BSNL: ಏರ್ಟೆಲ್-ಜಿಯೋಗೆ ನಡುಕ.. ಒಂದೇ ರೀಚಾರ್ಜ್ ಸಾಕು.. 6 ತಿಂಗಳು ಉಚಿತ, ಡೇಟಾ ಎಷ್ಟು ಗೊತ್ತಾ?
ಬಿಎಸ್‌ಎನ್‌ಎಲ್ (BSNL) ಬಳಕೆದಾರರಿಗೆ ಇಲ್ಲಿದೆ ಗುಡ್ ನ್ಯೂಸ್. ಒಂದೇ ರೀಚಾರ್ಜ್ ಪ್ಲಾನ್‌ನಲ್ಲಿ 6 ತಿಂಗಳಿಗೆ ಅನ್‌ಲಿಮಿಟೆಡ್ ಕರೆ ಮತ್ತು ಡೇಟಾ ಸಿಗುತ್ತದೆ. ಹೌದು, ಬಿಎಸ್‌ಎನ್‌ಎಲ್ ಕೈಗೆಟಕುವ ಬೆಲೆಗೆ ದೀರ್ಘಕಾಲದ ವ್ಯಾಲಿಡಿಟಿಯ ಯೋಜನೆ ಬೇಕಿದ್ದರೆ ಇದು ನಿಮಗೆ ಉತ್ತಮ ಆಯ್ಕೆಯಾಗಿದೆ. ಈ ಬಿಎಸ್ಎನ್ಎಲ್ 897 ರೂ.ಗಳ ರಿಚಾರ್ಜ್ ಪ್ಲಾನ್‌ನಲ್ಲಿ (BSNL Rs 897 Plan) ಉಚಿತ ಎಸ್‌ಎಂಎಸ್ ಸಹ ಲಭ್ಯವಿದೆ. ಹಾಗಿದ್ರೆ, ಈ ಬಿಎಸ್‌ಎನ್‌ಎಲ್ ರಿಚಾರ್ಜ್ ಪ್ಲಾನ್ ವ್ಯಾಲಿಡಿಟಿ, ಪ್ರಯೋಜನಗಳು ಮತ್ತು ಇನ್ನಿತರ ವಿವರಗಳನ್ನು ತಿಳಿಯೋಣ ಬನ್ನಿ.
ಪ್ರಸ್ತುತ, ಟೆಲಿಕಾಂ ಮಾರುಕಟ್ಟೆಯಲ್ಲಿ ಬಿಎಸ್‌ಎನ್‌ಎಲ್ (BSNL) ಹೆಚ್ಚು ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಇದಲ್ಲದೆ ಜಿಯೋ, ಏರ್‌ಟೆಲ್, ವಿಐ ಮತ್ತು ಬಿಎಸ್‌ಎನ್‌ಎಲ್ ಆಕರ್ಷಕ ರೀಚಾರ್ಜ್ ಯೋಜನೆಗಳೊಂದಿಗೆ ಗ್ರಾಹಕರನ್ನು ಆಕರ್ಷಿಸಲು ನಿರಂತರವಾಗಿ ಕೆಲಸ ಮಾಡುತ್ತಿವೆ. ಅದರಲ್ಲೂ ಖಾಸಗಿ ಆಪರೇಟರ್‌ಗಳೊಂದಿಗೆ ಸ್ಪರ್ಧಿಸಲು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ಒಂದು ವಿಶಿಷ್ಟ ಪ್ಲಾನ್ ಅನ್ನು ಪರಿಚಯಿಸಿದೆ. ನೀವು ಒಂದೇ ರೀಚಾರ್ಜ್ ಯೋಜನೆಯಲ್ಲಿ ಬರೋಬ್ಬರಿ 6 ತಿಂಗಳಿಗೆ ಅನಿಯಮಿತ ಕಾಲ್ ಮತ್ತು ಡೇಟಾದ ಪ್ರಯೋಜನ ಪಡೆಯಬಹುದು.

ಈ ಬಿಎಸ್ಎನ್ಎಲ್ 897 ರೂ.ಗಳ ಪ್ಲಾನ್ ಬಳಕೆದಾರರಿಗೆ ಕೈಗೆಟುಕುವ ಮತ್ತು ತಡೆರಹಿತ ಸಂಪರ್ಕವನ್ನು ಒದಗಿಸುವ ಉದ್ದೇಶ ಹೊಂದಿದೆ. ಈ ಪ್ಲಾನ್‌ನೊಮದಿಗೆ ನೀವು ಒಮ್ಮೆ ರೀಚಾರ್ಜ್ ಮಾಡಿದರೆ ಸಾಕು.. ಅನಿಯಮಿತ ಧ್ವನಿ ಕರೆಗಳು, ಹೆಚ್ಚಿನ ವೇಗದ ಡೇಟಾ ಮತ್ತು ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು. ನೀವು ಪ್ರತಿ ತಿಂಗಳು ರಿಚಾರ್ಜ್ ಮಾಡುವ ತಲೆನೋವಿನಿಂದ ಮುಕ್ತಿ ಪಟಡೆಯಬಹುದು. ಈ 160 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಬಿಎಸ್‌ಎನ್‌ಎಲ್ ಯೋಜನೆ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಮುಂದೆ ಓದಿ.
ಬಿಎಸ್‌ಎನ್‌ಎಲ್ 897 ರೂ. ರಿಚಾರ್ಜ್ ಪ್ಲಾನ್ ವಿವರಗಳು
ಈ ಬಿಎಸ್‌ಎನ್‌ಎಲ್ ಯೋಜನೆಯು 900 ರೂ. ಅಡಿಯಲ್ಲಿ ಬರುವ ಅತ್ಯುತ್ತಮ ರಿಚಾರ್ಜ್ ಯೋಜನೆ ಆಗಿದೆ. ಬಳಕೆದಾರರಿಗೆ ಅನಿಯಮಿತ ಧ್ವನಿ ಕರೆಗಳೊಂದಿಗೆ ಉತ್ತಮ ಡೇಟಾ ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ಒದಗಿಸುತ್ತಿದೆ. ನೀವು ಆಗಾಗ್ಗೆ ರೀಚಾರ್ಜ್ ಮಾಡುವ ತಲೆನೋವಿನಿಂದ ಮುಕ್ತಿ ಪಡೆಯಬಹುದು. ಅಲ್ಲದೆ ಒಂದೇ ರೀಚಾರ್ಜ್‌ನೊಂದಿಗೆ ಬರೋಬ್ಬರಿ 6 ತಿಂಗಳು ಅಥವಾ 180 ದಿನಗಳ ವ್ಯಾಲಿಡಿಟಿಯೊಂದಿಗೆ ಅರ್ಧ ವರ್ಷ ಹಲವು ಪ್ರಯೋಜನಗಳನ್ನು ಪಡೆಯಬಹುದು. ಈ ಬಿಎಸ್ಎನ್ಎಲ್ ಪ್ಲಾನ್ ಹೆಚ್ಚುವರಿ ಪ್ರಯೋಜನಗಳನ್ನು ಸಹ ಹೊಂದಿದೆ.
ಪ್ರತಿ ತಿಂಗಳು 150 ರೂ. ವೆಚ್ಚ
ಬಿಎಸ್ಎನ್ಎಲ್ ಬಳಕೆದಾರರು ಪ್ರತಿ ತಿಂಗಳು ಸುಮಾರು 150 ರೂ. ವೆಚ್ಚ ಮಾಡಬೇಕಿದೆ. ಈ ಯೋಜನೆಯ ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ನೀವು ಉಚಿತ ರಾಷ್ಟ್ರೀಯ ರೋಮಿಂಗ್ ಮತ್ತು ದೇಶಾದ್ಯಂತ ಅನಿಯಮಿತ ವಾಯ್ಸ್ ಕರೆಗಳ ಪ್ರಯೋಜನವನ್ನು ಪಡೆಯಬಹುದು. ವಿಶೇಷವಾಗಿ, ಬಿಎಸ್‌ಎನ್‌ಎಲ್ ಈ ಅತಿ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ತಮ್ಮ ಸೆಕೆಂಡರಿ ಸಿಮ್ ಕಾರ್ಡ್ ದೀರ್ಘಕಾಲದವರೆಗೆ ಸಕ್ರಿಯವಾಗಿಡಲು ಬಯಸುವ ಗ್ರಾಹಕರಿಗೆ ಹೆಚ್ಚು ಸಹಕಾರಿಯಾಗಲಿದೆ.
ಪ್ರತಿದಿನ ಅನ್‌ಲಿಮಿಟೆಡ್ 90GB ಡೇಟಾ ಲಭ್ಯ
ಬಿಎಸ್‌ಎನ್‌ಎಲ್ 897 ರೂ. ರಿಚಾರ್ಜ್ ಪ್ಲಾನ್ ಮೂಲಕ ನೀವು 6 ತಿಂಗಳವರೆಗೆ ಇನ್ ಕಮಿಂಗ್ (ಒಳ ಬರುವ) ಮತ್ತು ಔಟ್ ಗೋಯಿಂಗ್ (ಹೊರ ಹೋಗುವ) ಕಾಲ್‌ಗಳ ಪ್ರಯೋಜನ ಪಡೆಯಬಹುದು. ಇದರ ಜೊತೆಗೆ ಡೇಟಾ ಮತ್ತು ಎಸ್‌ಎಂಎಸ್ ಸೌಲಭ್ಯಗಳನ್ನು ಸಹ ಪಡೆಯಬಹುದು. ಮುಖ್ಯವಾಗಿ, ನವದೆಹಲಿ ಮತ್ತು ಮುಂಬೈನಲ್ಲಿ MTNL ನೆಟ್‌ವರ್ಕ್‌ನಲ್ಲಿ ಉಚಿತ ಕಾಲ್ ಸಹ ಲಭ್ಯವಿದೆ. ಅಲ್ಲದೆ ಈ ರೀಚಾರ್ಜ್ ಪ್ಲಾನ್‌ನಲ್ಲಿ ನೀವು ಪ್ರತಿದಿನ ಅನ್‌ಲಿಮಿಟೆಡ್ (ಮಿತಿಯಿಲ್ಲದೆ) 90GB ಡೇಟಾವನ್ನು ಪಡೆಯಬಹುದು.
ನೀವು ಡೇಟಾ ಖಾಲಿಯಾದ ಬಳಿಕ 40kbps ವೇಗದಲ್ಲಿ ಅನ್‌ಲಿಮಿಟೆಡ್ ಇಂಟರ್ನೆಟ್‌ನ ಪ್ರಯೋಜನ ಪಡೆಯಬಹುದು. ಈ ರೀಚಾರ್ಜ್ ಪ್ಲಾನ್‌ನಲ್ಲಿ ಸಿಗುವ ಇತರೆ ಸೌಭ್ಯಗಳ ಬಗ್ಗೆ ಹೇಳುವುದಾದರೆ, ನೀವು ಪ್ರತಿದಿನ 100 ಉಚಿತ ಎಸ್‌ಎಂಎಸ್ ಸೌಲಭ್ಯಗಳನ್ನು ಪಡೆಯಬಹುದು. ಒಟ್ಟಾರೆ, ಈ ಬಿಎಸ್ಎನ್ಎಲ್ 897 ರೂ. ರಿಚಾರ್ಜ್ ಪ್ಲಾನ್ ಅತಿ ಕಡಿಮೆ ಬೆಲೆಯಲ್ಲಿ ಹಲವು ಪ್ರಯೋಜನಗಳನ್ನು ಒಳಗೊಂಡಿದೆ.


Click it and Unblock the Notifications








