BSNL ಗ್ರಾಹಕರಿಗೆ ಮತ್ತೆ ಸಿಹಿಸುದ್ದಿ!..ನೀವು ಬೇಡ ಅಂದ್ರೂ ಈ ಕೊಡುಗೆ ಸಿಗುತ್ತೆ!
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಟೆಲಿಕಾಂ ಈಗಾಗಲೇ ಕೆಲವು ಆಕರ್ಷಕ ಪ್ಲ್ಯಾನ್‌ಗಳ ಮೂಲಕ ಗಮನ ಸೆಳೆದಿದೆ. ಹಾಗೆಯೇ ಬಿಎಸ್‌ಎನ್‌ಎಲ್ ಖಾಸಗಿ ಟೆಲಿಕಾಂಗಳಿಗೂ ಪೈಪೋಟಿ ನೀಡುವ ಹೆಜ್ಜೆಗಳನ್ನು ಹಾಕುತ್ತಾ ಮುನ್ನಡೆದಿದೆ. ಇದೀಗ ಬಿಎಸ್‌ಎನ್‌ಎಲ್ ಟೆಲಿಕಾಂ ಭರ್ಜರಿ ಬದಲಾವಣೆ ಮಾಡಿದ್ದು, ಗ್ರಾಹಕರಿಗೆ ಖುಷಿ ನೀಡಿದೆ.
ಹೌದು, ಬಿಎಸ್‌ಎನ್‌ಎಲ್ ಟೆಲಿಕಾಂ ಇದೀಗ ತನ್ನ 699ರೂ ಹಾಗೂ 999ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಪರಿಷ್ಕರಣೆ ಮಾಡಿದ್ದು, ಈ ಎರಡು ಯೋಜನೆಗಳ ವ್ಯಾಲಿಡಿಟಿ ಹೆಚ್ಚಿಸಿದೆ. ಈ ಮೂಲಕ ಅಧಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಸಂತಸ ನೀಡಿದೆ. ಹಾಗಾದರೇ ಬಿಎಸ್‌ಎನ್‌ಎಲ್‌ನ ಈ ಎರಡು ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ವ್ಯಾಲಿಡಿಟಿ ಹೆಚ್ಚಳ
ಬಿಎಸ್‌ಎನ್‌ಎಲ್ ಟೆಲಿಕಾಂನ 699ರೂ ಹಾಗೂ 999ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳ ವ್ಯಾಲಿಡಿಟಿಯಲ್ಲಿ ಈಗ ಹೆಚ್ಚಳ ಆಗಿದೆ. ಸಂಸ್ಥೆಯ 699ರೂ ರೀಚಾರ್ಜ್ ಯೋಜನೆಯಲ್ಲಿ 20 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ನೀಡಿದೆ. ಹೀಗಾಗಿ ಈ ಯೋಜನೆಯಲ್ಲಿ 130 ದಿನಗಳ ಬದಲಿಗೆ 150 ದಿನಗಳ ವ್ಯಾಲಿಡಿಟಿ ಸಿಗಲಿದೆ.

ಅದೇ ರೀತಿ ಬಿಎಸ್‌ಎನ್‌ಎಲ್ ಸಂಸ್ಥೆಯ 999ರೂ. ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನಿನಲ್ಲಿ 15 ದಿನಗಳ ವ್ಯಾಲಿಡಿಟಿ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಈ ಯೋಜನೆಯಲ್ಲಿ ಇನ್ನು 200 ದಿನಗಳ ವ್ಯಾಲಿಡಿಟಿ ಬದಲಿಗೆ 215 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯಲಿದೆ.
ಬಿಎಸ್‌ಎನ್‌ಎಲ್‌ನ 699ರೂ. ಯೋಜನೆ ಮಾಹಿತಿ
ಬಿಎಸ್‌ಎನ್‌ಎಲ್‌ನ ಈ ಯೋಜನೆಯು ಪರಿಷ್ಕರಣೆಯ ಬಳಿಕ ಈಗ 130 ದಿನಗಳ ಬದಲಿಗೆ 150 ದಿನಗಳ ವ್ಯಾಲಿಡಿಟಿಯೊಂದಿಗೆ ಲಭ್ಯ ಇರಲಿದೆ. ಈ ಯೋಜನೆಯು 0.5GB ದೈನಂದಿನ ಡೇಟಾ ಸೌಲಭ್ಯ ಪಡೆದಿದ್ದು, ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 75GB ಡೇಟಾ ನೀಡುತ್ತದೆ.
ಅಲ್ಲದೇ ಈ ಯೋಜನೆಯಲ್ಲಿ ಅನಿಯಮಿತ ವಾಯಿಸ್ ಕರೆ, ದಿನಕ್ಕೆ 100 ಎಸ್‌ಎಮ್‌ಎಸ್ ಪ್ರಯೋಜನ ಸಹ ಸಿಗಲಿದೆ. ಅಲ್ಲದೇ ಮೊದಲ 60 ದಿನಗಳವರೆಗೆ ಉಚಿತ ವೈಯಕ್ತಿಕಗೊಳಿಸಿದ ರಿಂಗ್‌ಬ್ಯಾಕ್ ಟೋನ್ (PRBT) ಅನ್ನು ಸಹ ದೊರೆಯುತ್ತದೆ.
ಬಿಎಸ್‌ಎನ್‌ಎಲ್‌ನ 999ರೂ. ಯೋಜನೆ ಮಾಹಿತಿ
ಬಿಎಸ್‌ಎನ್‌ಎಲ್‌ನ ಈ ಯೋಜನೆಯು ಪರಿಷ್ಕರಣೆಯ ಬಳಿಕ ಈಗ 200 ದಿನಗಳ ಬದಲಿಗೆ 215 ದಿನಗಳ ವ್ಯಾಲಿಡಿಟಿಯೊಂದಿಗೆ ಲಭ್ಯ ಇರಲಿದೆ. ಈ ಯೋಜನೆಯು ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಪಡೆದಿದೆ. ಅಲ್ಲದೇ 60 ದಿನಗಳ ಉಚಿತ ವೈಯಕ್ತಿಕಗೊಳಿಸಿದ ರಿಂಗ್‌ಬ್ಯಾಕ್ ಟೋನ್ (PRBT) ಸೌಲಭ್ಯ ನೀಡುತ್ತದೆ. ಆದಾಗ್ಯೂ, ಈ ಯೋಜನೆಯಲ್ಲಿ ಗ್ರಾಹಕರಿಗೆ ಯಾವುದೇ ಡೇಟಾ ಅಥವಾ ಎಸ್‌ಎಮ್‌ಎಸ್ ಪ್ರಯೋಜನಗಳು ಲಭ್ಯ ಆಗುವುದಿಲ್ಲ.
ಬಿಎಸ್‌ಎನ್‌ಎಲ್ 99ರೂ. ಪ್ಲ್ಯಾನ್ ಪರಿಷ್ಕರಣೆ
ಬಿಎಸ್‌ಎನ್‌ಎಲ್ 99ರೂ. ಯೋಜನೆಯ ಸಹ ಪರಿಷ್ಕರಣೆ ಕಂಡಿದೆ. ಈ ಪ್ಲ್ಯಾನ್ ಒಟ್ಟು 18 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದುಕೊಂಡಿದೆ. ಆದರೆ ಈಗ ಈ ಯೋಜನೆಯ ವ್ಯಾಲಿಡಿಟಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ, ಹೀಗಾಗಿ ಈ ಪ್ಲ್ಯಾನಿನಲ್ಲಿ 18 ದಿನಗಳ ಬದಲಿಗೆ 17 ದಿನಗಳ ವ್ಯಾಲಿಡಿಟಿ ಲಭ್ಯ ಆಗುವುದು.
ಬಿಎಸ್‌ಎನ್‌ಎಲ್ 1999ರೂ. ಯೋಜನೆ ಮಾಹಿತಿ
ಸಂಸ್ತೆಯ ಈ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ವಾರ್ಷಿಕ ವ್ಯಾಲಿಡಿಟಿ ಪ್ಲ್ಯಾನ್ ಆಗಿದ್ದು, ಇದು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಒಳಗೊಂಡೊದೆ. ಈ ರೀಚಾರ್ಜ್‌ನಲ್ಲಿ ಗ್ರಾಹಕರಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 600GB ಡೇಟಾ ಸೌಲಭ್ಯ ಲಭ್ಯ ಇದ್ದು, ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಸಹ ಲಭ್ಯ ಆಗಲಿದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ.


Click it and Unblock the Notifications








