BSNL ಬಿಗ್ ಆಫರ್!..ಬ್ರಾಡ್‌ಬ್ಯಾಂಡ್ ಜೊತೆ ಅಮೆಜಾನ್ ಪ್ರೈಮ್ ಸದಸ್ಯತ್ವ ಉಚಿತ!
ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ (BSNL) ಟೆಲಿಕಾಂ ಸಂಸ್ಥೆಯು ಖಾಸಗಿ ಟೆಲಿಕಾಂ ಕಂಪನಿಗಳಾದ ಜಿಯೋ ಮತ್ತು ಏರ್‌ಟೆಲ್ ನೊಂದಿಗೆ ನೇರ ಪೈಪೋಟಿ ಶುರುಮಾಡಿದ್ದು ತಿಳಿದ ಸಂಗತಿಯೇ ಆಗಿದೆ. ಆದರೆ ಬಿಎಸ್‌ಎನ್‌ಎಲ್ ಈಗ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆಯಲ್ಲಿಯೂ ಖಾಸಗಿ ಕಂಪನಿಗಳಿಗೆ ಸೆಡ್ಡು ಹೊಡೆಯುವಂತ ಭರ್ಜರಿ ಆಫರ್ ನೀಡಿ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದೆ.

ಹೌದು, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಸಂಸ್ಥೆಯು ಈಗ ಸಾಕಷ್ಟು ಅಪ್‌ಡೇಟ್ ಆಗಿದ್ದು, ಬ್ರಾಡ್‌ಬ್ಯಾಂಡ್ ಸೇವೆಯನ್ನು ಆರಂಭಿಸಿ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಇದೀಗ ಬ್ರಾಡ್‌ಬ್ಯಾಂಡ್ ಸೇವೆಯ ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಕಂಪನಿಯು ಹೊಸ ಬ್ರಾಡ್‌ಬ್ಯಾಂಡ್ ಕನೆಕ್ಷನ್‌ನೊಂದಿಗೆ, 999ರೂ.ಗಳ 'ಅಮೆಜಾನ್ ಪ್ರೈಮ್' ಸದಸ್ಯತ್ವ ಉಚಿತವಾಗಿ ನೀಡಲು ಮುಂದಾಗಿದೆ.

ಬಿಎಸ್‌ಎನ್‌ಎಲ್ ಸಂಸ್ಥೆಯ ಬ್ರಾಡ್‌ಬ್ಯಾಂಡ್ ಸೇವೆಯ 499ರೂ. ಪ್ಲ್ಯಾನಿನ ಮೇಲ್ಪಟ್ಟ ಯಾವುದೇ ಪ್ಲ್ಯಾನ್‌ನೊಂದಿಗೆ ಗ್ರಾಹಕರಿಗೆ 'ಅಮೆಜಾನ್ ಪ್ರೈಮ್ ಸದಸ್ಯತ್ವ ಉಚಿತವಾಗಿ ದೊರೆಯಲಿದೆ. ಹಾಗೆಯೇ ಕಂಪನಿಯ DSL, ಭಾರತ ಫೈಬರ್ ಮತ್ತು BBoWiFi ಬ್ರಾಡ್‌ಬ್ಯಾಂಡ್ ಸೇವೆಗಳೊಂದಿಗೆ ಶೇ.25% ಕ್ಯಾಶ್‌ಬ್ಯಾಕ್ ರಿಯಾಯಿತಿ ಸಹ ನೀಡಿದ್ದು, ಈ ಪ್ರಯೋಜನವು ಹಳೆಯ ಮತ್ತು ಹೊಸ ಗ್ರಾಹಕರಿಬ್ಬರಿಗೂ ಲಭ್ಯವಾಗಲಿದೆ.

ಬಿಎಸ್‌ಎನ್‌ಎಲ್ ಸಂಸ್ಥೆಯ (12ತಿಂಗಳು) ಒಂದು ವರ್ಷದ ಅವಧಿಯ ವ್ಯಾಲಿಡಿಟಿಯನ್ನು ಒಳಗೊಂಡಿರುವ ಪ್ಲ್ಯಾನ್‌ಗಳಿಗೆ ವಿಶೇಷ ಕ್ಯಾಶ್‌ಬ್ಯಾಕ್ ಆಫರ್ ನೀಡಿದೆ. ಕಂಪನಿಯ 499ರೂ, ಪ್ಲ್ಯಾನಿಗೆ ಶೇ.15% ಕ್ಯಾಶ್‌ಬ್ಯಾಕ್ ನೀಡಿದ್ದರೇ, 499ರೂ ಮತ್ತು 900ರೂ.ಗಳ ನಡುವಿನ ಪ್ಲ್ಯಾನ್‌ಗಳಿಗೆ ಶೇ.20ರಷ್ಟು ಕ್ಯಾಶ್‌ಬ್ಯಾಕ್ ಮತ್ತು 999ರೂ, ಪ್ಲ್ಯಾನಿಗೆ ಶೇ.25 ಕ್ಯಾಶ್‌ಬ್ಯಾಕ್ ರಿಯಾಯಿತಿ ನೀಡಲಾಗಿದೆ.
ಗ್ರಾಹಕರಿಗೆ ಬಿಎಸ್‌ಎನ್‌ಎಲ್ ಸಂಸ್ಥೆಯು ಬ್ರಾಡ್‌ಬ್ಯಾಂಡ್ ಸೇವೆಯೊಂದಿಗೆ ಅಮೆಜಾನ್ ಪ್ರೈಮ್ ಸದಸ್ಯತ್ವ ಉಚಿತವಾಗಿ ಲಭ್ಯವಾಗಲಿದ್ದು, ಈ ಸದಸ್ಯತ್ವವು ಅಮೆಜಾನ್ ಪ್ರೈಮ್ ವಿಡಿಯೊ, ಅಮೆಜಾನ್ ಮ್ಯೂಸಿಕ್, ಅಮೆಜಾನ್ ಉತ್ಪನ್ನಗಳ ಫಾಸ್ಟ್ ಡೆಲಿವರಿ ಮತ್ತು ಅಮೆಜಾನ್ ಇ ಕಾಮರ್ಸ್ ತಾಣದಲ್ಲಿನ ಕೊಡುಗೆಗಳನ್ನು ಬೇಗನೆ ಆರ್ಡರ್ ಮಾಡುವ ಸೌಲಭ್ಯಗಳು ಸಹ ಗ್ರಾಹಕರಿಗೆ ದೊರೆಯಲಿದೆ.


Click it and Unblock the Notifications








