BSNL ನ ಈ 498ರೂ. ಗಳ ಪ್ಲ್ಯಾನ್‌ನಲ್ಲಿ ಬರೋಬ್ಬರಿ 6 ತಿಂಗಳ ವ್ಯಾಲಿಡಿಟಿ! ಆದರೆ...
ಬಿಎಸ್‌ಎನ್‌ಎಲ್ (BSNL) ಸರ್ಕಾರಿ ಸ್ವಾಮ್ಯದ ಟೆಲಿಕಾಂ ಆಗಿದ್ದು, ಮುನ್ನೆಲೆಯಲ್ಲಿರುವ ಏರ್‌ಟೆಲ್ ಹಾಗೂ ಜಿಯೋಗೆ (Airtel and Jio) ತನ್ನದೇ ಆದ ರೀತಿಯಲ್ಲಿ ಪೈಪೋಟಿ ನೀಡುತ್ತಾ ಬರುತ್ತಿದೆ. ಅದರಲ್ಲೂ ಇದರ ಹೊಸ ಹೊಸ ಪ್ರಿಪೇಯ್ಡ್ ಪ್ಲ್ಯಾನ್‌ನಲ್ಲಿ(Prepaid plan) ಗ್ರಾಹಕರು ಅಧಿಕ ಸೌಲಭ್ಯಗಳನ್ನು ಪಡೆದುಕೊಕೊಳ್ಳುತ್ತಿದ್ದಾರೆ. ಈ ನಡುವೆ 500ರೂ.ಗಳ ಅಡಿಯಲ್ಲಿ ನೀವು ಬರೋಬ್ಬರಿ ಅರ್ಧ ವರ್ಷದ ಮಾನ್ಯತೆ ಪಡೆಯಬಹುದು.
ಹೌದು, ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪೆನಿಯಾದ ಬಿಎಸ್‌ಎನ್‌ಎಲ್ ತನ್ನ ಕೈಗೆಟುಕುವ ಮತ್ತು ಸ್ಪರ್ಧಾತ್ಮಕ ರೀಚಾರ್ಜ್ ಪ್ಲ್ಯಾನ್‌ಗಳೊಂದಿಗೆ (Recharge Plan) ಮಾರುಕಟ್ಟೆಯಲ್ಲಿ ಅಲೆ ಎನ್ನಿಸುವುದನ್ನು ಮುಂದುವರೆಸಿದೆ. ಅದರಂತೆ ಗಮನ ಸೆಳೆಯುವ ಇತ್ತೀಚಿನ ಪ್ಲ್ಯಾನ್ 180 ದಿನಗಳ ಮಾನ್ಯತೆಯನ್ನು ನೀಡಲಿದ್ದು, ಒಂದು ಅಥವಾ ಎರಡು ತಿಂಗಳ ಆಯ್ಕೆಗಳಿಂದ ಪ್ರತ್ಯೇಕಿಸುತ್ತದೆ. ಹಾಗಿದ್ರೆ, ಈ ಪ್ಲ್ಯಾನ್‌ನಲ್ಲಿ ಏನೆಲ್ಲಾ ಲಭ್ಯ ಎಂಬ ವಿವರ ತಿಳಿಯೋಣ ಬನ್ನಿ.

498 ರೀಚಾರ್ಜ್ ಪ್ಲ್ಯಾನ್: ಮೊದಲೇ ಹೇಳಿದಂತೆ ಬಿಎಸ್‌ಎನ್‌ಎಲ್ ತನ್ನ ಅಗ್ಗದ ದರದ ರೀಚಾರ್ಜ್ ಪ್ಲ್ಯಾನ್‌ಗಳ ಮೂಲಕ ತನ್ನದೇ ಆದ ಚಂದಾದಾರರನ್ನು ಪಡೆದುಕೊಂಡಿದೆ. ಈ ನಡುವೆ ಭಾರತದಲ್ಲಿ ಏರ್‌ಟೆಲ್ ಹಾಗೂ ಜಿಯೋ 5G ಬೆನ್ನತ್ತಿ ಹೋಗುತ್ತಿದ್ದು, ಬಿಎಸ್‌ಎನ್‌ಎಲ್ ಸಹ ಈ ಕಡೆ ಮುಖ ಮಾಡಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳು ಸಹ ನಡೆಯುತ್ತಿವೆ. ಈ ಬೆಳವಣಿಗೆ ನಡುವೆ 498ರೂ. ಗಳ ರೀಚಾರ್ಜ್ ಪ್ಲ್ಯಾನ್‌ಈಗ ಹಲವರ ನೆಚ್ಚಿನ ಆಯ್ಕೆಯಾಗಿದೆ.
498ರೂ. ಗಳ ರೀಚಾರ್ಜ್‌ನ ಯೋಜನೆಯಲ್ಲಿ ಮೊದಲೇ ತಿಳಿಸಿದಂತೆ 180 ಮಾನ್ಯತೆ ಇರಲಿದೆ. ಅಂದರೆ ಅರ್ಧ ವರ್ಷದ ವರೆಗೆ ನೀವು ರೀಚಾರ್ಜ್ ಬಗ್ಗೆ ಮಾತನಾಡುವಂತೆಯೇ ಇಲ್ಲ. ಅಂದರೆ ಆಗಾಗ್ಗೆ ಅಂದರೆ ತಿಂಗಳಿಗೆ ಅಥವಾ ಮೂರು ತಿಂಗಳಿಗೆ ಒಮ್ಮೆ ರೀಚಾರ್ಜ್ ಮಾಡಿಸಬೇಕಾದ ಪ್ರಮೇಯವೇ ಬರುವುದಿಲ್ಲ.ಆದರೆ, ಈ ಪ್ಲ್ಯಾನ್‌ನಲ್ಲಿ ಸೀಮಿತ ಸೇವೆಗಳು ಮಾತ್ರ ಲಭ್ಯ ಇರಲಿವೆ ಎಂಬುದು ನಿಮ್ಮ ಗಮನಕ್ಕೆ ಇರಲಿ.
ಆಗಾಗ್ಗೆ ಕರೆ ಮಾಡಲು ಬಳಕೆ ಮಾಡುತ್ತೇವೆ ಜೊತೆಗೆ ದೀರ್ಘ ಕಾಲದ ವರೆಗೆ ಮತ್ತೆ ರೀಚಾರ್ಜ್ ಮಾಡಿಸಲು ಸಾಧ್ಯ ಆಗುವುದಿಲ್ಲ ಎಂದಾದರೆ ಮಾತ್ರ ಈ ಪ್ಲ್ಯಾನ್ ಬೆಸ್ಟ್. ಈ ಪ್ಲ್ಯಾನ್‌ನಲ್ಲಿ ಬಿಎಸ್‌ಎನ್‌ಎಲ್ ನ ನೆಟ್‌ವರ್ಕ್‌ನಲ್ಲಿ ನಿಮಿಷಕ್ಕೆ ಕೇವಲ 10 ಪೈಸೆಗೆ ಬಿಲ್ ಮಾಡಲಾಗುತ್ತದೆ. ಇದರೊಂದಿಗೆ ಇತರ ನೆಟ್‌ವರ್ಕ್ ಕರೆಗಳಿಗೆ ಪ್ರತಿ ನಿಮಿಷಕ್ಕೆ 30 ಪೈಸೆ ಶುಲ್ಕ ಅನ್ವಯಿಸುತ್ತದೆ. ಈ ಸೇವೆಯೊಂದಿಗೆ ಹೆಚ್ಚುವರಿಯಾಗಿ 100ರೂ.ಗಳ ಮೌಲ್ಯದ ಟಾಕ್ ಟೈಮ್ ಆಯ್ಕೆ ಸಹ ಲಭ್ಯ.
ಈ ಪ್ಲ್ಯಾನ್‌ನಲ್ಲಿ ಪೂರಕ ಡೇಟಾ ಮತ್ತು ಉಚಿತ ಕರೆ ಸೌಲಭ್ಯ ಇರುವುದಿಲ್ಲ. ಅದೇನೇ ಇದ್ದರೂ ವ್ಯಾಪಕವಾದ ಡೇಟಾ ಮತ್ತು ಕರೆ ಪ್ರಯೋಜನಗಳು ಬೇಡ ವಿಸ್ತೃತ ಮಾನ್ಯತೆಗೆ ಮಾತ್ರ ಆದ್ಯತೆ ನೀಡುತ್ತೇವೆ ಎನ್ನುವವರಿಗೆ ಮಾತ್ರ ಈ ಯೋಜನೆಯು ಸೂಕ್ತವಾಗಿದೆ ಎಂದು ಬಿಎಸ್ಎನ್‌ಎಲ್ ಸಹ ಹೇಳುತ್ತದೆ. ಅದರಲ್ಲೂ ಪ್ರಮುಖವಾಗಿ ಬಿಎಸ್‌ಎನ್‌ಎಲ್ ಅನ್ನು ಸೆಕೆಂಡರಿ ಸಿಮ್ ಆಗಿ ಬಳಕೆ ಮಾಡುವವರಿಗೆ ಇದು ಅತ್ಯಾನುಕೂಲ.
ಇದರೊಂದಿಗೆ ನೀವು ಬೇರೆ ಪ್ಲ್ಯಾನ್‌ಗಳು ಅಂದರೆ ಅಗ್ಗದ ದರದಲ್ಲಿ ಕಾಣಿಸಿಕೊಳ್ಳುವ ಪ್ಲ್ಯಾನ್‌ಗಳಲ್ಲಿ ಉಚಿತ ಸೇವೆಗಳು ಬೇಕು ಎಂದರೆ 599ರೂ.ಗಳು 799ರೂ.ಗಳ ಪ್ಲ್ಯಾನ್ ಕಡೆ ಮುಖ ಮಾಡಬಹುದು. ಇವೆರಡೂ ಸಹ 84 ದಿನಗಳ ಮಾನ್ಯತೆಯೊಂದಿಗೆ ಬರಲಿದ್ದು, ದೈನಂದಿನ ಡೇಟಾ, ಅನಿಯಮಿತ ವಾಯ್ಸ್ ಕರೆ ಮತ್ತು ಎಸ್‌ಎಮ್‌ಎಸ್ ಪ್ರಯೋಜನಗಳನ್ನು ನೀಡುತ್ತದೆ. ಹಾಗಿದ್ರೆ, ಬನ್ನಿ ಈ ಪ್ಲ್ಯಾನ್‌ಗಳ ಬಗ್ಗೆಯೂ ತಿಳಿಯೋಣ.

ಬಿಎಸ್‌ಎನ್‌ಎಲ್‌ನ 599ರೂ.ಗಳ ಪ್ಲ್ಯಾನ್‌ನಲ್ಲಿ ನೀವು ನಿತ್ಯವೂ 3GB ಡೇಟಾ, ಅನಿಯಮಿತ ವಾಯ್ಸ್ ಕರೆ ಮತ್ತು ನಿತ್ಯವೂ 100 ಎಸ್‌ಎಮ್‌ಎಸ್ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಬಳಕೆದಾರರು ರಾತ್ರಿ 12 AM ರಿಂದ 5 AM ವರೆಗೆ ಉಚಿತ ಅನಿಯಮಿತ ಡೇಟಾವನ್ನು ಸಹ ಪಡೆದುಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ. ಈ ಮೂಲಕ ಗ್ರಾಹಕರಿಗೆ ರಾತ್ರಿ ಸಮಯದಲ್ಲಿ ಅನಿಯಮಿತ ಡೇಟಾವನ್ನು ನೀಡುವ ಏಕೈಕ ಪ್ರಿಪೇಯ್ಡ್ ಪ್ಲ್ಯಾನ್ ಇದಾಗಿದೆ. ಇದರೊಂದಿಗೆ ಜಿಂಗ್, ಆಸ್ಟ್ರೋಸೆಲ್ ಮತ್ತು ಗೇಮಿಂಗ್ ಸೇವೆಗಳಿಗೆ ಉಚಿತ ಪ್ರವೇಶ ನೀಡುತ್ತದೆ.
ಬಿಎಸ್‌ಎನ್‌ಎಲ್‌ನ 769ರೂ.ಗಳ ಪ್ಲ್ಯಾನ್‌ನಲ್ಲಿ ಅನಿಯಮಿತ ವಾಯ್ಸ್ ಕಾಲ್, ನಿತ್ಯವೂ 100 SMS ಹಾಗೂ ಪ್ರತಿದಿನ 2GB ದೈನಂದಿನ ಡೇಟಾವನ್ನು 84 ದಿನಗಳ ಮಾನ್ಯತೆಯೊಂದಿಗೆ ಪಡೆದುಕೊಳ್ಳಬಹುದು. ಇದರೊಂದಿಗೆ ಬಿಎಸ್‌ಎನ್‌ಎಲ್ ಟ್ಯೂನ್ಸ್, ಎರೋಸ್ ನೌ ಎಂಟರ್‌ಟೈನ್‌ಮೆಂಟ್ ಸೇವೆಗಳು, ಹಾರ್ಡಿ ಮೊಬೈಲ್ ಗೇಮಿಂಗ್, ಮ್ಯೂಸಿಕ್ ಸೇವೆಗಳು ಮತ್ತು ಹೆಚ್ಚಿನ ಪ್ರಯೋಜನಗಳನ್ನು ಇದರಲ್ಲಿ ಪಡೆಯಬಹುದಾಗಿದೆ.


Click it and Unblock the Notifications