ಗ್ರಾಹಕರಿಗೆ ಶಾಕ್ ನೀಡಿದ ಬಿಎಸ್‌ಎನ್‌ಎಲ್; ಏನೆಂದು ತಿಳಿದುಕೊಳ್ಳಿ!
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯಾದ ಬಿಎಸ್‌ಎನ್‌ಎಲ್ ಇರುವ ಗ್ರಾಹಕರಿಗೆ ಹಲವು ವಿಶೇಷ ಸೌಲಭ್ಯಗಳನ್ನು ಕಲ್ಪಿಸಿಕೊಡುವುದರ ಜೊತೆಗೆ ಹೆಚ್ಚಿನ ಬಳಕೆದಾರರನ್ನು ತನ್ನತ್ತ ಸೆಳೆಯಲು ಹಲವಾರು ಕಾರ್ಯತಂತ್ರಗಳನ್ನು ಮಾಡುತ್ತಿದೆ. ಆದರೆ, ಇದೀಗ ಬಿಎಸ್‌ಎನ್‌ಎಲ್ ತನ್ನೆಲ್ಲಾ ಬಳಕೆದಾರರಿಗೆ ಬ್ಯಾಡ್ ನ್ಯೂಸ್ ನೀಡಿದೆ.
ಹೌದು, ಕೊರೊನಾ ನಂತರದಲ್ಲಿ ಗ್ರಾಹಕರಿಗೆ ಹಲವು ರೀತಿಯಲ್ಲಿ ಉಪಯೋಗ ಆಗುವ ರೀಚಾರ್ಜ್ ಪ್ಲ್ಯಾನ್‌ಗಳನ್ನು ಬಿಎಸ್‌ಎನ್ಎಲ್ ಘೋಷಣೆ ಮಾಡಿತ್ತು. ಅದರಂತೆ ಬಿಎಸ್‌ಎನ್ಎಲ್ ನ 599 ರೂ. ಗಳ ರೀಚಾರ್ಜ್ ಪ್ಲ್ಯಾನ್ ಯಶಸ್ವಿಯಾಗಿತ್ತಾದರೂ ಈ ಪ್ಲ್ಯಾನ್‌ನಲ್ಲಿ ಸಂಸ್ಥೆಯು ಕೆಲವು ಪರಿಷ್ಕರಣೆ ಮಾಡಿದೆ. ಹಾಗಿದ್ರೆ, ಇದರಿಂದ ಗ್ರಾಹಕರಿಗೆ ಆಗುವ ನಷ್ಟ ಏನು?, ಬಿಎಸ್ಎನ್‌ಎಲ್ ಯಾಕೆ ಈ ರೀತಿ ಮಾಡಿದೆ ಎಂಬ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಓದಿರಿ.

BSNL ನ 599 ರೂ. ಗಳ ಪ್ಲ್ಯಾನ್‌ನಲ್ಲಿ ಬದಲಾವಣೆ
599ರೂ. ಗಳ ಪ್ರಿಪೇಯ್ಡ್ ಪ್ಲ್ಯಾನ್‌ನಲ್ಲಿ ಈವರೆಗೂ ಗ್ರಾಹಕರು ಸಾಕಷ್ಟು ಪ್ರಯೋಜನ ಪಡೆಯುತ್ತಿದ್ದರು. ಅದರಲ್ಲೂ ಡೇಟಾ ವಿಷಯಕ್ಕೆ ಬಂದಾಗ ಮುಂಚೂಣಿಯಲ್ಲಿ ಇರುವ ಏರ್‌ಟೆಲ್ ಹಾಗೂ ಜಿಯೋಗೂ ಮೀರಿದ ಹೆಚ್ಚಿನ ಸೌಲಭ್ಯ ಇದರಿಂದ ಲಭ್ಯವಾಗುತ್ತಿತ್ತು. ಆದರೆ, ಇನ್ಮುಂದೆ ಈ ಹೆಚ್ಚಿನ ಸೌಲಭ್ಯ ಬಳಕೆದಾರರಿಗೆ ಲಭ್ಯವಾಗುವುದಿಲ್ಲ. ಯಾಕೆಂದರೆ ಪರೋಕ್ಷವಾಗಿ ಈ ಪ್ಲ್ಯಾನ್‌ನಲ್ಲಿ ಶುಲ್ಕ ಹೆಚ್ಚಳ ಮಾಡಲಾಗಿದೆ.
5 GB ಯಿಂದ 3 GB ಗೆ ಇಳಿಕೆ
ವರ್ಕ್ ಫ್ರಮ್ ಹೋಮ್ ಪ್ಲ್ಯಾನ್ ಆಗಿರುವ ಈ 599 ರೂ.ಗಳ ರೀಚಾರ್ಜ್ ಪ್ಲ್ಯಾನ್ ಮೂಲಕ ಇದೀಗ ಗ್ರಾಹಕರು ನಿತ್ಯವೂ 3 GB ಡೇಟಾ ಬಳಕೆಯೊಂದಿಗೆ ಅನಿಯಮಿತ ಕರೆ ಸೌಲಭ್ಯ ಹಾಗೂ ದಿನಕ್ಕೆ 100 ಎಸ್‌ಎಮ್‌ಎಸ್ ಸೌಲಭ್ಯ ಪಡೆದುಕೊಳ್ಳಬಹುದು. ಇದರ ವಿಶೇಷತೆ ಎಂದರೆ ರಾತ್ರಿ ವೇಳೆ ಅಂದರೆ ಮಧ್ಯರಾತ್ರಿ 12 ರಿಂದ ಬೆಳಗಿನ ಜಾವ 5 ರವರೆಗೆ ಅನಿಯಮಿತ ಡೇಟಾ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

ಹಾಗೆಯೇ ದೆಹಲಿ ಮತ್ತು ಮುಂಬೈನ ಎಮ್‌ಟಿಎನ್‌ಎಲ್ ರೋಮಿಂಗ್ ಪ್ರದೇಶಗಳನ್ನು ಒಳಗೊಂಡಂತೆ ರಾಷ್ಟ್ರೀಯ ರೋಮಿಂಗ್ ಸೌಲಭ್ಯವೂ ಈ ಪ್ಲ್ಯಾನ್‌ನಲ್ಲಿ ಲಭ್ಯವಿರಲಿದೆ. ದಿನದಲ್ಲಿ ಲಭ್ಯವಾಗುವ 3 GB ಹೈ ಸ್ಪೀಡ್ ಡೇಟಾ ಮುಗಿದ ನಂತರ ರಾತ್ರಿ ಬಳಕೆ ಮಾಡುವ ಡೇಟಾವು 40 Kbps ವೇಗದೊಂದಿಗೆ ಲಭ್ಯವಾಗುತ್ತದೆ. ಇದರೊಂದಿಗೆ ಉಚಿತ ಬಿಎಸ್‌ಎನ್‌ಎಲ್ ಟ್ಯೂನ್‌ಗಳು, ಜಿಂಗ್ ಮ್ಯೂಸಿಕ್, ಆಸ್ಟ್ರೋಸೆಲ್ ಮತ್ತು ಗೇಮನ್ ಸೇವೆಗಳನ್ನು ಈ ಪ್ಲ್ಯಾನ್‌ನಲ್ಲಿ ಪಡೆಯಬಹುದಾಗಿದೆಯಾದರೂ ಇದರಲ್ಲಿ ಯಾವುದೇ ಓಟಿಟಿ ಸೇವೆಗೆ ಎಂಟ್ರಿ ಇರುವುದಿಲ್ಲ.
ಇನ್ನು ಈ 599 ರೂ. ಗಳ ಹಳೆಯ ರೀಚಾರ್ಜ್ ಪ್ಲ್ಯಾನ್‌ಗೂ ಪರಿಷ್ಕರಿಸಿದ ಪ್ಲ್ಯಾನ್‌ಗೂ ಹೋಲಿಕೆ ಮಾಡಿದರೆ ಬದಲಾವಣೆ ಆಗಿರುವುದು ಡೇಟಾ ವಿಚಾರ ಮಾತ್ರ. ಇನ್ನುಳಿದಂತೆ ಎಲ್ಲವೂ ಒಂದೇ ರೀತಿಯಲ್ಲಿದೆ. ಈ ಪ್ಲ್ಯಾನ್ ಬರೋಬ್ಬರಿ 84 ದಿನಗಳ ಮಾನ್ಯತೆಯನ್ನು ಹೊಂದಿದೆ. ಅದರಂತೆ ಈ ಮೂಲಕ ಬಿಎಸ್‌ಎನ್‌ಎಲ್ ಪರೋಕ್ಷವಾಗಿ ಶುಲ್ಕ ಹೆಚ್ಚಳ ಮಾಡಿದೆ ಎಂದು ಹೇಳಲಾಗುತ್ತಿದೆ.
BSNL ನ 187 ರೂ. ಗಳ ಪ್ಲ್ಯಾನ್
BSNL ಈಗಾಗಲೇ ಹಲವು ರೀಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದ್ದು, ಅದರಲ್ಲಿ 187 ರೂ.ಗಳ ಪ್ಲ್ಯಾನ್ ಸಹ ಭಾರೀ ಸದ್ದು ಮಾಡುತ್ತಿದೆ. ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ಪ್ರತಿದಿನ 2GB ಡೇಟಾ ಸೌಲಭ್ಯ ಹಾಗೂ ಅನಿಯಮಿತ ಕರೆ ಮತ್ತು ಉಚಿತ 100 ಎಸ್‌ಎಮ್‌ಎಸ್ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಇದನ್ನು ಹೊರತುಪಡಿಸಿ ಉಚಿತ PRBT ಸೇರಿದಂತೆ ವಿವಿಧ ಪ್ರಯೋಜನಗಳು ಈ ಪ್ಲ್ಯಾನ್‌ನಲ್ಲಿ ಲಭ್ಯ ಇವೆ. ಇದು 28 ದಿನಗಳ ಮಾನ್ಯತೆಯನ್ನು ಹೊಂದಿದೆ.

BSNL ನ 228 ರೂ. ಗಳ ಪ್ಲ್ಯಾನ್
228 ರೂ. ಗಳ ಪ್ಲ್ಯಾನ್ ನಲ್ಲಿ ಗ್ರಾಹಕರು ದಿನವೂ 2GB ಡೇಟಾ ಸೌಲಭ್ಯ ಹಾಗೂ ಅನಿಯಮಿತ ಕರೆ ಮತ್ತು ದಿನವೂ 100 ಎಸ್‌ಎಮ್‌ಎಸ್ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ದೈನಂದಿನ ಡೇಟಾ ಖಾಲಿಯಾದ ನಂತರ 40kbps ವೇಗದಲ್ಲಿ ಇಂಟರ್ನೆಟ್ ಬಳಕೆ ಮಾಡಬಹುದಾಗಿದೆ. ಇದಿಷ್ಟೇ ಅಲ್ಲದೆ, ಅರೆನಾ ಮೊಬೈಲ್ ಗೇಮಿಂಗ್ ಸೇವೆಯನ್ನು ಸಹ ಈ ಪ್ಲ್ಯಾನ್‌ನಲ್ಲಿ ಪಡೆದುಕೊಳ್ಳಬಹುದು. ಇದು ಒಂದು ತಿಂಗಳ ಮಾನ್ಯತೆಯನ್ನು ಹೊಂದಿದೆ.


Click it and Unblock the Notifications








