BSNLನ ಈ ವಿಶೇಷ ಪ್ಲ್ಯಾನ್‌ಗೆ ಜನರು ಫಿದಾ: ದಿನವೂ 3GB ಡೇಟಾ ಸೌಲಭ್ಯ!
BSNL ಟೆಲಿಕಾಂ ಸೇವೆಯನ್ನು ಭಾರತದಲ್ಲಿ ಹಲವು ಜನರು ಬಳಕೆ ಮಾಡುತ್ತಿದ್ದು, ಇದರ ಹೊಸ ಹೊಸ ರೀಚಾರ್ಜ್ ಪ್ಲ್ಯಾನ್‌ಗಳ ಮೂಲಕ ಸಾಕಷ್ಟು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ಇತರೆ ಟೆಲಿಕಾಂಗಳು ಹೆಚ್ಚಿನ ಡೇಟಾ ಸೌಲಭ್ಯ ನೀಡುವ ಮೂಲಕ ಜನಪ್ರಿಯತೆ ಗಳಿಸುತ್ತಿದ್ದು, ಇದಕ್ಕೆ ಪ್ರತಿಸ್ಪರ್ಧಿಯಾಗಿ BSNL ಕೂಡ ತನ್ನ ಗ್ರಾಹಕರಿಗೆ ದೊಡ್ಡ ಮಟ್ಟದ ಡೇಟಾ ಸೌಲಭ್ಯ ಕಲ್ಪಿಸಿಕೊಟ್ಟಿದೆ.
ಹೌದು, ಅಗತ್ಯ ಡೇಟಾ ಬೇಡಿಕೆಯನ್ನು ಪೂರೈಸುವಲ್ಲಿ BSNL ವಿಫಲವಾಗಿದೆ ಎಂದು ಹೇಳಲಾಗುತ್ತದೆ.ಆದರೆ, BSNL ಮಾತ್ರ ಇದನ್ನು ಒಪ್ಪಿಕೊಳ್ಳುವುದಿಲ್ಲ. ಈ ನಡುವೆ 4G ಹಾಗೂ 5G ಅನ್ನು ಪರಿಚಯಿಸುವ ಬಗ್ಗೆ ಭಾರೀ ಕಾತುರತೆಯಿಂದ ಇದ್ದು, ಇದನ್ನು ಕಾರ್ಯಗತಗೊಳಿಸುತ್ತಿದೆ. ಈಗಾಗಲೇ 4G ಸೇವೆಗಳು ಹಲವು ಸ್ಥಳಗಳಲ್ಲಿ ಲಭ್ಯವಿದ್ದು, ದೇಶದ ಉಳಿದ ಭಾಗಗಳಲ್ಲಿ 4G ಶೀಘ್ರದಲ್ಲೇ ಬರಲಿದೆ. ಈ ನಡುವೆ ಬಿಎಸ್‌ಎನ್‌ಎಲ್‌ನ 299ರೂ. ಗಳ ಪ್ಲ್ಯಾನ್ ಗಮನಸೆಳೆದಿದೆ. ಹಾಗಿದ್ರೆ, ಬನ್ನಿ ಈ ಪ್ಲ್ಯಾನ್ ಬಗ್ಗೆ ತಿಳಿಯೋಣ.

BSNL ನಿಂದ ದಿನವೂ 3GB ಡೇಟಾ: ಮೊದಲೇ ತಿಳಿಸಿದಂತೆ BSNL ಅನೇಕ ರೀಚಾರ್ಜ್ ಪ್ಲ್ಯಾನ್ ಪರಿಚಯಿಸಿದ್ದು, ಅತ್ಯಧಿಕ ಡೇಟಾ ಸೌಲಭ್ಯ ಬೇಕು ಎನ್ನುವವರು ಈ 299ರೂ.ಗಳ ರೀಚಾರ್ಜ್ ಪ್ಲ್ಯಾನ್ ಕಡೆ ಗಮನಹರಿಸಬಹುದು. ಈ ಪ್ಲ್ಯಾನ್‌ನಲ್ಲಿ ಹೆಚ್ಚಿನ ಡೇಟಾ ಅಷ್ಟೇ ಅಲ್ಲದೆ ಇತರೆ ಪ್ರಯೋಜನಗಳು ಸಹ ಲಭ್ಯ ಇದ್ದು, ಈ ಮೂಲಕ ಬಳಕೆದಾರರಿಗೆ ಸಾಕಷ್ಟು ಅನುಕೂಲ ಆಗಲಿದೆ.
BSNL ನ ಈ 299ರೂ.ಗಳ ಪ್ಲ್ಯಾನ್ ಒಟ್ಟು 30 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಮೂಲಕ ನೀವು ದಿನವೂ 3GB ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದು. ಅಂದರೆ ತಿಂಗಳಿಗೆ ಬರೋಬ್ಬರಿ 90GB ಡೇಟಾ ಸೌಲಭ್ಯ ಲಭ್ಯವಾಗುತ್ತದೆ. ಇದರೊಂದಿಗೆ ಅನಿಯಮಿತ ಕಡೆ ಸೌಲಭ್ಯ ಹಾಗೂ ಎಸ್‌ಎಮ್ಎಸ್ ಪ್ರಯೋಜನ ಸಹ ಇದ್ದು, ಇಷ್ಟೊಂದು ಕಡಿಮೆ ಮೊತ್ತದಲ್ಲಿ ಇಷ್ಟು ಪ್ರಯೋಜನ ನೀಡುವ ಕೆಲವೇ ಪ್ಲ್ಯಾನ್‌ಗಳಲ್ಲಿ ಇದೂ ಸಹ ಪ್ರಮುಖ ಎನಿಸಿಕೊಂಡಿದೆ. ಈ ಪ್ಲ್ಯಾನ್‌ನ ದೈನಂದಿನ ವೆಚ್ಚ 10 ರೂ.ಆಗಲಿದೆ.

ಈ 299 ರೂ.ಗಳ ಪ್ಲ್ಯಾನ್‌ನಲ್ಲಿ ಲಭ್ಯವಿರುವ ಒಟ್ಟು ಡೇಟಾವನ್ನು ನೀವು ಪರಿಶೀಲಿಸಿದರೆ ನೀವು ಒಟ್ಟಾರೆ 90GB ಡೇಟಾವನ್ನು ಪಡೆಯಬಹುದಾಗಿದ್ದು, ಪ್ರತಿ GB ಡೇಟಾದ ಬೆಲೆ 3.32 ಆಗಿರಲಿದೆ. ಈ ಮೂಲಕ ಖಾಸಗಿ ಟೆಲಿಕಾಂ ಕಂಪನಿಗಗಳಿಗೆ ಪ್ರತಿ ಡೇಟಾಗೆ ಪಾವತಿ ಮಾಡುವ ಹಣಕ್ಕಿಂತ ಅತ್ಯಂತ ಕಡಿಮೆ ಅಗ್ಗದ ಬೆಲೆ ಹೊಂದಿದೆ ಎಂದು ಹೇಳಬಹುದು. ಈ ಪ್ಲ್ಯಾನ್ ಇದೀಗ ಸಂಸ್ಥೆಗೆ ಹಾಗೂ ಬಳಕೆದಾರರಿಗೆ ಸಂಪೂರ್ಣ ಲಾಭದಾಯಕವಾಗಿದೆ.
ಇದೇನು ಹೊಸ ಪ್ಲ್ಯಾನ್ ಅಲ್ಲ: ಸಾಮಾನ್ಯವಾಗಿ BSNL ಆಗಾಗ್ಗೆ ಹೊಸ ರೀಚಾರ್ಜ್ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತದೆ. ಆದರೆ, ನಾವು ಇಲ್ಲಿ ತಿಳಿಸಿರುವ ಪ್ಲ್ಯಾನ್ ಹೊಸದಾಗಿ ಪರಿಚಯಿಸಿಲ್ಲ. ಆದರೆ, ಇತ್ತೀಚೆಗೆ BSNL ಗ್ರಾಹಕರು ಈ ಪ್ಲ್ಯಾನ್ ಮೂಲಕ ಸಂತಸಗೊಂಡಿದ್ದಾರೆ ಎಂದು ಹೇಳಬಹುದು. ಯಾಕೆಂದರೆ ಬಹಳಷ್ಟು ಗ್ರಾಹಕರು ಈ ಪ್ಲ್ಯಾನ್ ರೀಚಾರ್ಜ್ ಮಾಡಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಸಂಪೂರ್ಣ 4G ರೋಲ್‌ಔಟ್ ಪೂರ್ಣಗೊಂಡ ನಂತರ ಈ ಪ್ಲ್ಯಾನ್ ಇದೇ ದರದಲ್ಲಿ ಲಭ್ಯವಿರುತ್ತವೆಯೇ ಎಂದು ಕಾದು ನೋಡಬೇಕಾಗಿದೆ.

ಸದ್ಯಕ್ಕೆ ಪಂಜಾಬ್‌ನಲ್ಲಿ 200 ಸೈಟ್‌ಗಳಲ್ಲಿ 4G ಕವರೇಜ್ ಕಾರ್ಯ ನಡೆಯುತ್ತಿದೆ. ಇದು ಪೂರ್ಣಗೊಂಡ ನಂತರ ದೇಶಾದ್ಯಂತ 4G ಅನ್ನು ಪರಿಚಯಿಸಲಾಗುತ್ತದೆ. ಹಾಗೆಯೇ BSNL ಸಾಫ್ಟ್‌ವೇರ್ ಅಪ್‌ಗ್ರೇಡ್ ಸಹಾಯದಿಂದ 5G ಗೆ ಸುಲಭವಾಗಿ ಅಪ್‌ಗ್ರೇಡ್ ಮಾಡಬಹುದಾದ 4G ಸ್ಟಾಕ್ ಅನ್ನು ಸಹ ಬಳಕೆ ಮಾಡಲಾಗುತ್ತಿದೆ. ಈ ಕಾರಣಕ್ಕೆ ನೀವು 4G ಬಳಕೆ ಮಾಡಲು ಮುಂದಾಗಿದ್ದೀರಾ ಎಂದಾದರೆ 5G ಗೆ ಸುಲಭವಾಗಿ ಬದಲಾಗಬಹುದು.


Click it and Unblock the Notifications








