ಬಿಎಸ್‌ಎನ್‌ಎಲ್‌ನಿಂದ ಭರ್ಜರಿ ಆಫರ್‌: ಕೇವಲ 36 ರೂ.ಗಳಿಗೆ 1 GB ಡೇಟಾ

Written By:

ದೇಶದ ಟೆಲಿಕಾಂ ವಲಯದಲ್ಲಿ ರಿಲಯನ್ಸ್ ಮಾಲೀಕತ್ವದ ಜಿಯೋ ಬಿಡುಗಡೆ ನಂತರದಲ್ಲಿ ವಿವಿಧ ಕಂಪನಿಗಳ ನಡುವೆ ದರ ಸಮರ ಜೋರಾಗಿ ನಡೆಯುತ್ತಿದ್ದು, ಇವುಗಳೂಂದಿಗೆ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಹ ದರ ಸಮರದಲ್ಲಿ ನಿರತವಾಗಿದ್ದು, ಕೇವಲ 36 ರೂ.ಗಳಿಗೆ 1 GB ಡೇಟಾ ನೀಡಲು ಮುಂದಾಗಿದೆ.

ಬಿಎಸ್‌ಎನ್‌ಎಲ್‌ನಿಂದ ಭರ್ಜರಿ ಆಫರ್‌: ಕೇವಲ 36 ರೂ.ಗಳಿಗೆ 1 GB ಡೇಟಾ

ಓದಿರಿ: ವಿಂಡೋಸ್‌ XP, ವಿಂಡೋಸ್ vista ಬಳಕೆದಾರರೇ ಗಮನಿಸಿ: ನಿಮ್ಮ ಕಂಪ್ಯೂಟರ್‌ನಲ್ಲಿ ಜಿ-ಮೇಲ್ ಒಪನ್ ಆಗಲ್ಲ..!

ಒಟ್ಟಿನಲ್ಲಿ ಗ್ರಾಹಕರನ್ನು ಬಿಟ್ಟು ಕೊಡಲು ಒಪ್ಪದ ಬಿಎಸ್‌ಎನ್ಎಲ್ ತನ್ನ ಕಡೆಗೆ ಹೊಸ ಗ್ರಾಹಕರನ್ನು ಸೆಳೆದುಕೊಳ್ಳಲು 36 ರೂ.ಗಳಿಗೆ 1 GB ಡೇಟಾದ ಹೊಸ ಆಫರ್ ಒಂದನ್ನು ನೀಡಲು ಮುಂದಾಗಿದೆ. ಇದಕ್ಕಾಗಿ ಸ್ಪೆಷಲ್ ಟ್ಯಾರಿಫ್ ಪ್ಲಾನ್ ಅನ್ನು ನೀಡಿದೆ.

ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ 28 ದಿನಗಳ ಬಳಕೆಗೆ 8 GB ಡೇಟಾವನ್ನು 291 ರೂ.ಗಳಿಗೆ ನೀಡುತ್ತಿದ್ದು, ಮೊದಲು ಇದೇ ಬೆಲೆಗೆ ಕೇವಲ 2 GB ಡೇಟಾವನ್ನು ಮಾತ್ರ ನೀಡುತ್ತಿತ್ತು. ಇದಲ್ಲದೇ ಇದರೊಂದಿಗೆ 78 ರೂ.ಗಳಿಗೆ 2 GB ಡೇಟಾ ಆಫರ್ ಸಹ ನೀಡಿದೆ.

ಬಿಎಸ್‌ಎನ್‌ಎಲ್‌ನಿಂದ ಭರ್ಜರಿ ಆಫರ್‌: ಕೇವಲ 36 ರೂ.ಗಳಿಗೆ 1 GB ಡೇಟಾ

ಓದಿರಿ: ಹೆದರಬೇಡಿ..! ಜಿಯೋ ಉಚಿತ ಕೊಡುಗೆ ಕೊನೆಯಾಗುವುದಿಲ್ಲ, ಟ್ರಾಯ್‌ ಕೊಟ್ಟಿದೆ ಗ್ರೀನ್‌ ಸಿಗ್ನಲ್

ಬೇರೆ ಕಂಪನಿಗಳಿಗೆ ಹೊಲಿಸಿದರೆ ಬಿಎಸ್‌ಎನ್ಎಲ್ ಕಡಿಮೆ ಬೆಲೆಗೆ ಇಂಟರ್ನೆಟ್ ಸೇವೆಯನ್ನು ನೀಡುತ್ತಿದೆ, ಬೇರೆ ಕಂಪನಿಗಳು 1 GB ಡೇಟಾವನ್ನು 50 ರೂ.ಗಳಿಗೆ ನೀಡುತ್ತಿದೆ. ಆದರೆ ಬಿಎಸ್‌ಎನ್ಎಲ್ ಎಲ್ಲಾರಿಗಿಂತ ಅತೀ ಕಡಿಮೆ ಬೆಲೆಗೆ ಇಂಟರ್ನೆಟ್ ನೀಡುತ್ತಿದ್ದು, ಈ ಆಫರ್ ಫೆಭ್ರವರಿ 6 ರಿಂದ ಆರಂಭವಾಗಲಿದೆ.

 Read more about:
English summary
BSNL today announced a tariff plan which will offer 1GB data at Rs. 36. to know more visit kananda.gizbot.com
Please Wait while comments are loading...
Opinion Poll

Social Counting