700ರೂ. ಒಳಗೆ ಲಭ್ಯವಿರುವ ಬಿಎಸ್‌ಎನ್‌ಎಲ್‌ನ ಹೊಸ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳು!
ದೇಶಿದ ಬ್ರಾಡ್‌ಬ್ಯಾಂಡ್ ವಲಯದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಟೆಲಿಕಾಂ ಭಿನ್ನ ಯೋಜನೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅವುಗಳಲ್ಲಿ ಕಡಿಮೆ ಬೆಲೆಯ ಬ್ರಾಡ್‌ಬ್ಯಾಂಡ್ ಯೋಜನೆಗಳು ಹೆಚ್ಚು ಗಮನ ಸೆಳೆದಿದ್ದು, ಅವುಗಳು ಹೆಚ್ಚಿನ ಡೇಟಾ ಪ್ರಯೋಜನಗಳನ್ನು ಪಡೆದಿವೆ. ಈ ನಿಟ್ಟಿನಲ್ಲಿ 700ರೂ. ಪ್ರೈಸ್‌ಟ್ಯಾಗ್‌ನ ಒಳಗೆ ಬಿಎಸ್‌ಎನ್‌ಎಲ್‌ನ ಮೂರು ಅಗ್ಗದ ಬ್ರಾಡ್‌ಬ್ಯಾಂಡ್ ಯೋಜನೆಗಳು ಗಮನಸೆಳೆದಿವೆ.

ಹೌದು, ಬಿಎಸ್‌ಎನ್‌ಎಲ್ ಸಂಸ್ಥೆಯು ಹಲವು ಆಕರ್ಷಕ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಒಳಗೊಂಡಿದೆ. ಅವುಗಳಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯ ಇರುವ ಯೋಜನೆಗಳು ಅಧಿಕ ಡಿಮ್ಯಾಂಡ್‌ನಲ್ಲಿವೆ. 50 Mbps ಹಾಗೂ 100 Mbps ವೇಗದ ಬ್ರೌಸಿಂಗ್ ಸೌಲಭ್ಯದ ಪ್ಲ್ಯಾನ್‌ಗಳ ಆಯ್ಕೆಗಳು ಇವೆ. ಇವುಗಳಲ್ಲಿ 50 Mbps ವೇಗದ ಕೆಲವು ಯೋಜನೆಗಳ ತಿಂಗಳ ಶುಲ್ಕ 700ರೂ. ಒಳಗಿವೆ. ಆ ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ.

ತಿಂಗಳಿಗೆ 490ರೂ. ಶುಲ್ಕದ ಬಿಎಸ್‌ಎನ್‌ಎಲ್ CS111 ಮಾಸಿಕ ಯೋಜನೆಯು ಬಳಕೆದಾರರಿಗೆ ಒಟ್ಟು 200GB ವರೆಗೆ ಡೇಟಾ ಸೌಲಭ್ಯ ನೀಡಲಿದೆ. ಈ ಯೋಜನೆಯು 50Mbps ಬ್ರೌಸಿಂಗ್ ವೇಗವನ್ನು ಪಡೆದಿದೆ. ಈ ಯೋಜನೆಗೆ ಚಂದಾದಾರರಾಗಿರುವ ಬಳಕೆದಾರರಿಗೆ ಯಾವುದೇ ವಾಯಿಸ್ ಕರೆ ಸೌಲಭ್ಯವನ್ನು ಸಂಸ್ಥೆಯು ನೀಡುವುದಿಲ್ಲ. 200GB ಡೇಟಾ ಪ್ರಯೋಜನ ಇರಲಿದೆ.

ತಿಂಗಳಿಗೆ 590ರೂ. ಬೆಲೆಯ CS112 ಮಾಸಿಕ ಯೋಜನೆಯು ಬಳಕೆದಾರರಿಗೆ ಒಟ್ಟು 300GB ವರೆಗೆ ಡೇಟಾ ಪ್ರಯೋಜನ ಒದಗಿಸಲಿದೆ. ಈ ಯೋಜನೆಯು ಸಹ 50Mbps ವೇಗದಲ್ಲಿ ಬ್ರೌಸ್ ಮಾಡಲು ಅನುವು ಮಾಡಿಕೊಡುತ್ತದೆ. ನಿಗತಿದಿತ ಡೇಟಾ ಮಿತಿಯನ್ನು ತಲುಪಿದ ನಂತರ ಬ್ರೌಸ್ ವೇಗವನ್ನು 4 ಎಮ್‌ಬಿಪಿಎಸ್‌ಗೆ ಕ್ಯಾಪ್ ಮಾಡುತ್ತದೆ. ಈ ಯೋಜನೆಯಲ್ಲಿಯೂ ವಾಯಿಸ್ ಕರೆ ಸೌಲಭ್ಯ ಅಲಭ್ಯ.

ತಿಂಗಳಿಗೆ 749 ರೂ.ಗಳ ಬೆಲೆಯ ಸೂಪರ್‌ಸ್ಟಾರ್ 300GB ಮಾಸಿಕ ಯೋಜನೆಯು ಬಳಕೆದಾರರಿಗೆ ಒಟ್ಟು 300GB ವರೆಗೆ 50 ಎಮ್‌ಬಿಪಿಎಸ್ ವೇಗ ಬ್ರೌಸಿಂಗ್ ಸೇವೆ ನೀಡುತ್ತದೆ. ಮತ್ತು ನಿಗದಿತ ಮಿತಿಯನ್ನು ತಲುಪಿದ ನಂತರ 2 ಎಮ್‌ಬಿಪಿಎಸ್ ವೇಗದಲ್ಲಿ ಬ್ರೌಸ್ ಮಾಡಲು ಅನುವು ಮಾಡಿಕೊಡುತ್ತದೆ. ಈ ಸೂಪರ್‌ಸ್ಟಾರ್ 300GB ಮಾಸಿಕ ಯೋಜನೆಗೆ ಚಂದಾದಾರರಾಗಿರುವ ಬಳಕೆದಾರರಿಗೆ ಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ಸಹ ಒದಗಿಸಲಾಗಿದೆ.

ಹಾಗೆಯೇ ಬಿಎಸ್‌ಎನ್‌ಎಲ್ PUN 400GB ಮಾಸಿಕ ಯೋಜನೆಯು ಬಳಕೆದಾರರಿಗೆ 400GB ವರೆಗೆ 50 Mbps ವೇಗವನ್ನು ಬ್ರೌಸ್ ಮಾಡಲು ಅನುವು ಮಾಡಿಕೊಡುತ್ತದೆ. ಈ ಯೋಜನೆಯಲ್ಲಿ ನಿಗದಿತ ಡೇಟಾ ಮಿತಿಯನ್ನು ತಲುಪಿದ ನಂತರ 4 Mbps ವೇಗವನ್ನು ಕ್ಯಾಪ್ ಮಾಡುತ್ತದೆ. ಈ ಯೋಜನೆಗೆ ಚಂದಾದಾರರಾಗಿರುವ ಬಳಕೆದಾರರಿಗೆ ಭಾರತದಾದ್ಯಂತ ಅನಿಯಮಿತ ಧ್ವನಿ ಕರೆಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ಈ ಯೋಜನೆಯ ತಿಂಗಳ ಶುಲ್ಕ 690ರೂ.


Click it and Unblock the Notifications








