ಶೀಘ್ರವೇ ಜನಸಾಮಾನ್ಯರಿಗೂ BSNL ಸ್ಯಾಟಿಲೈಟ್ ಫೋನ್: ಬೆಲೆ ಎಷ್ಟು, ಪ್ಲಾನ್ ಏನು..?
ಇಷ್ಟು ದಿನ ರಕ್ಷಣೆ, ಸಾಗರ ಸಂಚಾರ ಮತ್ತು ಸರಕಾರಿ ವಲಯದಲ್ಲಿ ಬಳಕೆಯಲ್ಲಿದ್ದ ಸ್ಯಾಟಿಲೈಟ್ ಫೋನ್ ಸೇವೆಯನ್ನು ಸಾರ್ವಜನಿಕ ವಲಯಕ್ಕೂ ವಿಸ್ತರಿಸಲು BSNL ಮುಂದಾಗಿದೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ದೇಶಿಯವಾಗಿ ಸ್ಯಾಟಿಲೈಟ್ ಫೋನ್ ಸೇವೆಯನ್ನು BSNL ಆರಂಭಿಸಿದೆ. ಇಷ್ಟು ದಿನ ರಕ್ಷಣೆ, ಸಾಗರ ಸಂಚಾರ ಮತ್ತು ಸರಕಾರಿ ವಲಯದಲ್ಲಿ ಬಳಕೆಯಲ್ಲಿದ್ದ ಈ ಸ್ಯಾಟಿಲೈಟ್ ಫೋನ್ ಸೇವೆಯನ್ನು ಸಾರ್ವಜನಿಕ ವಲಯಕ್ಕೂ ವಿಸ್ತರಿಸಲು BSNL ಮುಂದಾಗಿದೆ.

ಓದಿರಿ: ವಾನ್ನಕ್ರೈ ಮಾದರಿಯಲ್ಲಿ 36.5 ಬಿಲಿಯನ್ ಸ್ಮಾರ್ಟ್‌ಫೋನ್ ಮೇಲೆ 'ಜುಡಿ' ಮಾಲ್ವೇರ್ ದಾಳಿ..!!
BSNL ಸ್ಯಾಟಿಲೈಟ್ ಫೋನ್ ಸೇವೆಯನ್ನು ಪಡೆಯಲು ಯಾವುದೇ ನೆಟ್‌ವರ್ಕ್ ಅವಶ್ಯಕತಯೆ ಇಲ್ಲ. ಭೂಮಿಯ ಯಾವುದೇ ಮೂಲೆಯಿಂದ ಬೇಕಾದರು ಈ ಫೋನ್‌ನಿಂದ ಕರೆ ಮಾಡಬಹುದಾಗಿದೆ. ಇದು ಉಪಗ್ರಹಗಳ ಸಹಾಯದಿಂದ ಕಾರ್ಯನಿರ್ವಹಿಸಲಿದೆ.

ಎರಡು ವರ್ಷದಲ್ಲಿ ಸಾರ್ವಜನಿಕರಿಗೂ ಸ್ಯಾಟಿಲೈಟ್ ಫೋನ್:
ಸದ್ಯ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊಬೈಲ್ ನೆಟ್‌ವರ್ಕ್‌ಗಳು ಮಳೆಬಂದರೆ ನಿಂತು ಹೋಗುವುದು, ಇಲ್ಲದೇ ಕವರೆಜ್ ಕ್ಷೇತ್ರದ ವ್ಯಾಪ್ತಿ ಕಡಿಮೆ ಇರುವ ತೊಂದರೆಯನ್ನು ಹೊಂದಿದೆ ಇದಕ್ಕೆ ಮುಕ್ತಿ ನೀಡುವ ಸಲುವಾಗಿ BSNL ಇನ್ನು ಎರಡು ವರ್ಷದಲ್ಲಿ ಜನ ಸಾಮಾನ್ಯರಿಗೂ ಸ್ಯಾಟಿಲೈಟ್ ಫೋನ್ ಸೇವೆಯನ್ನು ನೀಡಲಿದೆ.

'ಇನ್‌ಮಾರ್‌ಸ್ಯಾಟ್' ಸಹಾಯದಿಂದ ಸೇವೆ:
ಅಂತರರಾಷ್ಟ್ರೀಯ ಮೊಬೈಲ್ ಉಪಗ್ರಹ ಸಂಘಟನೆ ಇನ್‌ಮಾರ್‌ಸ್ಯಾಟ್ ಭೂಮಿಯಿಂದ 35,700 ಕಿಮಿ ಮೇಲೆ ಒಟ್ಟು 14 ಉಪಗ್ರಹಗಳನ್ನು ಹೊಂದಿದ್ದು, ಇದರ ಸಹಾಯದಿಂದ BSNL ಸ್ಯಾಟಿಲೈಟ್ ಫೋನ್ ಸೇವೆಯನ್ನು ದೇಶದಲ್ಲಿ ನೀಡಲಿದೆ. ಜನಸಾಮಾನ್ಯರಿಗೆ ಸೇವೆಯನ್ನು ನೀಡುವ ಸಲುವಾಗಿ BSNL ಇನ್‌ಮಾರ್‌ಸ್ಯಾಟ್ ಅನುಮತಿಯನ್ನು ಬೇಡಿದೆ ಎನ್ನಲಾಗಿದೆ.

ದೇಶದ ಮೂಲೆ ಮೂಲೆಯಲ್ಲೂ ಸೇವೆ:
BSNL ಸ್ಯಾಟಿಲೈಟ್ ಫೋನ್ ನನ್ನು ಗ್ರಾಹಕರು ಎಲ್ಲಿ ಬೇಕಾದರು ಉಪಯೋಗಿಸ ಬಹುದು. ಇದರ ನೆಟ್‌ವರ್ಕ್ ಕ್ಷೇತ್ರಕ್ಕೆ ಮಿತಿಯೇ ಇಲ್ಲ. ವಿಮಾನದಲ್ಲಿ ಪ್ರಯಾಣಿಸಬೇಕಾದರು ಬಳಸಬಹುದು ಮತ್ತು ಹಡಗಿನಲ್ಲಿ ಸಮುದ್ರಯಾನ ಮಾಡುತ್ತಿದ್ದರೂ ಸಹ ಕರೆ ಮತ್ತು ಎಸ್‌ಎಂಎಸ್ ಮಾಡಬಹುದಾಗಿದೆ.

ದೇಶದಲ್ಲಿರುವುದು 4,600 ಕನೆಕ್ಷನ್‌ಗಳು:
ಸದ್ಯ ದೇಶದಲ್ಲಿ ಬಳಕೆಯಲ್ಲಿರುವ ಕೇವಲ 4,600 ಸ್ಯಾಟಿಲೈಟ್ ಫೋನ್ ಕನೆಕ್ಷನ್‌ಗಳು ಎನ್ನಲಾಗಿದೆ. ಇವುಗಳು ಕೇವಲ ವಿಪತ್ತು ನಿರ್ವಹಣೆ, ರಾಜ್ಯ ಪೊಲೀಸ್, ಗಡಿ ಭದ್ರತಾ ಪಡೆ ಮತ್ತು ಸರಕಾರಿ ಏಜೆನ್ಸಿಗಳಲ್ಲಿ ಮಾತ್ರ ಬಳಕೆಯಲ್ಲಿದೆ.

ಬೆಲೆ ಮಾತ್ರ ಬಾರಿ ದುಬಾರಿ:
ಸ್ಯಾಟಿಲೈಟ್ ಫೋನ್ ಬೆಲೆಗಳು ಬಾರಿ ದುಬಾರಿಯಾಗಿದ್ದು, ಕರೆ ಮಾಡುವ ಮತ್ತು ಸ್ವೀಕರಿಸಿ ಎಸ್‌ಎಂಎಸ್ ಕಳಿಸುವ ವ್ಯವಸ್ಥೆ ಇರುವ ಒಂದು ಸ್ಯಾಟಿಲೈಟ್ ಫೋನಿಗೆ 40,000 ರೂಗಳಾಗಲಿದೆ ಎನ್ನಲಾಗಿದೆ. ಕಾರಣ ಇವುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗಿದೆ. ಅಲ್ಲದೇ ಒಂದು ಕರೆ ಮಾಡಬೇಕಾಗಿದರೆ ಪ್ರತಿ ನಿಮಿಷಕ್ಕೆ ರೂ.35 ರಿಂದ ರೂ. 45 ಪಾವತಿಸಬೇಕಾಗಿದೆ.

ದರ ಕಡಿಮೆ ಮಾಡುವ ಭರವಸೆ:
ದೇಶದಲ್ಲಿ ಜನಸಾಮಾನ್ಯರಿಗೂ ಸ್ಯಾಟಿಲೈಟ್ ಫೋನ್ ಸೇವೆಯನ್ನು ವಿಸ್ತರಿಸಿದ ಸಂದರ್ಭದಲ್ಲಿ ಫೋನಿನ ಬೆಲೆಗಳು ಹಾಗೂ ಕರೆ ಮಾಡುವ ಬೆಲೆಗಳು ಸಹ ತೀರಾ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲೇ ಈ ಫೋನ್‌ಗಳನ್ನು ತಯಾರಿಸಿದರೆ ಬೆಲೆ ಅರ್ಧದಷ್ಟು ಕಡಿಮೆಯಾಗಲಿದೆ.


Click it and Unblock the Notifications