ಬಿಎಸ್‌ಎನ್‌ಎಲ್‌ನಿಂದ ಅಚ್ಚರಿಯ ನಡೆ; ದಂಗಾದ ಖಾಸಗಿ ಟೆಲಿಕಾಂಗಳು!

|

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಖಾಸಗಿ ಟೆಲಿಕಾಂಗಳಿಗೆ ನೇರ ಪೈಪೋಟಿ ನೀಡುವ ಹೆಜ್ಜೆಗಳನ್ನು ಹಾಕುತ್ತಾ ಸಾಗಿದೆ. ಸಂಸ್ಥೆಯು ಈಗಾಗಲೇ ಅಧಿಕ ಡೇಟಾ, ವ್ಯಾಲಿಡಿಟಿ ಹಾಗೂ ವಾಯಿಸ್‌ ಕರೆಗಳ ಸೌಲಭ್ಯದ ಯೋಜನೆಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಅದೇ ಹಾದಿಯಲ್ಲಿ ಮುನ್ನಡೆದಿರುವ ಬಿಎಸ್‌ಎನ್‌ಎಲ್‌ ಇದೀಗ ಟ್ರೂಲೀ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನ ನೀಡಲು ಮುಂದಾಗಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಟೆಲಿಕಾಂ ಯೋಜನೆಗಳಲ್ಲಿ ದಿನಕ್ಕೆ 250 ನಿಮಿಷಗಳ ವಾಯಿಸ್‌ ಕರೆ ಮಿತಿ ನೀಡಲಾಗಿದ್ದು, ಆದ್ರೆ ಟೆಲಿಕಾಂ ಈಗ ಸಂಪೂರ್ಣ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯ ಒದಗಿಸಲು ಸಜ್ಜಾಗಿದೆ. ಇನ್ನು ಬಿಎಸ್ಎನ್ಎಲ್ ಆಗಸ್ಟ್ 2019 ರಲ್ಲಿ ವಾಯಿಸ್‌ ಕರೆ FUP ಮಿತಿಯನ್ನು ಪರಿಚಯಿಸಿದ್ದನು ನಾವಿಲ್ಲ ನೆನಪಿಸಿಕೊಳ್ಳಬಹುದು. ಇತ್ತೀಚಿಗಷ್ಟೆ ರಿಲಾಯನ್ಸ್‌ ಜಿಯೋ ಟೆಲಿಕಾಂ ಸಹ ಇತರೆ ನೆಟ್‌ವರ್ಕ್‌ ಕರೆಗಳಿಗೆ ವಿಧಿಸಿದ್ದ ಮಿತಿಯನ್ನು (FUP) ತೆಗೆದು ಹಾಕಿದೆ. ಅದರ ಬೆನ್ನಲ್ಲೇ ಬಿಎಸ್‌ಎನ್‌ಎಲ್‌ನ ಈ ನಡೆ ಅಚ್ಚರಿ ತಂದಿದೆ.

ವಾಯಿಸ್‌

ಬಿಎಸ್‌ಎನ್‌ಎಲ್ ವಾಯಿಸ್‌ ಕರೆ ಮಿತಿಯನ್ನು ತನ್ನ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಚಂದಾದಾರರಿಗೆ ಸೀಮಿತಗೊಳಿಸಿತು. ಈಗ ಸಂಸ್ಥೆಯು ಜಾರಿ ಮಾಡಲಿರುವ ಸಂಪೂರ್ಣ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯವು ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಇಬ್ಬರೂ ಚಂದಾದಾರರಿಗೂ ಅನ್ವಯವಾಗಲಿದೆ ಎನ್ನಲಾಗಿದೆ. ಅನಿಯಮಿತ ಆನ್-ನೆಟ್ ಮತ್ತು ಆಫ್-ನೆಟ್ ವಾಯ್ಸ್ ಕಾಲಿಂಗ್ ಪ್ರಯೋಜನ ದೊರೆಯಲಿದೆ ಎನ್ನಲಾಗಿದೆ. ಬಿಎಸ್‌ಎನ್‌ಎಲ್‌ ಈ ಬದಲಾವಣೆಯನ್ನು ಜನವರಿ 10, 2021 ರಂದು ಎಲ್ಲಾ ವಲಯಗಳಲ್ಲಿ ಜಾರಿಗೆ ತರುವ ಸಾಧ್ಯತೆಗಳಿವೆ.

ನಿರಂತರವಾಗಿ

2016ರಿಂದೀಚೆಗೆ, ರಿಲಯನ್ಸ್ ಜಿಯೋ ಜೊತೆಗೆ ಬಿಎಸ್ಎನ್ಎಲ್ ಪ್ರತಿ ತಿಂಗಳು ಹೊಸ ಗ್ರಾಹಕರನ್ನು ನಿರಂತರವಾಗಿ ಸೇರಿಸುವ ಏಕೈಕ ಟೆಲಿಕಾಂ ಆಗಿ ಗುರುತಿಸಿಕೊಂಡಿದೆ. ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಎರಡೂ ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಕಳೆದುಕೊಂಡಿವೆ. ಬಿಎಸ್ಎನ್ಎಲ್ ಪ್ರಸ್ತುತ 20 ಟೆಲಿಕಾಂ ವಲಯಗಳಲ್ಲಿ 110 ಮಿಲಿಯನ್ ಮೊಬೈಲ್ ಗ್ರಾಹಕರನ್ನು ಹೊಂದಿದೆ ಎಂದು ಹೇಳಲಾಗಿದೆ. ಬಿಎಸ್‌ಎನ್‌ಎಲ್‌ನ ವಾರ್ಷಿಕ ಯೋಜನೆಯ ಪ್ಲ್ಯಾನ್‌ ಬಗ್ಗೆ ಮುಂದೆ ಓದಿರಿ.

ಬಿಎಸ್‌ಎನ್‌ಎಲ್‌ 2,399ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ 2,399ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ ಈ ಪ್ಲ್ಯಾನ್ ಒಟ್ಟು 600 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 250 FUP ನಿಮಿಷಗಳ ಮಿತಿಯಲ್ಲಿ ಉಚಿತ ವಾಯಿಸ್‌ ಕರೆಗಳ ಪ್ರಯೋಜನವನ್ನು ಒದಗಿಸಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದ್ದು, 60 ದಿನಗಳಿಗೆ ಬಿಎಸ್‌ಎನ್‌ಎಲ್‌ ಟ್ಯೂನ್‌ ಸೌಲಭ್ಯವು ಸಿಗಲಿದೆ. ಆದರೆ ಯಾವುದೇ ಡೇಟಾ ಪ್ರಯೋಜನ ಲಭ್ಯ ಇರುವುದಿಲ್ಲ. ಡೇಟಾ ಅಗತ್ಯ ಇರದ ಹಾಗೂ ವಾಯಿಸ್ ಕರೆ ಮತ್ತು ಹೆಚ್ಚಿನ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಪ್ಲ್ಯಾನ್ ಉತ್ತಮ ಆಯ್ಕೆ ಆಗಿದೆ.

ಬಿಎಸ್‌ಎನ್‌ಎಲ್‌ 693ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 693ರೂ.ಪ್ಲ್ಯಾನ್

ಹಾಗೆಯೇ ಬಿಎಸ್‌ಎನ್‌ಎಲ್‌ 693ರೂ. ಡೇಟಾ ಎಸ್‌ಟಿವಿ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 300GB ಡೇಟಾ ಸೌಲಭ್ಯ ಲಭ್ಯವಾಗಲಿದೆ. ಇದು ಡೇಟಾ ಪ್ರೀಪೇಯ್ಡ್ ಯೋಜನೆ ಆಗಿರುವುದರಿಂದ ಯಾವುದೇ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯಗಳು ದೊರೆಯುವುದಿಲ್ಲ.

Best Mobiles in India

English summary
BSNL Telecom Offering Unlimited Voice Calling Without Any Limit.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X