ಬಿಎಸ್‌ಎನ್‌ಎಲ್‌ನಿಂದ ಮತ್ತೆ ಬಿಗ್ ವ್ಯಾಲಿಡಿಟಿ ಪ್ಲ್ಯಾನ್!..ಸ್ಪೆಷಲ್ ಏನು?

|

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್ಎಲ್ ಖಾಸಗಿ ಟೆಲಿಕಾಂ ಕಂಪನಿಗಳೊಂದಿಗೆ ನೇರ ಸ್ಪರ್ಧೆಗೆ ಇಳಿದಿದ್ದು, ಇತ್ತೀಚಿಗೆ 1399ರೂ ಮತ್ತು 1001ರೂ.ಗಳ ಎರಡು ಲಾಂಗ್ ಟರ್ಮ್ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿ ಗ್ರಾಹಕರನ್ನು ಸೆಳೆಯುತ್ತಿದೆ. ಮತ್ತೆ ಅದೇ ಹಾದಿ ನಡೆದಿರುವ ಕಂಪನಿಯು ಹೊಸದೊಂದು ಬಿಗ್ ವ್ಯಾಲಿಡಿಟಿ ಪ್ಲ್ಯಾನ್‌ ಪರಿಚಯಿಸಿದ್ದು, ಇದು ಹೆಚ್ಚಿನ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಅತ್ಯುತ್ತಮ ಎನಿಸಲಿದೆ.

ಬಿಎಸ್‌ಎನ್‌ಎಲ್‌ನಿಂದ ಮತ್ತೆ ಬಿಗ್ ವ್ಯಾಲಿಡಿಟಿ ಪ್ಲ್ಯಾನ್!..ಸ್ಪೆಷಲ್ ಏನು?

ಹೌದು, ಬಿಎಸ್‌ಎನ್ ಎಲ್ ಇದೀಗ ಹೊಸ 1188ರೂ.ಗಳ ಮಾರುತಮ್ ಹೆಸರಿನ ಪ್ರೀಪೇಡ್ ರೀಚಾರ್ಜ್ ಪ್ಲ್ಯಾನ್‌ ಅನ್ನು ಬಿಡುಗಡೆ ಮಾಡಿದ್ದು, ಈ ಪ್ಲ್ಯಾನ್ 345 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಇದರೊಂದಿಗೆ ದೇಶದಲ್ಲಿನ ಯಾವುದೇ ಟೆಲಿಕಾಂ ನೆಟವಕ್‌ಗೆ ಅನಿಯಮಿತ ಉಚಿತ ವಾಯಿಸ್‌ ಕರೆಗಳು, ಉಚಿತ ಡೇಟಾ, ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ.

ಬಿಎಸ್‌ಎನ್‌ಎಲ್‌ನಿಂದ ಮತ್ತೆ ಬಿಗ್ ವ್ಯಾಲಿಡಿಟಿ ಪ್ಲ್ಯಾನ್!..ಸ್ಪೆಷಲ್ ಏನು?

ಈ ಮಾರುತಮ್ ಪ್ರೀಪೇಡ್‌ ಪ್ಲ್ಯಾನ್‌ನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ 2G/3G/4G ಬೆಂಬಲಿತ 5GB ಉಚಿತ ಡೇಟಾ ದೊರೆಯಲಿದ್ದು, ಈ ಪ್ಲ್ಯಾನ್‌ ಮುಖ್ಯವಾಗಿ ಹೆಚ್ಚಿನ ವ್ಯಾಲಿಡಿಟಿ ಮತ್ತು ಉಚಿತ ಕರೆ ಸೌಲಭ್ಯ ಬಯಸುವ ಗ್ರಾಹಕರಿಗೆ ಸೂಕ್ತ ಎನಿಸಲಿದೆ. ಹಾಗೆಯೇ ಇದರೊಂದಿಗೆ ಒಟ್ಟು 345 ದಿನಗಳಿಗೆ 1200 ಉಚಿತ ಎಸ್‌ಎಮ್‌ಎಸ್‌ಗಳು ದೊರೆಯಲಿವೆ. ತೆಲಂಗಾಣ ಮತ್ತು ಆಂಧ್ರಪ್ರದೇಶ ಸರ್ಕಲ್‌ನಲ್ಲಿ ಈ ಪ್ಲ್ಯಾನ್ ಲಭ್ಯವಾಗಲಿದೆ.

ಬಿಎಸ್‌ಎನ್‌ಎಲ್‌ನಿಂದ ಮತ್ತೆ ಬಿಗ್ ವ್ಯಾಲಿಡಿಟಿ ಪ್ಲ್ಯಾನ್!..ಸ್ಪೆಷಲ್ ಏನು?

ಇತ್ತೀಚಿನ ಕಂಪನಿಯ 1399ರೂ.ಗಳ ಪ್ರೀಪೇಡ್ ಪ್ಲ್ಯಾನ್‌ನ 270 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ವಾಯಿಸ್‌ ಕರೆಗಳು ಗ್ರಾಹಕರಿಗೆ ದೊರೆಯಲಿವೆ. ಇದರೊಂದಿಗೆ ಪ್ರತಿದಿನ 50 ಉಚಿತ ಎಸ್‌ಎಮ್‌ಎಸ್‌ಗಳು, ಪ್ರತಿದಿನ 1.5GB ಉಚಿತ ಡೇಟಾ ಲಭ್ಯವಾಗಲಿದ್ದು, ಒಟ್ಟು 270 ದಿನಗಳಿಗೆ 405GB ಉಚಿತ ಡೇಟಾ ಸೀಗಲಿದೆ. ಈ ಪ್ಲ್ಯಾನ್‌ ಸಹ ತೆಲಂಗಾಣ ಮತ್ತು ಆಂಧ್ರಪ್ರದೇಶ ಸರ್ಕಲ್‌ನಲ್ಲಿ ಮಾತ್ರ.

ಓದಿರಿ : ಐದು ಅಂತಸ್ತಿನ ಕಟ್ಟಡ ಖರೀದಿಸಿದ 6 ವರ್ಷದ ಯೂಟ್ಯೂಬ್ ಸ್ಟಾರ್‌!ಓದಿರಿ : ಐದು ಅಂತಸ್ತಿನ ಕಟ್ಟಡ ಖರೀದಿಸಿದ 6 ವರ್ಷದ ಯೂಟ್ಯೂಬ್ ಸ್ಟಾರ್‌!

ಹಾಗೆಯೇ 1001ರೂ.ಗಳ ಪ್ರೀಪೇಡ್‌ ಪ್ಲ್ಯಾನ್‌ ಸಹ 270 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಆದರೆ ವ್ಯಾಲಿಡಿಟಿಯ ಪೂರ್ಣ ಅವಧಿಗೆ ಕೇವಲ 9GB ಉಚಿತ ಡೇಟಾ ಮತ್ತು 750 ಉಚಿತ ಎಸ್‌ಎಮ್‌ಎಸ್‌ಗಳು ಲಭ್ಯವಾಗಲಿದೆ. ಉಳಿದಂತೆ ಅನಿಯಮಿತ ಕರೆಗಳು ಇರಲಿವೆ. ಈ ಪ್ಲ್ಯಾನ್‌ಗಳು ಕೇವಲ 90ದಿನಗಳ ಪ್ರಮೋಷನಲ್ ಅವಧಿಯನ್ನು ಹೊಂದಿದ್ದು, ಸೆಪ್ಟಂಬರ್ 25ರಂದು ಕೊನೆಗೊಳ್ಳಲಿವೆ.

ಓದಿರಿ : ಫ್ಲಿಪ್‌ಕಾರ್ಟ್‌ 'ಮಂತ್ ಎಂಡ್‌ ಮೊಬೈಲ್ ಫೆಸ್ಟ್‌'!..ಭರ್ಜರಿ ಡಿಸ್ಕೌಂಟ್!</a><a class=" title="ಓದಿರಿ : ಫ್ಲಿಪ್‌ಕಾರ್ಟ್‌ 'ಮಂತ್ ಎಂಡ್‌ ಮೊಬೈಲ್ ಫೆಸ್ಟ್‌'!..ಭರ್ಜರಿ ಡಿಸ್ಕೌಂಟ್!" loading="lazy" width="100" height="56" />ಓದಿರಿ : ಫ್ಲಿಪ್‌ಕಾರ್ಟ್‌ 'ಮಂತ್ ಎಂಡ್‌ ಮೊಬೈಲ್ ಫೆಸ್ಟ್‌'!..ಭರ್ಜರಿ ಡಿಸ್ಕೌಂಟ್!

Best Mobiles in India

English summary
The BSNL Rs 1,188 long-term prepaid plan offers voice, data and SMS benefits to the users. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X