ವಾನ್ನಕ್ರೈ ಮಾದರಿಯಲ್ಲಿ 36.5 ಬಿಲಿಯನ್ ಸ್ಮಾರ್ಟ್‌ಫೋನ್‌ ಮೇಲೆ 'ಜುಡಿ' ಮಾಲ್ವೇರ್ ದಾಳಿ..!!

ಕಂಪ್ಯೂಟರ್ ಆಯ್ತು ಈಗ ಸ್ಮಾರ್ಟ್‌ಫೋನ್ ಮೇಲೆ ಹ್ಯಾಕರ್ಸ್ ಕಣ್ಣು ಬಿದ್ದಿದ್ದು, ಸುಮಾರು 36.5 ಮಿಲಿಯನ್ ಆಂಡ್ರಾಯ್ಡ್ ಫೋನುಗಳು 'ಜುಡಿ' ಮಾಲ್ವೇರ್ ದಾಳಿಗೆ ತುತ್ತಾಗಿವೆ.

|

ಕಂಪ್ಯೂಟರ್ ಆಯ್ತು ಈಗ ಸ್ಮಾರ್ಟ್‌ಫೋನ್ ಮೇಲೆ ಹ್ಯಾಕರ್ಸ್ ಕಣ್ಣು ಬಿದ್ದಿದ್ದು, ಸುಮಾರು 36.5 ಮಿಲಿಯನ್ ಆಂಡ್ರಾಯ್ಡ್ ಫೋನುಗಳು 'ಜುಡಿ' ಮಾಲ್ವೇರ್ ದಾಳಿಗೆ ತುತ್ತಾಗಿವೆ ಎಂದು ಆಂಗ್ಲಾ ಮಾಧ್ಯಮಗಳು ವರದಿ ಮಾಡಿದ್ದು, ಈ ಮಾಲ್ವೇರ್ ಗೂಗಲ್ ಪ್ಲೇಸ್ಟೋರಿನಲ್ಲಿದ್ದ ಸುಮಾರು 41 ಆಪ್‌ಗಳ ಮೂಲಕ ಸ್ಮಾರ್ಟ್‌ಫೋನ್ ಪ್ರವೇಸಿಸುತ್ತಿತು ಎನ್ನಲಾಗಿದೆ.

36.5 ಬಿಲಿಯನ್ ಸ್ಮಾರ್ಟ್‌ಫೋನ್‌ ಮೇಲೆ 'ಜುಡಿ' ಮಾಲ್ವೇರ್ ದಾಳಿ..!!

ಓದಿರಿ: ಖರ್ಚಿಲ್ಲದೇ ಒಂದೇ ದಿನದಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಸಾಧ್ಯವೇ..?

ದಿನ ಕಳೆದಂತೆ ಸ್ಮಾರ್ಟ್‌ಫೋನ್‌ ಮೇಲಿನ ಅವಲಂಬನೆ ಅತೀಯಾಗುತ್ತಿದ್ದು, ಬೇಕಾದ ಮತ್ತು ಬೇಡವಾದ ಆಪ್‌ಗಳು ನಮ್ಮ ಫೋನಿನಲ್ಲಿ ಜಾಗಪಡೆದುಕೊಳ್ಳತ್ತಿವೆ. ಇವುಗಳ ಸ್ಮಾರ್ಟ್‌ಫೋನ್‌ಗೆ ಮಾರಕವಾಗುತ್ತಿದೆ. ಈಗ ಸ್ಮಾರ್ಟ್‌ಫೋನ್‌ ಮೇಲೆ ದಾಳಿ ಮಾಡಿರುವ 'ಜುಡಿ' ಮಾಲ್ವೇರ್ ಸಹ ಇತರಹದ ಆಪ್ ಮೂಲಕವೇ ಸ್ಮಾರ್ಟ್‌ಫೋನಿಗೆ ಕಾಲಿಟ್ಟಿರುವುದು.

ದಕ್ಷಿಣಕೋರಿಯಾ ಮೂಲದ 'ಜುಡಿ' ಮಾಲ್ವೇರ್ :

ದಕ್ಷಿಣಕೋರಿಯಾ ಮೂಲದ 'ಜುಡಿ' ಮಾಲ್ವೇರ್ :

ದಕ್ಷಿಣ ಕೋರಿಯಾದಲ್ಲಿ ಈ 'ಜುಡಿ' ಮಾಲ್ವೇರ್ ಅಭಿವೃದ್ಧಿಯಾಗಿದ್ದು, ಇದು ಆಟೋ ಕ್ಲಿಕಿಂಗ್ ಆಡ್ವೇರ್ ಆಗಿದೆ. ಗೂಗಲ್ ಪ್ಲೇ ಸ್ಟೋರಿನಲ್ಲಿ ಇದರ ಪ್ರಭಾವ ಹೊಂದಿರುವ 41 ಆಪ್‌ಗಲು ಪತ್ತೆಯಾಗಿದೆ ಎನ್ನಲಾಗಿದೆ. ಇದು ಸ್ಮಾರ್ಟ್‌ಪೋನ್ ಪ್ರೈವಸಿಯನ್ನು ಹಾಳು ಮಾಡುತ್ತಿತ್ತು ಎಂದು ತಿಳಿದುಬಂದಿದೆ.

ಈಗಾಗಲೇ ಪ್ಲೇ ಸ್ಟೋರಿನಿಂದ ರಿಮೂವ್:

ಈಗಾಗಲೇ ಪ್ಲೇ ಸ್ಟೋರಿನಿಂದ ರಿಮೂವ್:

'ಜುಡಿ' ಮಾಲ್ವೇರ್ ಪ್ರಭಾವಕ್ಕೆ ಸಿಲುಕಿರುವ ಆಪ್‌ಗಳನ್ನು ಗೂಗಲ್ ಪ್ಲೇ ಸ್ಟೋರಿನಿಂದ ರಿಮೂವ್ ಮಾಡಲಾಗುತ್ತಿದ್ದು, ಈಗಾಗಲೇ ಈ ಆಪ್‌ಗಳ ನ್ನು ಸುಮಾರು 18.5 ಮಿಲಿಯನ್ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆಂಡ್ರಾಯ್ಡ್ ಮತ್ತು ಐಎಸ್ಓ ಮೇಲೆ ದಾಳಿ:

ಆಂಡ್ರಾಯ್ಡ್ ಮತ್ತು ಐಎಸ್ಓ ಮೇಲೆ ದಾಳಿ:

'ಜುಡಿ' ಮಾಲ್ವೇರ್ ಆಂಡ್ರಾಯ್ಡ್ ಮತ್ತು ಐಎಸ್ಓ ಮೇಲೆ ದಾಳಿ ದಾಳಿ ನಡೆಸಿದ್ದು, ಸ್ಮಾರ್ಟ್‌ಫೋನ್‌ ಬಳಕೆದಾರಿಗೆ ಅರಿವಿಲ್ಲದಂತೆ ಸುಮಾರು ದಿನದಿಂದಲೇ ಸ್ಮಾರ್ಟ್‌ಫೋನಿನಲ್ಲಿ ಕುಳಿತುಕೊಂಡಿದೆ ಎಂದು ತಿಳಿದುಬಂದಿದೆ.

'ಜುಡಿ' ಮಾಲ್ವೇರ್ ಎಂದರೇನು..?

'ಜುಡಿ' ಮಾಲ್ವೇರ್ ಎಂದರೇನು..?

'ಜುಡಿ' ಮಾಲ್ವೇರ್ ಒಂದು ಆಟೋ ಕ್ಲಿಕಿಂಗ್ ಆಡ್ವೇರ್ ಆಗಿದ್ದು ಇದರ ಪ್ರಭಾವಕ್ಕೆ ಸಿಲುಕಿದ ಫೋನ್‌ನಲ್ಲಿ ಬರುವ ಆಡ್‌ಗಳ ಮೇಲೆ ಫೋನ್‌ ಬಳಕೆದಾರರು ಕ್ಲಿಕ್ ಮಾಡದೆ ಹೊದರೂ ಆಡ್‌ಗಳು ಓಪನ್ ಆಗುತ್ತವೆ. ಇದರಿಂದ ಆಪ್ ಡೆವಲಪರ್ಸ್‌ಗೆ ಹೆಚ್ಚಿನ ಆದಾಯ ಬರಲಿದ್ದು, ಬಳಕೆದಾರಿಗೆ ಕೆಲವೊಮ್ಮೆ ನಷ್ಟವಾಗುವ ಸಾಧ್ಯತೆ ಇದೆ.

Best Mobiles in India

Read more about:
English summary
A new malware named ‘Judy’ has found in over 41 apps on the Google Play Store, and it has infected between 8.5 million to 36.5 million users. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X