ಬಿಎಸ್‌ಎನ್‌ಎಲ್ 1299ರೂ. ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ನಲ್ಲಿ ಭರ್ಜರಿ ಡೇಟಾ!
ದೇಶಿದ ಬ್ರಾಡ್‌ಬ್ಯಾಂಡ್ ವಲಯದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಟೆಲಿಕಾಂ ಭಿನ್ನ ಯೋಜನೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅವುಗಳಲ್ಲಿ ಕಡಿಮೆ ಬೆಲೆಯ ಯೋಜನೆಗಳು ಹೆಚ್ಚು ಗಮನ ಸೆಳೆದಿದ್ದು, ಅವುಗಳು ಹೆಚ್ಚಿನ ಡೇಟಾ ಪ್ರಯೋಜನಗಳನ್ನು ಪಡೆದಿವೆ. ಈ ನಿಟ್ಟಿನಲ್ಲಿ ಬಿಎಸ್‌ಎನ್‌ಎಲ್‌ನ 1299ರೂ. ಯೋಜನೆಯು ಭರ್ಜರಿ ಇಂಟರ್ನೆಟ್ ಸೌಲಭ್ಯವನ್ನು ಒಳಗೊಂಡಿದೆ.

ಹೌದು, ಬಿಎಸ್‌ಎನ್‌ಎಲ್ ಸಂಸ್ಥೆಯು ಹೊಸದಾಗಿ ಬಿಎಸ್‌ಎನ್‌ಎಲ್ 22GB CUL ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು ಅನಿಯಮಿತ ಡೇಟಾ ಹಾಗೂ ಕಾಲಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಅಧಿಕ ಇಂಟರ್ನೆಟ್ ಬಳಕೆ ಮಾಡುವ ಗ್ರಾಹಕರಿಗೆ ಈ ಯೋಜನೆಯು ಉತ್ತಮ ಅನಿಸಲಿದೆ. ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ.

ಇನ್ನು ಈ ಯೋಜನೆ ಜುಲೈ 1, 2020 ರಿಂದ ಜಾರಿಗೆ ಬಂದಿದೆ. ಈ ಯೋಜನೆಯು ಬಳಕೆದಾರರಿಗೆ 10 Mbps ಡೌನ್‌ಲೋಡ್ ವೇಗವನ್ನು ಒದಗಿಸುತ್ತದೆ. ದಿನದ ಡೇಟಾ ಮಿತಿ 22GB ಆಗಿದ್ದು, ನಂತರ ಇಂಟರ್ನೆಟ್ ವೇಗವನ್ನು 2 Mbps ಗೆ ಇಳಿಸಲಾಗುತ್ತದೆ. ಒಂದು ತಿಂಗಳು ಅಥವಾ ಒಂದು ವರ್ಷಕ್ಕೆ ಬೇರೆ ಯಾವುದೇ ಪ್ರತ್ಯೇಕ ಡೇಟಾ ಮಿತಿಯಿಲ್ಲ, ಆದ್ದರಿಂದ ಬಳಕೆದಾರರು ಎಷ್ಟು ಸಮಯದವರೆಗೆ ಯೋಜನೆಯನ್ನು ಖರೀದಿಸಿದರೂ ಅನಿಯಮಿತ ಡೇಟಾವನ್ನು ಪಡೆಯುತ್ತಾರೆ.

ಈ ಯೋಜನೆಯ ಅಂಡಮಾನ್ ಮತ್ತು ನಿಕೋಬಾರ್ ಟೆಲಿಕಾಂ ಪ್ರದೇಶಗಳನ್ನು ಹೊರತುಪಡಿಸಿ ಇತರೆ ಪ್ರದೇಶಗಳಲ್ಲಿ ಲಭ್ಯವಿದೆ. ಈ ತಿಂಗಳ ಶುಲ್ಕ 1299ರೂ. ಗಳು ಆಗಿದೆ. ಇನ್ನು ಈ ಯೋಜನೆಯನ್ನು ವಾರ್ಷಿಕ ಅವಧಿಗೆ ಬೇಕಿದ್ದರೇ 12,990ರೂ.ಗಳಿಗೆ ಲಭ್ಯ.

ಬಿಎಸ್‌ಎನ್‌ಎಲ್-777ರೂ.ಪ್ಲ್ಯಾನ್
ಬಿಎಸ್‌ಎನ್‌ಎಲ್ ಸಂಸ್ಥೆಯ ಈ 777ರೂ.ಪ್ಲ್ಯಾನ್ ಒಂದು ತಿಂಗಳಿನಲ್ಲಿ 500GB ಡೇಟಾ ಸಿಗಲಿದೆ. ಡೇಟಾ ವೇಗದ ಮಿತಿಯು 50 Mbps ಸಾಮರ್ಥ್ಯದಲ್ಲಿರಲಿದ್ದು, ತಿಂಗಳ ನಿಗದಿತ ಡೇಟಾ ಬಳಕೆ ಮುಗಿದ ಬಳಿಕ 2Mbps ವೇಗದಲ್ಲಿ ಡೇಟಾ ಸೌಲಭ್ಯ ಮುಂದವರೆಯಲಿದೆ. ಈ ಪ್ಲ್ಯಾನಿನಲ್ಲಿಯೂ ಸಹ ಹೆಚ್ಚುವರಿಯಾಗಿ ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವ ಸಹ ದೊರೆಯಲಿದೆ.

ಬಿಎಸ್‌ಎನ್‌ಎಲ್-849ರೂ.ಪ್ಲ್ಯಾನ್
ಬಿಎಸ್‌ಎನ್‌ಎಲ್‌ನ ಈ ಬ್ರಾಡ್‌ಬಾಂಡ್ ಪ್ಲ್ಯಾನಿನಲ್ಲಿ ಒಂದು ತಿಂಗಳಿಗೆ ಒಟ್ಟು 600GB ಡೇಟಾ ಮಿತಿಯನ್ನು ನೀಡಲಾಗಿದ್ದು, ಯಾವುದೇ ದೈನಂದಿನ FUP ಮಿತಿ ಇರುವುದಿಲ್ಲ. ಈ ಪ್ಲ್ಯಾನ್‌ನಲ್ಲಿ ಡೇಟಾ ವೇಗವು 50 Mbps ಸಾಮರ್ಥ್ಯದಲ್ಲಿರಲಿದ್ದು, ಇತರೆ ನೆಟವರ್ಕ್‌ಗಳಿಗೆ ಅನಿಯಮಿತ ಉಚಿತ ಕರೆಗಳ ಸೌಲಬ್ಯವನ್ನು ಪಡೆದಿದೆ.


Click it and Unblock the Notifications