Home
ಸುದ್ದಿಜಾಲ

ಬಿಎಸ್ಎನ್ಎಲ್ 551ರೂ. ಪ್ಲ್ಯಾನ್: ಒಟ್ಟು 450GB ಡೇಟಾ, ಅಧಿಕ ವ್ಯಾಲಿಡಿಟಿ!

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ನೆಟವರ್ಕ್ ಕವರೇಜ್ ಉತ್ತಮವಾಗಿಲ್ಲ ಎಂದು ಅನೇಕ ಗ್ರಾಹಕರು ಮೂಗು ಮುರಿಯುತ್ತಾರೆ. ಆದರೆ ಬಿಎಸ್ಎನ್ಎಲ್ ಇದೀಗ ತನ್ನ ಚಂದಾದಾರರಿಗೆ 4G ನೆಟವರ್ಕ್ ಸೇವೆಯನ್ನು ನೀಡಲಾರಂಭಿಸಿದೆ. ಹಾಗೆಯೇ ಸದ್ಯ ಖಾಸಗಿ ಟೆಲಿಕಾಂಗಳಿಗೆ ನೇರ ಪೈಪೋಟಿ ನೀಡುವಂತಹ ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಾ ಸಾಗಿದೆ. ಬಿಎಸ್ಎನ್ಎಲ್‌ ಈಗ ಮತ್ತೊಂದು ಹೊಸ ಪ್ರೀಪೇಯ್ಡ್ ಪ್ಲ್ಯಾನ್ ಲಾಂಚ್ ಮಾಡಿದ್ದು, ಈ ಪ್ಲ್ಯಾನ್ ಅಧಿಕ ಪ್ರಯೋಜನಗಳನ್ನು ಒಳಗೊಂಡಿದೆ.

 ಬಿಎಸ್ಎನ್ಎಲ್ ಟೆಲಿಕಾಂ

ಹೌದು, ಬಿಎಸ್ಎನ್ಎಲ್ ಟೆಲಿಕಾಂ ಹೊಸದಾಗಿ 551ರೂ. ಬೆಲೆಯ ಪ್ರೀಪೇಯ್ಡ್‌ ಪ್ಲ್ಯಾನ್‌ವೊಂದನ್ನು ಪರಿಚಯಿಸಿದೆ. ಈ ಪ್ರೀಪೇಯ್ಡ್ ಪ್ಲ್ಯಾನ್‌ ಒಟ್ಟು 450GB ಡೇಟಾ ಸೌಲಭ್ಯವನ್ನು ಒಳಗೊಂಡಿದ್ದು, ದೀರ್ಘಾವಧಿಯ ವ್ಯಾಲಿಡಿಟಿಯನ್ನು ಪಡೆದಿದೆ. ಬಿಎಸ್‌ಎನ್ಎಲ್‌ನ ಈ ಪ್ಲ್ಯಾನ್‌ ಸಂಪೂರ್ಣ ಡೇಟಾ ಪ್ರಯೋಜನದ ಯೋಜನೆಯಾಗಿದೆ. ಬಿಎಸ್ಎನ್ಎಲ್ 551ರೂ ಪ್ಲ್ಯಾನ್ ಸೌಲಭ್ಯಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಒಟ್ಟು 450GB ಡೇಟಾ

ಒಟ್ಟು 450GB ಡೇಟಾ

ಬಿಎಸ್ಎನ್ಎಲ್ 551ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 450GB ಡೇಟಾ ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 5GB ಡೇಟಾ ಸೌಲಭ್ಯವನ್ನು ಒದಗಿಸುತ್ತದೆ. 90 ದಿನಗಳಿಗೆ ಒಟ್ಟು 450GB ಡೇಟಾ ಸಿಗಲಿದೆ.

ವಾಯಿಸ್ ಕರೆ ಮತ್ತು ಎಸ್ಎಮ್ಎಸ್ ಇಲ್ಲ

ವಾಯಿಸ್ ಕರೆ ಮತ್ತು ಎಸ್ಎಮ್ಎಸ್ ಇಲ್ಲ

ಬಿಎಸ್ಎನ್ಎಲ್ 551ರೂ. ಪ್ರೀಪೇಯ್ಡ್ ಪ್ಲ್ಯಾನ್ ಸಂಪೂರ್ಣ ಡೇಟಾ ಪ್ರಯೋಜನದ ಪ್ಲ್ಯಾನ್ ಆಗಿದ್ದು, ಹೀಗಾಗಿ ಈ ಯೋಜನೆಯಲ್ಲಿ ಯಾವುದೇ ಉಚಿತ ವಾಯಿಸ್ ಕರೆ ಮತ್ತು ಎಸ್ಎಮ್ಎಸ್ ಸೌಲಭ್ಯಗಳು ಲಭ್ಯವಾಗುವುದಿಲ್ಲ. ಈ ಪ್ಲ್ಯಾನ್‌ನಂತೆ ಬಿಎಸ್ಎನ್ಎಲ್ ಮತ್ತಷ್ಟು ಅಗ್ಗದ ಡೇಟಾ ಪ್ಲ್ಯಾನ್‌ಗಳನ್ನು ಹೊಂದಿದೆ.

3G ನೆಟವರ್ಕ್

3G ನೆಟವರ್ಕ್

ಬಿಎಸ್ಎನ್ಎಲ್ 551ರೂ. ಪ್ಲ್ಯಾನ್ ಒಟ್ಟು 450GB ಡೇಟಾ ಪ್ರಯೋಜನಗಳನ್ನು ಹೊಂದಿದೆ. ಹಾಗೆಯೇ ಈ ಪ್ಲ್ಯಾನ್ 3G ನೆಟವರ್ಕ್ ಬೆಂಬಲದಲ್ಲಿ ಕಾರ್ಯನಿರ್ವಹಿಸುತ್ತದೆ. 4G ನೆಟವರ್ಕ್ ಕವರೇಜ್ ಸರಿಯಾಗಿ ಇರದ ಪ್ರದೇಶಗಳಲ್ಲಿ ಈ ಪ್ಲ್ಯಾನ್ ಸೂಕ್ತ ಅನಿಸಲಿದೆ.

ಬಿಎಸ್‌ಎನ್ಎಲ್ 998ರೂ. ಪ್ಲ್ಯಾನ್

ಬಿಎಸ್‌ಎನ್ಎಲ್ 998ರೂ. ಪ್ಲ್ಯಾನ್

ಬಿಎಸ್‌ಎನ್ಎಲ್ ಸಂಸ್ಥೆಯ 998ರೂ. ಪ್ಲ್ಯಾನ್‌ ಒಟ್ಟು 240 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಸಿಗಲಿದೆ. ಈ ಪ್ಲ್ಯಾನ್ ಸಹ ಡೇಟಾ ಪ್ಲ್ಯಾನ್ ಆಗಿದ್ದು, ಹೀಗಾಗಿ ಈ ಪ್ಲ್ಯಾನಿನಲ್ಲಿ ಕರೆಗಳು ಮತ್ತು ಎಸ್‌ಎಮ್ಎಸ್‌ಗಳು ಲಭ್ಯವಾಗುವುದಿಲ್ಲ. ಮುಖ್ಯವಾಗಿ ಇದು ಡೇಟಾ ಬಳಕೆಯ ಪ್ಲ್ಯಾನ್‌ ಆಗಿ ಗುರುತಿಸಿಕೊಂಡಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 420GB ಡೇಟಾ ಪ್ರಯೋಜನ ಸಿಗಲಿದೆ.

Best Mobiles in India

English summary
BSNL is providing a total of 450GB with 90 days validity at Rs 551.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+