ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಸಿಹಿಸುದ್ದಿ: ಈ ಪ್ಲ್ಯಾನಿನಲ್ಲಿ ಈಗ ಹೆಚ್ಚುವರಿ ಸೌಲಭ್ಯ ಲಭ್ಯ!
ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್ ಟೆಲಿಕಾಂ ಸಂಸ್ಥೆಯು ಇತ್ತೀಚಿಗೆ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ನೇರವಾಗಿ ಪೈಪೋಟಿ ನೀಡುವ ಯೋಜನೆಗಳನ್ನು ಪರಿಚಯಿಸುತ್ತ ಸಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲವು ಆಕರ್ಷಕ ಪ್ರೀಪೇಯ್ಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಇದೀಗ ಬಿಎಸ್‌ಎನ್ಎಲ್ ತನ್ನ ಜನಪ್ರಿಯ ಪ್ರೀಪೇಯ್ಡ್ ಪ್ಲ್ಯಾನ್‌ವೊಂದನ್ನು ಪರಿಷ್ಕರಿಸಿದ್ದು, ಆ ಪ್ಲ್ಯಾನ್ ಅಧಿಕ ಡೇಟಾ ಜೊತೆಗೆ ಇದೀಗ ಭರ್ಜರಿ ಪ್ರಯೋಜನಗಳನ್ನು ಪಡೆದಿದೆ.

ಹೌದು, ಬಿಎಸ್‌ಎನ್ಎಲ್ ಇದೀಗ ತನ್ನ ಜನಪ್ರಿಯ 1,999ರೂ.ಗಳ ವಾರ್ಷಿಕ ಪ್ರೀಪೇಯ್ಡ್ ಯೋಜನೆಯನ್ನು ಈಗ ಮತ್ತೊಮ್ಮೆ ಪರಿಷ್ಕರಣೆ ಮಾಡಿದೆ. ವ್ಯಾಲಿಡಿಟಿ ಅವಧಿಯಲ್ಲಿ 30 ದಿನಗಳನ್ನು ಹೆಚ್ಚುವರಿಯಾಗಿ ನೀಡಿದೆ. ಈ ವಾರ್ಷಿಕ ವ್ಯಾಲಿಡಿಟಿಯ ಯೋಜನೆಯಲ್ಲಿ ಗ್ರಾಹಕರಿಗೆ 365 ದಿನಗಳ Eros Now ವಾರ್ಷಿಕ ಚಂದಾದಾರಿಕೆ ಲಭ್ಯವಾಗಲಿದೆ. ಇದರೊಂದಿಗೆ 60 ದಿನಗಳಿಗೆ Lokdhun-ಲೋಕ್‌ಧೂನ್ ಕಂಟೆಂಟ್ ಚಂದಾದಾರಿಕೆ ಸಹ ಸಿಗಲಿದೆ. ಈ ಕೊಡುಗೆಯು ಇದೇ ಮಾರ್ಚ್(2021) ಅಂತ್ಯದ ವರೆಗೆ ಮಾತ್ರ ಲಭ್ಯ. ಹಾಗಾದರೇ ಬಿಎಸ್‌ಎನ್‌ಎಲ್‌ನ 1,999ರೂ. ಪ್ಲ್ಯಾನಿನ ಪ್ರಯೋಜನಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಬಿಎಸ್‌ಎನ್ಎಲ್ PV 1,999ರೂ. ಯೋಜನೆ
ಬಿಎಸ್‌ಎನ್ಎಲ್ 1,999ರೂ. ಪ್ರೀಪೇಯ್ಡ್ ಪ್ಲ್ಯಾನ್ ಪರಿಷ್ಕರಿಸಲಾಗಿದ್ದು, ಹೀಗಾಗಿ 365 ದಿನಗಳ ವ್ಯಾಲಿಡಿಟಿ ಬದಲಾಗಿ ಈಗ 395 ದಿನಗಳ ವ್ಯಾಲಿಡಿಟಿ ಸಿಗಲಿದೆ. ಈ ಯೋಜನೆಯು ಪ್ರತಿದಿನ 2GB ಡೇಟಾ ಸೌಲಭ್ಯವನ್ನು ಹೊಂದಿದ್ದು, ಇದರೊಂದಿಗೆ ಪ್ರತಿದಿನ 100ಎಸ್‌ಎಮ್‌ಎಸ್ ಹಾಗೂ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನವನ್ನು ಒಳಗೊಂಡಿದೆ. ಹಾಗೆಯೇ ಗ್ರಾಹಕರಿಗೆ Eros Now ಹಾಗೂ Lokdhun-ಲೋಕ್‌ಧೂನ್ ಚಂದಾದಾರಿಕೆ ಲಭ್ಯವಾಗಲಿದೆ. ಇತರೆ ವಾರ್ಷಿಕ ಯೋಜನೆಗಳ ಬಗ್ಗೆ ಮುಂದಿನ ಸ್ಪೈಡಗಳಲ್ಲಿ ತಿಳಿಯೋಣ.

ಬಿಎಸ್‌ಎನ್‌ಎಲ್ 1499ರೂ. ಪ್ಲ್ಯಾನ್ ಪ್ರಯೋಜನಗಳು
ಬಿಎಸ್‌ಎನ್‌ಎಲ್‌ನ 1499ರೂ. ಪ್ಲ್ಯಾನಿನಲ್ಲಿ ಭಾರತದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ವಾಯಿಸ್ ಕರೆಗಳು ಲಭ್ಯ. ಇದರೊಂದಿಗೆ ಒಟ್ಟು 24GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಪ್ರತಿದಿನ 100ಎಸ್‌ಎಮ್‌ಎಸ್ ಸೌಲಭ್ಯಗಳು ಸಿಗಲಿವೆ. ಇನ್ನು ಈ ಯೋಜನೆಯು 395 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ.

ಬಿಎಸ್‌ಎನ್‌ಎಲ್ 2399ರೂ. ಪ್ಲ್ಯಾನ್ ಪ್ರಯೋಜನಗಳು
ಬಿಎಸ್‌ಎನ್‌ಎಲ್‌ನ ಈ ಪ್ಲ್ಯಾನ್ ಸದ್ಯ ಕೊಡುಗೆಯಲ್ಲಿ ಒಟ್ಟು 437 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ ಉಚಿತ ವಾಯಿಸ್ ಕರೆಗಳ ಪ್ರಯೋಜನವನ್ನು ಒದಗಿಸಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದ್ದು, 60 ದಿನಗಳಿಗೆ ಬಿಎಸ್‌ಎನ್‌ಎಲ್ ಟ್ಯೂನ್ ಸೌಲಭ್ಯವು ಸಿಗಲಿದೆ. ಹಾಗೆಯೇ ಪ್ರತಿದಿನ 3GB ಡೇಟಾ ಸೌಲಭ್ಯ ಸಹ ದೊರೆಯಲಿದೆ.


Click it and Unblock the Notifications