Subscribe to Gizbot

BSNL ನಿಂದ ಜಿಯೋ-ಏರ್‌ಟೆಲ್‌ಗೆ ಸೆಡ್ಡು ಹೊಡೆಯುವ 180 ದಿನಗಳ ಪ್ಲಾನ್..!

Written By:

ದೇಶಿಯ ಟೆಲಿಕಾಂ ವಲಯದಲ್ಲಿ ಸದ್ಯ ದರ ಸಮರವು ಜೋರಾಗಿ ನಡೆಯುತ್ತಿದ್ದು, ಸರಕಾರಿ ಸ್ವಾಮ್ಯದ BSNL ಸಹ ಈ ಸ್ಪರ್ಧೆಯಲ್ಲಿ ಪ್ರಮುಖ ಪಾತ್ರವನ್ನುವಹಿಸುತ್ತಿದೆ. ಈ ಹಿಂದೆ ಹಲವು ಆಕರ್ಷಕ ಆಫರ್ ನೀಡಿದ್ದ BNSL ಈ ಬಾರಿ ಟೆಲಿಕಾಂ ವಲಯದಲ್ಲಿ ಸಖತ್ ಸದ್ದು ಮಾಡುತ್ತಿರುವ ಜಿಯೋ-ಏರ್‌ಟೆಲ್‌ಗೆ ಸೆಡ್ಡು ಹೊಡೆಯುವ ಪ್ಲಾನ್ ಘೋಷಣೆ ಮಾಡಲಿದೆ.

BSNL ನಿಂದ ಜಿಯೋ-ಏರ್‌ಟೆಲ್‌ಗೆ ಸೆಡ್ಡು ಹೊಡೆಯುವ 180 ದಿನಗಳ ಪ್ಲಾನ್..!

ಓದಿರಿ: 21 ವರ್ಷದ ಈ ಹುಡುಗನಿಗಾಗಿ ಕಿತ್ತಾಡುತ್ತಿರುವ ಗೂಗಲ್ -ಫೇಸ್‌ಬುಕ್..!

BSNL ತನ್ನ ಗ್ರಾಹಕರಿಗೆ ಪ್ರತಿ ನಿತ್ಯ 1 GB ಡೇಟಾವನ್ನು ನೀಡುವುದರೊಂದಿಗೆ ಉಚಿತ ವಾಯ್ಸ್ ಕಾಲಿಂಗ್ ಆಯ್ಕೆಯನ್ನು ನೀಡಲು ಮುಂದಾಗಲಿದೆ. ಅಲ್ಲದೇ ಖಾಸಗಿ ಕಂಪನಿಗಳ ಮಾದರಿಯಲ್ಲಿ ಗ್ರಾಹಕರಿಗೆ ಉಚಿತ SMS ಸೇವೆಯನ್ನು ಈ ಹೊಸ ಪ್ಲಾನ್ ನಲ್ಲಿ ಅಡಕ ಮಾಡಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ. 429 ಪ್ಲಾನ್:

ರೂ. 429 ಪ್ಲಾನ್:

ಈಗಾಗಲೇ ಜಿಯೋ-ಏರ್‌ಟೆಲ್‌ ರೂ.399ಕ್ಕೆ ಒಂದೇ ಬೆಲೆಗೆ ಒಂದೇ ಮಾದರಿಯ ಆಫರ್ ಘೋಷಣೆ ಮಾಡಿವೆ. ಆದರೆ ಈಗ BSNL ರೂ.429 ಆಫರ್ ಜಾರಿ ಮಾಡಿದ್ದು, ಇದರಲ್ಲಿ ಗ್ರಾಹಕರಿಗೆ ಪ್ರತಿ ನಿತ್ಯ 1GB ಡೇಟಾ ಮತ್ತು ಉಚಿತ ಕರೆ ಹಾಗೂ SMS ನೀಡಲಿದೆ.

180 ದಿನ ವ್ಯಾಲಿಡಿಟಿ:

180 ದಿನ ವ್ಯಾಲಿಡಿಟಿ:

BSNL ಹೊಸದಾಗಿ ನೀಡಿರುವ ಈ ಆಫರ್ 180 ದಿನಗ ವ್ಯಾಲಿಡಿಟಿಯನ್ನು ಹೊಂದಿದ್ದು, ಇದರಲ್ಲಿ ಮೊದಲ 90 ದಿನಗಳು ಡೇಟಾ ಮತ್ತು ಕರೆಗಳು ಸಂಪೂರ್ಣವಾಗಿ ಉಚಿತವಾಗಿರಲಿದ್ದು, ಇದಾದ ನಂತರದ 90 ದಿನಗಳಲ್ಲಿ ವಾಯ್ಸ್ ಕಾಲಿಂಗ್ ಮತ್ತು SMSಗಳು ಡಿಸ್ಕೌಂಟ್ ದರದಲ್ಲಿ ದೊರೆಯಲಿದೆ.

Jio Free Phones !! ಜಿಯೋ ಫೋನ್ ಫುಲ್ ಪ್ರೀ: ಇಲ್ಲಿದೆ ಕಂಪ್ಲೀಟ್ ಮಾಹಿತಿ !!
ದೇಶದೆಲ್ಲೇಡೆ ಲಭ್ಯ:

ದೇಶದೆಲ್ಲೇಡೆ ಲಭ್ಯ:

BSNL ನೀಡಿರುವ ಈ ಹೊಸ ಆಫರ್ ದೇಶದ ಎಲ್ಲಾ ಭಾಗದಲ್ಲಿಯೂ ಲಭ್ಯವಿರಲಿದ್ದು, ಯಾರು ಬೇಕಾದರೂ ಬಳಕೆ ಮಾಡಿಕೊಳ್ಳಬಹುದಾಗಿದೆ. ಗ್ರಾಹಕರು ಹೆಚ್ಚಿನ ಬೆಲೆ ತೆತ್ತು ಬೇರೆ ಬೇರೆ ಟೆಲಿಕಾಂ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳುವ ಬದಲು BSNL ಬಳಕೆ ಮಾಡಿಕೊಳ್ಳುವುದು ಸೂಕ್ತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
As per various sources, BSNL is planning to introduce Rs. 429 plan which gives 1GB data and unlimited voice calls to all its customers across the country. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot