BSNL ನ ಕೈಗೆಟಕುವ ಪ್ರಿಪೇಯ್ಡ್ ಪ್ಲ್ಯಾನ್ ಇವು! ನಿತ್ಯ 2GB ಡೇಟಾ.. 45 ದಿನಗಳ ಮಾನ್ಯತೆ
ಟೆಲಿಕಾಂ ವಲಯದಲ್ಲಿ ಕಡಿಮೆ ಬೆಲೆಯ ಪ್ಲ್ಯಾನ್‌ಗಳನ್ನು ಪರಿಚಯಿಸುವಲ್ಲಿ ಬಿಎಸ್‌ಎನ್‌ಎಲ್ (BSNL) ಅಗ್ರಸ್ಥಾನದಲ್ಲಿದೆ. ಈಕ್ಷಣಕ್ಕೂ ಸಹ ಬಿಎಸ್‌ಎನ್‌ಎಲ್ ಅಗ್ಗದ ಬೆಲೆಯ ಪ್ರಿಪೇಯ್ಡ್ ಪ್ಲ್ಯಾನ್‌ಗಳನ್ನು ಪರಿಚಯಿಸಲು ಉತ್ಸುಕವಾಗಿದೆ. ಈ ನಡುವೆ ಎರಡು ಪ್ಲ್ಯಾನ್‌ಗಳು ಗ್ರಾಹಕರಿಗೆ ಬಹಳ ಇಷ್ಟವಾಗಲಿವೆ.
ಹೌದು, ಟೆಲಿಕಾಂ ವಿಭಾಗದಲ್ಲಿ ಜಿಯೋ ಮತ್ತು ಏರ್‌ಟೆಲ್‌ಗೆ (Jio, Airtel) ಹೋಲಿಸಿದರೆ ಬಿಎಸ್‌ಎನ್‌ಎಲ್ ಪರಿಚಯಿಸಿದ ಪ್ರತಿಯೊಂದು ಪ್ರಿಪೇಯ್ಡ್ ಪ್ಲ್ಯಾನ್ (Prepaid Plan) ಭಾರತದಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ಆದರೆ, ಜಿಯೋ ಹಾಗೂ ಏರ್‌ಟೆಲ್ 5G ಸೇವೆಯನ್ನು ಪರಿಚಯಿಸಲಾಗಿದ್ದು, ಬಿಎಸ್‌ಎನ್‌ಎಲ್ ಪ್ರಸ್ತುತ 4G ಸೇವೆಗಳನ್ನು ಒದಗಿಸಲು ಕೆಲಸ ಮಾಡುತ್ತಿದೆ. ಈ ಸಂದರ್ಭದಲ್ಲಿ ಬಿಎಸ್‌ಎನ್‌ಎಲ್ ಎರಡು ಕೈಗೆಟುಕುವ ಪ್ರಿಪೇಯ್ಡ್ ಪ್ಲ್ಯಾನ್‌ಗಳಲ್ಲಿ ವಿವಿಧ ಪ್ರಯೋಜನಗಳನ್ನು ನೀಡುತ್ತಾ ಬಂದಿದೆ.

ಬಿಎಸ್‌ಎನ್‌ಎಲ್ ನ ವಿಶೇಷ ಪ್ಲ್ಯಾನ್: ಬಿಎಸ್‌ಎನ್‌ಎಲ್ 108 ರೂ.ಗಳು ಮತ್ತು 249 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್‌ಗಳಲ್ಲಿ ಹೆಚ್ಚಿನ ಕೊಡುಗೆಗಳನ್ನು ನೀಡುತ್ತಿದೆ. ಅದರಲ್ಲಿ ಪ್ರಮುಖವಾಗಿ 108ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್ 28 ದಿನಗಳ ಮಾನ್ಯತೆಯನ್ನು ನೀಡಲಿದ್ದು, ಅನಿಯಮಿತ ಕರೆ ಮತ್ತು ನಿತ್ಯವೂ 1GB ಡೇಟಾವನ್ನು ನೀಡುತ್ತದೆ. ಆದರೆ, ಈ ಪ್ಲ್ಯಾನ್‌ನಲ್ಲಿ ಸ್ಥಳೀಯ ಎಸ್‌ಎಮ್‌ಎಸ್‌ಗೆ 80 ಪೈಸೆ ಮತ್ತು ರಾಷ್ಟ್ರೀಯ ಎಸ್‌ಎಮ್‌ಎಸ್‌ಗೆ 1.20 ಪೈಸೆ ಹಣ ನೀಡಬೇಕಿದೆ.
ಇನ್ನು 249ರೂ.ಗಳ ಪ್ಲ್ಯಾನ್ ಕಡೆ ಗಮನಹರಿಸುವುದಾದರೆ ಇದರಲ್ಲಿ ನಿತ್ಯವೂ 2GB ಡೇಟಾ ಪ್ರಯೋಜನ ಸಿಗಲಿದ್ದು, ಈ ಪ್ಲ್ಯಾನ್ ಮಾನ್ಯತೆ 45 ದಿನಗಳಾಗಿದೆ. ಇದರೊಂದಿಗೆ ಅನಿಯಮಿತ ಕರೆ ಪ್ರಯೋಜನಗಳು ಮತ್ತು 100 ದೈನಂದಿನ ಎಸ್‌ಎಮ್‌ಎಸ್ ಸೇವೆಗಳು ಇದರಲ್ಲಿ ಸಿಗಲಿದೆ. ಈ ಮೂಲಕ ಬಿಎಸ್‌ಎನ್‌ಎಲ್ ಗ್ರಾಹಕರು ಕಡಿಮೆ ಹಣದಲ್ಲಿ ಹಚ್ಚಿನ ಸೌಲಭ್ಯ ಪಡೆದುಕೊಳ್ಳವಂತಾಗಿದೆ.

ಇನ್ನು ಬಿಎಸ್‌ಎನ್‌ಎಲ್ ಸಿಮ್ ಅನ್ನು ಚಿಲ್ಲರೆ ವ್ಯಾಪಾರಿಯಿಂದ ಅಥವಾ ಆನ್‌ಲೈನ್ ಮೂಲಕ ಖರೀದಿ ಮಾಡಿದವರಿಗೆ ಮಾತ್ರ ಈ 108 ರೂ.ಗಳು ಮತ್ತು 249 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್ ಸಿಗಲಿದೆ. ಅಂದರೆ, ಈ ಪ್ಲ್ಯಾನ್ ಹೊಸ ಪ್ರಿಪೇಯ್ಡ್ ಗ್ರಾಹಕರಿಗೆ ಮಾತ್ರ ಲಭ್ಯವಿರುತ್ತವೆ ಎಂದು ಹೇಳಲಾಗುತ್ತದೆ. ಇದರೊಂದಿಗೆ ನೀವೇನಾದರೂ ಇನ್ನೂ ಹೆಚ್ಚಿನ ಪ್ಲ್ಯಾನ್‌ಗಳ ಬಗ್ಗೆ ತಿಳಿಯಬೇಕು ಎಂದರೆ ಇಲ್ಲಿವೆ ನೋಡಿ.
269ರೂ.ಗಳ ಪ್ಲ್ಯಾನ್: ಈ ಪ್ಲ್ಯಾನ್‌ನಲ್ಲಿ ನಿತ್ಯವೂ 2GB ಡೇಟಾವನ್ನು ನೀಡಲಿದ್ದು, 28 ದಿನಗಳ ಮಾನ್ಯತೆ ಸಿಗಲಿದೆ. ಇದು ಅನಿಯಮಿತ ಪ್ರಯೋಜನಗಳನ್ನು ನೀಡಲಿದ್ದು, ದೈನಂದಿನ 100 ಎಸ್‌ಎಮ್‌ಎಸ್ ಪ್ರಯೋಜನಗಳನ್ನು ನೀಡಲಿದ್ದು, ಅರೆನಾ ಮೊಬೈಲ್ ಗೇಮಿಂಗ್ ಸೇವೆ, ಬಿಎಸ್‌ಎನ್‌ಎಲ್ ಟ್ಯೂನ್‌ಗಳಿಗೆ ಪ್ರವೇಶ, ಎರೋಸ್ ಮನರಂಜನಾ ಸೇವೆಗಳು, ಹಾರ್ಡಿ ಮೊಬೈಲ್ ಸೇವೆಗಳು ಸೇರಿದಂತೆ ಇತರೆ ಹಲವು ಪ್ರಯೋಜನಗಳನ್ನು ಈ ಪ್ಲ್ಯಾನ್‌ನಲ್ಲಿ ನೀಡಲಾಗುತ್ತದೆ.

298 ರೂ.ಗಳ ಪ್ಲ್ಯಾನ್: ಇನ್ನು ಮತ್ತೊಂದು ಪ್ಲ್ಯಾನ್ ಕಡೆ ಗಮನಹರಿಸುವುದಾದರೆ ಇದು ದಿನಕ್ಕೆ 1GB ಡೇಟಾ ಪ್ರಯೋಜನವನ್ನು ನೀಡಲಿದ್ದು, ಅನಿಯಮಿತ ವಾಯ್ಸ್ ಕರೆ ಸೌಲಭ್ಯ ಮತ್ತು ದಿನಕ್ಕೆ 100 ಎಸ್‌ಎಮ್‌ಎಸ್ ಸೇರಿದಂತೆ ಇತರೆ ಪ್ರಯೋಜನಗಳನ್ನು ಇದರಲ್ಲಿ ಪಡೆದುಕೊಳ್ಳಬಹುದು. ಈ ಪ್ಲ್ಯಾನ್‌ನಲ್ಲಿ ಪ್ರತಿದಿನ ಡೇಟಾ ಮಿತಿ ಮುಗಿದ ನಂತರ ಇಂಟರ್ನೆಟ್ ವೇಗವು 40kbps ಗೆ ಇಳಿಯುತ್ತದೆ. ಇದರ ಹೊರತಾಗಿ, ಎರೋಸ್ ನೌ ಸೇರಿದಂತೆ ಇತರೆ ಪ್ರಯೋಜನಗಳನ್ನು ನೀಡಲಾಗುತ್ತದೆ. ಈ ಪ್ಲ್ಯಾನ್‌ನ ಮಾನ್ಯತೆ 52 ದಿನಗಳಾಗಿದೆ.
299 ರೂ.ಗಳ ಪ್ಲ್ಯಾನ್: ಹಾಗೆಯೇ ಮತ್ತೊಂದು ಪ್ಲ್ಯಾನ್ ಕಡೆ ಗಮನಹರಿಸುವುದಾದರೆ 299 ರೂ.ಗಳ ಪ್ಲ್ಯಾನ್‌ನಲ್ಲಿ 3GBಯ ದೈನಂದಿನ ಡೇಟಾ ಪ್ರಯೋಜನ ಸಿಗಲಿದ್ದು, ಅನಿಯಮಿತ ಕರೆ ಸೌಲಭ್ಯ, 100 ಎಸ್‌ಎಮ್‌ಎಸ್ ಪ್ರಯೋಜನಗಳನ್ನು ನೀಡಲಿದೆ. ಈ ಪ್ಲ್ಯಾನ್‌ನಲ್ಲಿ ಪ್ರತಿದಿನ ಡೇಟಾ ಮಿತಿ ಮುಗಿದ ನಂತರ ಇಂಟರ್ನೆಟ್ ವೇಗವು 40kbps ಗೆ ಇಳಿಯುತ್ತದೆ. ಇದರ ಮಾನ್ಯತೆ ದಿನಗಳು 30.


Click it and Unblock the Notifications








