BSNL ಬಿಡುಗಡೆ ಮಾಡಿರುವ ಹೊಸ ಆಫರ್ ಬಗ್ಗೆ ತಿಳಿಯಲೇ ಬೇಕು..!
ಈ ಆಫರ್‌ನಲ್ಲಿ BSNL ವಾಯ್ಸ್ ಕರೆಗಳು ಮತ್ತು ಡೇಟಾ ಬಳಕೆದಾರರಿಗೆ ದೊರೆಯಲಿದ್ದು, ಜಿಯೋ-ಏರ್‌ಟೆಲ್ ಮಾದರಿಯಲ್ಲಿಯೇ ಈ ಆಫರ್ ಅನ್ನು ವಿನ್ಯಾಸ ಮಾಡಿದೆ ಎನ್ನಲಾಗಿದೆ. ಈಗಾಗಲೇ 100 ಮಿಲಿಯನ್ ಬಳಕೆದಾರರನ್ನು ಹೊಂದಿರುವ BSNL ಇದನ್ನು ಹೆಚ್ಚಿಸಿಕೊಳ್
BSNL ಸದ್ಯ ಮಾರುಕಟ್ಟೆಯಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳೊಂದಿಗೆ ಸ್ಪರ್ಧೆಗೆ ಇಳಿದಿದ್ದು, ಹೆಚ್ಚಿನ ಜನರನ್ನು ಆಕರ್ಷಿಸುವ ಸಲುವಾಗಿ ಹೊಸ ಹೊಸ ಪ್ಲಾನ್‌ಗಳನ್ನು ಲಾಂಚ್ ಮಾಡುತ್ತಿದೆ. ಇದೇ ಮಾದರಿಯಲ್ಲಿ ರೂ.249 ಪ್ಲಾನ್ ಲಾಂಚ್ ಮಾಡಿದೆ.

ಓದಿರಿ: ರೂ.7777ಕ್ಕೆ ಐಫೋನ್ 7 ಮಾರಾಟ: ಏರ್‌ಟೆಲ್ ಪ್ಲಾನ್ ಏನು..?
ಈ ಆಫರ್‌ನಲ್ಲಿ BSNL ವಾಯ್ಸ್ ಕರೆಗಳು ಮತ್ತು ಡೇಟಾ ಬಳಕೆದಾರರಿಗೆ ದೊರೆಯಲಿದ್ದು, ಜಿಯೋ-ಏರ್‌ಟೆಲ್ ಮಾದರಿಯಲ್ಲಿಯೇ ಈ ಆಫರ್ ಅನ್ನು ವಿನ್ಯಾಸ ಮಾಡಿದೆ ಎನ್ನಲಾಗಿದೆ. ಈಗಾಗಲೇ 100 ಮಿಲಿಯನ್ ಬಳಕೆದಾರರನ್ನು ಹೊಂದಿರುವ BSNL ಇದನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ.

ರೂ.249 ಪ್ಲಾನ್:
28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ BSNL ರೂ. 249 -ಪ್ಲಾನ್‌ನಲ್ಲಿ ಗ್ರಾಹಕರು ಉಚಿತ ಕರೆ ಮಾಡುವ ಸೇವೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಇಲ್ಲಿ ಗ್ರಾಹಕರು ಪ್ರತಿ ನಿತ್ಯ ಒಂದು GB ಹೈಸ್ಪೀಡ್ ಡೇಟಾವನ್ನು ಉಚಿತವಾಗಿ ಪಡೆದುಕೊಳ್ಳಲಿದ್ದಾರೆ.

ಕೆಲವೇ ದಿನಗಳು ಮಾತ್ರವೇ ಆಫರ್ ಲಭ್ಯ:
BSNL ನೀಡಿರುವ ಈ ಆಪ್ ಕೆಲವೇ ದಿನಗಳು ಮಾತ್ರವೇ ಲಭ್ಯವಿದ್ದು, ಅಕ್ಟೊಬರ್ 25ಕ್ಕೆ ಈ ಆಫರ್ ಕೊನೆಯಾಗಲಿದೆ. ಅದರ ಒಳಗೆ ರಿಚಾರ್ಜ್ ಮಾಡಿಸಿಕೊಂಡವರಿಗೆ ಮಾತ್ರವೇ ಈ ಆಫರ್ ಲಾಭ ದೊರೆಯಲಿದೆ.

ಜಿಯೋ-ಏರ್‌ಟೆಲ್‌ಗೆ ಸೆಡ್ಡು:
ಇದೇ ಮಾದರಿಯಲ್ಲಿ 28 ದಿನಗಳ ವ್ಯಾಲಿಡಿಟಿಯೊಂದಿಗೆ ಲಭ್ಯವಿರು ಆಫರ್ ಗಳು ಜಿಯೋ ಮತ್ತು ಏರ್‌ಟೆಲ್‌ನಲ್ಲಿಯೂ ಲಭ್ಯವಿದೆ ಎನ್ನಲಾಗಿದೆ. ಈ ಎರಡು ಕಂಪನಿಗಳಿಗೆ ಸೆಡ್ಡು ಹೊಡೆಯುವ ಸಲುವಾಗಿ ಹೊಸ ಆಫರ್ ಬಿಡುಗಡೆ ಮಾಡಲಿದೆ.


Click it and Unblock the Notifications