BSNL ಗ್ರಾಹಕರಿಗೆ ಗುಡ್‌ನ್ಯೂಸ್!..ಈ ಪ್ಲಾನಿನಲ್ಲಿ ಸಿಗುತ್ತೆ 425 ದಿನಗಳ ವ್ಯಾಲಿಡಿಟಿ!

|

ಸದ್ಯ ಟೆಲಿಕಾಂ ವಲಯದಲ್ಲಿ ಸಾಕಷ್ಟು ಪೈಪೋಟಿ ಇದೆ. ಆ ಪೈಕಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಖಾಸಗಿ ಟೆಲಿಕಾಂಗಳಿಗೆ ನೇರ ಫೈಟ್‌ ನೀಡುವ ಹೆಜ್ಜೆಗಳನ್ನು ಹಾಕುತ್ತ ಮುನ್ನಡೆದಿದೆ. ಬಿಎಸ್‌ಎನ್‌ಎಲ್‌ ಭಿನ್ನ ಶ್ರೇಣಿಯ ಪ್ರಿಪೇಯ್ಡ್‌ ಪ್ಲ್ಯಾನ್‌ಗಳ ಆಯ್ಕೆಗಳನ್ನು ಒಳಗೊಂಡಿದ್ದು, ಅವುಗಳಲ್ಲಿ ಅಲ್ಪಾವಧಿಯ ಪ್ಲ್ಯಾನ್‌ಗಳ ಜೊತೆಗೆ ದೀರ್ಘಾವಧಿಯ ಯೋಜನೆಗಳು ಸೇರಿವೆ. ಆ ಪೈಕಿ ಬಿಎಸ್‌ಎನ್‌ಎಲ್‌ ಇದೀಗ 2399ರೂ. ಪ್ಲಾನ್ ನಲ್ಲಿ ಈಗ ಭರ್ಜರಿ ಕೊಡುಗೆ ಘೋಷಿಸಿದೆ.

BSNL ಗ್ರಾಹಕರಿಗೆ ಗುಡ್‌ನ್ಯೂಸ್!.ಈ ಪ್ಲಾನಲ್ಲಿ ಸಿಗುತ್ತೆ 425 ದಿನಗಳ ವ್ಯಾಲಿಡಿಟಿ

ಹೌದು, ಬಿಎಸ್‌ಎನ್‌ಎಲ್‌ ಟೆಲಿಕಾಂ ತನ್ನ ದೀರ್ಘಾವಧಿ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಅಧಿಕ ವ್ಯಾಲಿಡಿಟಿಯನ್ನು ನೀಡುತ್ತಿದೆ. ಬಿಎಸ್‌ಎನ್‌ಎಲ್‌ನ 2399 ರೂ. ಬೆಲೆಯ ಪ್ರಿಪೇಯ್ಡ್ ಪ್ಲಾನ್‌ ಹಿಂದೆ 365 ದಿನಗಳ ಮಾನ್ಯತೆಯನ್ನು ನೀಡಿತ್ತು. ಆದರೆ ಇದೀಗ ಅದನ್ನು 60 ದಿನಗಳವರೆಗೆ ವಿಸ್ತರಿಸಬಹುದಾಗಿದೆ. ಜೂನ್ 29, 2022ರ ಅವಧಿಯಲ್ಲಿ ರೀಚಾರ್ಜ್ ಮಾಡುವ ಗ್ರಾಹಕರಿಗೆ ಈ ಕೊಡುಗೆ ಲಭ್ಯ ಆಗಲಿದೆ ಎನ್ನಲಾಗಿದೆ. ಹಾಗಾದ್ರೆ ಈ ಬಿಎಸ್‌ಎನ್‌ಎಲ್‌ 2399 ರೂ. ಯೋಜನೆಯ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಬಿಎಸ್‌ಎನ್‌ಎಲ್‌ 2399ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು
ಬಿಎಸ್‌ಎನ್‌ಎಲ್‌ 2399ರೂ. ಯೋಜನೆಯು ವಾರ್ಷಿಕ ಅವಧಿಯ ಪ್ಲ್ಯಾನ್ ಆಗಿದೆ. ಈ ಯೋಜನೆಯು ಇದೀಗ ಹೆಚ್ಚುವರಿಯಾಗಿ 60 ದಿನಗಳ ವ್ಯಾಲಿಡಿಟಿಯನ್ನು ಪಡೆದಿದೆ. ಹೀಗಾಗಿ ಒಟ್ಟು 425 ದಿನಗಳ ವ್ಯಾಲಿಡಿಟಿ ಸಿಗಲಿದೆ. ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ಲಭ್ಯ ಆಗಲಿದೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಸಿಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯವು ದೊರೆಯಲಿದೆ. ಹಾಗೆಯೇ ಮುಂಬೈ ಮತ್ತು ದೆಹಲಿ ಎಮ್‌ಟಿಎನ್‌ಎಲ್‌ ಬಳಕೆದಾರರಗೆ ಅನಿಯಮಿತ ಸಾಂಗ್ ಚೇಂಜ್ ಹಾಗೂ EROS ಚಂದಾದಾರಿಕೆ ಸಹ ಲಭ್ಯ ಆಗಲಿದೆ.

ಬಿಎಸ್‌ಎನ್‌ಎಲ್‌ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು
ಬಿಎಸ್‌ಎನ್‌ಎಲ್‌ 599 ರೂ. ಪ್ರೀಪೇಯ್ಡ್‌ ಯೋಜನೆಯಲ್ಲಿ ಪ್ರತಿದಿನ 5 GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಹಾಗೂ ಅನಿಯಮಿತ ವಾಯಿಸ್ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಒಟ್ಟು ಪೂರ್ಣ ಅವಧಿಯ ವ್ಯಾಲಿಡಿಟಿಯಲ್ಲಿ ಒಟ್ಟು 450 GB ಡೇಟಾ ಪ್ರಯೋಜನ ದೊರೆಯುತ್ತದೆ. ಹೆಚ್ಚುವರಿಯಾಗಿ ಜಿಂಗ್ ಸೇವೆ ಲಭ್ಯವಾಗಲಿದೆ.

BSNL ಗ್ರಾಹಕರಿಗೆ ಗುಡ್‌ನ್ಯೂಸ್!.ಈ ಪ್ಲಾನಲ್ಲಿ ಸಿಗುತ್ತೆ 425 ದಿನಗಳ ವ್ಯಾಲಿಡಿಟಿ

ಬಿಎಸ್‌ಎನ್‌ಎಲ್‌ 499ರೂ. ಪ್ಲ್ಯಾನ್ ಪ್ರಯೋಜನಗಳು
ಬಿಎಸ್‌ಎನ್‌ಎಲ್‌ನ ಈ SVT 499 ರೂ. ಪ್ಲ್ಯಾನ್ ದೀರ್ಘಾವಧಿಯ ಯೋಜನೆ ಆಗಿದ್ದು, ಒಟ್ಟು 90 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2 GB ಡೇಟಾ ಪ್ರಯೋಜನ ಲಭ್ಯವಿದ್ದು, ಒಟ್ಟು ಪೂರ್ಣ ಅವಧಿಗೆ 180 GB ಡೇಟಾ ಸಿಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಹ ದೊರೆಯಲಿದೆ. ಹಾಗೆಯೇ ಡೈಲಿ 100 ಎಸ್‌ಎಮ್‌ಎಸ್‌ ಸಹ ಸಿಗುತ್ತದೆ. ಹೆಚ್ಚುವರಿಯಾಗಿ ಬಿಎಸ್‌ಎನ್‌ಎಲ್‌ ಟ್ಯೂನ್ ಮತ್ತು Zing ಪ್ರಯೋಜನ ಲಭ್ಯ.

ಬಿಎಸ್‌ಎನ್‌ಎಲ್‌ STV 447ರೂ. ಯೋಜನೆ ಪ್ರಯೋಜನಗಳು
ಬಿಎಸ್‌ಎನ್‌ಎಲ್‌ STV 447 ರೂ. ಯೋಜನೆ 100GB ಹೈ ಸ್ಪೀಡ್ ಡೇಟಾವನ್ನು ನೀಡುತ್ತದೆ. 100GB ಡೇಟಾದ ನಿಗದಿತ ಮಿತಿಯನ್ನು ಮೀರಿ, ಬಳಕೆದಾರರು 80 Kbps ವೇಗದಲ್ಲಿ ಇಂಟರ್ನೆಟ್ ಅನ್ನು ಪ್ರವೇಶಿಸಬಹುದು. ಯೋಜನೆಯು 60 ಕ್ಯಾಲೆಂಡರ್ ದಿನಗಳ ಮಾನ್ಯತೆಯ ಅವಧಿಯೊಂದಿಗೆ ಬರುತ್ತದೆ ಮತ್ತು ಇದನ್ನು ವೆಬ್‌ಸೈಟ್‌ನಲ್ಲಿ 'ಡೇಟಾ ವೋಚರ್' ಅಡಿಯಲ್ಲಿ ನಮೂದಿಸಿದ್ದರೂ ಸಹ, ಇದು ದಿನಕ್ಕೆ 100 SMS ಜೊತೆಗೆ ಅನಿಯಮಿತ ಧ್ವನಿ ಕರೆಯನ್ನು ನೀಡುತ್ತದೆ.

Best Mobiles in India

English summary
BSNL Rs. 2,399 Plan Now Offering 60 Days of Additional Validity.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X