BSNL ನಿಂದ ಮತ್ತೊಂದು ಬೊಂಬಾಟ್ ಆಫರ್ ಘೋಷಣೆ.!
ಈ ಹಿಂದೆ ಕೇವಲ 60 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದ ಈ ಆಫರ್, ಸದ್ಯ 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
BSNL ಮತ್ತೊಂದು ಹೊಸದೊಂದ ಆಫರ್ ಅನ್ನು ಘೋಷಣೆ ಮಾಡಿದೆ. ಈ ಹಿಂದೆ ಇದ್ದ ಆಫರ್ ಇಷ್ಟು ಸೇರಿಸಿಕೊಡಲು ಮುಂದಾಗಿದೆ. ಅದುವೇ ಸಿಕ್ಸರ್ 666 ಪ್ಲಾನ್. ಈ ಹಿಂದೆಯೇ ಸಿಕ್ಸರ್ 666 ಆಫರ್ ಬಿಡುಗಡೆಯಾಗಿತ್ತು. ಆದರೆ ಈ ಬಾರಿ ಸ್ವಲ್ಪ ಬದಲಾವಣೆಯನ್ನು ಮಾಡಲಾಗಿದೆ.

ಓದಿರಿ: ಆಧಾರ್-ಪ್ಯಾನ್ ಲಿಂಕ್ ಮಾಡಲು ಅವಧಿ ವಿಸ್ತರಣೆ? ಕೊನೆ ದಿನಾಂಕ?
ಈ ಹಿಂದೆ ಕೇವಲ 60 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದ ಈ ಆಫರ್, ಸದ್ಯ 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಅಲ್ಲದೇ ಬೇರೆ ಯಾವ ಕಂಪನಿಗಳು ಈ ಮಾದರಿಯ ಆಫರ್ ನೀಡಿಲ್ಲ ಎನ್ನಲಾಗಿದೆ.

ಪ್ರತಿ ನಿತ್ಯ 2 GB ಡೇಟಾ:
ಸಿಕ್ಸರ್ 666 ಆಫರ್ ನಲ್ಲಿ ಗ್ರಾಹಕರು 90 ದಿನಗಳ ಕಾಲ ಪ್ರತಿ ನಿತ್ಯ 2GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಇದು ಭರ್ಜರಿ ಆಫರ್ ಆಗಿದ್ದು, ಒಟ್ಟು 180 GB ಡೇಟಾ ಬಳಕೆಗೆ ದೊರೆಯಲಿದೆ.

ಸೆಪ್ಟೆಂಬರ್ 1 ರಿಂದ ಜಾರಿ:
ಈ ಆಫರ್ ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ ಎನ್ನಲಾಗಿದೆ. ಅಂದಿನಿಂದಲೇ ಈ ಆಪರ್ ಮಾರುಕಟ್ಟೆಯಲ್ಲಿ ಲಭ್ಯವಿರಲಿದ್ದು, ಗ್ರಾಹಕರು ಈ ಆಫರ್ ಲಾಭವನ್ನು ತಮ್ಮ ದಾಗಿಸಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಖಾಸಗಿ ಕಂಪನಿಗಳು ಈ ರೀತಿಯ ಆಫರ್ ನೀಡಲಿಲ್ಲ ಎನ್ನಲಾಗಿದೆ.


ಹೆಚ್ಚಾದ BSNL ಬಳಕೆದಾರರು:
ಸಿಕ್ಸರ್ 666 ಸೇರಿದಂತೆ ಅನೇಕ ಆಫರ್ ಗಳನ್ನು ನೀಡುತ್ತಿರುವ BSNL ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಕೊಳ್ಳುವ ಹಾದಿಯಲ್ಲಿದೆ ಎನ್ನಬಹುದು. ದಿನದಿಂದ ದಿನಕ್ಕೆ BSNL ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಎನ್ನಲಾಗಿದೆ.


Click it and Unblock the Notifications








