ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಗುಡ್‌ನ್ಯೂಸ್‌: ಐದು ಪ್ಲ್ಯಾನ್‌ಗಳಲ್ಲಿ ಬದಲಾವಣೆ!

|

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್‌ ಟೆಲಿಕಾಂ ನೆಟವರ್ಕ್ ಸ್ಲೋ ಎನ್ನುವವರು ಅನೇಕ. ಆದರೆ ಬಿಎಸ್‌ಎನ್‌ಎಲ್ ಟೆಲಿಕಾಂ ಖಾಸಗಿ ಟೆಲಿಕಾಂಗಳಿಗೆ ಸ್ಪರ್ಧೆ ಒಡ್ಡುವಂತಹ ಕೆಲವು ಆಕರ್ಷಕ ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಸದ್ಯ ಅಧಿಕ ಡೇಟಾ, ಬಿಗ್ ವ್ಯಾಲಿಡಿಟಿ ಹಾಗೂ ಕರೆಯ ಸೌಲಭ್ಯದ ಪ್ಲ್ಯಾನ್‌ಗಳ ಜೊತೆಗೆ ಹೆಚ್ಚುವರಿ ಪ್ರಯೋಜನ ನೀಡಿದರೇ ಗ್ರಾಹಕರನ್ನು ಸೆಳೆಯುತ್ತವೆ. ಈ ನಿಟ್ಟಿನಲ್ಲಿ ಬಿಎಸ್‌ಎನ್‌ಎಲ್‌ ತನ್ನ ಐದು ಪ್ರೀಪೇಯ್ಡ್‌ ಪ್ಲ್ಯಾನ್‌ನೊಂದನ್ನು ಪರಿಷ್ಕರಣೆ ಮಾಡಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ತನ್ನ STV 99ರೂ, STV 298ರೂ, STV 319ರೂ, PV 399ರೂ ಮತ್ತು PV 699ರೂ. ಯೋಜನೆಗಳನ್ನು ಇದೀಗ ಪರಿಷ್ಕರಣೆ ಮಾಡಿದೆ. ಈಗಾಗಲೇ ಭಿನ್ನ ಪ್ರಯೋಜನಗಳಿಂದ ಈ ಯೋಜನೆಗಳು ಗ್ರಾಹಕರನ್ನು ಆಕರ್ಷಿಸಿವೆ. ಪರಿಷ್ಕರಣೆಯಿಂದ ಈಗ ಡೇಟಾ, ಎಸ್‌ಎಮ್‌ಎಸ್‌ ಹಾಗೂ ವ್ಯಾಲಿಡಿಟಿ ಸೌಲಭ್ಯಗಳಲ್ಲಿ ಬದಲಾವಣೆ ಕಂಡಿವೆ. ಗ್ರಾಹಕರಿಗೆ ಹೆಚ್ಚಿನ ಉಪಯುಕ್ತತೆ ಅನಿಸಲಿವೆ. ಹಾಗಾದರೇ ಬಿಎಸ್‌ಎನ್‌ಎಲ್‌ನ ಪರಿಷ್ಕರಣೆ ಕಂಡ ಯೋಜನೆಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಬಿಎಸ್‌ಎನ್‌ಎಲ್‌ 99ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 99ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 99 ರೂ. ಬೆಲೆಯ ಯೋಜನೆಯು ವಾಯಿಸ್‌ ಕರೆಯ ಪ್ಲ್ಯಾನ್ ಆಗಿದ್ದು, ಬಳಕೆದಾರರಿಗೆ ಅನಿಯಮಿತ ಕರೆಯ ಪ್ರಯೋಜನ ನೀಡುತ್ತದೆ. ಅನಿಯಮಿತ ಧ್ವನಿ ಕರೆಯ ಸೌಲಭ್ಯವು ಒಟ್ಟು 22 ದಿನಗಳವರೆಗೆ ಲಭ್ಯವಾಗುತ್ತದೆ. ಈ ಯೋಜನೆಯಲ್ಲಿ ಉಚಿತ ಕಾಲರ್ ಟ್ಯೂನ್ ಸೇವೆಯು ದೊರೆಯುತ್ತದೆ. ಯೋಜನೆಯ ಪರಿಷ್ಕರಣೆಯಿಂದ ಇದೀಗ 99 ಎಸ್‌ಎಮ್‌ಎಸ್‌ಗಳ ಸೌಲಭ್ಯ ಸೇರಿದೆ.

ಬಿಎಸ್‌ಎನ್‌ಎಲ್‌ 298ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 298ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ STV 298ರೂ. ಯೋಜನೆಯು ಯಾವುದೇ ಎಫ್‌ಯುಪಿ ಮಿತಿಯಿಲ್ಲದೆ ಅನಿಯಮಿತ ಧ್ವನಿ ಕರೆಗಳು ಸೌಲಭ್ಯ ಪಡೆದಿದೆ. ಪ್ರತಿದಿನ 1 ಜಿಬಿ ಡೇಟಾ ಪ್ರಯೋಜನ ಇದ್ದು, ಒಟ್ಟು 54 ದಿನಗಳವರೆಗೆ ವ್ಯಾಲಿಡಿಟಿ ಪಡೆದಿದೆ. ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಹೊಂದಿದೆ. ಪರಿಷ್ಕರಣೆಯಿಂದ ಈ ಯೋಜನೆಯಲ್ಲಿಗ 56 ದಿನಗಳವರೆಗೆ ದಿನಕ್ಕೆ 2 ಜಿಬಿ ಡೇಟಾ ಲಭ್ಯ.

ಬಿಎಸ್‌ಎನ್‌ಎಲ್‌ 319ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 319ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ STV 319ರೂ. ಯೋಜನೆಯು ಒಟ್ಟು 75 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ 10GB ಡೇಟಾ ಪ್ರಯೋಜನ ಲಭ್ಯವಾಗುತ್ತದೆ. ಪರಿಷ್ಕರಣೆಯಿಂದ ಈಗ 300 ಎಸ್‌ಎಂಎಸ್‌ಗಳನ್ನು ಈ ಯೋಜನೆಗೆ ಸೇರಿಸಲಾಗಿದೆ.

ಬಿಎಸ್‌ಎನ್‌ಎಲ್‌ 399ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 399ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ PV399ರೂ. ವೋಚರ್ 80 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಯೋಜನೆಯಲ್ಲಿ 1 ಜಿಬಿ ದೈನಂದಿನ ಡೇಟಾ, ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 ಎಸ್‌ಎಂಎಸ್‌ಗಳು, ಉಚಿತ ಬಿಎಸ್‌ಎನ್‌ಎಲ್ ಟ್ಯೂನ್‌ಗಳ ಸೌಲಭ್ಯ ಪಡೆದಿದೆ. ಈಗ ಪರಿಷ್ಕರಣೆಯಿಂದ ಪ್ರತಿದಿನ 2GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ.

ಬಿಎಸ್‌ಎನ್‌ಎಲ್‌ 699ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 699ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ PV 699ರೂ. ವೋಚರ್ 160 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಯೋಜನೆಯಲ್ಲಿ 0.5GB ದೈನಂದಿನ ಡೇಟಾ, ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 ಎಸ್‌ಎಂಎಸ್‌ಗಳು ಸೌಲಭ್ಯ ಪಡೆದಿದೆ. ಆದಾಗ್ಯೂ, ಮಾರ್ಚ್ 31, 2021 ರವರೆಗೆ ಬಿಎಸ್ಎನ್ಎಲ್ ಹೆಚ್ಚುವರಿ 20 ದಿನಗಳ ವ್ಯಾಲಿಡಿಟಿಯನ್ನು ಒದಗಿಸುತ್ತದೆ.

Best Mobiles in India

English summary
The three STVs in question are STV 99, STV 298 and STV 319, whereas the two PVs are PV 399 and PV 699.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X