498ರೂ.ಗಳ 'BSNL ಸ್ಟಾರ್‌ ಸದಸ್ಯತ್ವದ' ಪ್ಲ್ಯಾನ್‌ ಲಾಂಚ್!..ಭರ್ಜರಿ ಆಫರ್!

|

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸದ್ಯ ಹಲವು ಆಫರ್‌ಗಳ ಮೂಲಕ ಗಮನ ಸೆಳೆದಿರುವ ಸರ್ಕಾರಿ ಸ್ವಾಮ್ಯದ 'ಬಿಎಸ್‌ಎನ್‌ಎಲ್‌' ಸಂಸ್ಥೆಯು ಮತ್ತೆ ಆಕರ್ಷಕ ಆಫರ್‌ಗಳನ್ನು ಪರಿಚಯಿಸುತ್ತ ಸಾಗಿದೆ. ಇದೀಗ ಸಂಸ್ಥೆಯು 'ಬಿಎಸ್‌ಎನ್‌ಎಲ್‌ ಸ್ಟಾರ್‌ ಮೆಂಬರ್‌ಶಿಪ್‌' ಪ್ಲ್ಯಾನ್‌ ನೀಡಲಾರಂಭಿಸಿದ್ದು, ಅದಕ್ಕಾಗಿ ಹೊಸ ರೀಚಾರ್ಜ್‌ ಪ್ಲ್ಯಾನ್‌ ಬಿಡುಗಡೆ ಮಾಡಿದೆ. ಈ ಸ್ಟಾರ್‌ ಸದಸ್ಯರುಗಳಿಗೆ ಅತ್ಯುತ್ತಮ ಡಿಸ್ಕೌಂಟ್‌ಗಳು ದೊರೆಯಲಿವೆ.

498ರೂ.ಗಳ 'BSNL ಸ್ಟಾರ್‌ ಸದಸ್ಯತ್ವದ' ಪ್ಲ್ಯಾನ್‌ ಲಾಂಚ್!..ಭರ್ಜರಿ ಆಫರ್!

ಹೌದು, ಬಿಎಸ್‌ಎನ್‌ಎಲ್ ಸಂಸ್ಥೆಯು ಹೊಸದಾಗಿ BSNL ಸ್ಟಾರ್‌ ಮೆಂಬರ್‌ಶಿಪ್‌ ನೀಡುತ್ತಿದ್ದು, ಈ ಸೇವೆ ಪಡೆಯಲು ಗ್ರಾಹಕರು 498ರೂ.ಗಳ ಪ್ರೀಪೇಡ್‌ ರೀಚಾರ್ಜ್‌ ಮಾಡಿಕೊಳ್ಳಬೇಕಿದೆ. ಈ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ ಒಟ್ಟು 30GB ಹೈ ಸ್ಪೀಡ್‌ ಡೇಟಾ ಜೊತೆಗೆ ಅನಿಯಮಿತ ಉಚಿತ ಕರೆಗಳು ಮತ್ತು ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನವು ಲಭ್ಯವಾಗಲಿದ್ದು, 30 ದಿನಗಳ ವ್ಯಾಲಿಡಿಟಿ ಅವಧಿಯಯನ್ನು ಹೊಂದಿದೆ.

498ರೂ.ಗಳ 'BSNL ಸ್ಟಾರ್‌ ಸದಸ್ಯತ್ವದ' ಪ್ಲ್ಯಾನ್‌ ಲಾಂಚ್!..ಭರ್ಜರಿ ಆಫರ್!

ಬಿಎಸ್‌ಎನ್‌ಎಲ್ ಸ್ಟಾರ್‌ ಸದಸ್ಯತ್ವದ ರೀಚಾರ್ಜ್‌ನ ಪ್ಲ್ಯಾನ್‌ ಗ್ರಾಹಕರಿಗೆ ಒಟ್ಟು 365 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ, ಆದರೆ ಉಚಿತ ಹೈ ಸ್ಪೀಡ್‌ ಡೇಟಾ, ಉಚಿತ ಕರೆಗಳು, ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನದ ವ್ಯಾಲಿಡಿಟಿ ಅವಧಿಯು 30 ದಿನಗಳು ಮಾತ್ರ ನೀಡಲಾಗಿದೆ. ಹಾಗೆಯೇ ಸ್ಟಾರ್‌ ಸದಸ್ಯರಿಗೆ ವಾಯ್ದೆಯ ಅವಧಿಯಲ್ಲಿ ಮುಂದಿನ ರೀಚಾರ್ಜ್‌ಗಳ ಮೇಲೆ ವಿಶೇಷ ಡಿಸ್ಕೌಂಟ್‌ಗಳು ಸಹ ದೊರೆಯಲಿವೆ.

498ರೂ.ಗಳ 'BSNL ಸ್ಟಾರ್‌ ಸದಸ್ಯತ್ವದ' ಪ್ಲ್ಯಾನ್‌ ಲಾಂಚ್!..ಭರ್ಜರಿ ಆಫರ್!

ಸ್ಟಾರ್‌ ಸದಸ್ಯತ್ವದ ರೀಚಾರ್ಜ್ ಮಾಡಿಸಿದವರಿಗೆ ಬಿಎಸ್‌ಎನ್‌ಎಲ್‌ನ STV 97 ರೀಚಾರ್ಜ್ 76ರೂ.ಗೆ ಲಭ್ಯವಾಗಲಿದ್ದು, STV 477 ಪ್ಲ್ಯಾನ್‌ 407ರೂ.ಗಳಿಗೆ ದೊರೆಯಲಿದೆ ಎನ್ನಲಾಗಿದೆ. ಪ್ರಸ್ತುತ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ವ್ಯಾಪ್ತಿಯಲ್ಲಿ ಮಾತ್ರ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇತರೆ ರಾಜ್ಯಗಳ ವ್ಯಾಪ್ತಿಗೂ ವಿಸ್ತರಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಓದಿರಿ : ವಿಶ್ವದ ಮೊದಲ 64ಎಂಪಿ ಕ್ಯಾಮೆರಾ ಫೋನ್‌ ಬಿಡುಗಡೆಗೆ ಸಜ್ಜಾದ ಶಿಯೋಮಿ!ಓದಿರಿ : ವಿಶ್ವದ ಮೊದಲ 64ಎಂಪಿ ಕ್ಯಾಮೆರಾ ಫೋನ್‌ ಬಿಡುಗಡೆಗೆ ಸಜ್ಜಾದ ಶಿಯೋಮಿ!

ಇತ್ತೀಚಿಗೆ ಏರ್‌ಟೆಲ್‌ ನಡೆಸಿದ ಥಾಂಕ್ಸ್‌ ಲಾಯಲಿಟಿ ಪ್ರೊಗ್ರಾಂನಂತೆ ಬಿಎಸ್‌ಎನ್‌ಎಲ್‌ನ ಈ ಸ್ಟಾರ್‌ ಮೆಂಬರ್‌ಶಿಫ್ ರೀಚಾರ್ಜ್‌ ಆಗಿದೆ. 365 ದಿನಗಳ ವ್ಯಾಲಿಡಿಟಿ ಹೊಂದಿರುವ 498ರೂ.ಗಳ ರೀಚಾರ್ಜ್‌ನಲ್ಲಿ ಗ್ರಾಹಕರಿಗೆ ಸ್ಥಳೀಯ ಮತ್ತು ರಾಷ್ಟ್ರೀಯ ಉಚಿತ ಕರೆಗಳು, ಉಚಿತ ರೋಮಿಂಗ್, 1000 ಉಚಿತ ಲೋಕಲ್ ಮತ್ತು ನ್ಯಾಶನಲ್‌ ಎಸ್‌ಎಮ್‌ಎಸ್‌ಗಳು ಮತ್ತು ಉಚಿತ 30GB ಡೇಟಾ ಪ್ರಯೋಜನಗಳು ಲಭ್ಯವಾಗುವುದು 30 ದಿನಗಳಿಗೆ ಮಾತ್ರ.

ಓದಿರಿ : ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!ಓದಿರಿ : ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!

ಮಿಸ್‌ ಕಾಲ್‌ ಮಾಡಿ ಉಚಿತ 'ಟಾಟಾಸ್ಕೈ ಫೈರ್‌ ಟಿವಿ ಸ್ಟಿಕ್' ಸೇವೆ ಪಡೆಯಿರಿ!

ಮಿಸ್‌ ಕಾಲ್‌ ಮಾಡಿ ಉಚಿತ 'ಟಾಟಾಸ್ಕೈ ಫೈರ್‌ ಟಿವಿ ಸ್ಟಿಕ್' ಸೇವೆ ಪಡೆಯಿರಿ!

ಪ್ರಸ್ತುತ ಟೆಲಿವಿಷನ್ ವೀಕ್ಷಣೆಯಲ್ಲಿ ಬಹಳಷ್ಟು ಬದಲಾಣೆಯನ್ನು ಕಾಣುತ್ತಿದ್ದೆವೆ. ಕೇಬಲ್‌ ಕನೆಕ್ಷನ್‌ನಿಂದ ಟಿವಿ ವೀಕ್ಷಿಸುವ ಪರಂಪರೆ ಬಹುತೇಕ ಮಾಯವಾಗಿದ್ದು, ಈಗ ಇಂಟರ್ನೆಟ್‌ ಆಧಾರಿತ ಟಿವಿ ವೀಕ್ಷಣೆ ಹೆಚ್ಚು ಜನಪ್ರಿಯಗೊಳ್ಳುತ್ತಿವೆ. ಅದರಲ್ಲೂ ಇದೀಗ ಆಂಡ್ರಾಯ್ಡ್‌ ಟಿವಿಗಳ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಜೊತೆಗೆ ವಾಯರ್‌ಲೆಸ್‌ ಕನೆಕ್ಟಿವಿಟಿಯ 'ಫೈರ್‌ ಟಿವಿ ಸ್ಟಿಕ್‌' ಬಳಕೆಯು ಸಹ ಏರುಗತಿಯತ್ತ ಸಾಗಿದೆ. ಈ ದಿಸೆಯಲ್ಲಿ ಟಾಟಾಸ್ಕೈ ಸಂಸ್ಥೆಯು ಗ್ರಾಹಕರಿಗೆ ಗುಡ್‌ನ್ಯೂಸ್‌ ನೀಡಿದೆ.

ಹೌದು, ಡೈರೆಕ್ಟ್‌ ಟು ಹೋಮ್ ಸೇವೆಯ ಜನಪ್ರಿಯ ಟಾಟಾಸ್ಕೈ ಕಂಪನಿಯು ಇತ್ತೀಚಿಗೆ (Binge) ಬಿಂಜ್ ಸೇವೆಯನ್ನು ಆರಂಭಿಸಿದ್ದು, ಈ ಸೇವೆಯಲ್ಲಿ ಹೊಸದಾಗಿ OTT-ಪ್ಲಾಟ್‌ಫಾರ್ಮ್(Over the top media servies) ಮತ್ತು ಲೈವ್‌ ಟಿವಿ ಸೇವೆಯನ್ನು ಒಂದೇ ಪ್ಯಾಕೆಜ್‌ನಲ್ಲಿ ಪರಿಚಯಿಸಲಿದೆ. ಈ ಹೊಸ ಪ್ಲ್ಯಾನಿನಲ್ಲಿ ಟಾಟಾಸ್ಕೈ ಬಳಕೆದಾರರಿಗೆ ಒಂದು ತಿಂಗಳು ಉಚಿತ 'ಅಮೆಜಾನ್ ಫೈರ್‌ ಟಿವಿ ಸ್ಟಿಕ್' (ಟಾಟಾಸ್ಕೈ ಎಡಿಷನ್) ದೊರೆಯಲಿದೆ.

ಒಂದು ಮಿಸ್‌ಕಾಲ್‌ ಮಾಡಿದರೇ ಸಾಕು ಟಾಟಾಸ್ಕೈ ಬಿಂಜ್ ಆಫರ್‌ ಮನೆ ಬಾಗಿಲಿಗೆ ಬರಲಿದೆ. ಈ ವೇಳೆ ಗ್ರಾಹಕರಿಗೆ ಒಂದು ತಿಂಗಳು ಉಚಿತ ಎರಿಸ್‌ ನವ್, ಹಾಟ್‌ಸ್ಟಾರ್‌, ಜೀ5, ಹಂಗಾಮಾ ಪ್ಲೇ, ಸನ್‌ನೆಕ್ಸ್ಟ್ ಸೇರಿದಂತೆ ಮೂರು ತಿಂಗಳು ಅಮೆಜಾನ್ ಪ್ರೈಮ್‌ ವಿಡಿಯೊ ಸೇವೆಗಳು ಲಭ್ಯವಾಗಲಿವೆ. ಹಾಗಾದರೇ ಟಾಟಾಸ್ಕೈ ಈ ಹೊಸ ಸೇವೆಯು ಮತ್ತಿತರ ಯಾವೆಲ್ಲಾ ಪ್ರಯೋಜನಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಟಾಟಾಸ್ಕೈ ಬಿಂಜ್ ಆಫರ್

ಟಾಟಾಸ್ಕೈ ಬಿಂಜ್ ಆಫರ್

D2H ಸೇವೆಯಿಂದ ಜನಪ್ರಿಯತೆ ಗಳಿಸಿರುವ ಟಾಟಾಸ್ಕೈ ಕಂಪನಿಯು ಈಗ ಆನ್‌ಲೈನ್‌ ಟಿವಿ ಸ್ಟ್ರಿಮಿಂಗ್ ಸೇವೆಯಲ್ಲೂ ಮಿಂಚಲೂ ಮುಂದಾಗಿದೆ. ಅದಕ್ಕಾಗಿ ಟಾಟಾಸ್ಕೈ ಬಿಂಜ್ ಆಫರ್‌ ಪರಿಚಯಿಸಿದ್ದು, ಕಂಪನಿಯು ಈ ಆಫರ್‌ನಲ್ಲಿ ಗ್ರಾಹಕರಿಗೆ ಟಾಟಾಸ್ಕೈ ಎಡಿಷನ್ ಇರುವ ಅಮೆಜಾನ್‌ ಫೈರ್‌ ಸ್ಟಿಕ್ ಒಂದು ತಿಂಗಳು ಉಚಿತವಾಗಿ ನೀಡಲು ನಿರ್ಧರಿಸಿದೆ.

ಸೇವೆ ಪಡೆಯುವುದು ಹೇಗೆ

ಸೇವೆ ಪಡೆಯುವುದು ಹೇಗೆ

ಟಾಟಾಸ್ಕೈನ ಬಿಂಜ್ ಆಫರ್‌(Tata Sky Binge) ಪಡೆಯಲು ಗ್ರಾಹಕರು ಈ ನಂಬರ್‌ಗೆ ಮಿಸ್‌ ಕಾಲ್‌ ಮಾಡಿಬೇಕು '8460984609' ಅಥವಾ ಕಸ್ಟಮರ್‌ ಕೇರ್ ನಂಬರ್‌ 1800-208-6633 ಗೆ ಕರೆ ಮಾಡಿ ಆಫರ್‌ಗೆ ಅಪ್ಲೈ ಮಾಡಬೇಕು. 24ಗಂಟೆಗಳಲ್ಲಿ ಕಂಪನಿಯ ಪ್ರತಿನಿಧಿ ಗ್ರಾಹಕರು ನೀಡಿದ ವಿಳಾಸಕ್ಕೆ ಟಾಟಾಸ್ಕೈ ಎಡಿಷನ್ ಇರುವ ಫೈರ್‌ ಟಿವಿ ಸ್ಟಿಕ್ ತಂದು ಉಚಿತವಾಗಿ ನೀಡುವರು.

ಉಚಿತ ಸೇವೆ ಲಭ್ಯ

ಉಚಿತ ಸೇವೆ ಲಭ್ಯ

ಟಾಟಾಸ್ಕೈ ಎಡಿಷನ್ ಇರುವ ಅಮೆಜಾನ್‌ ಫೈರ್‌ ಟಿವಿ ಸ್ಟಿಕ್ ಜೊತೆಗೆ ಗ್ರಾಹಕರಿಗೆ ಒಂದು ತಿಂಗಳು ಉಚಿತ ಎರಿಸ್‌ ನವ್ (Eros Now), ಹಾಟ್‌ಸ್ಟಾರ್‌, ಜೀ5, ಹಂಗಾಮಾ ಪ್ಲೇ, ಸನ್‌ನೆಕ್ಸ್ಟ್ ವಿಡಿಯೊ ಸ್ಟ್ರಿಮಿಂಗ್ ಸೇವೆಗಳ ಪ್ರಯೋಜನಗಳು ದೊರೆಯಲಿವೆ. ಸೇವೆ ಮುಂದುವರಿಸಲೂ ಆ ನಂತರ 249ರೂ.ಗಳ ರೀಚಾರ್ಜ್‌ ಮಾಡಬೇಕು. ಹಾಗೆಯೇ ಮೂರು ತಿಂಗಳು ಉಚಿತ ಅಮೆಜಾನ್ ಪ್ರೈಮ್‌ ವಿಡಿಯೊ ಚಂದಾದಾರಿಕೆ ಸಹ ಲಭ್ಯವಾಗಲಿದೆ.

ಲೈವ್‌ ಟಿವಿ ಚಾನಲ್‌ಗಳು

ಲೈವ್‌ ಟಿವಿ ಚಾನಲ್‌ಗಳು

ಟಾಟಾಸ್ಕೈನ ಬಿಂಜ್ ಆಫರ್‌ ಆಪ್‌ನಲ್ಲಿ ಆನ್‌ಲೈನ್‌ ಜನಪ್ರಿಯ ವಿಡಿಯೊ ಸ್ಟ್ರಿಮಿಂಗ್ ಸೇವೆಗಳನ್ನು ನೋಡಬಹುದಾಗಿದೆ. ಹಾಗೆಯೇ ಇದರೊಂದಿಗೆ ಡಿಟುಎಚ್‌ ಸೇವೆಯಲ್ಲಿ ಲಭ್ಯವಾಗುವ ಲೈವ್‌ ಟಿವಿ ಚಾನಲ್‌ಗಳನ್ನು ಸಹ ಗ್ರಾಹಕರು ವೀಕ್ಷಣೆ ಮಾಡಬಹುದಾಗಿದೆ. ಆರಂಭದ ಉಚಿತ ಸೇವೆ ಮುಗಿದ ಬಳಿಕ ಗ್ರಾಹಕರು ರೀಚಾರ್ಜ್ ಮಾಡಿಕೊಂಡು ಸೇವೆ ಮುಂದುವರೆಸಬಹುದು.

ಓದಿರಿ : ಏರ್‌ಟೆಲ್‌ನ 399ರೂ. ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಹೆಚ್ಚುವರಿ 33GB ಉಚಿತ ಡೇಟಾ! ಓದಿರಿ : ಏರ್‌ಟೆಲ್‌ನ 399ರೂ. ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಹೆಚ್ಚುವರಿ 33GB ಉಚಿತ ಡೇಟಾ!

Best Mobiles in India

English summary
The BSNL Star Membership offers users with discounts on future recharges. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X