Home
ಸುದ್ದಿಜಾಲ

BSNLನಿಂದ ಮತ್ತೆ ಹೊಸ ಪ್ಲ್ಯಾನ್; ಖಾಸಗಿ ಟೆಲಿಕಾಂಗಳು ಕಕ್ಕಾಬಿಕ್ಕಿ!

ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಬಿಎಸ್‌ಎನ್‌ಎಲ್‌ ಸೇರಿದಂತೆ ಖಾಸಗಿ ಟೆಲಿಕಾಂಗಳು ಆಕರ್ಷಕ ಪ್ಲ್ಯಾನ್ ಪರಿಚಯಿಸಿ ಗ್ರಾಹಕರನ್ನು ಸೆಳೆದಿವೆ. ಆ ಪೈಕಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಇತ್ತೀಚಿಗೆ ಕೆಲವು ಅಧಿಕ ವ್ಯಾಲಿಡಿಟಿ ಹಾಗೂ ಡೇಟಾ ಪ್ರಯೋಜನಗಳ ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ಬಿಡುಗಡೆ ಸದ್ದು ಮಾಡಿದೆ. ಈಗ ಮತ್ತೆ ಅದೇ ಹಾದಿಯಲ್ಲಿ ಮುನ್ನಡೆದಿರುವ ಬಿಎಸ್‌ಎನ್‌ಎಲ್‌ ಹೊಸದೊಂದು ಪ್ರೀಪೇಯ್ಡ್ ಪ್ಲ್ಯಾನ್ ಪರಿಚಯಿದ್ದು, ಖಾಸಗಿ ಟೆಲಿಕಾಂಗಳು ಅಚ್ಚರಿಪಡುವಂತೆ ಮಾಡಿದೆ.

ಟೆಲಿಕಾಂ

ಹೌದು, ಬಿಎಸ್‌ಎನ್‌ಎಲ್ ಟೆಲಿಕಾಂ ಈದ್ ವಿಶೇಷವಾಗಿ ಗ್ರಾಹಕರಿಗೆ 599ರೂ. ಗಳ ಹೊಸದೊಂದು ಯೋಜನೆಯನ್ನು ಪರಿಚಯಿಸಿದೆ. ಬಿಎಸ್‌ಎನ್‌ಎಲ್‌ನ ಈ ಹೊಸ ಪ್ಲ್ಯಾನ್ ಡೇಟಾ ಯೋಜನೆಯಾಗಿದ್ದು, ವರ್ಕ್ ಫ್ರಂ ಹೋಮ್‌ಗೆ ಉತ್ತಮ ಎನಿಸಿದೆ. ರಾತ್ರಿ ಅನಿಯಮಿತ ಡೇಟಾ ಬಳಕೆಯ ಪ್ರಯೋಜನವನ್ನು ಪಡೆದಿರುವ ಈ ಹೊಸ ಪ್ಲ್ಯಾನ್ ಅನಿಯಮಿತ ಕರೆ, ಎಸ್‌ಎಮ್ಎಸ್ ಸೇರಿದಂತೆ ಇತರೆ ಹೆಚ್ಚುವರಿ ಸೌಲಭ್ಯಗಳನ್ನು ಒಳಗೊಂಡಿದೆ. ಈ ಯೋಜನೆ ಇನ್ನಷ್ಟು ಪ್ರಯೋಜನಗಳ ಬಗ್ಗೆ ತಿಳಿಯಲು ಮುಂದಿನ ಸ್ಲೈಡ್‌ಗಳನ್ನು ಓದಿರಿ.

ಬಿಎಸ್‌ಎನ್‌ಎಲ್‌ 599ರೂ. ಡೇಟಾ ಯೋಜನೆ

ಬಿಎಸ್‌ಎನ್‌ಎಲ್‌ 599ರೂ. ಡೇಟಾ ಯೋಜನೆ

ಬಿಎಸ್‌ಎನ್‌ಎಲ್‌ 599ರೂ. ಡೇಟಾ ಯೋಜನೆಯಲ್ಲಿ ರಾತ್ರಿ ವೇಳೆ ಅನಿಯಮಿತ ಡೇಟಾ ಬಳಕೆಯ ಸೌಲಭ್ಯ ಲಭ್ಯವಾಗಲಿದೆ. ಅಂದರೇ ರಾತ್ರಿ 12 AM ನಿಂದ ಬೆಳಗ್ಗೆ 5 AMರ ವರೆಗೂ ಯಾವುದೇ ಹೆಚ್ಚುವರಿ ಟಾರೀಫ್‌ ಇಲ್ಲದೇ ಅನಿಯಮಿತ ಡೇಟಾ ಸಿಗಲಿದೆ. ಪ್ರತಿದಿನ 5GB ಡೇಟಾ ಬಳಕೆಯ ನಂತರ 40 Kbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯಲಿದೆ. ಯಾವುದೇ ನೆಟ್‌ವರ್ಕ್‌ಗೆ ದಿನಕ್ಕೆ ಅನಿಯಮಿತ ವಾಯಿಸ್ ಕರೆ, 100 ಉಚಿತ ಎಸ್‌ಎಂಎಸ್, ಉಚಿತ ಬಿಎಸ್‌ಎನ್‌ಎಲ್ ಟ್ಯೂನ್‌ಗಳು ಮತ್ತು ಜಿಂಗ್ ಮ್ಯೂಸಿಕ್ ಅಪ್ಲಿಕೇಶನ್‌ಗೆ ಉಚಿತ ಒಟಿಟಿ ಚಂದಾದಾರಿಕೆಯನ್ನು ನೀಡುತ್ತದೆ. ಇನ್ನು ಈ ಯೋಜನೆಯು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ.

ಯೋಜನೆ ಲಭ್ಯತೆ

ಯೋಜನೆ ಲಭ್ಯತೆ

ಬಿಎಸ್‌ಎನ್‌ಎಲ್‌ ಟೆಲಿಕಾಂನ ಹೊಸ 599ರೂ. ಡೇಟಾ ಯೋಜನೆಯು ಈದ್ ವಿಶೇಷದ ಕೊಡುಗೆಯಾಗಿದೆ. ಈ ಯೋಜನೆಯು ಜುಲೈ 21, 2021 ರಿಂದ ಗ್ರಾಹಕರಿಗೆ ಲಭ್ಯವಾಗಲಿದೆ ಎನ್ನಲಾಗಿದೆ. ಇನ್ನು ಈ ಯೋಜನೆಯನ್ನು ಬಿಎಸ್‌ಎನ್‌ಎಲ್‌ನ ಹಳೆಯ ಹಾಗೂ ಹೊಸ ಗ್ರಾಹಕರಿಬ್ಬರು ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಬಿಎಸ್‌ಎನ್‌ಎಲ್‌ನ ಇತರೆ ಆಕರ್ಷಕ ಡೇಟಾ ಯೋಜನೆಗಳ ಬಗ್ಗೆ ಮುಂದೆ ನೊಡೋಣ.

ಬಿಎಸ್‌ಎನ್‌ಎಲ್‌ 499ರೂ. ಪ್ರಿಪೇಯ್ಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 499ರೂ. ಪ್ರಿಪೇಯ್ಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ ಈ SVT 499ರೂ. ಪ್ಲ್ಯಾನ್ ದೀರ್ಘಾವಧಿಯ ಯೋಜನೆ ಆಗಿದ್ದು, ಒಟ್ಟು 90 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಿದ್ದು, ಒಟ್ಟು ಪೂರ್ಣ ಅವಧಿಗೆ 180GB ಡೇಟಾ ಸಿಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಹ ದೊರೆಯಲಿದೆ. ಹಾಗೆಯೇ ಡೈಲಿ 100 ಎಸ್‌ಎಮ್‌ಎಸ್‌ ಸಹ ಸಿಗುತ್ತದೆ. ಹೆಚ್ಚುವರಿಯಾಗಿ ಬಿಎಸ್‌ಎನ್‌ಎಲ್‌ ಟ್ಯೂನ್ ಮತ್ತು Zing ಪ್ರಯೋಜನ ಲಭ್ಯ.

ಬಿಎಸ್‌ಎನ್‌ಎಲ್‌ 2399ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ 2399ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ ಈ ಪ್ಲ್ಯಾನ್ ಒಟ್ಟು 600 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 250 FUP ನಿಮಿಷಗಳ ಮಿತಿಯಲ್ಲಿ ಉಚಿತ ವಾಯಿಸ್‌ ಕರೆಗಳ ಪ್ರಯೋಜನವನ್ನು ಒದಗಿಸಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದ್ದು, 60 ದಿನಗಳಿಗೆ ಬಿಎಸ್‌ಎನ್‌ಎಲ್‌ ಟ್ಯೂನ್‌ ಸೌಲಭ್ಯವು ಸಿಗಲಿದೆ. ಆದರೆ ಯಾವುದೇ ಡೇಟಾ ಪ್ರಯೋಜನ ಲಭ್ಯ ಇರುವುದಿಲ್ಲ. ಡೇಟಾ ಅಗತ್ಯ ಇರದ ಹಾಗೂ ವಾಯಿಸ್ ಕರೆ ಮತ್ತು ಹೆಚ್ಚಿನ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಪ್ಲ್ಯಾನ್ ಉತ್ತಮ ಆಯ್ಕೆ ಆಗಿದೆ

Best Mobiles in India

English summary
As part of a special Eid offer, the PSU is giving unlimited free data from 12 AM to 5 AM every day without any increase in the tariff.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+