Home
ಸುದ್ದಿಜಾಲ

BSNL ಸ್ಪೆಷಲ್ ಆಫರ್: ಒಟ್ಟು 1308GB ಡಾಟಾ!.ದಂಗಾದ ಖಾಸಗಿ ಟೆಲಿಕಾಂಗಳು!

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್ ಟೆಲಿಕಾಂ ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ನೇರ ಪೈಪೋಟಿ ನೀಡುತ್ತಾ ಸಾಗಿದ್ದು, ಹಲವು ಆಕರ್ಷಕ ಪ್ರೀಪೇಡೆ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಪ್ರಸ್ತುತ ಬಿಎಸ್ಎನ್ಎಲ್ 4G ನೆಟವರ್ಕ ಸೇವೆಯನ್ನು ದೇಶಾದ್ಯಂತ ವಿಸ್ತರಿಸುವ ಕಾರ್ಯದಲ್ಲಿ ತೊಡಗಿರುವ ಸಂಸ್ಥೆಯು ತನ್ನ ಪ್ರೀಪೇಡ್‌ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಬಿಎಸ್ಎನ್ಎಲ್ ಈಗ ವಿಶೇಷ ಆಫರ್‌ ಅನ್ನು ಘೋಷಿಸಿದ್ದು, ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಟೆಲಿಕಾಂಗಳು ಬೆದರುವಂತಾಗಿದೆ.

ಬಿಎಸ್ಎನ್ಎಲ್ ಟೆಲಿಕಾಂ

ಹೌದು, ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆಯು ಹಲವು ದೀರ್ಘಾವಧಿಯ ಹೊಸ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಲಾಂಚ್ ಮಾಡಿದೆ. ಅವುಗಳಲ್ಲಿ ವಾರ್ಷಿಕ ವ್ಯಾಲಿಡಿಟಿ ಅವಧಿಯನ್ನು ಪಡೆದಿರುವ 1999ರೂ ಹೆಚ್ಚು ಜನಪ್ರಿಯತೆ ಪಡೆದಿದೆ. ಡಾಟಾ, ವ್ಯಾಲಿಡಿಟಿ, ಕರೆಯ ಪ್ರಯೋಜನಗಳನ್ನು ಹೊಂದಿರುವ ಈ ಪ್ರೀಪೇಡ್‌ ಪ್ಲ್ಯಾನಿಗೆ ಇದೀಗ ಬಿಎಸ್ಎನ್ಎಲ್ ಮತ್ತೊಂದು ಸರ್‌ಪ್ರೈಸ್‌ ಕೊಡುಗೆ ಸೇರಿಸಿದೆ.

71 ದಿನಗಳ ಹೆಚ್ಚಳ

ಬಿಎಸ್ಎನ್ಎಲ್ 'ಗಣರಾಜ್ಯೋತ್ಸವ ದಿನ'ದ ಪ್ರಯುಕ್ತ ತನ್ನ ಜನಪ್ರಿಯ 1999ರೂ. ಪ್ಲ್ಯಾನಿನ ವ್ಯಾಲಿಡಿಟಿ ಅವಧಿಯಲ್ಲಿ ಈಗ 71 ದಿನಗಳ ಹೆಚ್ಚಳ ಘೋಷಿಸಿದೆ. ಈ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಇದೀಗ 71 ದಿನಗಳು ಹೆಚ್ಚುವರಿಯಾಗಿ ಸೇರಿಕೊಳ್ಳಲಿವೆ. ಬಿಎಸ್ಎನ್ಎಲ್‌ನ ಈ ವಿಶೇಷ ಕೊಡುಗೆಯ ಪ್ರಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

ಒಟ್ಟು 436 ದಿನಗಳ ವ್ಯಾಲಿಡಿಟಿ

ಒಟ್ಟು 436 ದಿನಗಳ ವ್ಯಾಲಿಡಿಟಿ

'ಗಣರಾಜ್ಯೋತ್ಸವ ದಿನ' ಅಂಗವಾಗಿ ಬಿಎಸ್ಎನ್ಎಲ್‌ ತನ್ನ 1999ರೂ ವಾರ್ಷಿಕ ಪ್ರೀಪೇಡ್ ಪ್ಲ್ಯಾನಿನ ವ್ಯಾಲಿಡಿಟಿಯಲ್ಲಿ 71 ದಿನಗಳ ಹೆಚ್ಚಳ ಮಾಡಿದೆ. ಹೀಗಾಗಿ ಈ ಪ್ಲ್ಯಾನ್‌ ರೀಚಾರ್ಜ್ ಮಾಡಿಸುವ ಗ್ರಾಹಕರಿಗೆ ಒಟ್ಟು 436 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಪ್ರಸ್ತುತ ಈ ಪ್ರೀಪೇಡ್ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ.

1,999ರೂ. ಪ್ಲ್ಯಾನ್ ಪ್ರಯೋಜನಗಳು

1,999ರೂ. ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ನ 1,999ರೂ. ಪ್ಲ್ಯಾನ್ ಇದೀಗ ಆಫರ್‌ನಲ್ಲಿ ಲಭ್ಯ ಇದೆ. ಈ ಪ್ಲ್ಯಾನಿನಲ್ಲಿ ಭಾರತದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ವಾಯಿಸ್ ಕರೆಗಳು, ಪ್ರತಿದಿನ 3GB ಡೇಟಾ ಸೌಲಭ್ಯ ಸಹ ದೊರೆಯಲಿದೆ (ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 1308GB ಡಾಟಾ). ಇದರೊಂದಿಗೆ ಪ್ರತಿದಿನ 100 ಎಸ್‌ಎಂಎಸ್ ಜೊತೆಗೆ ಬಿಎಸ್ಎನ್ಎಲ್ ಟ್ಯೂನ್ಸ್ ಮತ್ತು ಬಿಎಸ್ಎನ್ಎಲ್ ಟಿವಿ ಚಂದಾದಾರಿಕೆಯು ಸಹ ಉಚಿತವಾಗಿ ಲಭ್ಯವಾಗಲಿವೆ.

ಸೀಮಿತ ಅವಧಿಯ ಕೊಡುಗೆ

ಸೀಮಿತ ಅವಧಿಯ ಕೊಡುಗೆ

ಬಿಎಸ್‌ಎನ್‌ಎಲ್‌ನ 1,999ರೂ. ಪ್ಲ್ಯಾನಿನಲ್ಲಿ ಘೋಷಿಸಿರುವ ಹೆಚ್ಚುವರಿ ವ್ಯಾಲಿಡಿಟಿ ಆಫರ್ ಸೀಮಿತ ಅವಧಿಯ ಕೊಡುಗೆ ಆಗಿದೆ. ಗಣರಾಜ್ಯೋತ್ಸವ ದಿನ ಪ್ರಯುಕ್ತ ಘೋಷಿಸಿರುವ ಈ ಕೊಡುಗೆಯು ಇದೇ ಜನೆವರಿ 26, 2020 ರಿಂದ ಲಭ್ಯವಾಗಲಿದ್ದು, ಇದೇ ಫೆಬ್ರುವರಿ 15ರ ವರೆಗೂ ಮಾತ್ರ ಮುಂದುವರೆಯಲಿದೆ ಎಂದು ಬಿಎಸ್ಎನ್ಎಲ್ ತಿಳಿಸಿದೆ.

Best Mobiles in India

English summary
BSNL Republic Day offer, BSNL is offering extra 71 days validity for rs 1,999 prepaid plan. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+