Home
ಸುದ್ದಿಜಾಲ

BSNLನ 198ರೂ. ರೀಚಾರ್ಜ್‌ನಲ್ಲಿ ಸಿಗುತ್ತೆ ಜಬರ್ದಸ್ತ್ ಡೇಟಾ ಮತ್ತು ಬಿಗ್ ವ್ಯಾಲಿಡಿಟಿ!

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಸೇರಿದಂತೆ ರಿಲಯನ್ಸ್‌ ಜಿಯೋ, ವೊಡಾಫೋನ್-ಐಡಿಯಾ ಮತ್ತು ಬಾರ್ತಿ ಏರ್‌ಟೆಲ್ ಟೆಲಿಕಾಂಗಳು ಗ್ರಾಹಕರನ್ನು ಸೆಳೆಯಲು ಹಲವು ಅತ್ಯುತ್ತಮ ಪ್ಲ್ಯಾನ್ ಪರಿಚಯಿಸುತ್ತಾ ಮುನ್ನಡೆದಿವೆ. ಜಿಯೋ, ಏರ್‌ಟೆಲ್‌ ಹಾಗೂ ವಿ ಟೆಲಿಕಾಂಗಳಿಗೆ ಫೈಟ್‌ ನೀಡುವಂತಹ ಕೆಲವು ಯೋಜನೆಗಳನ್ನು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಂಸ್ಥೆ ಪರಿಚಯಿಸಿ ಅಚ್ಚರಿ ಮೂಡಿಸಿದೆ. ಕೆಲವು ಯೋಜನೆಗಳು ಗ್ರಾಹಕ ಸ್ನೇಹಿ ದರ ಹೊಂದಿದ್ದು, ಅಧಿಕ ಡೇಟಾ ಪ್ರಯೋಜನಗಳನ್ನು ಒಳಗೊಂಡಿದೆ. ಈ ನಿಟ್ಟಿನಲ್ಲಿ ಬಿಎಸ್‌ಎನ್‌ಎಲ್‌ನ ಪ್ಲ್ಯಾನ್‌ವೊಂದು ಗಮನ ಸೆಳೆದಿದೆ.

ಚಂದಾದಾರರಿಗೆ

ಹೌದು, ಬಿಎಸ್‌ಎನ್‌ಎಲ್‌ ಟೆಲಿಕಾಂ ಕೆಲವು ಯೋಜನೆಗಳು ಆಕರ್ಷಕ ಅನಿಸಿವೆ. ಆ ಪೈಕಿ ಬಿಎಸ್‌ಎನ್‌ಎಲ್‌ 198ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಸಹ ಒಂದಾಗಿದೆ. ಬಜೆಟ್‌ ಬೆಲೆಯಲ್ಲಿ ಅಧಿಕ ಡೇಟಾ ಬಯಸುವ ಚಂದಾದಾರರಿಗೆ ಈ ಯೋಜನೆಯು ಯೋಗ್ಯ ಎನಿಸಲಿದೆ. ಈ ಪ್ಲ್ಯಾನಿನಲ್ಲಿ ಚಂದಾದಾರರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ದೊರೆಯಲಿದೆ ಹಾಗೂ ಅಧಿಕ ವ್ಯಾಲಿಡಿಟಿಯ ಸೌಲಭ್ಯವು ಲಭ್ಯವಾಗಲಿದೆ. ಹಾಗಾದರೇ ಬಿಎಸ್‌ಎನ್‌ಎಲ್‌ನ 198ರೂ. ಪ್ರೀಪೇಯ್ಡ್‌ ಯೋಜನೆ ಇತರೆ ಪ್ರಯೋಜನಗಳೇನು? ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಬಿಎಸ್‌ಎನ್ಎಲ್ 198ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಬಿಎಸ್‌ಎನ್ಎಲ್ 198ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್ 198ರೂ. ಯೋಜನೆಯು ಅತ್ಯುತ್ತಮ ಡೇಟಾ ಯೋಜನೆ ಆಗಿದೆ. ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ದೊರೆಯಲಿದೆ. ಇನ್ನು ಈ ಯೋಜನೆಯು ಒಟ್ಟು 50 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಆದ್ರೆ ಈ ಪ್ಲ್ಯಾನ್ ಯೋಜನೆಯಲ್ಲಿ ಯಾವುದೇ ವಾಯಿಸ್ ಕರೆ, ಎಸ್‌ಎಮ್‌ಎಸ್‌ ಪ್ರಯೋಜನಗಳು ಲಭ್ಯವಾಗುವುದಿಲ್ಲ. ಬಿಎಸ್‌ಎನ್‌ಎಲ್‌ ಇತರೆ ಕೆಲವು ಬೆಸ್ಟ್‌ ಡೇಟಾ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ.

ಬಿಎಸ್‌ಎನ್‌ಎಲ್‌ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 599ರೂ. ಪ್ರೀಪೇಯ್ಡ್‌ ಯೋಜನೆಯಲ್ಲಿ ಪ್ರತಿದಿನ 5GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಹಾಗೂ ಅನಿಯಮಿತ ವಾಯಿಸ್ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಒಟ್ಟು ಪೂರ್ಣ ಅವಧಿಯ ವ್ಯಾಲಿಡಿಟಿಯಲ್ಲಿ ಒಟ್ಟು 450 GB ಡೇಟಾ ಪ್ರಯೋಜನ ದೊರೆಯುತ್ತದೆ. ಹೆಚ್ಚುವರಿಯಾಗಿ ಜಿಂಗ್ ಸೇವೆ ಲಭ್ಯವಾಗಲಿದೆ.

ಬಿಎಸ್‌ಎನ್‌ಎಲ್‌ 499ರೂ. ಪ್ರಿಪೇಯ್ಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 499ರೂ. ಪ್ರಿಪೇಯ್ಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ ಈ SVT 499ರೂ. ಪ್ಲ್ಯಾನ್ ದೀರ್ಘಾವಧಿಯ ಯೋಜನೆ ಆಗಿದ್ದು, ಒಟ್ಟು 90 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಿದ್ದು, ಒಟ್ಟು ಪೂರ್ಣ ಅವಧಿಗೆ 180GB ಡೇಟಾ ಸಿಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಹ ದೊರೆಯಲಿದೆ. ಹಾಗೆಯೇ ಡೈಲಿ 100 ಎಸ್‌ಎಮ್‌ಎಸ್‌ ಸಹ ಸಿಗುತ್ತದೆ. ಹೆಚ್ಚುವರಿಯಾಗಿ ಬಿಎಸ್‌ಎನ್‌ಎಲ್‌ ಟ್ಯೂನ್ ಮತ್ತು Zing ಪ್ರಯೋಜನ ಲಭ್ಯ.

ಬಿಎಸ್‌ಎನ್‌ಎಲ್‌ 2399ರೂ. ವಾರ್ಷಿಕ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 2399ರೂ. ವಾರ್ಷಿಕ ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ ಈ ಪ್ಲ್ಯಾನ್ ಒಟ್ಟು 600 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 250 FUP ನಿಮಿಷಗಳ ಮಿತಿಯಲ್ಲಿ ಉಚಿತ ವಾಯಿಸ್‌ ಕರೆಗಳ ಪ್ರಯೋಜನವನ್ನು ಒದಗಿಸಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದ್ದು, 60 ದಿನಗಳಿಗೆ ಬಿಎಸ್‌ಎನ್‌ಎಲ್‌ ಟ್ಯೂನ್‌ ಸೌಲಭ್ಯವು ಸಿಗಲಿದೆ. ಆದರೆ ಯಾವುದೇ ಡೇಟಾ ಪ್ರಯೋಜನ ಲಭ್ಯ ಇರುವುದಿಲ್ಲ. ಡೇಟಾ ಅಗತ್ಯ ಇರದ ಹಾಗೂ ವಾಯಿಸ್ ಕರೆ ಮತ್ತು ಹೆಚ್ಚಿನ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಪ್ಲ್ಯಾನ್ ಉತ್ತಮ ಆಯ್ಕೆ ಆಗಿದೆ.

ಬಿಎಸ್‌ಎನ್‌ಎಲ್‌ 666ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 666ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ ಈ ಯೋಜನೆಯಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಹಾಗೂ ಪ್ರತಿದಿನ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 120 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಒಟ್ಟು ಪೂರ್ಣ ಅವಧಿಯ ವ್ಯಾಲಿಡಿಟಿಯಲ್ಲಿ ಒಟ್ಟು 240GB ಡೇಟಾ ಪ್ರಯೋಜನ ದೊರೆಯುತ್ತದೆ.

ಬಿಎಸ್‌ಎನ್‌ಎಲ್‌ 1212ರೂ. ಪ್ರೀಪೇಯ್ಡ್‌ ಪ್ಲ್ಯಾನ್
ಬಿಎಸ್‌ಎನ್‌ಎಲ್‌ 1212ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಡೇಟಾ ಎಸ್‌ಟಿವಿ ಡೇಟಾ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 500GB ಡೇಟಾ ಪ್ರಯೋಜನೆ ದೊರೆಯುತ್ತದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಯಾವುದೇ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯಗಳು ದೊರೆಯುವುದಿಲ್ಲ. ಇದೊಂದು ಡೇಟಾ ಪ್ಲ್ಯಾನ್ ಆಗಿದೆ.

Best Mobiles in India

English summary
BSNL Rs 198 Plan Offers Daily 2GB Data With 50 Days Validity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+