Home
ಸುದ್ದಿಜಾಲ

BSNL 798ರೂ. V/S ಜಿಯೋ 799ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್: ಯಾವುದು ಬೆಸ್ಟ್‌?

ಪ್ರಸ್ತುತ ಟೆಲಿಕಾಂ ಕಂಪನಿಗಳು ಆಕರ್ಷಕ ಯೋಜನೆಗಳ ಮೂಲಕ ಚಂದಾದಾರರ ಸಂಖ್ಯೆ ಹೆಚ್ಚಿಸಿಕೊಳ್ಳುವ ಹೆಜ್ಜೆಗಳನ್ನು ಇಡುತ್ತ ಸಾಗಿವೆ. ಈ ನಿಟ್ಟಿನಲ್ಲಿ ಟೆಲಿಕಾಂ ಸಂಸ್ಥೆಗಳು ಪ್ರೀಪೇಯ್ಡ್‌ ಯೋಜನೆಗಳ ಜೊತೆಗೆ ಭಿನ್ನ ಪ್ರಯೋಜನಗಳ ಪೋಸ್ಟ್‌ಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿವೆ. ಆ ಪೈಕಿ ಬಿಎಸ್‌ಎನ್‌ಎಲ್‌ ಹಾಗೂ ಜಿಯೋ ಸಂಸ್ಥೆಗಳು ಎರಡು ಯೋಜನೆಗಳು ಭಿನ್ನ ಶ್ರೇಣಿಯಲ್ಲಿದ್ದು, ಗ್ರಾಹಕರ ಗಮನ ಸೆಳೆದಿವೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಹಾಗೂ ಜಿಯೋ ಟೆಲಿಕಾಂ ಸಂಸ್ಥೆಗಳು ಡೇಟಾ, ಅನಿಯಮಿತ ವಾಯಿಸ್‌ ಕರೆ, ಎಸ್‌ಎಮ್‌ಎಸ್‌ ಸೌಲಭ್ಯಗಳನ್ನು ಒಳಗೊಂಡ ಪೋಸ್ಟ್‌ಪೇಯ್ಡ್‌ ಯೋಜನೆಗಳ ಆಯ್ಕೆ ನೀಡಿವೆ. ಅವುಗಳಲ್ಲಿ ಬಿಎಸ್‌ಎನ್‌ಎಲ್‌ 798ರೂ. ಪ್ಲ್ಯಾನ್‌ ಹಾಗೂ ಜಿಯೋ 799ರೂ. ಪೋಸ್ಟ್‌ಪೇಯ್ಡ್‌ ಯೋಜನೆಗಳು ಹೆಚ್ಚು ಆಕರ್ಷಕವಾಗಿ ಕಾಣಿಸಿಕೊಂಡಿವೆ. ಹಾಗಾದರೇ ಇವೆರಡು ಯೋಜನೆಗಳ ಪ್ರಯೋಜನಗಳೆನು ಹಾಗೂ ಇವೆರಡರಲ್ಲಿ ಯಾವುದು ಯೋಗ್ಯ? ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಬಿಎಸ್‌ಎನ್‌ಎಲ್ 798 ರೂ.ಪೋಸ್ಟ್‌ಪೇಯ್ಡ್ ಪ್ಲ್ಯಾನ್‌

ಬಿಎಸ್‌ಎನ್‌ಎಲ್ 798 ರೂ.ಪೋಸ್ಟ್‌ಪೇಯ್ಡ್ ಪ್ಲ್ಯಾನ್‌

ಬಿಎಸ್‌ಎನ್‌ಎಲ್‌ನ ಈ ಪೋಸ್ಟ್‌ಪೇಯ್ಡ್ ಯೋಜನೆಯು 50GB ಹೈಸ್ಪೀಡ್ ಡೇಟಾವನ್ನು ಡಾಟಾ ರೋಲ್‌ಓವರ್‌ನೊಂದಿಗೆ 150GB ವರೆಗೆ ಅನುಮತಿಸುತ್ತದೆ. ಡೇಟಾ ಮಿತಿಯನ್ನು ತಲುಪಿದ ನಂತರ, ಬಳಕೆದಾರರಿಗೆ ಪ್ರತಿ GBಗೆ 10.24 ರೂ.ಶುಲ್ಕ ವಿಧಿಸುತ್ತದೆ. ಈ ಪೋಸ್ಟ್‌ಪೇಯ್ಡ್ ಯೋಜನೆಯು ಎಂಟಿಎನ್‌ಎಲ್ ನೆಟ್‌ವರ್ಕ್‌ನಲ್ಲಿ ಮುಂಬೈ ಮತ್ತು ದೆಹಲಿ ಸೇರಿದಂತೆ ದಿನಕ್ಕೆ 100 ಎಸ್‌ಎಂಎಸ್ ನೀಡುತ್ತದೆ. ಈ ಯೋಜನೆಯು ಅನಿಯಮಿತ ಧ್ವನಿ ಕರೆಗಳೊಂದಿಗೆ 2 ಕುಟುಂಬ ಸಂಪರ್ಕಗಳನ್ನು, ಪ್ರತಿ ಪ್ರತ್ಯೇಕ ಕುಟುಂಬ ಸಂಪರ್ಕದೊಂದಿಗೆ ದಿನಕ್ಕೆ 50GB ಮತ್ತು 100 ಎಸ್‌ಎಂಎಸ್ ಅನ್ನು ಸೇವೆಯನ್ನು ನೀಡಲಿದೆ.

ಜಿಯೋ 799ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌

ಜಿಯೋ 799ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌

ಜಿಯೋ 799ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ 150 GB ಡೇಟಾದೊಂದಿಗೆ ಅನ್ಲಿಮಿಟೆಡ್ ಕರೆ ಮಾಡುವ ಮತ್ತು SMS ಕಳುಹಿಸುವ ಅವಕಾಶವು ದೊರೆಯಲಿದೆ. ಎಂಟರ್ಟೈನ್ಮೆಂಟ್ ಪ್ಲಸ್ ಆಯ್ಕೆಯೊಂದಿಗೆ 200GB ಡೇಟಾ ರೋಲ್ ಓವರ್ ಆಯ್ಕೆಯೂ ದೊರೆಯಲಿದೆ. ಇದಲ್ಲದೇ ಹೆಚ್ಚುವರಿಯಾಗಿ ಎರಡು ಹೆಚ್ಚುವರಿ ಸಿಮ್ಕಾರ್ಡ್ ಫ್ಯಾಮಿಲಿ ಪ್ಲಾನ್ನೊಂದಿಗೆ ಲಭ್ಯವಾಗಲಿದೆ.

ಯಾವುದು ಬೆಸ್ಟ್‌?

ಯಾವುದು ಬೆಸ್ಟ್‌?

ಬಿಎಸ್‌ಎನ್‌ಎಲ್ 798 ರೂ.ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ ಹಾಗೂ ಜಿಯೋ 799ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ ಎರಡು ಟೆಲಿಕಾಂಗಳ ಯೋಜನೆಗಳು ಆಕರ್ಷಕ ಪ್ರಯೋಜನಗಳನ್ನು ಪಡೆದಿವೆ. ಈ ಎರಡು ಪೋಸ್ಟ್‌ಪೇಯ್ಡ್‌ ಯೋಜನೆಗಳು ಡೇಟಾ ಪ್ರಯೋಜನದ ಜೊತೆಗೆ ಎಸ್‌ಎಮ್‌ಎಸ್‌ ಸೌಲಭ್ಯ ಒದಗಿಸಿವೆ. ಜಿಯೋ ಓಟಿಟಿ ಪ್ರಯೋಜನ ಸಹ ನೀಡಿವೆ. ಆದರೆ ಜಿಯೋ ಟೆಲಿಕಾಂ ಟೆಲಿಕಾಂ ಯೋಜನೆ ಉತ್ತಮವಾಗಿ ಕಾಣಿಸುತ್ತವೆ.

Best Mobiles in India

English summary
BSNL loses the race to Reliance Jio because the telco is not providing any OTT subscriptions with its new postpaid plans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+