ಹೆಚ್ಚು ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ BSNLನಿಂದ 1,188ರೂ.ಪ್ಲ್ಯಾನ್!
ದೇಶಿಯ ಟೆಲಿಕಾಂ ವಲಯ ಅನೇಕ ಏರಿಳಿತಗಳನ್ನು ಕಾಣುತ್ತಿದ್ದು, ಸ್ಥಿರ ವ್ಯವಸ್ಥೆಯೇ ಇಲ್ಲವಾಗಿದೆ. ದರ ಪೈಪೋಟಿಯಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಏರ್‌ಟೆಲ್, ವೊಡಾಫೋನ್ ಮತ್ತು ಜಿಯೋ ಇದೇ ಡಿಸೆಂಬರ್ 1 ರಿಂದ ತಮ್ಮ ಪ್ಲ್ಯಾನ್ ದರಗಳಲ್ಲಿ ಬದಲಾವಣೆ ಮಾಡಲು ನಿರ್ಧರಿಸಿವೆ. ಆದ್ರೆ ಈ ವೇಳೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಅಧಿಕ ವ್ಯಾಲಿಡಿಟಿಯ ಪ್ಲ್ಯಾನ್‌ವೊಂದನ್ನು ಪರಿಚಯಿಸಿ ಗ್ರಾಹಕರಿಗೆ ಸರ್‌ಪ್ರೈಸ್ ನೀಡಿದೆ.

ಹೌದು, ಬಿಎಸ್‌ಎನ್ಎಲ್ ಟೆಲಿಕಾಂ ಸಂಸ್ಥೆಯು 1,188ರೂ.ಗಳ ಪ್ರೀಪೇಡ್ ಪ್ಲ್ಯಾನ್ ಅನ್ನು ಪರಿಷ್ಕರಿಸಿದ್ದು, ಇದೀಗ '1,188ರೂ.ಗಳ ಮಾರುತಮ್' ಹೆಸರಿನಲ್ಲಿ ಪರಿಚಯಿಸಿದೆ. ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿ ಲಭ್ಯವಾಗಲಿದ್ದು, ಈ ಮೊದಲು 345 ದಿನಗಳು ಲಭ್ಯವಿತ್ತು. ಹಾಗಾದರೇ ಬಿಎಸ್‌ಎನ್ಎಲ್ 1188ರೂ. ಮಾರುತಮ್ ಪ್ಲ್ಯಾನಿನ ಪ್ರಯೋಜನಗಳೆನು ಮತ್ತು ಕೊಡುಗೆಯ ಲಭ್ಯತೆಯ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

1188ರೂ.ಪ್ಲ್ಯಾನ್
ಬಿಎಸ್‌ಎನ್‌ಎಲ್‌ನ ಸಂಸ್ಥೆಯ ಹೊಸ 1188ರೂ.ದೀರ್ಘಾವಧಿಯ ಪ್ಲ್ಯಾನಿನಲ್ಲಿ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿ ಗ್ರಾಹಕರಿಗೆ ಸಿಗಲಿದ್ದು, ಇದರೊಂದಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ 5GB ಡೇಟಾ ಸೌಲಭ್ಯವು ಲಭ್ಯವಾಗಲಿದೆ. ಹಾಗೆಯೇ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಸಿಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 1200 ಉಚಿತ ಎಸ್‌ಎಮ್ಎಸ್‌ಗಳು ಸಹ ದೊರೆಯಲಿವೆ.

1188ರೂ.ಪ್ಲ್ಯಾನ್ ಲಭ್ಯತೆ
ಬಿಎಸ್‌ಎನ್‌ಎಲ್‌ನ ಸಂಸ್ಥೆಯ 1188ರೂ.ಗಳ ಮಾರುತಮ್ ಪ್ರೀಪೇಡ್ ಪ್ಲ್ಯಾನ್ ಪ್ರೊಮೋಷನಲ್ ಕೊಡುಗೆಯಾಗಿದ್ದು, ಸದ್ಯ ಚನ್ನೈ ಮತ್ತು ತಮಿಳನಾಡು ಟೆಲಿಕಾಂ ಸರ್ಕಲ್ ವ್ಯಾಪ್ತಿಯಲ್ಲಿ ಮಾತ್ರ ಪರಿಚಯಿಸಲಾಗಿದೆ. ಈ ಎರಡು ಟೆಲಿಕಾಂ ವ್ಯಾಪ್ತಿಯ ಗ್ರಾಹಕರಿಗೆ ಬರುವ 21 ಜನವರಿ 2020ರ ವರೆಗೂ ಈ ಪ್ಲ್ಯಾನ್ ರೀಚಾರ್ಜ್ ಮಾಡಿಕೊಳ್ಳಲು ಅವಕಾಶ ಇರಲಿದೆ. ಮುಂದಿನ ದಿನಗಳಲ್ಲಿ ಈ ಪ್ಲ್ಯಾನನ್ನು ಇತರೆ ಟೆಲಿಕಾಂ ಸರ್ಕಲ್‌ಗಳಿಗೂ ವಿಸ್ತರಿಸುವ ಸಾಧ್ಯತೆಗಳಿವೆ.

1699ರೂ.ಗಳ ವಾರ್ಷಿಕ ಪ್ಲ್ಯಾನ್
ಹಾಗೆಯೇ ಬಿಎಸ್‌ಎನ್‌ಎಲ್ ಸಂಸ್ಥೆಯ 1699ರೂ.ಗಳ ವಾರ್ಷಿಕ ಪ್ರೀಪೇಡ್ ರೀಚಾರ್ಜ್ ಪ್ಲ್ಯಾನ್ ಹೊಂದಿದ್ದು, ಈ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಸ್ಥಳಿಯ ಮತ್ತು ರಾಷ್ಟ್ರಿಯ ವಾಯಿಸ್ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಹಾಗೂ ಪ್ರತಿದಿನ 2GB ಉಚಿತ ಡೇಟಾ ಪ್ರಯೋಜನಗಳು ಗ್ರಾಹಕರಿಗೆ ದೊರೆಯಲಿವೆ. ಡೇಟಾ ಮತ್ತು ಅಧಿಕ ವ್ಯಾಲಿಡಿಟಿ ಪ್ರಿಯ ಗ್ರಾಹಕರಿಗೆ ಬೆಸ್ಟ್ ಎನಿಸಲಿದೆ.

ವ್ಯತ್ಯಾಸಗಳೆನು
ಬಿಎಸ್‌ಎನ್‌ಎಲ್ ಸಂಸ್ಥೆಯ 1699ರೂ.ಗಳ ಪ್ಲ್ಯಾನ್ 365ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಅದೇ ರೀತಿ ಬಿಎಸ್‌ಎನ್‌ಎಲ್‌ನ 1188ರೂ.ಗಳ ಮಾರುತಮ್ ಪ್ರೀಪೇಡ್ ಪ್ಲ್ಯಾನ್ ಸಹ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಆದರೆ ಹೊಸ 1188ರೂ.ಪ್ಲ್ಯಾನಿನಲ್ಲಿ ಡೇಟಾ 5GB ಮಾತ್ರ ಅದೇ 1699ರೂ. ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗಲಿದೆ. ಹೀಗಾಗಿ ಹೆಚ್ಚು ಡೇಟಾ ಬಳಕೆ ಮಾಡದ ಮತ್ತು ಅಧಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಾಗಿದ್ದರೇ 1188ರೂ. ಪ್ಲ್ಯಾನ್ ಓಕೆ ಅನಿಸಲಿದೆ. ಆದರೆ ಡೇಟಾ+ವ್ಯಾಲಿಡಿಟಿ ಬೇಕಿದ್ದರೇ 1699ರೂ.ಪ್ಲ್ಯಾನ್ ಉತ್ತಮ ಅನಿಸಲಿದೆ.


Click it and Unblock the Notifications








