Home
ಸುದ್ದಿಜಾಲ

ಬಿಎಸ್‌ಎನ್‌ಎಲ್‌ನ ಈ ಎರಡು ಪ್ಲ್ಯಾನ್‌ಗಳಿಗೆ ಗ್ರಾಹಕರು ಫಿದಾ!..ಯಾಕೆ ಗೊತ್ತಾ?

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ (BSNL) ಖಾಸಗಿ ಟೆಲಿಕಾಂಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಹೆಜ್ಜೆಗಳನ್ನು ಹಾಕುತ್ತಿದೆ. ಬಿಎಸ್‌ಎನ್‌ಎಲ್‌ನ ಕೆಲವು ಯೋಜನೆಗಳು ಅಧಿಕ ಡೇಟಾ ಪ್ರಯೋಜನ ಪಡೆದಿದ್ದು, ಚಂದಾದಾರರನ್ನು ಸೆಳೆಯುತ್ತಿವೆ. ಅದೇ ಹಾದಿಯಲ್ಲಿ ಮುನ್ನಡೆದಿರುವ ಬಿಎಸ್‌ಎನ್‌ಎಲ್‌ ಸಂಸ್ಥೆಯು ಇದೀಗ ಮತ್ತೆ ಎರಡು ನೂತನ ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ.

ಹೌದು, ಬಿಎಸ್‌ಎನ್‌ಎಲ್‌ ಟೆಲಿಕಾಂ ಹಲವು ಭಿನ್ನ ಸೌಲಭ್ಯಗಳ ಪ್ಲ್ಯಾನ್‌ ಆಯ್ಕೆ ಹೊಂದಿದೆ. ಅವುಗಳಲ್ಲಿ ಕೆಲವು ಅಧಿಕ ಡೇಟಾ ಪ್ರಯೋಜನ ಪಡೆದಿದ್ದರೆ, ಮತ್ತೆ ಕೆಲವು ಅಧಿಕ ವ್ಯಾಲಿಡಿಟಿ ಪಡೆದಿವೆ. ತನ್ನ ಈ ಯೋಜನೆಗಳ ಲಿಸ್ಟ್‌ಗೆ ಸಂಸ್ಥೆಯು ಈಗ 769ರೂ ಮತ್ತು 599ರೂ. ವಾಯಿಸ್‌ ವೋಚರ್‌ ಲಾಂಚ್ ಮಾಡಿದ್ದು, ಈ ಯೋಜನೆಗಳು ಆಕರ್ಷಕ ಪ್ರಯೋಜನ ಒಳಗೊಂಡಿವೆ.

ಬಿಎಸ್‌ಎನ್‌ಎಲ್‌ನ ಈ ಎರಡು ಪ್ಲ್ಯಾನ್‌ಗಳಿಗೆ ಗ್ರಾಹಕರು ಫಿದಾ!..ಯಾಕೆ ಗೊತ್ತಾ?

ಬಿಎಸ್‌ಎನ್‌ಎಲ್‌ ಟೆಲಿಕಾಂ ಬಿಡುಗಡೆ ಮಾಡಿರುವ 769ರೂ ಮತ್ತು 599ರೂ. ವಾಯಿಸ್‌ ವೋಚರ್‌ ಪ್ಲ್ಯಾನ್‌ಗಳು ಅನಿಯಮಿತ ವಾಯಿಸ್‌ ಕರೆಯ ಪ್ರಯೋಜನ ಪಡೆದಿದ್ದು, ಜೊತೆಗೆ ಎಸ್‌ಎಮ್‌ಎಸ್‌ ಸೌಲಭ್ಯ ಸಹ ಒಳಗೊಂಡಿವೆ. ಇದರೊಂದಿಗೆ ಹೆಚ್ಚುವರಿಯಾಗಿ ಇತರೆ ಕೆಲವು ಸೌಲಭ್ಯಗಳನ್ನು ಪಡೆದಿವೆ. ಹಾಗಾದರೆ ಬಿಎಸ್‌ಎನ್‌ಎಲ್‌ ಸಂಸ್ಥೆಯ 769ರೂ ಮತ್ತು 599ರೂ. ಯೋಜನೆಗಳ ಒಟ್ಟಾರೇ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಬಿಎಸ್‌ಎನ್‌ಎಲ್‌ 769ರೂ. ವಾಯಿಸ್‌ ವೋಚರ್‌ ಮಾಹಿತಿ : ಬಿಎಸ್‌ಎನ್‌ಎಲ್‌ ಟೆಲಿಕಾಂ ಹೊಸದಾಗಿ ಬಿಡುಗಡೆ ಮಾಡಿರುವ 769ರೂ. ವಾಯಿಸ್‌ ವೋಚರ್‌ 84 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಆಕರ್ಷಕ ಎನಿಸಿದೆ. ಈ ಯೋಜನೆಯು ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಒಳಗೊಂಡಿದ್ದು, 2GB ಡೇಟಾ ಸಹ ಹೊಂದಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಅನ್ನು ಒಳಗೊಂಡಿದೆ. ಈ ಯೋಜನೆಯಲ್ಲಿ ವಾಯಿಸ್‌ ಕರೆ, ಎಸ್‌ಎಮ್‌ಎಸ್‌ ಜೊತೆಗೆ ಎರೋಸ್‌ ನವ್‌ ಎಂಟರ್‌ಟೈನ್‌ಮೆಂಟ್‌ ಸೇವೆ ಸಹ ದೊರೆಯುತ್ತದೆ.

ಬಿಎಸ್‌ಎನ್‌ಎಲ್‌ 599ರೂ. ವಾಯಿಸ್‌ ವೋಚರ್‌ ಪ್ಲ್ಯಾನ್‌ ಮಾಹಿತಿ : ಬಿಎಸ್‌ಎನ್‌ಎಲ್‌ ಟೆಲಿಕಾಂ ನೂತನವಾಗಿ ಪರಿಚಯಿಸಿರುವ ಮಾಡಿರುವ 599ರೂ. ವಾಯಿಸ್‌ ವೋಚರ್‌ ಯೋಜನೆಯು 84 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಕೈಗೆಟಕುವ ಯೋಜನೆ ಎನಿಸಿದೆ. ಈ ವಾಯಿಸ್‌ ವೋಚರ್‌ ಯೋಜನೆಯು ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಪಡೆದಿದ್ದು, 2GB ಡೇಟಾ ಸಹ ಪಡೆದಿದೆ. ಹಾಗೆಯೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಅನ್ನು ಒಳಗೊಂಡಿದೆ. ಈ ಯೋಜನೆಯಲ್ಲಿ ವಾಯಿಸ್‌ ಕರೆ, ಎಸ್‌ಎಮ್‌ಎಸ್‌ ಜೊತೆಗೆ ಎರೋಸ್‌ ನವ್‌ ಎಂಟರ್‌ಟೈನ್‌ಮೆಂಟ್‌ ಸೇವೆ ಸಹ ದೊರೆಯುತ್ತದೆ.

ಬಿಎಸ್‌ಎನ್‌ಎಲ್‌ 2399ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಸೌಲಭ್ಯಗಳ ಮಾಹಿತಿ : ಬಿಎಸ್‌ಎನ್‌ಎಲ್‌ 2399 ರೂ. ಯೋಜನೆಯು ವಾರ್ಷಿಕ ಅವಧಿಯ ಪ್ರೀಪೇಯ್ಡ್‌ ಪ್ಲ್ಯಾನ್ ಆಗಿದೆ. ಈ ಪ್ರೀಪೇಯ್ಡ್‌ ಪ್ಲ್ಯಾನ್ ಹೆಚ್ಚುವರಿಯಾಗಿ 30 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಇದ್ರಿಂದ ಈ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟು 395 ದಿನಗಳ ವ್ಯಾಲಿಡಿಟಿ ಸಿಗಲಿದೆ.

ಈ ಅವಧಿಯಲ್ಲಿ ಡೈಲಿ 2GB ಡೇಟಾ ಸೌಲಭ್ಯ ಸಹ ಲಭ್ಯ ಆಗಲಿದ್ದು, ಇದರ ಜತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ದೊರೆಯುತ್ತದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯವು ಸಿಗಲಿದ್ದು, 30 ದಿನಗಳವರೆಗೆ ಉಚಿತ EROS Now ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ.

ಬಿಎಸ್‌ಎನ್‌ಎಲ್‌ 1198ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಸೌಲಭ್ಯಗಳ ಮಾಹಿತಿ : ಬಿಎಸ್‌ಎನ್‌ಎಲ್‌ 1198 ರೂ. ಯೋಜನೆಯು ವಾರ್ಷಿಕ ಅವಧಿಯ ಪ್ರೀಪೇಯ್ಡ್‌ ಪ್ಲ್ಯಾನ್ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಒಳಗೊಂಡಿದೆ. ಹಾಗೆಯೇ ಈ ಯೋಜನೆಯು 300 ನಿಮಿಷಗಳ ವಾಯಿಸ್‌ ಕಾಲಿಂಗ್ ಪ್ರಯೋಜನ ಹೊಂದಿದ್ದು, ಇದರೊಂದಿಗೆ ಒಟ್ಟಾರೇ ಅವಧಿಗೆ 3GB ಡೇಟಾ ಹಾಗೂ 30 ಎಸ್‌ಎಮ್‌ಎಸ್‌ ಪ್ರಯೋಜನ ಖಚಿತ.

Best Mobiles in India

English summary
BSNL offers two significant voice vouchers with unlimited voice calls: details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+