Subscribe to Gizbot

3G ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಬೆಸ್ಟ್ ಪ್ಲಾನ್: ಜಿಯೋ ಬಿಟ್ಟರೇ ಇದೊಂದೆ..!

Written By:

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸರಕಾರಿ ಸ್ವಾಮ್ಯದ BSNL ಆರ್ಭಟವು ಹೆಚ್ಚಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಹೊಸ ಆಫರ್ ಗಳನ್ನು ಬಿಡುಗಡೆ ಮಾಡುವ ಮೂಲಕ ಖಾಸಗಿ ಕಂಪನಿಗಳಿಗೆ ಸೆಡ್ಡು ಹೊಡೆದಿದ್ದು, ಈ ಬಾರಿ ಮತ್ತೊಂದು ಆಫರ್ ನೀಡುವ ಮೂಲಕ ಬಳಕೆದಾರರಿಗೆ ಅತೀ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿದೆ.

3G ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಬೆಸ್ಟ್ ಪ್ಲಾನ್: ಜಿಯೋ ಬಿಟ್ಟರೇ ಇದೊಂದೆ..!

ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ಪ್ಲಾನ್ ಅವಧಿಯನ್ನು ಇಳಿಸುತ್ತಿರುವ ಸಂದರ್ಭದಲ್ಲಿ BSNL ಬಳಕೆದಾರರಿಗೆ ಹೊಸ ಮಾದರಿಯ ಆಫರ್ ಗಳನ್ನು ನೀಡಲು ಮುಂದಾಗಿದೆ. ಇದಲ್ಲದೇ ಹೆಚ್ಚಿನ ಅವಧಿಯ ಟೆಲಿಕಾಂ ಪ್ಲಾನ್‌ಗಳನ್ನು ಘೋಷಣೆ ಮಾಡುವ ಮೂಲಕ ಬಳಕೆದಾರರಿಗೆ ಕಡಿಮೆ ಬೆಲೆಗೆ ಹೆಚ್ಚಿನ ಆಯ್ಕೆಯನ್ನು ನೀಡುತ್ತಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ತನ್ನ ಬಳಕೆದಾರರ ಸಂಖ್ಯೆಯನ್ನು ಏರಿಕೆ ಮಾಡಿಕೊಳ್ಳಲು ಯಶಸ್ವಿಯಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.448 ಅನ್‌ಲಿಮಿಟೆಡ್ ಪ್ಯಾಕ್:

ರೂ.448 ಅನ್‌ಲಿಮಿಟೆಡ್ ಪ್ಯಾಕ್:

BSNL ತನ್ನ ಬಳಕೆದಾರರಿಗೆ ರೂ.448 ಅನ್ ಲಿಮಿಟೆಡ್ ಪ್ಲಾನ್ ಬಳಕೆಗೆ ನೀಡಿದ್ದು, ಇದರಲ್ಲಿ ಬಳಕೆದಾರರು ಯಾವುದೇ ಮಿತಿ ಇಲ್ಲದೆ ಕರೆಗಳನ್ನು ಮಾಡಬಹುದಾಗಿದೆ. ರೋಮಿಂಗ್, ಲೋಕಲ್ ಮತ್ತು ಎಸ್‌ಡಿಟಿ ಕರೆಗಳನ್ನು ಉಚಿತವಾಗಿ ಮಾಡುವ ಅವಕಾಶವನ್ನು BSNL ಮಾಡಿಕೊಟ್ಟಿದೆ.

ಪ್ರತಿ ನಿತ್ಯ 1GB ಡೇಟಾ:

ಪ್ರತಿ ನಿತ್ಯ 1GB ಡೇಟಾ:

ರೂ.448 ಅನ್ ಲಿಮಿಟೆಡ್ ಪ್ಲಾನ್ ನಲ್ಲಿ ಬಳಕೆದಾರರಿಗೆ BSNL ಪ್ರತಿ ನಿತ್ಯ 1GB ಡೇಟಾವನ್ನು ಬಳಕೆಗೆ ನೀಡಲಿದೆ. ಇದುವೇ 3G ವೇಗದ ಡೇಟಾವಾಗಲಿದೆ. ಈ ಪ್ಲಾನ್‌ನಲ್ಲಿ ಬಳಕೆದಾರರು ಒಟ್ಟು 84 GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದಾರೆ.

ಭಾರತದಲ್ಲಿ ಎಲ್ಲಾ ಕಡೆಗಳಲ್ಲೂ ಲಭ್ಯ:

ಭಾರತದಲ್ಲಿ ಎಲ್ಲಾ ಕಡೆಗಳಲ್ಲೂ ಲಭ್ಯ:

BSNL ನೀಡುತ್ತಿರುವ ರೂ.448 ಅನ್ ಲಿಮಿಟೆಡ್ ಪ್ಲಾನ್ ದೇಶದ ಎಲ್ಲಾ ಭಾಗಗಳಲ್ಲಿಯೂ ದೊರೆಯಲಿದೆ ಎನ್ನಲಾಗಿದೆ. ಎಲ್ಲಾ ರಾಜ್ಯಗಳಲ್ಲೂ ಈ ಪ್ಲಾನ್ ಲಭ್ಯವಿದ್ದು, 3G ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಇದಕ್ಕಿಂತ ಬೆಸ್ಟ್ ಪ್ಲಾನ್ ಮತ್ತೊಂದಿಲ್ಲ.

ಜಿಯೋ ಆಫರ್:

ಜಿಯೋ ಆಫರ್:

ಇದೇ ಮಾದರಿಯಲ್ಲಿ ಜಿಯೋ ತನ್ನ ಬಳಕೆದಾರರಿಗೆ ರೂ,449 ಪ್ಲಾನ್ ಘೋಷಣೆ ಮಾಡಿದ್ದು, ಇದರಲ್ಲಿ 91 ದಿನಗಳ ವ್ಯಾಲಿಡಿಟಿ ದೊರೆಯಲಿದ್ದು, ಪ್ರತಿ ನಿತ್ಯ 1.5GB ಡೇಟಾ ಬಳಕೆದಾರರಿಗೆ ದೊರೆಯಲಿದೆ ಎನ್ನಲಾಗಿದ್ದು, ಉಚಿತವಾಗಿ ಕರೆಗಳನ್ನು ಮಾಡುವ ಅವಕಾಶ ಸಹ ಬಳಕೆದಾರರಿಗೆ ಇದರಲ್ಲಿ ಲಭ್ಯವಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
How To Link Aadhaar With EPF Account Without Login (KANNADA)

ಓದಿರಿ: ಲಕ್ಷ ಬೆಲೆಯ ಐಫೋನ್ X ಯಾಕೆ.? ಆಸುಸ್ ಆಂಡ್ರಾಯ್ಡ್ ಫೋನಿನಲ್ಲಿ ಫೇಸ್‌ಲಾಕ್, ಜೆನ್ ಮೋಜಿ ಇನ್ನು ಹಲವು..!

English summary
BSNL Rs. 448 Recharge Offers 1GB Data Per Day. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot