BSNL ನ 397ರೂ.ಗಳ ಪ್ಲ್ಯಾನ್‌ನಲ್ಲಿ ನಿತ್ಯವೂ 2GB ಡೇಟಾ, 150 ದಿನಗಳ ಮಾನ್ಯತೆ... ಶಾಕ್ ಆಗಬೇಡಿ!
ಬಿಎಸ್‌ಎನ್‌ಎಲ್ (BSNL) ಪ್ರಮುಖ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾಗಿದ್ದು, ಈ ಮೂಲಕ ಚಂದಾದಾರರು ಅಗ್ಗದ ದರದಲ್ಲಿ ಹೆಚ್ಚಿನ ಸೌಲಭ್ಯ ಪಡೆಯುತ್ತಿದ್ದಾರೆ. ಅದರಲ್ಲೂ ಬಿಎಸ್‌ಎನ್‌ಎಲ್ ಆಗಾಗ್ಗೆ ಹೊಸ ಹೊಸ ಪ್ಲ್ಯಾನ್‌ಗಳನ್ನೂ ಸಹ ಪರಿಚಯಿಸಿಕೊಂಡು ಬರುತ್ತಿದೆ. ಇದರ ಭಾಗವಾಗಿಯೇ ಈಗ ಈ ಪ್ಲ್ಯಾನ್ ಬಹಳ ಸದ್ದು ಮಾಡುತ್ತಿದ್ದು, ಇದು ದೀರ್ಘ ಮಾನ್ಯತೆ ದಿನಗಳನ್ನು ಹೊಂದಿದೆ.
ಹೌದು, ಬಿಎಸ್‌ಎನ್‌ಎಲ್ ಎಂದಾಕ್ಷಣ ಹಲವರು ನೆಟ್‌ವರ್ಕ್ ಸಮಸ್ಯೆಯನ್ನು ವರದಿ ಮಾಡುತ್ತಾರೆ. ಅದಾಗ್ಯೂ ಬಿಎಸ್‌ಎನ್‌ಎಲ್ ಗೆ ಬಹಳಷ್ಟು ಗ್ರಾಹಕರಿದ್ದು, ಈ ಮೂಲಕ ವಿಶೇಷ ಟೆಲಿಕಾಂ ಸೇವೆಗಳನ್ನು ಪಡೆಯುತ್ತಿದ್ದಾರೆ. ಪ್ರಮುಖವಾಗಿ ಈ ಹೊಸ ಪ್ಲ್ಯಾನ್‌ನಲ್ಲಿ ನಿತ್ಯವೂ 2 GB ಡೇಟಾದೊಂದಿಗೆ 150 ದಿನಗಳ ಮಾನ್ಯತೆ ದಿನಗಳನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ಮತ್ಯಾಕೆ ತಡ ಯಾವುದು ಈ ಪ್ಲ್ಯಾನ್?, ಯಾರಿಗೆಲ್ಲಾ ಈ ಪ್ಲ್ಯಾನ್ ಉಪಯೋಗ? ಎಂಬ ಮಾಹಿತಿ ಇಲ್ಲಿದೆ ನೋಡಿ.

397 ರೂ.ಗಳ ಹಳೇ ಪ್ಲ್ಯಾನ್ ಹೊಸ ಸೌಲಭ್ಯ: ಬಿಎಸ್‌ಎನ್‌ಎಲ್‌ನ ಈ ವಿಶೇಷ ಪ್ಲ್ಯಾನ್ ಅನ್ನು ಹೊಸದಾಗೇನು ಘೋಷಣೆ ಮಾಡಿಲ್ಲ. ಆದರೆ, ಕೆಲವು ಸೌಲಭ್ಯಗಳನ್ನು ಬದಲಾವಣೆ ಮಾಡಿ ಹೊಸದಾಗಿ ಲಾಂಚ್ ಮಾಡಲಾಗಿದೆ. ಈ ಮೂಲಕ ಬಳಕೆದಾರರನ್ನು ಹೆಚ್ಚಿಸಿಕೊಳ್ಳಲು ಕಂಪೆನಿ ತನ್ನದೇ ರೀತಿಯಲ್ಲಿ ಸಜ್ಜಾಗಿದೆ. ಇನ್ನು ಖಾಸಗಿ ಟೆಲಿಕಾಂ ಕಂಪನಿಗಳ ಯೋಜನೆಗಳಿಗೆ ಹೋಲಿಸಿದರೆ, ಈ ಪ್ಲ್ಯಾನ್ ಬೆಲೆ ಮತ್ತು ಮೌಲ್ಯದ ದೃಷ್ಟಿಯಿಂದ ಹೆಚ್ಚು ಉತ್ತಮವಾಗಿದೆ.
ಯಾರಿಗೆಲ್ಲಾ ಉತ್ತಮ ಈ ಪ್ಲ್ಯಾನ್: ಈಗಂತೂ ಬಹುಪಾಲು ಮಂದಿ ಎರಡು ಸಿಮ್ ಬಳಕೆ ಮಾಡುವುದು ಸರ್ವೇ ಸಾಮಾನ್ಯ. ಆದರೆ, ಎರಡು ಸಿಮ್ ಬಳಕೆ ಮಾಡುವ ಮಾತ್ರಕ್ಕೆ ಎರಡೂ ಸಿಮ್‌ಗಳಿಗೂ ಒಂದೇ ರೀತಿಯ ರೀಚಾರ್ಜ್ ಮಾಡಿಸಲು ಬಹುಪಾಲು ಮಂದಿಗೆ ಆಗುವುದಿಲ್ಲ. ಪರಿಣಾಮ ಸೆಕೆಂಡರಿ ಸಿಮ್ ದೀರ್ಘಕಾಲದ ವರೆಗೆ ಸಕ್ರಿಯವಾಗಿರಬೇಕು ಎಂದರೆ ಈ ಪ್ಲ್ಯಾನ್ ಉತ್ತಮ ಆಯ್ಕೆ ಆಗಿರಲಿದೆ.
ಮೊದಲೇ ತಿಳಿಸಿದಂತೆ 397 ರೂ.ಗಳ ಪ್ಲ್ಯಾನ್ ಹೊಸದಲ್ಲ. ಆದರೆ ಅದಕ್ಕೆ ಸಂಬಂಧಿಸಿದ ಪ್ರಯೋಜನಗಳನ್ನು ಬದಲಾಯಿಸಲಾಗಿದೆ. ಈ ಮೂಲಕ ಈ ಪ್ಲ್ಯಾನ್ ಗ್ರಾಹಕರಿಗೆ ಕೊಂಚ ದುಬಾರಿ ಎನಿಸಬಹುದು. ಮೊದಲು ಈ ಪ್ಲ್ಯಾನ್‌ನಲ್ಲಿ 180 ದಿನಗಳ ಮಾನ್ಯತೆ ಲಭ್ಯವಿತ್ತು ಮತ್ತು ಗ್ರಾಹಕರು ಪ್ರತಿದಿನ 2GB ಡೇಟಾವನ್ನು ಪಡೆಯುತ್ತಿದ್ದರು. ಇದಲ್ಲದೆ, ಅನಿಯಮಿತ ಫೋನ್ ಕರೆಗಳು ಮತ್ತು ದಿನಕ್ಕೆ 100 ಎಸ್ಎಮ್ಎಸ್‌ಗಳು 60 ದಿನಗಳವರೆಗೆ ಲಭ್ಯ ಇದ್ದವು.
ಆದರೆ ಈಗ ಈ ಪ್ಲ್ಯಾನ್ ನಿಮಗೆ 150 ದಿನಗಳ ಮಾನ್ಯತೆ ದಿನಗಳನ್ನು ನೀಡುತ್ತದೆ. ಆದರೆ ಇಷ್ಟೂ ದಿನವೂ 2GB ಸಿಗುವುದಿಲ್ಲ. ಇದರಲ್ಲಿನ ವಿಶೇಷ ಪ್ರಯೋಜನಗಳು ಕೇವಲ 30 ದಿನಗಳಲ್ಲಿ ಕೊನೆಗೊಳ್ಳುತ್ತವೆ. ಉಳಿದ ಸಮಯದಲ್ಲಿ ಸಿಮ್ ಸಕ್ರಿಯವಾಗಿರಲಿದೆ. ಇದೇ ಕಾರಣಕ್ಕೆ ಸಿಮ್ ಅನ್ನು ಬ್ಯಾಕಪ್ ಆಯ್ಕೆಯಾಗಿ ಬಳಕೆ ಮಾಡುವವರು ಈ ಪ್ಲ್ಯಾನ್ ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿದ್ದು.
ಈ ನಡುವೆ ಕೇಂದ್ರ ಸಚಿವ ಸಂಪುಟವು ಜೂನ್‌ನಲ್ಲಿ ಬಿಎಸ್‌ಎನ್‌ಎಲ್ ಗಾಗಿ ಒಟ್ಟು 89,047 ಕೋಟಿ ರೂಪಾಯಿಗಳ ಮೂರನೇ ಪುನರುಜ್ಜೀವನ ಪ್ಯಾಕೇಜ್ ಅನ್ನು ಅನುಮೋದಿಸಿದೆ. ಈ ಮೂಲಕ ಏರ್‌ಟೆಲ್, ಜಿಯೋ ಹಾಗೂ ವಿ ಟೆಲಿಕಾಂಗೆ ನೇರ ಪೈಪೋಟಿ ನೀಡಲು ಬಿಎಸ್‌ಎನ್‌ಎಲ್ ಅನ್ನು ತಯಾರಿ ಮಾಡಲಾಗುತ್ತಿದೆ. ಜೊತೆಗೆ ಪ್ಯಾಕೇಜ್ ಈಕ್ವಿಟಿ ಇನ್ಫ್ಯೂಷನ್ ಮೂಲಕ ಬಿಎಸ್‌ಎನ್‌ಎಲ್ ಗೆ 4G ಮತ್ತು 5G ಸ್ಪೆಕ್ಟ್ರಮ್ ಹಂಚಿಕೆಯನ್ನು ಒಳಗೊಂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇನ್ನು ಇತರೆ ಪ್ಲ್ಯಾನ್‌ಗಳ ಕಣ್ಣಾಯಿಸುವುದಾದರೆ ಬಿಎಸ್‌ಎನ್‌ಎಲ್‌ನ 399ರೂ.ಗಳ ಪ್ಲ್ಯಾನ್ ಬಳಕೆದಾರರಿಗೆ ನಿತ್ಯವೂ 1GB ಡೇಟಾ ಸೌಲಭ್ಯ ನೀಡಲಿದ್ದು, ಅನಿಯಮಿತ ಕರೆ ಪ್ರಯೋಜನ ನೀಡಲಿದೆ. ಈ ಪ್ಯಾಕ್ 80 ದಿನಗಳ ಮಾನ್ಯತೆ ಹೊಂದಿದೆ. ಜೊತೆಗೆ ಬಿಎಸ್‌ಎನ್‌ಎಲ್‌ನ 247ರೂ.ಗಳ ಪ್ಲ್ಯಾನ್ ಸಹ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಈ ಪ್ಲ್ಯಾನ್‌ನಲ್ಲಿ ನಿತ್ಯವೂ 2GB ಡೇಟಾ ಸೌಲಭ್ಯದೊಂದಿಗೆ 60 ದಿನಗಳ ಮಾನ್ಯತೆ ಪಡೆದಿದೆ. ಈ ಸೌಲಭ್ಯ ಹೊಸ ಗ್ರಾಹಕರಿಗೆ ಮಾತ್ರ.


Click it and Unblock the Notifications








