ಬಿಎಸ್‌ಎನ್‌ಎಲ್‌ 91GB ಡೇಟಾ ಸೌಲಭ್ಯದ ಈ ಪ್ಲ್ಯಾನ್ ಅನ್ನು ತೆಗೆದುಹಾಕಿದೆ!

|

ಭಾರತೀಯ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂಗಳು ಸೇರಿದಂತೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಹ ಆಕರ್ಷಕ ಯೋಜನೆಗಳನ್ನು ಪರಿಚಯಿಸಿವೆ. ಇತ್ತೀಚಿಗೆ ಬಿಎಸ್‌ಎನ್‌ಎಲ್‌ ಸಂಸ್ಥೆಯು ಅಧಿಕ ವ್ಯಾಲಿಡಿಟಿ ಹಾಗೂ ಹೆಚ್ಚಿನ ಡೇಟಾ ಪ್ರಯೋಜನಗಳ ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿ ಸೈ ಅನಿಸಿಕೊಂಡಿದೆ. ಆದರೆ ಬಿಎಸ್‌ಎನ್‌ಎಲ್‌ ಟೆಲಿಕಾಂ ಈಗ ತನ್ನ ಜನಪ್ರಿಯ ಯೋಜನೆಯೊಂದನ್ನು ಕೈಬಿಟ್ಟಿದೆ.

1498ರೂ. ಪ್ರೀಪೇಯ್ಡ್‌

ಹೌದು, ಬಿಎಸ್‌ಎನ್‌ಎಲ್ ಟೆಲಿಕಾಂ ಈಗ 1498ರೂ. ಪ್ರೀಪೇಯ್ಡ್‌ ಪ್ಲ್ಯಾನ್ ತನ್ನ ಯೋಜನೆಗಳ ಪಟ್ಟಿಯಿಂದ ತೆಗೆದುಹಾಕಿದೆ. ಬಿಎಸ್‌ಎನ್‌ಎಲ್‌ನ ಈ ಯೋಜನೆಯು ವಾರ್ಷಿಕ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿತ್ತು. ಹಾಗೆಯೇ ಅಧಿಕ ಡೇಟಾ ಹಾಗೂ ವಾಯಿಸ್‌ ಕರೆಗಳ ಪ್ರಯೋಜನಗಳನ್ನು ಸಹ ಪಡೆದಿತ್ತು. ಬಿಎಸ್‌ಎನ್‌ಎಲ್‌ 1498ರೂ. ಯೋಜನೆ ಪ್ರಯೋಜನಗಳ ಬಗ್ಗೆ ತಿಳಿಯಲು ಮುಂದಿನ ಸ್ಲೈಡ್‌ಗಳನ್ನು ಓದಿರಿ.

ಬಿಎಸ್‌ಎನ್‌ಎಲ್‌ನ 1,498ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ 1,498ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ 1,498ರೂ. ಪ್ಲ್ಯಾನ್ ಡೇಟಾ SVT ಯೋಜನೆಯಾಗಿದೆ. ಈ ಪ್ಲ್ಯಾನ್‌ ಒಟ್ಟು 365 ದಿನಗಳ ಅವಧಿಯ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಒಟ್ಟು 91GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಡೇಟಾ ಬಳಕೆಗೆ ಯಾವುದೇ ದಿನದ cap ಮಿತಿ ಇರುವುದಿಲ್ಲ. ಹಾಗೆಯೇ ಈ ಪ್ಲ್ಯಾನಿನಲ್ಲಿ ಯಾವುದೇ ಕರೆ, ಎಸ್‌ಎಮ್‌ಎಸ್‌ ಸೌಲಭ್ಯ ಇರುವುದಿಲ್ಲ. ವೇಗದ ಇಂಟರ್ನೆಟ್ ಬಯಸುವವರಿಗೆ ಸೂಕ್ತ ಯೋಜನೆ ಅನಿಸಿತ್ತು.

ಬಳಕೆದಾರರಿಗೆ

ಹಾಗೆಯೇ ಬಿಎಸ್‌ಎನ್‌ಎಲ್‌ ಟೆಲಿಕಾಂ 1,498ರೂ. ಯೋಜನೆಯ ಜೊತೆಗೆ ತನ್ನ STV-13, STV-20, STV-93 ಮತ್ತು STV-111 ಯೋಜನೆಗಳನ್ನು ಸಹ ತೆಗೆದುಹಾಕಿದೆ. STV-13 ಯೋಜನೆಯು ಏಳು ದಿನಗಳವರೆಗೆ ಬಳಕೆದಾರರಿಗೆ 130 ಎಸ್‌ಎಂಎಸ್‌ಗಳನ್ನು ಒದಗಿಸುವ ಸೌಲಭ್ಯ ಹೊಂದಿತ್ತು. STV-20 ಯೋಜನೆಯು 265ಎಸ್‌ಎಮ್‌ಎಸ್‌ ಪ್ರಯೋಜನದ ಜೊತೆಗೆ 15 ದಿನಗಳ ವ್ಯಾಲಿಡಿಟಿ ಪಡೆದಿತ್ತು.

ಟೆಲಿಕಾಂ

ಇನ್ನು ಬಿಎಸ್‌ಎನ್‌ಎಲ್‌ ಟೆಲಿಕಾಂನ STV-93 ಯೋಜನೆಯು 120 ನಿಮಿಷಗಳ ಕರೆ ಅವಧಿ ಪಡೆದಿತ್ತು ಹಾಗೂ ಒಳಬರುವ ಕರೆಗಳ ಸೇವೆ ಪಡೆದಿತ್ತು. ಅದೇ ರೀತಿ ಬಿಎಸ್‌ಎನ್‌ಎಲ್ STV-111 ಯೋಜನೆಯು 90 ರೂ. ಟಾಕ್ ಟೈಮ್ ಪ್ರಯೋಜನದ ಜೊತೆಗೆ 70.ರೂ ಮೌಲ್ಯದ ಹೊರಹೋಗುವ ಆನ್-ನೆಟ್ ನಿಮಿಷಗಳೊಂದಿಗೆ ಸಾಗಿಸಲು ಬಳಸಲಾಗುತ್ತಿತ್ತು.

Best Mobiles in India

English summary
The STV-1498 from BSNL used to offer 91GB data for one year. It isn’t amongst the popular STVs offered by BSNL.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X