ಅಗ್ಗದ ಬೆಲೆಗೆ ಬ್ರಾಡ್‌ಬ್ಯಾಂಡ್‌ ಕನೆಕ್ಷನ್ ಬೇಕೆ?..ಇದು ಬೆಸ್ಟ್‌ ಪ್ಲ್ಯಾನ್‌ ನೋಡಿ!

|

ಇಂದಿನ ಬಹುತೇಕ ಕೆಲಸಗಳಿಗೆ ಇಂಟರ್ನೆಟ್‌ ಅಗತ್ಯ ಮತ್ತು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಅತ್ಯುತ್ತಮ ಡೇಟಾ ಸೌಲಭ್ಯ ಇರುವ ಪ್ಲ್ಯಾನ್‌ಗಳನ್ನು ರೀಚಾರ್ಜ್ ಮಾಡಿಸುತ್ತಾರೆ. ಮತ್ತೆ ಕೆಲವರು ತಡೆ ರಹಿತ ಇಂಟರ್ನೆಟ್‌ ಸೌಲಭ್ಯ ಬಯಸುತ್ತಾರೆ. ಹೀಗಾಗಿ ಅವರು ಬ್ರಾಡ್‌ಬ್ಯಾಂಡ್‌ ಕನೆಕ್ಷನ್ ಪಡೆಯಲು ಮುಂದಾಗುತ್ತಾರೆ. ಬಜೆಟ್‌ ದರದಲ್ಲಿಯೂ ಬ್ರಾಡ್‌ಬ್ಯಾಂಡ್‌ ಆಯ್ಕೆಗಳು ಲಭ್ಯ ಇದ್ದು, ಆ ಪೈಕಿ ಈ 449ರೂ. ಬೆಲೆಯ ಯೋಜನೆಯು ಗಮನ ಸೆಳೆದಿದೆ.

ಅಗ್ಗದ ಬೆಲೆಗೆ ಬ್ರಾಡ್‌ಬ್ಯಾಂಡ್‌ ಕನೆಕ್ಷನ್ ಬೇಕೆ?..ಇದು ಬೆಸ್ಟ್‌ ಪ್ಲ್ಯಾನ್‌!

ಹೌದು, ಹೆಚ್ಚು ಖರ್ಚು ಮಾಡದೇ ತಡೆ ರಹಿತ ಬ್ರಾಡ್‌ಬ್ಯಾಂಡ್ ಸಂಪರ್ಕ ಪಡೆಯಲು ಬಯಸಿದರೆ, ಬಿಎಸ್‌ಎನ್‌ಎಲ್‌ನ್ 449ರೂ. ಬ್ರಾಡ್‌ಬ್ಯಾಂಡ್‌ ಯೋಜನೆಯು ಆಕರ್ಷಕ ಎನಿಸಿದೆ. ಈ ಬ್ರಾಡ್‌ಬ್ಯಾಂಡ್‌ ಯೋಜನೆಯನ್ನು ಸಂಸ್ಥೆಯು 'ಫೈಬರ್‌ ಬೇಸಿಕ್ NEO' ಎಂದು ಕರೆದಿದೆ. ಈ ಪ್ಲ್ಯಾನ್ ತಿಂಗಳಿಗೆ 3.3TB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಹಾಗೆಯೇ ಉಚಿತ ಲ್ಯಾಂಡ್‌ಲೈನ್‌ ಕನೆಕ್ಷನ್ ಸೌಲಭ್ಯ ಸಹ ಪಡೆದಿದೆ.

ಈ ಯೋಜನೆಯು ಬಿಎಸ್‌ಎನ್‌ಎಲ್‌ ಸಂಸ್ಥೆ ಪ್ರಚಾರದ ಕೊಡುಗೆಯಾಗಿದ್ದು, ಆರಂಭಿಕ ಆರು ತಿಂಗಳವರೆಗೆ ಈ ಬ್ರಾಡ್‌ಬ್ಯಾಂಡ್‌ನಲ್ಲಿರುವ ಗ್ರಾಹಕರು ಅವರಿಷ್ಟದ ಆಯ್ಕೆಯ ಪ್ರಕಾರ ಫೈಬರ್‌ ಬೇಸಿಕ್‌ ಯೋಜನೆ ಅಥವಾ ಇತರೆ ಯಾವುದೇ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗೆ ಅಪ್‌ಗ್ರೇಡ್‌ ಮಾಡಬಹುದು ಎನ್ನಲಾಗಿದೆ. ಹಾಗಾದರೆ ಬಿಎಸ್‌ಎನ್‌ಎಲ್‌ನ್ 449ರೂ. ಬ್ರಾಡ್‌ಬ್ಯಾಂಡ್‌ ಯೋಜನೆ ಪ್ರಯೋಜನಗಳ ಬಗ್ಗೆ ಹಾಗೂ ಇತರೆ ಸೌಲಭ್ಯಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಅಗ್ಗದ ಬೆಲೆಗೆ ಬ್ರಾಡ್‌ಬ್ಯಾಂಡ್‌ ಕನೆಕ್ಷನ್ ಬೇಕೆ?..ಇದು ಬೆಸ್ಟ್‌ ಪ್ಲ್ಯಾನ್‌!

ಬಿಎಸ್‌ಎನ್‌ಎಲ್‌ 449ರೂ. ಫೈಬರ್ ಬೇಸಿಕ್ NEO ಪ್ಲ್ಯಾನ್ ಪ್ರಯೋಜನ

ಬಿಎಸ್‌ಎನ್‌ಎಲ್‌ 449ರೂ. ಫೈಬರ್ ಬೇಸಿಕ್ NEO ಪ್ಲ್ಯಾನ್ನಲ್ಲಿ ಬಳಕೆದಾರರಿಗೆ ತಿಂಗಳಿಗೆ 3.3 TB (3,300 GB) ವರೆಗೆ 30 Mbps ವೇಗವನ್ನು ಬ್ರೌಸ್ ಮಾಡಲು ಅನುವು ಮಾಡಿಕೊಡುತ್ತದೆ. FUP ಡೇಟಾ ಬಳಕೆಯ ಮಿತಿ ಮುಗಿದ ಬಳಿಕ, ಆಪರೇಟರ್ ಡೇಟಾ ವೇಗವನ್ನು 2 Mbps ಗೆ ನಿರ್ಬಂಧಿಸುತ್ತದೆ. ಭಾರತದ ಪ್ರಮುಖ ಪ್ರದೇಶಗಳಲ್ಲಿ ಈ ಯೋಜನೆಯ ಲಭ್ಯತೆ ಪಡೆದಿದೆ.

ಬಿಎಸ್‌ಎನ್‌ಎಲ್‌ 499ರೂ. ಫೈಬರ್ ಬೇಸಿಕ್ ಪ್ಲ್ಯಾನ್ ಪ್ರಯೋಜನ

ಬಿಎಸ್ಎನ್ಎಲ್ 499ರೂ. ಬ್ರಾಡ್‌ಬ್ಯಾಂಡ್‌ ಯೋಜನೆಯು 40 Mbps ಇಂಟರ್ನೆಟ್ ವೇಗವನ್ನು 3.3TB FUP ಡೇಟಾದೊಂದಿಗೆ ಅನಿಯಮಿತ ವಾಯಿಸ್‌ ಕರೆ ಸೌಲಭ್ಯ ಪಡೆದಿದೆ. ನಿಗದಿತ FUP ಡೇಟಾ ಬಳಕೆಯ ಮಿತಿ ಮುಗಿದ ಬಳಿಕ, ಡೇಟಾ ವೇಗವು 4 Mbps ಗೆ ಇಳಿಕೆಯಾಗುತ್ತದೆ. ಇದ್ರಲ್ಲಿ, ಬಳಕೆದಾರರು ಮೊದಲ ತಿಂಗಳ ಬಾಡಿಗೆಯಲ್ಲಿ 500ರೂ. ವರೆಗಿನ 90% ರಿಯಾಯಿತಿಯನ್ನು ಸಹ ಪಡೆಯುತ್ತಾರೆ.

ಬಿಎಸ್‌ಎನ್‌ಎಲ್‌ 799ರೂ. ಫೈಬರ್ ವ್ಯಾಲ್ಯೂ ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್ 'ಫೈಬರ್ ವ್ಯಾಲ್ಯೂ' ಯೋಜನೆ ಶುಲ್ಕವು ಗಾಗಿ ತಿಂಗಳಿಗೆ 799 ರೂ. ಆಗಿದೆ. ಬಳಕೆದಾರರು ಅದೇ 3.3 TB (3,300 GB) ಮಾಸಿಕ ಡೇಟಾದವರೆಗೆ 100 Mbps ವೇಗದಲ್ಲಿ ಬ್ರೌಸ್ ಮಾಡಲು ಅನುವು ಮಾಡಿಕೊಡುವ ಯೋಜನೆ ಇದಾಗಿದೆ. ಫೈಬರ್ ಬೇಸಿಕ್ ಯೋಜನೆಯಂತೆಯೇ, ಆಪರೇಟರ್ 3.3 TB ಡೇಟಾ ಮಿತಿಯನ್ನು ತಲುಪಿದ ನಂತರ ವೇಗವನ್ನು 2 Mbps ಗೆ ಇಳಿಕೆ ಮಾಡಲಾಗುತ್ತದೆ.

ಅಗ್ಗದ ಬೆಲೆಗೆ ಬ್ರಾಡ್‌ಬ್ಯಾಂಡ್‌ ಕನೆಕ್ಷನ್ ಬೇಕೆ?..ಇದು ಬೆಸ್ಟ್‌ ಪ್ಲ್ಯಾನ್‌!

ಬಿಎಸ್‌ಎನ್‌ಎಲ್‌ 999ರೂ. ಫೈಬರ್ ಪ್ರೀಮಿಯಂ ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್ 'ಫೈಬರ್ ಪ್ರೀಮಿಯಂ' ಯೋಜನೆ ತಿಂಗಳ ಶುಲ್ಕ 999 ರೂ. ಆಗಿದೆ. ಫೈಬರ್ ಪ್ರೀಮಿಯಂ ಬ್ರಾಡ್‌ಬ್ಯಾಂಡ್ ಯೋಜನೆ 2 TB (2000 GB) ಡೇಟಾ ಮತ್ತು 200 ಎಮ್‌ಬಿಪಿಎಸ್ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ಹೊಂದಿದೆ. ಎಫ್‌ಯುಪಿ ಡೇಟಾವನ್ನು ಕಬಳಿಸಿದ ನಂತರ ವೇಗವು 2 Mbps ಗೆ ಇಳಿಯುತ್ತದೆ. ಬಹುಮುಖ್ಯವಾಗಿ, ಡಿಸ್ನಿ + ಹಾಟ್‌ಸ್ಟಾರ್ ಪ್ರೀಮಿಯಂ ಚಂದಾದಾರಿಕೆಯನ್ನು ಸ್ವೀಕರಿಸುವ ಬಳಕೆದಾರರೊಂದಿಗೆ ಆಪರೇಟರ್ ಓವರ್-ದಿ-ಟಾಪ್ (ಒಟಿಟಿ) ಪ್ರಯೋಜನವನ್ನು ನೀಡುತ್ತದೆ.

ಬಿಎಸ್‌ಎನ್‌ಎಲ್‌ 1,499ರೂ ಫೈಬರ್ ಅಲ್ಟ್ರಾ ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್ 'ಫೈಬರ್ ಅಲ್ಟ್ರಾ' ಯೋಜನೆಯ ಬೆಲೆ ತಿಂಗಳಿಗೆ 1,499 ರೂ. ಆಗಿದೆ. ಬಳಕೆದಾರರು 300 ಎಮ್‌ಬಿಪಿಎಸ್ ವರೆಗೆ ಬ್ರೌಸ್ ಮಾಡಲು ಮತ್ತು 4 TB (4,000 GB) ಡೇಟಾದವರೆಗೆ ವೇಗವನ್ನು ಅಪ್‌ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ. ಎಫ್‌ಯುಪಿ ಡೇಟಾವನ್ನು ಕಬಳಿಸಿದ ನಂತರ, ವೇಗವು ಬಳಕೆದಾರರಿಗೆ 4 Mbps ಗೆ ಇಳಿಯುತ್ತದೆ.

Best Mobiles in India

English summary
BSNL has said that the Rs 449 plan is a promotional offer, and thus, the consumers on this plan for six months would be upgraded to the Fibre Basic plan or any other plan as per their choice. know more details in kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X