ಅಗ್ಗದ ಬೆಲೆಯ ಪ್ಲ್ಯಾನ್ ರೀಚಾರ್ಜ್ ಮಾಡಬೇಕೆ?..ಈ ಪ್ಲ್ಯಾನ್ ಸೂಪರ್!
ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಟೆಲಿಕಾಂ ಕೆಲವು ಆಕರ್ಷಕ ಪ್ರೀಪೇಯ್ಡ್ ಪ್ಲ್ಯಾನ್‌ಗಳ ಮೂಲಕ ಖಾಸಗಿ ಟೆಲಿಕಾಂಗಳಿಗೆ ನೇರ ಸೆಡ್ಡು ಹೊಡೆಯುವ ಪ್ರಯತ್ನ ನಡೆಸಿದೆ. ಬಿಎಸ್‌ಎನ್‌ಎಲ್ ಸಂಸ್ಥೆಯು ಕೆಲವು ಯೋಜನೆಗಳು ಅಧಿಕ ದೈನಂದಿನ ಡೇಟಾ ಮತ್ತು ದೀರ್ಘ ವ್ಯಾಲಿಡಿಟಿ ಪ್ರಯೋಜನಗಳನ್ನು ಪಡೆದಿವೆ. ಅದಾಗ್ಯೂ, ಕೆಲವು ಅಗ್ಗದ ಪ್ರೀಪೇಯ್ಡ್ ರೀಚಾರ್ಜ್ ಆಯ್ಕೆಗಳನ್ನು ಸಂಸ್ಥೆಯು ಒಳಗೊಂಡಿದೆ.
ಹೌದು, ಬಿಎಸ್‌ಎನ್‌ಎಲ್ ಟೆಲಿಕಾಂ ಅಗ್ಗದ ರೀಚಾರ್ಜ್ ಪ್ರೀಪೇಯ್ಡ್ ಯೋಜನೆಯ ಲಿಸ್ಟ್ ಹೊಂದಿದೆ. ಅವುಗಳಲ್ಲಿ 107ರೂ. ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಕಡಿಮೆ ಬೆಲೆಯ ಯೋಜನೆಯಾಗಿದ್ದು, ವ್ಯಾಲಿಡಿಟಿ, ಡೇಟಾ ಹಾಗೂ ವಾಯಿಸ್ ಕರೆಯ ಸಪೋರ್ಟ್ ಪಡೆದಿದೆ. ಈ ಬಿಎಸ್ಎನ್‌ಎಲ್‌ನ ಯೋಜನೆಯಲ್ಲಿ ಹಾಗಾದರೆ ಬಿಎಸ್‌ಎನ್‌ಎಲ್ ಟೆಲಿಕಾಂನ 107ರೂ. ಪ್ರೀಪೇಯ್ಡ್ ಯೋಜನೆ ಹಾಗೂ ಇತರೆ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಬಿಎಸ್‌ಎನ್‌ಎಲ್ 107ರೂ. ಯೋಜನೆ ಪ್ರಯೋಜನಗಳು : ಬಿಎಸ್‌ಎನ್‌ಎಲ್‌ನ ಈ ರೀಚಾರ್ಜ್ ಯೋಜನೆಯು ಒಟ್ಟು 35 ದಿನಗಳ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿದೆ. ಹಾಗೆಯೇ ಈ ಪ್ಲ್ಯಾನ್ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 3GB ಡೇಟಾ ಪ್ರಯೋಜನ ಸಹ ಪಡೆದಿದೆ. ಇದರೊಂದಿಗೆ 200 ನಿಮಿಷಗಳ ವಾಯಿಸ್ ಕರೆ ಸೌಲಭ್ಯ ಸಹ ಪಡೆದಿದೆ. ಕಡಿಮೆ ಡೇಟಾ ಬಳಕೆ ಮಾಡುವ ಗ್ರಾಹಕರಿಗೆ ಈ ಪ್ಲ್ಯಾನ್ ಸೂಕ್ತ ಎನಿಸಲಿದೆ.

ಬಿಎಸ್‌ಎನ್‌ಎಲ್ 2998ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು : ಬಿಎಸ್‌ಎನ್‌ಎಲ್ ಟೆಲಿಕಾಂನ 2998ರೂ. ಪ್ರೀಪೇಯ್ಡ್ ಯೋಜನೆ ದೀರ್ಘಾವಧಿಯ ಪ್ಲ್ಯಾನ್ ಆಗಿದ್ದು, ಪ್ರತಿದಿನ 3 GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಹಾಗೂ ಅನಿಯಮಿತ ವಾಯಿಸ್ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಹೆಚ್ಚುವರಿಯಾಗಿ 90 ದಿನಗಳ ವ್ಯಾಲಿಡಿಟಿ ಸಹ ಲಭ್ಯವಾಗಲಿದೆ. ಒಟ್ಟಾರೇ 455 ದಿನಗಳ ವ್ಯಾಲಿಡಿಟಿ ದೊರೆಯಲಿದೆ.

ಬಿಎಸ್‌ಎನ್‌ಎಲ್ 1198ರೂ. ರೀಚಾರ್ಜ್ ಪ್ಲ್ಯಾನ್ ಪ್ರಯೋಜನಗಳು : ಬಿಎಸ್‌ಎನ್‌ಎಲ್ ಟೆಲಿಕಾಂನ 1198ರೂ. ರೀಚಾರ್ಜ್ ಯೋಜನೆಯಲ್ಲಿ ಪ್ರತಿ ತಿಂಗಳು 3 GB ಡೇಟಾ, ಇದರೊಂದಿಗೆ ಪ್ರತಿ ತಿಂಗಳು 300 ನಿಮಿಷಗಳ ಉಚಿತ ವಾಯಿಸ್ ಕರೆ ಪ್ರಯೋಜನ ಲಭ್ಯವಿದೆ. ಇನ್ನು ಈ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ 36GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಮುಖ್ಯವಾಗಿ ಅಧಿಕ ವ್ಯಾಲಿಡಿಟಿ ನಿರೀಕ್ಷಿಸುವ ಗ್ರಾಹಕರಿಗೆ ಅತ್ಯುತ್ತಮ ಪ್ಲ್ಯಾನ್ ಎನಿಸುತ್ತದೆ.

ಬಿಎಸ್‌ಎನ್‌ಎಲ್ 997ರೂ. ಪ್ಲ್ಯಾನ್ ಪ್ರಯೋಜನಗಳು : ಬಿಎಸ್‌ಎನ್‌ಎಲ್ ಟೆಲಿಕಾಂನ ಈ ಯೋಜನೆಯು ಒಟ್ಟು 160 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಗ್ರಾಹಕರಿಗೆ ಲಭ್ಯವಾಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಹಾಗೂ ಪ್ರತಿದಿನ 100 ಎಸ್ಎಮ್‌ಎಸ್ ಪ್ರಯೋಜನ ಸಹ ದೊರೆಯುತ್ತದೆ.
ಬಿಎಸ್‌ಎನ್‌ಎಲ್ 599ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು : ಬಿಎಸ್‌ಎನ್‌ಎಲ್ ಟೆಲಿಕಾಂನ 599ರೂ. ಪ್ರೀಪೇಯ್ಡ್ ಯೋಜನೆಯಲ್ಲಿ ಪ್ರತಿದಿನ 5 GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಹಾಗೂ ಅನಿಯಮಿತ ವಾಯಿಸ್ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಒಟ್ಟು ಪೂರ್ಣ ಅವಧಿಯ ವ್ಯಾಲಿಡಿಟಿಯಲ್ಲಿ ಒಟ್ಟು 450 GB ಡೇಟಾ ಪ್ರಯೋಜನ ದೊರೆಯುತ್ತದೆ.


Click it and Unblock the Notifications