BSNLನ ಈ ರೀಚಾರ್ಜ್ ಪ್ಲ್ಯಾನ್‌ನಲ್ಲಿ ನಿತ್ಯವೂ 3GB ಡೇಟಾ!
ಪ್ರಮುಖ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾಗಿರುವ ಬಿಎಸ್‌ಎನ್‌ಎಲ್ ಹಲವಾರು ರೀಚಾರ್ಜ್ ಪ್ಲ್ಯಾನ್ ಪರಿಚಯಿಸಿದೆ. ಈ ಮೂಲಕ ಅಗ್ಗದ ದರದಲ್ಲಿ ಬಳಕೆದಾರರು ಹೆಚ್ಚಿನ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ನೀವೇನಾದರೂ ನಿತ್ಯವೂ ಹೆಚ್ಚಿನ ಡೇಟಾ ಬಳಕೆ ಮಾಡುವವರಾಗಿದ್ದರೆ ಅದರಲ್ಲೂ 3GB ಡೇಟಾ ಬೇಕು ಎಂದರೆ ಈ ರೀಚಾರ್ಜ್ ಪ್ಲ್ಯಾನ್ ಬೆಸ್ಟ್.
ಹೌದು, ಭಾರತ ಸಂಚಾರ ನಿಗಮ ಲಿಮಿಟೆಡ್ (BSNL) ಸರ್ಕಾರಿ ಸ್ವಾಮ್ಯದ ಟೆಲಿಕಾಂ ಆಪರೇಟರ್ ಆಗಿದ್ದು, ಇದು ಪ್ರಮುಖವಾಗಿ ಎರಡು ಡೇಟಾ ವಾಯ್ಸ್ ವೋಚರ್‌ಗಳನ್ನು ಹೊಂದಿದೆ. ಈ ಮೂಲಕ ಬಳಕೆದಾರರಿಗೆ ದಿನವೂ 3GB ಡೇಟಾ ಬಳಕೆ ಮಾಡಲು ಅನುವು ಮಾಡಿಕೊಟ್ಟಿದೆ. ಹಾಗಿದ್ರೆ, ಯಾವುವು ಆ ಎರಡು ರೀಚಾರ್ಜ್ ಪ್ಲ್ಯಾನ್, ಇವುಗಳಲ್ಲಿ ಸಿಗುವ ಇತರೆ ಸೌಲಭ್ಯ ಏನು ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಬಿಎಸ್‌ಎನ್‌ಎಲ್‌ನ 299ರೂ.ಗಳ ಪ್ಲ್ಯಾನ್: ಬಿಎಸ್‌ಎನ್‌ಎಲ್‌ನ 299ರೂ.ಗಳ ಪ್ಲ್ಯಾನ್‌ನಲ್ಲಿ ಬಳಕೆದಾರರು 3GB ದೈನಂದಿನ ಡೇಟಾ ಸೌಲಭ್ಯ ಪಡೆದುಕೊಳ್ಳಬಹದು. ಇಷ್ಟು ಮಾತ್ರವಲ್ಲದೆ ಅನಿಯಮಿತ ವಾಯ್ಸ್ ಕಾಲ್ ಸೌಲಭ್ಯ ಸಹ ಲಭ್ಯ. ಹಾಗೆಯೇ ನಿತ್ಯವೂ 100SMS ಸೌಲಭ್ಯವನ್ನೂ ಸಹ ಈ ರೀಚಾರ್ಜ್ ಪ್ಲ್ಯಾನ್‌ನಲ್ಲಿ ಕಲ್ಪಿಸಿಕೊಡಲಾಗಿದೆ. ಇದರೊಂದಿಗೆ FUP ಡೇಟಾ ಮುಗಿದ ನಂತರ ವೇಗವು 40Kbps ಗೆ ಕಡಿಮೆಯಾಗಲಿದೆ. ವಿಷಯ ಏನೆಂದರೆ ಈ ಪ್ಲ್ಯಾನ್‌ನಲ್ಲಿ ಇತರೆ ಯಾವುದೇ ಹೆಚ್ಚುವರಿ ಪ್ರಯೋಜನಗಳಿಲ್ಲ.ಇದು 30 ಮಾನ್ಯತೆ ಹೊಂದಿದೆ.
ಬಿಎಸ್‌ಎನ್‌ಎಲ್‌ನ 599 ರೂ. ಗಳ ಪ್ಲ್ಯಾನ್: ಈ 599 ರೂ. ಗಳ ಪ್ಲ್ಯಾನ್‌ನಲ್ಲಿ ಗ್ರಾಹಕರು ನಿತ್ಯವೂ 3GB ದೈನಂದಿನ ಡೇಟಾ ಪಡೆದುಕೊಳ್ಳಬಹುದಾಗಿದ್ದು, ಇದರೊಂದಿಗೆ ಅನಿಯಮಿತ ವಾಯ್ಸ್ ಕಾಲ್ ಸೌಲಭ್ಯ ಹಾಗೂ ನಿತ್ಯವೂ 100 ಎಸ್‌ಎಮ್‌ಎಸ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಝಿಂಗ್ + ಪಿಆರ್‌ಬಿಟಿ + ಆಸ್ಟ್ರೋಸೆಲ್, ಮತ್ತು 12 AM ಮತ್ತು 5 AM ನಡುವೆ ಅನಿಯಮಿತ ಉಚಿತ ರಾತ್ರಿ ಡೇಟಾ ಸೌಲಭ್ಯ ಈ ಪ್ಯಾಕ್‌ನಲ್ಲಿದೆ. ಈ ಪ್ಲ್ಯಾನ್ 84 ದಿನಗಳ ಮಾನ್ಯತೆಯನ್ನು ಹೊಂದಿದೆ.

ಈ ಪ್ಲ್ಯಾನ್‌ನಲ್ಲಿ ಬಿಎಸ್‌ಎನ್‌ಎಲ್ ನಿಂದ ಹೆಚ್ಚಿನ ಕೊಡುಗೆ ಲಭ್ಯವಾಗದಿದ್ದರೂ ಸಹ ಭಾರೀ ಡೇಟಾ ಬಳಕೆದಾರರಿಗೆ ಈ ಪ್ಲ್ಯಾನ್‌ಗಳು ತುಂಬಾ ಯೋಗ್ಯವಾದ ಆಯ್ಕೆಯಾಗಿವೆ. ಹಾಗೆಯೇ ಹೆಚ್ಚಿನ ವೇಗದ ಇಂಟರ್ನೆಟ್ ಸಂಪರ್ಕ, ಅನಿಯಮಿತ ಕರೆ ಪ್ರಯೋಜನಗಳು ಮತ್ತು ದಿನವೂ ಎಸ್‌ಎಮ್‌ಎಸ್ ಸೌಲಭ್ಯ ಲಭ್ಯವಾಗುತ್ತಿರುವುದರಿಂದ ಸಾಮಾನ್ಯ ಬಳಕೆದಾರರಿಗೆ ಇವು ಅತ್ಯುತ್ತಮವಾದ ಆಯ್ಕೆಯಾಗಿವೆ.
599ರೂ. ಗಳ ಪ್ಲ್ಯಾನ್ ಡೇಟಾ ಮತ್ತು ಕರೆ ಮಾಡುವ ಅಗತ್ಯತೆಗಳೊಂದಿಗೆ ಲಭ್ಯವಿರುವ ಅತ್ಯುತ್ತಮ ಯೋಜನೆಗಳಲ್ಲಿ ಒಂದಾಗಿದ್ದು, 299ರೂ. ಗಳ ಯೋಜನೆಯು 3GB ಡೇಟಾದೊಂದಿಗೆ ವಿಭಿನ್ನವಾಗಿ ಕಾಣಿಸಿಕೊಂಡಿವೆ ಈ ಮೂಲಕ ಇತರ ಕಂಪನಿಗಳ ಮಾಸಿಕ ಯೋಜನೆಗಳಿಗಿಂತ ಇವು ಉತ್ತಮ ಪ್ಲ್ಯಾನ್‌ಗಳು ಎಂದು ಹೇಳಬಹುದು. ಅದರಲ್ಲೂ 599 ರೂ.ಗಳ ಪ್ಲ್ಯಾನ್‌ನಲ್ಲಿ ಇನ್ನೂ ಹೆಚ್ಚಿನ ಸೌಲಭ್ಯ ಇರುವುದರಿಂದ ಮುನ್ನೆಯಲ್ಲಿರುವ ಟೆಲಿಕಾಂ ಸಂಸ್ಥೆಗಳಲ್ಲಿ ಇಲ್ಲದ ಹಲವು ಸೌಲಭ್ಯ ಇದರಲ್ಲಿ ಕಾಣಬಹುದು.
ಇನ್ನು 299 ರೂ. ಗಳ ಪ್ಲಾನ್‌ನ ವ್ಯಾಲಿಡಿಟಿ 30 ದಿನಗಳು. ನೀವು ಎರಡು ತಿಂಗಳ ಕಾಲ ಆ ಯೋಜನೆಯನ್ನು ಆಯ್ಕೆ ಮಾಡಲು ಬಯಸಿದರೆ 598ರೂ. ಗಳನ್ನು ಪಾವತಿಸಬೇಕಾಗುತ್ತದೆ. ಆದರೆ, ಒಂದೇ ಬಾರಿಗೆ 599ರೂ. ಗಳ ಪ್ಲ್ಯಾನ್ ಆಯ್ಕೆ ಮಾಡಿಕೊಂಡರೆ ಸುಮಾರು ಮೂರು ತಿಂಗಳವರೆಗೆ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ಹೆಚ್ಚಿನ ಪ್ರಯೋಜನಗಳನ್ನು ಈ ಪ್ಲ್ಯಾನ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ.

ಇನ್ನು ಬಿಎಸ್‌ಎನ್‌ಎಲ್ ಕೂಡ 4G ಸೇವೆಗಳನ್ನು ಪ್ರಾರಂಭಿಸುವತ್ತ ತನ್ನದೇ ಆದ ರೀತಿಯಲ್ಲಿ ಮುನ್ನುಗ್ಗುತ್ತಿದ್ದು, ಸೆಪ್ಟೆಂಬರ್ 2023ರ ನಂತರ ಪ್ರತಿದಿನ 200 ಸೈಟ್‌ಗಳನ್ನು ನಿಯೋಜಿಸಲು ಬಿಎಸ್‌ಎನ್‌ಎಲ್ ಯೋಜಿಸಿದೆ. ಈ ಮೂಲಕ 4G ಪರಿಚಯವು ಬಿಎಸ್‌ಎನ್‌ಎಲ್ ಗೆ ಗಮನಾರ್ಹ ಬದಲಾವಣೆ ಆಗಲಿದ್ದು, ಈ ಮೂಲಕ ಇನ್ನಷ್ಟು ಬಳಕೆದಾರರನ್ನು ಪಡೆದುಕೊಳ್ಳಲು ಸಹಕಾರಿಯಾಗಲಿದೆ. ಜೊತೆಗೆ ಮಾರುಕಟ್ಟೆಯಲ್ಲಿ ಇತರ ಟೆಲಿಕಾಂ ಆಪರೇಟರ್‌ಗಳೊಂದಿಗೆ ಸ್ಪರ್ಧಿಸಲು ಅನುಕೂಲ ಆಗಲಿದೆ.


Click it and Unblock the Notifications








