ರೂ.7777ಕ್ಕೆ ಐಫೋನ್ 7 ಮಾರಾಟ: ಏರ್‌ಟೆಲ್ ಪ್ಲಾನ್ ಏನು..?
ಏರ್‌ಟೆಲ್ ಐಫೋನ್ 7 ಅನ್ನು ರೂ. 7777 ಡೌನ್‌ಪೇಮೆಂಟ್‌ಗೆ ನೀಡಲು ಮುಂದಾಗಿದೆ. ಜೊತೆಗೆ ಏರ್‌ಟೆಲ್ ಪೋಸ್ಟ್ ಪೇಯ್ಡ್ ಪ್ಲಾನ್ ವೊಂದನ್ನು ಸಹ ನೀಡುತ್ತಿದೆ. ಈ ಹಿನ್ನಲೆಯಲ್ಲಿ ಕಡಿಮೆ ಬೆಲೆಗೆ ಐಫೋನ್ ಕೊಳ್ಳಬೇಕು ಎನ್ನುವವರಿಗೆ ಇದು ಉತ್ತಮ ಆಫರ್ ಆಗಿ
ದೇಶಿಯ ಟೆಲಿಕಾಂ ಲೋಕದ ದೈತ್ಯ ಏರ್‌ಟೆಲ್ ನೂತನ ಆನ್‌ಲೈನ್ ಸ್ಟೋರ್ ವೊಂದನ್ನು ಲಾಂಚ್ ಮಾಡಿದ್ದು, ಇಲ್ಲಿ ನೂತನ ಸ್ಮಾರ್ಟ್‌ಫೋನ್‌ಗಳು ಲಭ್ಯವಿದೆ. ಇಲ್ಲಿ ಏರ್‌ಟೆಲ್‌ನೊಂದಿಗೆ ಸ್ಮಾರ್ಟ್‌ಫೋನ್‌ಗಳು ದೊರೆಯಲಿದ್ದು, ಇದೇ ಮಾದರಿಯಲ್ಲಿ ಪ್ರಾರಂಭಿಕ ಕೊಡುಗೆಯಾಗಿ ಐಫೋನ್ 7 ಮೇಲೆ ಭರ್ಜರಿ ಆಫರ್ ಅನ್ನು ನೀಡಲು ಮುಂದಾಗಿದೆ.

ಓದಿರಿ: 'ದೀಪಾವಳಿ ವಿಥ್ ಮಿ' ಸೇಲ್: ಇನಷ್ಟು ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್‌ಗಳು.!!
ಏರ್‌ಟೆಲ್ ಐಫೋನ್ 7 ಅನ್ನು ರೂ. 7777 ಡೌನ್‌ಪೇಮೆಂಟ್‌ಗೆ ನೀಡಲು ಮುಂದಾಗಿದೆ. ಜೊತೆಗೆ ಏರ್‌ಟೆಲ್ ಪೋಸ್ಟ್ ಪೇಯ್ಡ್ ಪ್ಲಾನ್ ವೊಂದನ್ನು ಸಹ ನೀಡುತ್ತಿದೆ. ಈ ಹಿನ್ನಲೆಯಲ್ಲಿ ಕಡಿಮೆ ಬೆಲೆಗೆ ಐಫೋನ್ ಕೊಳ್ಳಬೇಕು ಎನ್ನುವವರಿಗೆ ಇದು ಉತ್ತಮ ಆಫರ್ ಆಗಿದೆ.

EMI ಇಲ್ಲ:
ಈ ಫೋನ್‌ಕೊಂಡ ಮೇಲೆ ಗ್ರಾಹಕರು EMI ಕಟ್ಟಬೇಕಾಗಿಲ್ಲ ಬದಲಿಗೆ ಏರ್‌ಟೆಲ್ ಫೋಸ್ಟ್ ಪೇಯ್ಡ್ ಪ್ಲಾನ್ ಅನ್ನು 24 ತಿಂಗಳುಗಳ ಕಾಲ ಬಳಕೆ ಮಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಪ್ರತಿ ತಿಂಗಳು ರೂ. 2,499 ಪಾವತಿ ಮಾಡಬೇಕಾಗಿದೆ.

ಐಫೋನ್ 7 (32GB ಆವೃತ್ತಿ):
ಇಲ್ಲಿ ಲಭ್ಯವಿರುವುದು ಐಪೋನ್ 7 32GB ಆವೃತ್ತಿಯಾಗುದೆ. ಇಲ್ಲಿ ಗ್ರಾಹಕರು ಪ್ರತಿ ತಿಂಗಳು ಪೋಸ್ಟ್ ಪೇಯ್ಡ್ ಪ್ಲಾನ್ ಗಾಗಿ ರೂ. 2,499 ಪಾವತಿ ಮಾಡಿದರ ಬದಲಾಗಿ ಪ್ರತಿ ತಿಂಗಳು 30 GB 4G ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದಾರೆ.

ಒಂದು ವರ್ಷದ ಗ್ಯಾರೆಂಟಿ ಸಹ ಇದೆ:
ಇದಲ್ಲದೇ ಈ ಫೋನಿನೊಂದಿಗೆ ಫಿಸಿಕಲ್ ಡ್ಯಾಮೆಜ್ ಮತ್ತು ಸೈಬರ್ ಪ್ರೋಟೆಕ್ಷನ್ ಸೇವೆಯನ್ನು ಏರ್‌ಟೆಲ್ ನೀಡುತ್ತಿದೆ. ಇದಕ್ಕಾಗಿ ಎರ್‌ಟೆಲ್ ಸೆಕ್ಯೂಕ್ ಪ್ಯಾಕ್ ನೀಡುತ್ತಿದೆ.


Click it and Unblock the Notifications








