ಗ್ರಾಹಕರನ್ನು ಸೆಳೆಯಲಿದೆ BSNL 'ಸೂಪರ್ ಸ್ಟಾರ್ 500' ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್!

|

ಬ್ರಾಡ್‌ಬ್ಯಾಂಡ್‌ ವಲಯದಲ್ಲಿ ಈಗ ಬದಲಾವಣೆಯ ಗಾಳಿ ಬೀಸಿದ್ದು, ಟೆಲಿಕಾಂ ಕಂಪನಿಗಳು ಅತ್ಯುತ್ತಮ ವೇಗದ ಇಂಟರ್ನೆಟ್‌ ಜೊತೆಗೆ ಬೆಸ್ಟ್‌ ಪ್ರೈಸ್‌ ಆಫರ್ ಸಹ ಘೋಷಿಸುತ್ತಿವೆ. ಖಾಸಗಿ ಟೆಲಿಕಾಂ ಕಂಪನಿಗಳ ಆಫರ್‌ಗಳ ಅಬ್ಬರದ ನಡುವೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಹಿಂದೆ ಬಿದ್ದಿಲ್ಲ. ಬಿಎಸ್‌ಎನ್‌ಎಲ್‌ ಸಹ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಲೇ ಸಾಗಿದ್ದು, ಇದೀಗ ಸೂಪರ್ ಸ್ಟಾರ್ ಕೊಡುಗೆ ನೀಡಿದೆ.

'ಸೂಪರ್ ಸ್ಟಾರ್ 500'

ಹೌದು, ಬಿಎಸ್‌ಎನ್ಎಲ್ ಸಂಸ್ಥೆಯು ಇದೀಗ ಹೊಸದಾಗಿ 'ಸೂಪರ್ ಸ್ಟಾರ್ 500' ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಬ್ರಾಡ್‌ಬ್ಯಾಂಡ್ ಪ್ಲ್ಯಾನಿನಲ್ಲಿ ಗ್ರಾಹಕರಿಗೆ 500GB ಡೇಟಾ ಸೌಲಭ್ಯ ಸಿಗಲಿದ್ದು, ಇದರೊಂದಿಗೆ ಹಾಟ್‌ಸ್ಟಾರ್ ಆಪ್‌ನ ಚಂದಾದಾರಿಕೆ ಉಚಿತವಾಗಿ ಲಭ್ಯವಾಗಲಿದೆ. ಹಾಗಾದಾರೇ ಬಿಎಸ್‌ಎನ್‌ಎಲ್‌ನ ಹೊಸ ಸೂಪರ್ ಸ್ಟಾರ್ 500 ಪ್ಲ್ಯಾನ್ ಇತರೆ ಪ್ರಯೋಜನಗಳೆನು ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.

ಸೂಪರ್ ಸ್ಟಾರ್ 500

ಸೂಪರ್ ಸ್ಟಾರ್ 500

ಬಿಎಸ್ಎನ್ಎಲ್ ತನ್ನ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳ ಲಿಸ್ಟಿಗೆ ಹೊಸದಾಗಿ 'ಸೂಪರ್ ಸ್ಟಾರ್ 500' ಪ್ಲ್ಯಾನ್ ಅನ್ನು ಸೇರಿಸಿದೆ. 949ರೂ.ಗಳ ಈ ಪ್ಲ್ಯಾನಿನಲ್ಲಿ 50 Mbps ವೇಗದಲ್ಲಿ ಇಂಟರ್ನೆಟ್ ಸೇವೆಯು ಲಭ್ಯವಾಗಲಿದ್ದು, ತಿಂಗಳಿಗೆ 500GB ಡೇಟಾ ಸೌಲಭ್ಯವು ದೊರೆಯಲಿದೆ. ನಿಗದಿತ ತಿಂಗಳ 500GB-FUP ಡೇಟಾ ಮುಗಿದ ಬಳಿಕ 2Mbps ವೇಗದಲ್ಲಿ ಇಂಟರ್ನೆಟ್ ಸೇವೆ ಮುಂದುವರೆಯಲಿದೆ.

ಹಾಟ್‌ಸ್ಟಾರ್ ಆಪ್ ಚಂದಾದಾರಿಕೆ

ಹಾಟ್‌ಸ್ಟಾರ್ ಆಪ್ ಚಂದಾದಾರಿಕೆ

ಬಿಎಸ್‌ಎನ್‌ಎಲ್‌ನ ಸೂಪರ್ ಸ್ಟಾರ್ 500 ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ ನೊಂದಿಗೆ ಹಾಟ್‌ಸ್ಟಾರ್ ಆಪ್ ಚಂದಾದಾರಿಕೆಯು ಗ್ರಾಹಕರಿಗೆ ಲಭ್ಯವಾಗಲಿದೆ. 999ರೂ.ಗಳ ಒಂದು ವರ್ಷದ ಹಾಟ್‌ಸ್ಟಾರ್ ಚಂದಾದಾರಿಕೆ ಇದ್ದಾಗಿದ್ದು, ಇದರೊಂದಿಗೆ ಇತರೆ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನವು ಸಹ ಗ್ರಾಹಕರಿಗೆ ದೊರೆಯಲಿದೆ.

ಸೂಪರ್ ಸ್ಟಾರ್ 300

ಸೂಪರ್ ಸ್ಟಾರ್ 300

ಬಿಎಸ್ಎನ್ಎಲ್ ತನ್ನ ಈ ಮೊದಲು 'ಸೂಪರ್ ಸ್ಟಾರ್ 300' ಪ್ಲ್ಯಾನ್ ಅನ್ನು ಪರಿಚಯಿಸಿತ್ತು. 749ರೂ.ಗಳ ಈ ಪ್ಲ್ಯಾನಿನಲ್ಲಿ 50 Mbps ವೇಗದಲ್ಲಿ ಇಂಟರ್ನೆಟ್ ಸೇವೆಯು ಲಭ್ಯವಾಗಲಿದ್ದು, ತಿಂಗಳಿಗೆ 300GB ಡೇಟಾ ಸೌಲಭ್ಯವು ದೊರೆಯಲಿದೆ. ಹಾಗೂ ಇದರೊಂದಿಗೆ ವಾರ್ಷಿಕ ಹಾಟ್‌ಸ್ಟಾರ್ ಆಪ್ ಚಂದಾದಾರಿಕೆಯು ಸಹ ಗ್ರಾಹಕರಿಗೆ ದೊರೆಯಲಿದೆ.

ಬಿಎಸ್‌ಎನ್‌ಎಲ್‌ 999ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ 999ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ ಜನಪ್ರಿಯ 999ರೂ. ಪ್ಲ್ಯಾನ್ ಅನ್ನು ಕಂಪನಿಯು ಹಿಂಪಡೆದಿದ್ದು, ಈ ಪ್ಲ್ಯಾನ್ ಬದಲಾಗಿ ಇದೀಗ 949ರೂ.ಗಳ 'ಸೂಪರ್ ಸ್ಟಾರ್ 500' ಪರಿಚಯಿಸಿದೆ. ತಿಂಗಳಿಗೆ 500GB ಡೇಟಾ ಪ್ರಯೋಜನ ದೊರೆಯಲಿದೆ ಮತ್ತು ವಾರ್ಷಿಕ ಹಾಟ್‌ಸ್ಟಾರ್ ಆಪ್‌ ಚಂದಾದಾರಿಕೆಯು ಸಿಗಲಿದೆ. ಶೇ.25% ಪರ್ಸೆಂಟ್‌ನಷ್ಟು ಕ್ಯಾಶ್‌ಬ್ಯಾಕ್‌ ಆಯ್ಕೆ ಲಭ್ಯವಾಗಬಹುದು.

Best Mobiles in India

English summary
BSNL has introduced a new plan with 500GB monthly FUP data and up to 50 Mbps speed for Rs 949 monthly rental called the SUPER STAR 500 plan. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X