BSNLನ 365ರೂ. ಪ್ಲ್ಯಾನ್ ರೀಚಾರ್ಜ್ ಮಾಡಿಸಿದರೇ, ವ್ಯಾಲಿಡಿಟಿ ಟೆನ್ಷನ್ ಇರಲ್ಲ!
ಭಾರತೀಯ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂಗಳು ಅಧಿಕ ಡೇಟಾ ಪ್ಲ್ಯಾನ್‌ಗಳ ಮೂಲಕ ಗ್ರಾಹಕರನ್ನು ಸೆಳೆದಿವೆ. ಖಾಸಗಿ ಟೆಲಿಕಾಂಗಳಿಗೆ ಸೆಡ್ಡು ಹೊಡೆಯುವಂತಹ ಆಕರ್ಷಕ ಯೋಜನೆಗಳನ್ನು ಪರಿಚಯಿಸುವಲ್ಲಿ ಬಿಎಸ್‌ಎನ್‌ಎಲ್ ಸಂಸ್ಥೆಯು ಹಿಂದೆ ಬಿದ್ದಿಲ್ಲ. ಬಿಎಸ್‌ಎನ್‌ಎಲ್ ಇತ್ತೀಚಿನ ಪ್ರೀಪೇಯ್ಡ್ ಪ್ಲ್ಯಾನ್‌ವೊಂದು ಚಂದಾದಾರರಿಗೆ ಬಹುಉಪಯುಕ್ತ ಪ್ರಯೋಜನಗಳನ್ನು ನೀಡಿ ಗಮನ ಸೆಳೆದಿದೆ.

ಹೌದು, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ PV 365ರೂ. ಪ್ರೀಪೇಯ್ಡ್ ಪ್ಲ್ಯಾನ್ ಪರಿಚಯಿಸಿದ್ದು, ಈ ಯೋಜನೆಯು ವಾರ್ಷಿಕ ವ್ಯಾಲಿಡಿಟಿಯ ಸೌಲಭ್ಯ ಪಡೆದಿದೆ. ಹಾಗೆಯೇ ಪ್ರತಿದಿನ ಡೇಟಾ ಪ್ರಯೋಜನ, ವಾಯಿಸ್ ಕರೆಗಳು ಹಾಗೂ ಎಸ್‌ಎಮ್‌ಎಸ್‌ನಂತಹ ಸೌಲಭ್ಯಗಳನ್ನು ಪಡೆದಿದೆ. ಹೀಗಾಗಿ ಬಿಎಸ್‌ಎನ್‌ಎಲ್‌ನ ಈ ಯೋಜನೆ ರೀಚಾರ್ಜ್ ಮಾಡಿಸಿದರೇ ವರ್ಷ ಪೂರ್ತಿ ವ್ಯಾಲಿಡಿಟಿ ಟೆನ್ಷನ್ ಇರಲ್ಲ. ಈ ಯೋಜನೆ ಇನ್ನಷ್ಟು ಪ್ರಯೋಜನಗಳ ಬಗ್ಗೆ ತಿಳಿಯಲು ಮುಂದಿನ ಸ್ಲೈಡ್‌ಗಳನ್ನು ಓದಿರಿ.

ಬಿಎಸ್‌ಎನ್‌ಎಲ್ 365ರೂ. ಯೋಜನೆ
ಬಿಎಸ್‌ಎನ್‌ಎಲ್ ಸಂಸ್ಥೆಯು ಇತ್ತೀಚಿಗಿನ ದಿನಗಳಲ್ಲಿ ಪರಿಚಯಿಸಿರುವ 365ರೂ. ಯೋಜನೆಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಹಾಗೂ ಪ್ರತಿದಿನ 250 ನಿಮಿಷಗಳ ಉಚಿತ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಆದರೆ ಡೇಟಾ, ಎಸ್‌ಎಮ್‌ಎಸ್ ಹಾಗೂ ವಾಯಿಸ್ ಕರೆಗಳ ಪ್ರಯೋಜನಗಳು ಮೊದಲ 60 ದಿನಗಳ ವರೆಗೆ ಲಭ್ಯವಾಗಲಿವೆ.

ಪ್ಲ್ಯಾನ್ ಮಾಹಿತಿ
ಬಿಎಸ್‌ಎನ್‌ಎಲ್ 365ರೂ. ಯೋಜನೆ ಒಂದು ವರ್ಷದ ವ್ಯಾಲಿಡಿಟಿ ಹೊಂದಿದ್ದರೂ, ಮೊದಲ 60 ದಿನಗಳವರೆಗೆ ಉಚಿತ ಡೈಲಿ 2GB ಡೇಟಾ ಲಭ್ಯ. ಸ್ಥಳೀಯ ಕರೆ Min ನಿಮಿಷಕ್ಕೆ ರೂ 1, ಎಸ್‌ಟಿಡಿ ಕರೆ ಪ್ರತಿ ನಿಮಿಷಕ್ಕೆ ರೂ .1.30 ರೂ. ಲೋಕಲ್ SMS 80ಪೈ / ನ್ಯಾಷನಲ್ ಪ್ರತಿ ಎಸ್‌ಎಮ್‌ಎಸ್ 1.20ಪೈ. ಪ್ರತಿ MBಗೆ ಡೇಟಾ 25 ಪೈ. ಆಗಿದೆ. ಈ ಯೋಜನೆಯು ವಾರ್ಷಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಬೆಸ್ಟ್ ಅನಿಸಲಿದೆ.

ಬಿಎಸ್‌ಎನ್‌ಎಲ್ 693ರೂ.ಪ್ಲ್ಯಾನ್
ಹಾಗೆಯೇ ಬಿಎಸ್‌ಎನ್‌ಎಲ್ 693ರೂ. ಡೇಟಾ ಎಸ್‌ಟಿವಿ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 300GB ಡೇಟಾ ಸೌಲಭ್ಯ ಲಭ್ಯವಾಗಲಿದೆ. ಇದು ಡೇಟಾ ಪ್ರೀಪೇಯ್ಡ್ ಯೋಜನೆ ಆಗಿರುವುದರಿಂದ ಯಾವುದೇ ವಾಯಿಸ್ ಕರೆ ಹಾಗೂ ಎಸ್‌ಎಮ್‌ಎಸ್ ಸೌಲಭ್ಯಗಳು ದೊರೆಯುವುದಿಲ್ಲ.

ಬಿಎಸ್‌ಎನ್‌ಎಲ್ 1,212ರೂ.ಪ್ಲ್ಯಾನ್
ಬಿಎಸ್‌ಎನ್‌ಎಲ್ 1,212ರೂ. ಡೇಟಾ ಎಸ್‌ಟಿವಿ ಡೇಟಾ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 500GB ಡೇಟಾ ಪ್ರಯೋಜನೆ ದೊರೆಯುತ್ತದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಯಾವುದೇ ವಾಯಿಸ್ ಕರೆ ಹಾಗೂ ಎಸ್‌ಎಮ್‌ಎಸ್ ಸೌಲಭ್ಯಗಳು ದೊರೆಯುವುದಿಲ್ಲ. ಇದೊಂದು ಡೇಟಾ ಪ್ಲ್ಯಾನ್ ಆಗಿದೆ.


Click it and Unblock the Notifications




