Home
ಸುದ್ದಿಜಾಲ

BSNL ಗ್ರಾಹಕರಿಗೆ ಇದಕ್ಕಿಂತ ಗುಡ್‌ನ್ಯೂಸ್‌ ಬೇಕಾ?..ದೀಪಾವಳಿಗೆ ಉಚಿತ ಆಫರ್‌!

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂನ 2G ಮತ್ತು 3G ನೆಟವರ್ಕ್‌ ಬಳಕೆದಾರರು ಉಚಿತವಾಗಿ 4G ಸಿಮ್ ಕಾರ್ಡ್‌ಗೆ ಅಪ್‌ಗ್ರೇಡ್ ಮಾಡಬಹುದು ಎಂದು ಕಂಪನಿ ತಿಳಿಸಿದೆ. ಹಾಗೆಯೇ, ಸಂಸ್ಥೆಯು 4G ಸಿಮ್ ಕಾರ್ಡ್‌ ಜೊತೆಗೆ ಉಚಿತ ಡೇಟಾ ಸಹ ನೀಡುವುದಾಗಿದೆ ತಿಳಿಸಿದೆ.

ಹೌದು, ಬಿಎಸ್‌ಎನ್‌ಎಲ್‌ 4G ಸಿಮ್‌ ಕಾರ್ಡ್‌ಗೆ ಅಪ್‌ಗ್ರೇಡ್‌ ಆಗಲಿ ತಿಳಿಸಿದ್ದು, ಸಿಮ್‌ ಜೊತೆಗೆ ಉಚಿತ 4GB ಡೇಟಾ ಕೂಡಾ ಲಭ್ಯ ಎಂದು ಬಿಎಸ್‌ಎನ್‌ಎಲ್ ಆಂಧ್ರಪ್ರದೇಶ ಸಾಮಾಜಿಕ ವೇದಿಕೆ ಎಕ್ಸ್‌ನಲ್ಲಿ (ಟ್ವಿಟರ್ ತಾಣದಲ್ಲಿ) ಪೋಸ್ಟ್ ಮಾಡಿದೆ.

BSNL ಗ್ರಾಹಕರಿಗೆ ಇದಕ್ಕಿಂತ ಗುಡ್‌ನ್ಯೂಸ್‌ ಬೇಕಾ?..ದೀಪಾವಳಿಗೆ ಉಚಿತ ಆಫರ್‌!

ಮುಂಬರುವ ಜೂನ್ 2024 ರ ವೇಳೆಗೆ ದೇಶದಾದ್ಯಂತ ತನ್ನ ಎಲ್ಲ ವಲಯಗಳಲ್ಲಿ 4G ನೆಟ್‌ವರ್ಕ್ ಪರಿಚಯಿಸುವುದಾಗಿ ಸಂಸ್ಥೆಯು ಈಗಾಗಲೇ ತಿಳಿಸಿದ್ದು, ಸದ್ಯದ ಕೊಡುಗೆಯ ಘೋಷಣೆಗೆ ಅದಕ್ಕೆ ಪುಷ್ಠಿ ನೀಡುವಂತಿದೆ. ಆ ಬಳಿಕ ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ತನ್ನ 5G ನೆಟ್‌ವರ್ಕ್‌ ಅನ್ನು ರೋಲ್‌ಔಟ್‌ ಮಾಡಲು ಯೋಜಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

BSNL ಗ್ರಾಹಕರಿಗೆ ಇದಕ್ಕಿಂತ ಗುಡ್‌ನ್ಯೂಸ್‌ ಬೇಕಾ?..ದೀಪಾವಳಿಗೆ ಉಚಿತ ಆಫರ್‌!

ಉಚಿತ, ಉಚಿತ, ಸಂಪೂರ್ಣ ಉಚಿತ

ಪ್ರಸ್ತುತ ಚಾಲ್ತಿ ಇರುವ ಬಿಎಸ್‌ಎನ್‌ಎಲ್‌ ಟೆಲಿಕಾಂನ 2G ಮತ್ತು 3G ನೆಟ್‌ವರ್ಕ್‌ ಬಳಕೆದಾರರು ಉಚಿತವಾಗಿ 4G ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ. ಸಂಸ್ಥೆಯು ತನ್ನ ಬಳಕೆದಾರರಿಗೆ ಉಚಿತ 4G ಸಿಮ್ ಕಾರ್ಡ್ ನೀಡುವ ಜೊತೆಗೆ 4GB ಡೇಟಾ ಅನ್ನು ಕೂಡಾ ನೀಡುವುದಾಗಿ ತಿಳಿಸಿದೆ. ಅಂದಹಾಗೆ ಸಂಸ್ಥೆಯು ನೀಡುವ ಉಚಿತ ಡೇಟಾವು ಮೂರು ತಿಂಗಳ ವ್ಯಾಲಿಡಿಟಿ ಅನ್ನು ಹೊಂದಿರುತ್ತದೆ ಎಂಬುದನ್ನು ಗಮನಿಸಬೇಕು.

BSNL ಗ್ರಾಹಕರಿಗೆ ಇದಕ್ಕಿಂತ ಗುಡ್‌ನ್ಯೂಸ್‌ ಬೇಕಾ?..ದೀಪಾವಳಿಗೆ ಉಚಿತ ಆಫರ್‌!

ಸಿಮ್ ಅಪ್‌ಗ್ರೇಡ್‌ ಎಲ್ಲಿ ಲಭ್ಯ

ಬಳಕೆದಾರರು ಬಿಎಸ್‌ಎನ್‌ಎಲ್‌ 4G ಗೆ ಅಪ್‌ಗ್ರೇಡ್ ಮಾಡಲು ಬಯಸಿದರೆ, ತಮ್ಮ ಹತ್ತಿರದ ಬಿಎಸ್‌ಎನ್‌ಎಲ್‌ ಗ್ರಾಹಕ ಸೇವಾ ಕೇಂದ್ರ, ಫ್ರ್ಯಾಂಚೈಸ್, ರಿಟೇಲ್‌ ಸ್ಟೋರ್‌ ಅಥವಾ DSA (ನೇರ ಮಾರಾಟದ ಏಜೆಂಟ್) ಕೇಂದ್ರಗಳಿಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.

ಬಿಎಸ್‌ಎನ್‌ಎಲ್‌ 5G ನೆಟ್‌ವರ್ಕ್ ಯಾವಾಗ?

ಬಿಎಸ್‌ಎನ್‌ಎಲ್‌ ಸಂಸ್ಥೆಯು ಮೇ ತಿಂಗಳಲ್ಲಿ ತನ್ನ 4G ಸೇವೆಗಳನ್ನು ಪರಿಚಯಿಸಿತು. ಪಿಟಿಐ ವರದಿಯ ಪ್ರಕಾರ, ಕೇಂದ್ರ ಐಟಿ ಮತ್ತು ಸಂವಹನ ಸಚಿವ ಅಶ್ವಿನಿ ವೈಷ್ಣವ್ ಅವರು, ಆ ವೇಳೆ ಬಿಎಸ್‌ಎನ್‌ಎಲ್‌ನ 4G ನೆಟ್‌ವರ್ಕ್ ಅನ್ನು ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ 5G ಗೆ ಅಪ್‌ಗ್ರೇಡ್ ಮಾಡಲಾಗುವುದು ಎಂದು ತಿಳಿಸಿದ್ದರು ಎಂದು ಮೈ ಸ್ಮಾರ್ಟ್‌ ಪ್ರೈಸ್‌ ವರದಿಯಲ್ಲಿ ತಿಳಿಸಿದೆ.

ದೀಪಾವಳಿ ಹಬ್ಬದ ಆಫರ್‌

ಬಿಎಸ್‌ಎನ್‌ಎಲ್‌ ಸಂಸ್ಥೆಯು ದೀಪಾವಳಿಯ ಹಬ್ಬದ ಆಫರ್‌ನ ಅಂಗವಾಗಿ ಕೆಲವು ರೀಚಾರ್ಜ್ ಪ್ಲ್ಯಾನ್‌ಗಳಿಗೆ 3GB ಉಚಿತ ಡೇಟಾವನ್ನು ಲಭ್ಯ ಮಾಡಲಿದೆ. ಅವುಗಳು ಕ್ರಮವಾಗಿ 251ರೂ, 299 ರೂ ಮತ್ತು 398ರೂ. ರೀಚಾರ್ಜ್ ಪ್ಲ್ಯಾನ್‌ಗಳಾಗಿವೆ. ಉಚಿತ ಡೇಟಾಗೆ ಆಕ್ಸಸ ಗಾಗಿ, ಬಳಕೆದಾರರು ಬಿಎಸ್‌ಎನ್‌ಎಲ್‌ ಸೆಲ್ಫ್-ಕೇರ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ರೀಚಾರ್ಜ್ ಮಾಡಬೇಕಾಗುತ್ತದೆ.

ಹಾಗೆಯೇ ಬಿಎಸ್‌ಎನ್‌ಎಲ್‌ನ 251ರೂ. ರೀಚಾರ್ಜ್ ಪ್ಲ್ಯಾನ್‌ 70GB ಡೇಟಾ ಪ್ರಯೋಜನ ಪಡೆದಿದೆ. ಈ ರೀಚಾರ್ಜ್ ಮಾಡಿದ ಬಳಿಕ, ಬಳಕೆದಾರರು ಪ್ಲ್ಯಾನಿನೊಂದಿಗೆ 28 ದಿನಗಳ ವ್ಯಾಲಿಡಿಟಿಗೆ ಒಟ್ಟು 73GB ಡೇಟಾವನ್ನು ಪಡೆಯುತ್ತಾರೆ. ಅದೇ ರೀತಿ ಬಿಎಸ್‌ಎನ್‌ಎಲ್‌ನ ನ 299ರೂ ಡೇಟಾ ವೋಚರ್ ದಿನಕ್ಕೆ 3GB ಡೇಟಾ ಪಡೆದಿದ್ದು, ಕೊಡುಗೆಯಲ್ಲಿ ಹೆಚ್ಚುವರಿಯಾಗಿ ಉಚಿತ 3GB ಡೇಟಾ ಸಿಗಲಿದೆ. ಇನ್ನು ಈ ಪ್ಲ್ಯಾನ್ ಒಟ್ಟು 30 ದಿನಗಳ ವ್ಯಾಲಿಡಿಟಿ ಪಡೆದಿದೆ.

Best Mobiles in India

English summary
BSNL Offers Free 4G SIM Upgrade with free 4GB Data to Users. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+