Home
ಸುದ್ದಿಜಾಲ

BSNL ಮಿನಿ ಪ್ರೀಪೇಡ್‌ ರೀಚಾರ್ಜ್‌ ಪ್ಲ್ಯಾನ್‌ಗಳು ಆನ್‌ಲೈನ್‌ನಲ್ಲಿ ಅಲಭ್ಯ!

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್‌ ಸದ್ಯ ಮಾರುಕಟ್ಟೆಯಲ್ಲಿನ ಪೈಪೋಟಿಯಲ್ಲಿ ತನ್ನ ಬಳಕೆದಾರರನ್ನು ಉಳಿಸಿಕೊಳ್ಳಲು ಮುಂದಾಗಿದ್ದು, ಅದಕ್ಕಾಗಿ ಈಗಾಗಲೇ ಹಲವು ಬದಲಾವಣೆಗಳನ್ನು ಮಾಡಿಕೊಂಡಿದೆ. ಆದರೆ ಇದೀಗ ತನ್ನ ಆನ್‌ಲೈನ್‌ನಲ್ಲಿ ಚೋಟಾ ಟಾಕ್‌ ಟೈಮ್‌ ರೀಚಾರ್ಜ್ ಪ್ಯಾಕ್‌ಗಳ ಲಭ್ಯತೆಯನ್ನು ತೆಗೆದುಹಾಕಿದೆ. ಆದರೂ ಗ್ರಾಹಕರು ಈ ರೀಚಾರ್ಜ್‌ ಪ್ಯಾಕ್‌ಗಳು ದೊರೆಯಲಿವೆ.

BSNL ಮಿನಿ ಪ್ರೀಪೇಡ್‌ ರೀಚಾರ್ಜ್‌ ಪ್ಲ್ಯಾನ್‌ಗಳು ಆನ್‌ಲೈನ್‌ನಲ್ಲಿ ಅಲಭ್ಯ!

ಹೌದು, ಬಿಎಸ್‌ಎನ್‌ಎಲ್‌ ತನ್ನ ಆರಂಭಿಕ ಟಾಕ್ ಟೈಮ್‌ ಪ್ಯಾಕ್‌ಗಳನ್ನು ಆನ್‌ಲೈನ್‌ ರೀಚಾರ್ಜ್‌ ಮಾಡಿಕೊಳ್ಳುವ ಆಯ್ಕೆಯನ್ನು ತೆಗೆದುಹಾಕಿದ್ದು, ಹೀಗಾಗಿ ಇನ್ಮುಂದೆ ಕಂಪನಿಯ ಮಿನಿ ಟಾಕ್‌ ಟೈಮ್‌ ಪ್ಲ್ಯಾನ್‌ಗಳಾದ 10ರೂ ಮತ್ತು 20ರೂ.ಗಳ ರೀಚಾರ್ಜ್‌ ಆನ್‌ಲೈನ್‌ನಲ್ಲಿ ಲಭ್ಯವಾಗುವುದಿಲ್ಲ. ಆದರೆ ರೀಚಾರ್ಜ್‌ ಪಾಯಿಂಟ್‌ಗಳಲ್ಲಿ ಆಫ್‌ಲೈನ್‌ ಮೂಲಕ ಗ್ರಾಹಕರು ರೀಚಾರ್ಜ್‌ ಮಾಡಿಸಿಕೊಳ್ಳಬಹುದಾಗಿದೆ.

BSNL ಮಿನಿ ಪ್ರೀಪೇಡ್‌ ರೀಚಾರ್ಜ್‌ ಪ್ಲ್ಯಾನ್‌ಗಳು ಆನ್‌ಲೈನ್‌ನಲ್ಲಿ ಅಲಭ್ಯ!

ಪ್ರಸ್ತುತ ಆಂಧ್ರಪ್ರದೇಶ ಮತ್ತು ತೆಲಗಾಂಣ ರಾಜ್ಯಗಳಲ್ಲಿ ಮಾತ್ರ ಬಿಎಸ್‌ಎನ್‌ಎಲ್‌ನ ಈ ನಿಯಮ ಅನ್ವಯವಾಗಲಿದ್ದು, ಇಲ್ಲಿಯ ಗ್ರಾಹಕರು ಲೋಕಲ್‌ ರೀಚಾರ್ಜ್‌ ಔಟ್‌ಲೇಟ್‌ಗಳಲ್ಲಿ ಹೋಗಿ ರೀಚಾರ್ಜ್‌ ಮಾಡಿಸಿಕೊಳ್ಳಬಹುದಾಗಿದೆ. ಇನ್ನೂ ಉಳಿದ ರಾಜ್ಯಗಳ ಗ್ರಾಹಕರು 10ರೂ ಮತ್ತು 20ರೂ.ಗಳ ಮಿನಿ ಟಾಕ್‌ ಟೈಮ್‌ ಪ್ಯಾಕ್‌ಗಳನ್ನು ಆನ್‌ಲೈನ್‌ ಮೂಲಕ ರೀಚಾರ್ಜ್‌ ಮಾಡಿಕೊಳ್ಳಬಹುದಾದ ಅವಕಾಶ ಮುಂದುವರೆಯಲಿದೆ.

BSNL ಮಿನಿ ಪ್ರೀಪೇಡ್‌ ರೀಚಾರ್ಜ್‌ ಪ್ಲ್ಯಾನ್‌ಗಳು ಆನ್‌ಲೈನ್‌ನಲ್ಲಿ ಅಲಭ್ಯ!

ಬಿಎಸ್‌ಎನ್‌ಎಲ್‌ ಇತ್ತೀಚಿಗೆ ತನ್ನ 35ರೂ, 53ರೂ ಮತ್ತು 395ರೂ.ಗಳ ಪ್ಲ್ಯಾನ್‌ಗಳಲ್ಲಿ ಬದಲಾವಣೆ ಮಾಡಿಕೊಂಡಿದ್ದು, ಮಿನಿ ಪ್ಯಾಕ್‌ಗಳಲ್ಲಿ ಹೆಚ್ಚಿನ ಡೇಟಾ ನೀಡಿದೆ ಆದರೆ ವ್ಯಾಲಿಡಿಟಿ ಕಡಿಮೆ. ಎಸ್‌ವಿಟಿ 35ರೂ. ರೀಚಾರ್ಜ್‌ನಲ್ಲಿ ಈ ಮೊದಲು 200MB ಡೇಟಾವನ್ನು ನೀಡುತ್ತಿತ್ತು ಆದರೆ ಈಗ 5GB ಡೇಟಾವನ್ನು ಒದಗಿಸುತ್ತಿದೆ ಅದು 5 ದಿನಗಳ ವ್ಯಾಲಿಡಿಟಿಯೊಂದಿಗೆ. ಹಾಗೇ 53ರೂ ಪ್ಲ್ಯಾನ್‌ನಲ್ಲಿ 8GB ಡೇಟಾವನ್ನು 14 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿದೆ.

ಕಂಪನಿಯ 395ರೂ.ಗಳ ಪ್ರೀಪೇಡ್‌ ರೀಚಾರ್ಜ್‌ ವೋಚರ್‌ನಲ್ಲಿ ಅನಿಯಮಿತ ಕರೆಗಳ ಸೌಲಭ್ಯ ನೀಡಲಾಗಿದ್ದು, ರಾಷ್ಟ್ರೀಯ ರೋಮಿಂಗ್ ಸೌಲಭ್ಯವು ಇರಲಿದೆ. ಕೆಲವೊಂದು ಪ್ಲ್ಯಾನ್‌ಗಳು ಎಲ್ಲ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ. ಹಾಗೇ ಕಳೆದ 2018ರ ಡಿಸೆಂಬರನಲ್ಲಿ ಏರ್‌ಟೆಲ್‌, ವೊಡಾಫೋನ್‌ ಐಡಿಯಾ ಟೆಲಿಕಾಂ ಕಂಪನಿಗಳು 10ರೂ, 20ರೂ ಮತ್ತು 30ರೂ.ಗಳ ರೀಚಾರ್ಜ್‌ ಪ್ಯಾಕ್‌ಗಳ ಬದಲಾಗಿ ಕನಿಷ್ಠ ಆರಂಭಿಕ 35ರೂ.ಗಳ ರೀಚಾರ್ಜ್‌ ಪ್ಲ್ಯಾನ್‌ ಅನ್ನು ಪರಿಚಯಿಸಿದ್ದವು.

Best Mobiles in India

English summary
BSNL Removes Rs 10, Rs 20 Prepaid Recharge Packs From Online Channels, Vouchers Available Offline.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+