Home
ಸುದ್ದಿಜಾಲ

ಬಿಎಸ್‌ಎನ್‌ಎಲ್‌ನ ಈ ಪ್ಲ್ಯಾನ್‌ನಲ್ಲಿ ಸಿಗುತ್ತೆ 70GB ಡೇಟಾ!

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಖಾಸಗಿ ಟೆಲಿಕಾಂಗಳಿಗೆ ನೇರ ಪೈಪೋಟಿ ನೀಡುತ್ತಾ ಸಾಗಿದೆ. ಸಂಸ್ಥೆಯು ಅಧಿಕ ಡೇಟಾ ಜೊತೆಗೆ ದೀರ್ಘ ವ್ಯಾಲಿಡಿಟಿ ಸೌಲಭ್ಯದ ಯೋಜನೆಗಳ ಆಯ್ಕೆ ಹೊಂದಿದೆ. ಜಿಯೋ ಇತ್ತೀಚೆಗೆ ದೈನಂದಿನ ಡೇಟಾ ಮಿತಿ ಹೊಂದಿರದ ಪ್ರಿಪೇಯ್ಡ್ ಯೋಜನೆಗಳನ್ನು ಕ್ರಮವಾಗಿ 15, 30, 60, 90 ಮತ್ತು 365 ದಿನಗಳ ವ್ಯಾಲಿಡಿಟಿಯಲ್ಲಿ ಪರಿಚಯಿಸಿದೆ. ಆ ಪೈಕಿ ಜಿಯೋದ 247ರೂ. ಪ್ಲ್ಯಾನಿಗೆ ಬಿಎಸ್‌ಎನ್‌ಎಲ್‌ನ 251ರೂ. ಪ್ಲ್ಯಾನ್‌ ಟಾಂಗ್ ನೀಡುವಂತಿದೆ.

ವರ್ಕ್‌

ಹೌದು, ಬಿಎಸ್‌ಎನ್‌ಎಲ್‌ ಸಂಸ್ಥೆಯು 251ರೂ.ಗಳ ವರ್ಕ್‌ ಫ್ರಮ್‌ ಯೋಜನೆ ಹೊಂದಿದೆ. ಇದೇ ಪ್ರೈಸ್‌ಟ್ಯಾಗ್‌ನಲ್ಲಿ ಖಾಸಗಿ ಟೆಲಿಕಾಂಗಳು ಸಹ ಯೋಜನೆ ಆಯ್ಕೆ ನೀಡಿವೆ. ಆದರೆ ಬಿಎಸ್‌ಎನ್‌ಎಲ್‌ ಈ ಯೋಜನೆಯು ಅಲ್ಪಾವಧಿಯ ವ್ಯಾಲಿಡಿಟಿ ಹೊಂದಿದ್ದರೂ ಅಧಿಕ ಡೇಟಾ ಪ್ರಯೋಜನವನ್ನು ಪಡೆದಿದೆ. ಅಧಿಕ ಡೇಟಾ ಬಯಸುವ ಗ್ರಾಹಕರಿಗೆ ಈ ಯೋಜನೆಯು ಸೂಕ್ತ ಎನಿಸಿಲಿದೆ. ಹಾಗಾದರೇ ಬಿಎಸ್‌ಎನ್‌ಎಲ್‌ 251ರೂ. ಯೋಜನೆಯ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಬಿಎಸ್‌ಎನ್‌ಎಲ್‌ 251ರೂ. ಡೇಟಾ ಯೋಜನೆ

ಬಿಎಸ್‌ಎನ್‌ಎಲ್‌ 251ರೂ. ಡೇಟಾ ಯೋಜನೆ

ಬಿಎಸ್‌ಎನ್‌ಎಲ್‌ನ 251ರೂ. ಡೇಟಾ ವೋಚರ್‌ ಸಹ (STV DATA 251) ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಆದರೆ ಈ ಅವಧಿಯಲ್ಲಿ ಒಟ್ಟು 70GB ಡೇಟಾ ಸೌಲಭ್ಯವನ್ನು ಒದಗಿಸಲಿದೆ. ಇದು ಸಂಪೂರ್ಣ ಡೇಟಾ ಯೋಜನೆ ಆಗಿದ್ದು, ಯಾವುದೇ ವಾಯಿಸ್ ಕರೆ ಹಾಗೂ ಎಸ್‌ಎಮ್‌ಎಸ್‌ ಪ್ರಯೋಜನಗಳು ಲಭ್ಯವಾಗುವುದಿಲ್ಲ.

ಬಿಎಸ್‌ಎನ್‌ಎಲ್‌ 151ರೂ. ಡೇಟಾ ಯೋಜನೆ

ಬಿಎಸ್‌ಎನ್‌ಎಲ್‌ 151ರೂ. ಡೇಟಾ ಯೋಜನೆ

ಬಿಎಸ್‌ಎನ್‌ಎಲ್‌ನ 151ರೂ. ಡೇಟಾ ವೋಚರ್‌ (STV DATA 151) ಒಟ್ಟು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಈ ಅವಧಿಯಲ್ಲಿ ಒಟ್ಟು 40GB ಡೇಟಾ ಸೌಲಭ್ಯವನ್ನು ಒದಗಿಸಲಿದೆ. ಇದು ಸಂಪೂರ್ಣ ಡೇಟಾ ಯೋಜನೆ ಆಗಿದ್ದು, ಯಾವುದೇ ವಾಯಿಸ್ ಕರೆ ಹಾಗೂ ಎಸ್‌ಎಮ್‌ಎಸ್‌ ಪ್ರಯೋಜನಗಳು ಲಭ್ಯವಾಗುವುದಿಲ್ಲ.

ಜಿಯೋದ 247ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋದ 247ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋ ಟೆಲಿಕಾಂ ಹೊಸದಾಗಿ ಲಾಂಚ್ ಮಾಡಿರುವ ಫ್ರೀಡಂ ಪ್ಯಾಕ್‌ ಪ್ಲ್ಯಾನ್‌ಗಳಲ್ಲಿ 247ರೂ. ಪ್ರೀಪೇಯ್ಡ್‌ ಯೋಜನೆ ಸಹ ಒಂದಾಗಿದೆ. ಈ ಯೋಜನೆಯಲ್ಲಿ ಒಟ್ಟು 30 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 25GB ಡೇಟಾ ಲಭ್ಯ ಇದ್ದು, ಡೇಟಾ ಬಳಕೆಗೆ ಯಾವುದೇ ದೈನಂದಿನ ಮಿತಿ ನೀಡಿಲ್ಲ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆ ಪ್ರಯೋಜನ ಹೊಂದಿದ್ದು, ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯವನ್ನು ಒಳಗೊಂಡಿದೆ.

ಬಿಎಸ್‌ಎನ್‌ಎಲ್‌ 365ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ 365ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ ಈ ಯೋಜನೆಯಲ್ಲಿ ಪ್ರತಿದಿನ 2GB ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್‌ ಹಾಗೂ ಪ್ರತಿದಿನ 250 ನಿಮಿಷಗಳ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಆದರೆ ಡೇಟಾ, ಎಸ್‌ಎಮ್‌ಎಸ್‌ ಹಾಗೂ ವಾಯಿಸ್‌ ಕರೆಗಳ ಪ್ರಯೋಜನಗಳು ಮೊದಲ 60 ದಿನಗಳ ವರೆಗೆ ಲಭ್ಯವಾಗಲಿವೆ.

Best Mobiles in India

English summary
This STV for Rs 251 brings with it 70GB data spread over validity for 30 days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+