಗಮನ ಸೆಳೆದಿದೆ.

ಹೌದು, ಬಿಎಸ್‌ಎನ್‌ಎಲ್‌ ( BSNL ) ಟೆಲಿಕಾಂ ತನ್ನ 499 ರೂ. ರೀಚಾರ್ಜ್‌ ಪ್ಲ್ಯಾನಿನಲ್ಲಿ ಆಕರ್ಷಕ ವ್ಯಾಲಿಡಿಟಿ, ದೈನಂದಿನ ಡೇಟಾ ಪ್ರಯೋಜ, ಎಸ್‌ಎಮ್‌ಎಸ್‌ ಸೌಲಭ್ಯ ಹಾಗೂ ಹೆಚ್ಚುವರಿ ಡೇಟಾ ಪ್ರಯೋಜನ ಕೂಡಾ ಪಡೆದುಕೊಂಡಿದೆ. ಅಂದಹಾಗೆ ಈ ರೀಚಾರ್ಜ್‌ ಪ್ಲ್ಯಾನ್‌ ಎಲ್ಲ ಟೆಲಿಕಾಂ ವಲಯಗಳಲ್ಲಿಯೂ ಗ್ರಾಹಕರಿಗೆ ಲಭ್ಯವಿದೆ. ಹಾಗಾದರೇ ಬಿಎಸ್‌ಎನ್‌ಎಲ್‌ನ 499ರೂ. ಪ್ಲ್ಯಾನ್‌ ಹಾಗೂ ಇತರೆ ಜನಪ್ರಿಯ ರೀಚಾರ್ಜ್‌ ಪ್ಲ್ಯಾನ್‌ಗಳ ಸೌಲಭ್ಯಗಳೆನು ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

BSNL ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಈಗ 3GB ಉಚಿತ ಡೇಟಾ!..ರೀಚಾರ್ಜ್‌ ಮಾಡಿಸ್ತೀರಾ?

ಬಿಎಸ್‌ಎನ್‌ಎಲ್‌ 499ರೂ. ರೀಚಾರ್ಜ್‌ ಯೋಜನೆ

ಬಿಎಸ್‌ಎನ್‌ಎಲ್‌ ಟೆಲಿಕಾಂನ ಈ 499ರೂ. ರೀಚಾರ್ಜ್‌ ಪ್ಲ್ಯಾನ್‌ ಒಟ್ಟು 75 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದುಕೊಂಡಿದೆ. ಈ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2 GB ಡೇಟಾ ಸೌಲಭ್ಯಗಳು ದೊರೆಯಲಿದ್ದು, ಇದರ ಜೊತೆಗೆ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಸಹ ಲಭ್ಯ. ಇದಲ್ಲದೇ ನಿತ್ಯ 100 ಉಚಿತ ಎಸ್‌ಎಮ್ಎಸ್‌ ಸೌಲಭ್ಯ ಕೂಡಾ ಪಡೆಯಬಹುದು. ಹಾಗೆಯೇ ಹೆಚ್ಚುವರಿ ಆಗಿ BSNL ಟ್ಯೂನ್ಸ್ ಮತ್ತು ಗೇಮಿಯಂ ಪ್ರೀಮಿಯಂ ಸೌಲಭ್ಯಗಳು ಕೂಡಾ ಲಭ್ಯ ಆಗಲಿವೆ.

ಬಿಎಸ್‌ಎನ್‌ಎಲ್‌ ಆಫರ್‌

ಬಿಎಸ್‌ಎನ್‌ಎಲ್‌ ( BSNL ) ಸಂಸ್ಥೆಯು ಬಳಕೆದಾರರಿಗೆ ದೀಪಾವಳಿ ಉಡುಗೊರೆ ನೀಡಿದ್ದು, 1999ರೂ. ಗಳ ಪ್ಲಾನ್‌ನಲ್ಲಿ ಇದೀಗ 100ರೂ. ಗಳ ರಿಯಾಯಿತಿಯನ್ನು ಸಹ ನೀಡುತ್ತಿದೆ. ಗ್ರಾಹಕರು 1999ರೂ. ಬೆಲೆಯ ಪ್ಲಾನ್ ಅನ್ನು ಈಗ 1899ರೂ. ಗಳಿಗೆ ಸಿಗಲಿದೆ.

BSNL ಸೆಲ್ಫ್‌ಕೇರ್ ಆಪ್‌ ಅನ್ನು ಬಳಸಿಕೊಂಡು ನೀವು ಈ ಯೋಜನೆಯೊಂದಿಗೆ ರೀಚಾರ್ಜ್ ಮಾಡಬೇಕಾಗುತ್ತದೆ. ನೀವು ಇತರ ಅಪ್ಲಿಕೇಶನ್‌ಗಳ ಮೂಲಕ ಅಥವಾ ಯಾವುದೇ ಇತರ ಪೋರ್ಟಲ್ ಮೂಲಕ ರೀಚಾರ್ಜ್ ಮಾಡುತ್ತಿದ್ದರೆ, ನೀವು ಪ್ರಯೋಜನವನ್ನು ಪಡೆಯುವುದಿಲ್ಲ. BSNL SelfCare ಆಪ್‌ iOS ಹಾಗೂ ಆಂಡ್ರಾಯ್ಡ್‌ ಡಿವೈಸ್‌ಗಳಿಗೆ ಲಭ್ಯವಿದೆ.

ಬಿಎಸ್‌ಎನ್‌ಎಲ್‌ 1198ರೂ. ರೀಚಾರ್ಜ್ ಯೋಜನೆ

ಬಿಎಸ್‌ಎನ್‌ಎಲ್‌ ( BSNL ) ಸಂಸ್ಥೆಯ 1198ರೂ. ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲ್ಯಾನ್‌ ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದೆ. ಈ ಪ್ಲ್ಯಾನಿನಲ್ಲಿ ಚಂದಾದಾರರಿಗೆ ಪ್ರತಿ ತಿಂಗಳಿಗೆ 3 GB ಡೇಟಾ ಪ್ರಯೋಜನ ಸಿಗಲಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ. ಬಜೆಟ್‌ ದರದಲ್ಲಿ ವಾರ್ಷಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಇದು ಉತ್ತಮ ಪ್ಲ್ಯಾನ್‌.

ಬಿಎಸ್‌ಎನ್‌ಎಲ್‌ 2999ರೂ. ರೀಚಾರ್ಜ್ ಯೋಜನೆ

ಬಿಎಸ್‌ಎನ್‌ಎಲ್‌ ( BSNL ) ಸಂಸ್ಥೆಯ 2999ರೂ. ಪ್ಲ್ಯಾನ್‌ ವಾರ್ಷಿಕ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದು, ಒಟ್ಟು ದಿನಗಳ 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದೆ. ಈ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ. ಹಾಗೆಯೇ ಇದರೊಂದಿಗೆ ನಿತ್ಯ 3GB ಡೇಟಾ ಸೌಲಭ್ಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಕೂಡಾ ಲಭ್ಯ ಆಗಲಿದೆ.

Best Mobiles in India

English summary
BSNL Offering Extra 3GB Data on This Prepaid Plan. Check out all other details here here. Check Details and More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+