Home
ಸುದ್ದಿಜಾಲ

BSNLನ ಈ ಪ್ಲ್ಯಾನ್‌ಗಳಲ್ಲಿ ಸಿಗುತ್ತೆ ಭಾರೀ ಡೇಟಾ ಜೊತೆಗೆ ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ಸೌಲಭ್ಯ!

ದೇಶದ ಟೆಲಿಕಾಂ ವಲಯದಲ್ಲಿ ಟೆಲಿಕಾಂ ಸಂಸ್ಥೆಯುಗಳು ಭಿನ್ನ ದರದಲ್ಲಿ ಆಕರ್ಷಕ ಯೋಜನೆಗಳನ್ನು ಪರಿಚಯಿಸಿ ಗಮನ ಸೆಳೆದಿವೆ. ಪ್ರಿಪೇಯ್ಡ್‌ ಯೋಜನೆಗಳಂತೆ ಅತ್ಯುತ್ತಮ ಪೋಸ್ಟ್‌ಪೇಯ್ಡ್‌ ಯೋಜನೆಗಳನ್ನು ಗ್ರಾಹಕರಿಗೆ ನೀಡಿವೆ. ಇನ್ನು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಂಸ್ಥೆಯು ಸಹ ಖಾಸಗಿ ಟೆಲಿಕಾಂಗಳು ಹುಬ್ಬೇರುವಂತಹ ಆಕರ್ಷಕ ಯೋಜನೆಗಳ ಆಯ್ಕೆ ಅನ್ನು ಒಳಗೊಂಡಿದೆ. ಹಾಗೆಯೇ ಬಿಎಸ್‌ಎನ್‌ಎಲ್‌ ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ಯೋಜನೆಗಳನ್ನು ಹೊಂದಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಟೆಲಿಕಾಂ ಸಂಸ್ಥೆಯು ಆಕರ್ಷಕ ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ಯೋಜನೆಗಳನ್ನು ಹೊಂದಿದೆ. ಅವುಗಳು ಕ್ರಮವಾಗಿ ಬಿಎಸ್‌ಎನ್‌ಎಲ್‌ 525 ರೂ, ಬಿಎಸ್‌ಎನ್‌ಎಲ್‌ 798 ರೂ ಮತ್ತು ಬಿಎಸ್‌ಎನ್‌ಎಲ್‌ 999 ರೂ. ಆಗಿವೆ. ಈ ಪೋಸ್ಟ್‌ಪೇಯ್ಡ್‌ ಯೋಜನೆಗಳು ಅತ್ಯುತ್ತಮ ಡೇಟಾ ಕೊಡುಗೆ, ಡೇಟಾ ರೋಲ್ ಓವರ್, ಅನಿಯಮಿತ ವಾಯಿಸ್ ಕರೆ ಸೌಲಭ್ಯ ಸೇರಿದಂತೆ ಹೆಚ್ಚಿನ ಪ್ರಯೋಜನಗಳನ್ನು ಪಡೆದಿವೆ. ಇನ್ನುಳಿದಂತೆ ಈ ಮೂರು ಪೋಸ್ಟ್‌ಪೇಯ್ಡ್‌ ಯೋಜನೆಗಳ ಒಟ್ಟಾರೇ ಪ್ರಯೋಜನಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಬಿಎಸ್‌ಎನ್‌ಎಲ್‌ 525ರೂ. ಪೋಸ್ಟ್‌ಪೇಯ್ಡ್‌ ಯೋಜನೆ

ಬಿಎಸ್‌ಎನ್‌ಎಲ್‌ 525ರೂ. ಪೋಸ್ಟ್‌ಪೇಯ್ಡ್‌ ಯೋಜನೆ

ಬಿಎಸ್‌ಎನ್‌ಎಲ್‌ ನಿಂದ 525ರೂ. ಯೋಜನೆಯಾಗಿದೆ. 525 ರೂ ಬೆಲೆಯಲ್ಲಿ, ಬಿಎಸ್‌ಎನ್‌ಎಲ್‌ ಅನಿಯಮಿತ ವಾಯಿಸ್‌ ಕರೆಯನ್ನು ಒದಗಿಸುವ ಪೋಸ್ಟ್‌ಪೇಯ್ಡ್ ಯೋಜನೆಯನ್ನು ಒದಗಿಸುತ್ತದೆ. ಹಾಗೆಯೇ HPLMN ಮತ್ತು MTNL ನೆಟ್‌ವರ್ಕ್‌ನಲ್ಲಿ ಮುಂಬೈ ಮತ್ತು ದೆಹಲಿ ಸೇರಿದಂತೆ ರಾಷ್ಟ್ರೀಯ ರೋಮಿಂಗ್ ಜೊತೆಗೆ ದಿನಕ್ಕೆ 100 ಎಸ್‌ಎಮ್‌ಎಸ್‌ ಲಭ್ಯ. ಹಾಗೆಯೇ ಬಳಕೆದಾರರು 255GB ವರೆಗಿನ ಡೇಟಾ ರೋಲ್‌ಓವರ್‌ನೊಂದಿಗೆ 85 GB ಉಚಿತ ಡೇಟಾವನ್ನು ಸಹ ಪಡೆಯುತ್ತಾರೆ. ಈ ಯೋಜನೆಯು ಅನಿಯಮಿತ ವಾಯಿಸ್ ಕರೆ ಸೌಲಭ್ಯದೊಂದಿಗೆ ಹೆಚ್ಚುವರಿ ಕುಟುಂಬ ಸಿಮ್ ಅನ್ನು ಸಹ ನೀಡುತ್ತದೆ ಆದರೆ ಡೇಟಾ ಅಥವಾ ಎಸ್‌ಎಮ್‌ಎಸ್‌ ಭತ್ಯೆ ಇಲ್ಲ.

ಬಿಎಸ್‌ಎನ್‌ಎಲ್‌ 798ರೂ. ಪೋಸ್ಟ್‌ಪೇಯ್ಡ್‌ ಯೋಜನೆ

ಬಿಎಸ್‌ಎನ್‌ಎಲ್‌ 798ರೂ. ಪೋಸ್ಟ್‌ಪೇಯ್ಡ್‌ ಯೋಜನೆ

ಬಿಎಸ್‌ಎನ್‌ಎಲ್‌ 798ರೂ. ಪೋಸ್ಟ್‌ಪೇಯ್ಡ್‌ ಯೋಜನೆ ಸಂಪೂರ್ಣ ಕುಟುಂಬ ಪೋಸ್ಟ್‌ಪೇಯ್ಡ್ ಯೋಜನೆಯಾಗಿದೆ. 798 ರೂ ವೆಚ್ಚದಲ್ಲಿ, ಬಿಎಸ್‌ಎನ್‌ಎಲ್‌ ಅನಿಯಮಿತ ವಾಯಿಸ್ ಕರೆಯೊಂದಿಗೆ ಬರುವ ಪೋಸ್ಟ್‌ಪೇಯ್ಡ್ ಅನ್ನು ನೀಡುತ್ತದೆ. ಹಾಗೆಯೇ HPLMN ಮತ್ತು MTNL ನೆಟ್‌ವರ್ಕ್‌ನಲ್ಲಿ ಮುಂಬೈ ಮತ್ತು ದೆಹಲಿ ಸೇರಿದಂತೆ ರಾಷ್ಟ್ರೀಯ ರೋಮಿಂಗ್ ಜೊತೆಗೆ ದಿನಕ್ಕೆ 100 ಎಸ್‌ಎಮ್‌ಎಸ್‌ ಲಭ್ಯ. ಹಾಗೆಯೇ ಯೋಜನೆಯು ಪ್ರಾಥಮಿಕ ಬಳಕೆದಾರರಿಗೆ 150 GB ವರೆಗಿನ ಡೇಟಾ ರೋಲ್‌ಓವರ್‌ನೊಂದಿಗೆ 50 GB ಉಚಿತ ಡೇಟಾವನ್ನು ನೀಡುತ್ತದೆ. ಯೋಜನೆಯು ಅನಿಯಮಿತ ಧ್ವನಿ ಸೌಲಭ್ಯದೊಂದಿಗೆ 2 ಕುಟುಂಬ ಸಂಪರ್ಕಗಳನ್ನು ಒದಗಿಸುತ್ತದೆ, 50 GB ಡೇಟಾ ಮತ್ತು ಪ್ರತಿ ಕುಟುಂಬದ ಸಂಪರ್ಕಕ್ಕೆ ಪ್ರತ್ಯೇಕವಾಗಿ ಪ್ರತಿದಿನ 100 ಎಸ್‌ಎಮ್‌ಎಸ್‌.

ಬಿಎಸ್‌ಎನ್‌ಎಲ್‌ 999ರೂ. ಪೋಸ್ಟ್‌ಪೇಯ್ಡ್‌ ಯೋಜನೆ

ಬಿಎಸ್‌ಎನ್‌ಎಲ್‌ 999ರೂ. ಪೋಸ್ಟ್‌ಪೇಯ್ಡ್‌ ಯೋಜನೆ

ಬಿಎಸ್‌ಎನ್‌ಎಲ್‌ 999ರೂ. ಪೋಸ್ಟ್‌ಪೇಯ್ಡ್‌ ಯೋಜನೆಯು ಪ್ರಾಥಮಿಕ ಜೊತೆಗೆ ಮೂರು ಕುಟುಂಬ ಸಂಪರ್ಕಗಳನ್ನು ಒದಗಿಸುತ್ತದೆ. 999 ರೂ ಬೆಲೆಗೆ, ಬಿಎಸ್‌ಎನ್‌ಎಲ್‌ ಅನಿಯಮಿತ ವಾಯಿಸ್ ಕರೆಯನ್ನು ನೀಡುವ ಪೋಸ್ಟ್‌ಪೇಯ್ಡ್ ಯೋಜನೆಯನ್ನು ನೀಡುತ್ತದೆ. ಅಲ್ಲದೇ HPLMN ಮತ್ತು MTNL ನೆಟ್‌ವರ್ಕ್‌ನಲ್ಲಿ ಮುಂಬೈ ಮತ್ತು ದೆಹಲಿ ಸೇರಿದಂತೆ ರಾಷ್ಟ್ರೀಯ ರೋಮಿಂಗ್ ಜೊತೆಗೆ ದಿನಕ್ಕೆ 100 ಎಸ್‌ಎಮ್‌ಎಸ್‌ ಲಭ್ಯ. ಜೊತೆಗೆ ಪ್ರಾಥಮಿಕ ಬಳಕೆದಾರರು 225 GB ವರೆಗಿನ ಡೇಟಾ ರೋಲ್‌ಓವರ್‌ನೊಂದಿಗೆ 75 GB ಉಚಿತ ಡೇಟಾವನ್ನು ಪಡೆಯುತ್ತಾರೆ. ಯೋಜನೆಯು ಅನಿಯಮಿತ ಧ್ವನಿ ಸೌಲಭ್ಯದೊಂದಿಗೆ 3 ಕುಟುಂಬ ಸಂಪರ್ಕಗಳನ್ನು ಒದಗಿಸುತ್ತದೆ, 75 GB ಡೇಟಾ ಮತ್ತು ಪ್ರತಿ ಕುಟುಂಬದ ಸಂಪರ್ಕಕ್ಕೆ ಪ್ರತ್ಯೇಕವಾಗಿ ಪ್ರತಿದಿನ 100 ಎಸ್‌ಎಮ್‌ಎಸ್‌ ಲಭ್ಯ.

Best Mobiles in India

English summary
BSNL Offers These Family Postpaid Plans: Details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+