ಬಿಎಸ್‌ಎನ್‌ಎಲ್‌ನಿಂದ ಎರಡು ಹೊಸ ಪ್ಲ್ಯಾನ್: ಅಧಿಕ ಡೇಟಾ, ವಾರ್ಷಿಕ ವ್ಯಾಲಿಡಿಟಿ!
ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಟೆಲಿಕಾಂ ಸಂಸ್ಥೆಯು ಇತ್ತೀಚಿಗೆ ಹಲವು ನೂತನ ಪ್ರೀಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಬಹುತೇಕ ಪ್ಲ್ಯಾನ್‌ಗಳು ನೇರವಾಗಿ ಖಾಸಗಿ ಟೆಲಿಕಾಂಗಳಿಗೆ ಫೈಟ್ ನೀಡುವ ಪ್ರಯೋಜನಗಳನ್ನು ಹೊಂದಿವೆ. ಆ ಲಿಸ್ಟಿಗೆ ಬಿಎಸ್‌ಎನ್‌ಎಲ್ ಇದೀಗ ಮತ್ತೆ ಎರಡು ಯೋಜನೆಗಳನ್ನು ಸೇರ್ಪಡೆ ಮಾಡಿದೆ. ಈ ಎರಡು ಪ್ರೀಪೇಯ್ಡ್ ಪ್ಲ್ಯಾನ್‌ಗಳು ಸಹ ಅಧಿಕ ಪ್ರಯೋಜನಗಳನ್ನು ಹೊಂದಿವೆ.

ಹೌದು, ಬಿಎಸ್‌ಎನ್‌ಎಲ್ ಸಂಸ್ಥೆಯು 693ರೂ ಮತ್ತು 1,212ರೂ ಬೆಲೆಯ ಎರಡು ಪ್ರೀಪೇಯ್ಡ್ ಪ್ಲ್ಯಾನ್ ಘೋಷಿಸಿದೆ. ಈ ಎರಡು ಡೇಟಾ ಪ್ಲ್ಯಾನ್‌ಗಳು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಹಾಗೆಯೇ ಪೂರ್ಣ ವ್ಯಾಲಿಡಿಟಿ ಅವಧಿಗೆ 693ರೂ. ಪ್ರೀಪೇಯ್ಡ್ ಯೋಜನೆಯು 300GB ಡೇಟಾವನ್ನು ಹಾಗೂ 1,212ರೂ. ಪ್ಲ್ಯಾನ್ ಒಟ್ಟು 500GB ಡೇಟಾ ಪ್ರಯೋಜನವನ್ನು ಒದಗಿಸಲಿವೆ. ಬಿಎಸ್‌ಎನ್‌ಎಲ್ ಈ ಎರಡು ಯೋಜನೆಗಳ ಪ್ರಯೋಜನಗಳ ಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿರಿ.

ಬಿಎಸ್‌ಎನ್‌ಎಲ್ 693ರೂ.ಪ್ಲ್ಯಾನ್
ಬಿಎಸ್‌ಎನ್‌ಎಲ್ 693ರೂ. ಡೇಟಾ ಎಸ್‌ಟಿವಿ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 300GB ಡೇಟಾ ಸೌಲಭ್ಯ ಲಭ್ಯವಾಗಲಿದೆ. ಇದು ಡೇಟಾ ಪ್ರೀಪೇಯ್ಡ್ ಯೋಜನೆ ಆಗಿರುವುದರಿಂದ ಯಾವುದೇ ವಾಯಿಸ್ ಕರೆ ಹಾಗೂ ಎಸ್‌ಎಮ್‌ಎಸ್ ಸೌಲಭ್ಯಗಳು ದೊರೆಯುವುದಿಲ್ಲ.

ಬಿಎಸ್‌ಎನ್‌ಎಲ್ 1,212ರೂ.ಪ್ಲ್ಯಾನ್
ಬಿಎಸ್‌ಎನ್‌ಎಲ್ 1,212ರೂ. ಡೇಟಾ ಎಸ್‌ಟಿವಿ ಡೇಟಾ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 500GB ಡೇಟಾ ಪ್ರಯೋಜನೆ ದೊರೆಯುತ್ತದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಯಾವುದೇ ವಾಯಿಸ್ ಕರೆ ಹಾಗೂ ಎಸ್‌ಎಮ್‌ಎಸ್ ಸೌಲಭ್ಯಗಳು ದೊರೆಯುವುದಿಲ್ಲ. ಇದೊಂದು ಡೇಟಾ ಪ್ಲ್ಯಾನ್ ಆಗಿದೆ.

ಡೇಟಾ ಸೌಲಭ್ಯದ ಪ್ಲ್ಯಾನ್‌ಗಳು
ಬಿಎಸ್‌ಎನ್‌ಎಲ್‌ನ 693ರೂ ಮತ್ತು 1,212ರೂ ಬೆಲೆಯ ಎರಡು ಪ್ರೀಪೇಯ್ಡ್ ಡೇಟಾ ಪ್ಲ್ಯಾನ್‌ಗಳು ಅಧಿಕ ಡೇಟಾ ಬಳಕೆ ಬಯಸುವ ಚಂದಾದಾರರಿಗೆ ಉತ್ತಮ ಆಯ್ಕೆ ಆಗಿದೆ. ಈ ಎರಡು ಯೋಜನೆಗಳು ಅಧಿಕ ಡೇಟಾ ಸೌಲಭ್ಯ ಹೊಂದಿದ್ದು, ವಾರ್ಷಿಕ ವ್ಯಾಲಿಡಿಟಿಯನ್ನು ಪಡೆದಿವೆ. ಸದ್ಯ ಕೊರೊನಾ ಎಫೆಕ್ಟ್ ನಿಂದ ಲಾಕ್‌ಡೌನ್ ಜಾರಿಯಿದ್ದು, ಮನೆಯಿಂದ ಕೆಲಸ ನಿರ್ವಹಿಸುವವರಿಗೆ ಈ ಡೇಟಾ ಪ್ಲ್ಯಾನ್ ಅನುಕೂಲ ಅನಿಸಲಿವೆ.


Click it and Unblock the Notifications








