Home
ಸುದ್ದಿಜಾಲ

BSNL ಟೆಲಿಕಾಂನಿಂದ ಅಚ್ಚರಿಯ ಕೊಡುಗೆ; ಗ್ರಾಹಕರು ಫುಲ್‌ ಖುಷ್!

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಹಲವು ಭಿನ್ನ ಯೋಜನೆಗಳ ಮೂಲಕ ಖಾಸಗಿ ಟೆಲಿಕಾಂಗಳಿಗೆ ಫೈಟ್ ನೀಡುತ್ತ ಮುನ್ನಡೆದಿದೆ. ಬಿಎಸ್‌ಎನ್‌ಎಲ್‌ ಟೆಲಿಕಾಂನ ಕೆಲವೊಂದು ಪ್ರೀಪೇಯ್ಡ್‌ ಯೋಜನೆಗಳು ನೇರವಾಗಿ ಜಿಯೋ, ಏರ್‌ಟೆಲ್‌ ಹಾಗೂ ವಿ ಟೆಲಿಕಾಂಗಳಿಗೆ ಟಾಂಗ್ ಕೊಡುವಂತಹ ಪ್ರಯೋಜನ ಪಡೆದಿವೆ. ಹಾಗೆಯೇ ಬಿಎಸ್‌ಎನ್‌ಎಲ್‌ ಕಡಿಮೆ ಬೆಲೆಯ ಯೋಜನೆಗಳನ್ನು ಒಳಗೊಂಡಿದ್ದು, ಆ ಪೈಕಿ ಇದೀಗ ಕೆಲವು ಪ್ಲ್ಯಾನ್‌ಗಳ ದರವನ್ನು ಇಳಿಕೆ ಮಾಡಿದೆ. ಈ ಮೂಲಕ ಗ್ರಾಹಕರಿಗೆ ಖುಷಿ ನೀಡಿದೆ.

ಬಿಎಸ್‌ಎನ್‌ಎಲ್‌

ಹೌದು, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಕೈಗೆಟುಕುವ ಬೆಲೆಯ ಕೆಲವು ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಗಳ ಬೆಲೆಯಲ್ಲಿ ಇಳಿಕೆ ಮಾಡಿದೆ. ಅವುಗಳೆಂದರೇ ಬಿಎಸ್‌ಎನ್‌ಎಲ್‌ 56ರೂ, ಬಿಎಸ್‌ಎನ್‌ಎಲ್‌ 57ರೂ ಮತ್ತು ಬಿಎಸ್‌ಎನ್‌ಎಲ್‌ 58ರೂ. ಆಗಿವೆ. ಇನ್ನು ಈ ಮೂರು ಯೋಜನೆಗಳು ಭಿನ್ನ ಪ್ರಯೋಜನಗಳನ್ನು ಒಳಗೊಂಡಿವೆ. ಬಿಎಸ್‌ಎನ್‌ಎಲ್‌ ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಆಂಧ್ರಪ್ರದೇಶ, ಛತ್ತೀಸ್‌ಗಡ್, ಚೆನ್ನೈ, ಗುಜರಾತ್, ದಮನ್ ಮತ್ತು ದಿಯು, ಹರಿಯಾಣ ಸೇರಿದಂತೆ ಇತರ ವಲಯಗಳಿಗೆ ಈ ಬದಲಾವಣೆಯು ಅನ್ವಯವಾಗುವಂತಿದೆ.

ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌ ಟೆಲಿಕಾಂನ ಈ ಹೊಸ ಪರಿಷ್ಕರಣೆಯಿಂದ ಬಿಎಸ್‌ಎನ್‌ಎಲ್‌ನ 56ರೂ, ಯೋಜನೆಯು 54ರೂ. ಆಗಿದೆ. ಬಿಎಸ್‌ಎನ್‌ಎಲ್‌ 57ರೂ, ಪ್ಲ್ಯಾನ್ 56ರೂ. ಆಗಿದೆ. ಇನ್ನು ಬಿಎಸ್‌ಎನ್‌ಎಲ್‌ 58ರೂ. ಬೆಲೆಯ ಪ್ರೀಪೇಯ್ಡ್‌ ಯೋಜನೆಯು 57ರೂ,ಗೆ ಸಿಗಲಿದೆ. ಇನ್ನು ಈ ಮೂರು ಯೋಜನೆಗಳ ಪ್ರಯೋಝನಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ವ್ಯಾಲಿಡಿಟಿ ಮತ್ತು ಇತರೆ ಸೌಲಭ್ಯಗಳು ಮೊದಲಿನಂತೆ ಇರುತ್ತವೆ.

ಯೋಜನೆಗಳು

ಇನ್ನು ಬಿಎಸ್‌ಎನ್‌ಎಲ್‌ ಬಳಕೆದಾರರು ತಮ್ಮ ಮೊಬೈಲ್‌ನಿಂದ 123 ನಂಬರ್‌ಗೆ ಎಸ್‌ಎಮ್‌ಎಸ್‌ ಕಳುಹಿಸುವ ಮೂಲಕ, ಸಂಸ್ಥೆಯ ಪರಿಷ್ಕೃತ ರೀಚಾರ್ಜ್ ಪ್ಲ್ಯಾನ್‌ಗಳನ್ನು ಪಡೆಯಬಹುದಾಗಿದೆ. ಅಲ್ಲದೇ ಪರಿಷ್ಕೃತ ಯೋಜನೆಗಳು ರೀಚಾರ್ಜ್ ಪೋರ್ಟಲ್‌ಗಳು ಮತ್ತು ಇತರ ಚಾನೆಲ್‌ಗಳ ಮೂಲಕ ಸಹ ಲಭ್ಯ. ಗ್ರಾಹಕರು ಮೈ ಬಿಎಸ್‌ಎನ್‌ಎಲ್‌ ಆಪ್‌ ಅಥವಾ ಅಧಿಕೃತ ಬಿಎಸ್‌ಎನ್‌ಎಲ್‌ ವೆಬ್‌ಸೈಟ್‌ ಮೂಲಕವೂ ಪಡೆಯಬಹುದು.

ಈ ಮೂರು ಪ್ಲ್ಯಾನ್‌ಗಳ ಪ್ರಯೋಜನಗಳು

ಈ ಮೂರು ಪ್ಲ್ಯಾನ್‌ಗಳ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ ಅಗ್ಗದ ಬೆಲೆಯ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಲಿಸ್ಟ್‌ನಲ್ಲಿರುವ ಈ ಯೋಜನೆಗಳು ಭಿನ್ನ ಪ್ರಯೋಜನ ಪಡೆದಿವೆ. ಬಿಎಸ್‌ಎನ್‌ಎಲ್‌ನ 54ರೂ. ಯೋಜನೆಯು 5,600 ಸೆಕೆಂಡ್‌ಗಳ ಟಾಕ್‌ಟೈಮ್ ಹೊಂದಿದ್ದು, 8 ದಿನಗಳ ವ್ಯಾಲಿಡಿಟಿ ಪಡೆದಿದೆ. ಹಾಗೆಯೇ ಬಿಎಸ್‌ಎನ್‌ಎಲ್‌ನ 56ರೂ, ಪ್ಲ್ಯಾನ್ 10GB ಡೇಟಾ ಜೊತೆಗೆ ಜಿಂಗ್ ಎಂಟರ್ಟೈನಮೆಂಟ್ ಮ್ಯೂಸಿಕ್ ಹೊಂದಿದೆ. ಜೊತೆಗೆ 10 ದಿನಗಳ ವ್ಯಾಲಿಡಿಟಿ ಪಡೆದಿದೆ. ಇನ್ನು ಬಿಎಸ್‌ಎನ್‌ಎಲ್‌ನ 57ರೂ, ಪ್ಲ್ಯಾನ್ ಅಂತರಾಷ್ಟ್ರೀಯ ರೋಮಿಂಗ್ ಪ್ರೀಪೇಯ್ಡ್‌ ಪ್ಯಾಕ್ ಆಗಿದ್ದು, 30 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಹಾಗೆಯೇ ಸಂಸ್ಥೆಯ ಇತರೆ ಕೆಲವು ಜನಪ್ರಿಯ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಬಿಎಸ್‌ಎನ್‌ಎಲ್‌ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 599ರೂ. ಪ್ರೀಪೇಯ್ಡ್‌ ಯೋಜನೆಯಲ್ಲಿ ಪ್ರತಿದಿನ 5GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಹಾಗೂ ಅನಿಯಮಿತ ವಾಯಿಸ್ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಒಟ್ಟು ಪೂರ್ಣ ಅವಧಿಯ ವ್ಯಾಲಿಡಿಟಿಯಲ್ಲಿ ಒಟ್ಟು 450 GB ಡೇಟಾ ಪ್ರಯೋಜನ ದೊರೆಯುತ್ತದೆ. ಹೆಚ್ಚುವರಿಯಾಗಿ ಜಿಂಗ್ ಸೇವೆ ಲಭ್ಯವಾಗಲಿದೆ.

ಬಿಎಸ್‌ಎನ್‌ಎಲ್‌ 2399ರೂ. ವಾರ್ಷಿಕ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 2399ರೂ. ವಾರ್ಷಿಕ ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ ಈ ಪ್ಲ್ಯಾನ್ ಒಟ್ಟು 600 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 250 FUP ನಿಮಿಷಗಳ ಮಿತಿಯಲ್ಲಿ ಉಚಿತ ವಾಯಿಸ್‌ ಕರೆಗಳ ಪ್ರಯೋಜನವನ್ನು ಒದಗಿಸಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದ್ದು, 60 ದಿನಗಳಿಗೆ ಬಿಎಸ್‌ಎನ್‌ಎಲ್‌ ಟ್ಯೂನ್‌ ಸೌಲಭ್ಯವು ಸಿಗಲಿದೆ. ಆದರೆ ಯಾವುದೇ ಡೇಟಾ ಪ್ರಯೋಜನ ಲಭ್ಯ ಇರುವುದಿಲ್ಲ. ಡೇಟಾ ಅಗತ್ಯ ಇರದ ಹಾಗೂ ವಾಯಿಸ್ ಕರೆ ಮತ್ತು ಹೆಚ್ಚಿನ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಪ್ಲ್ಯಾನ್ ಉತ್ತಮ ಆಯ್ಕೆ ಆಗಿದೆ.

ಬಿಎಸ್‌ಎನ್‌ಎಲ್‌ 499ರೂ. ಪ್ರಿಪೇಯ್ಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 499ರೂ. ಪ್ರಿಪೇಯ್ಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ ಈ SVT 499ರೂ. ಪ್ಲ್ಯಾನ್ ದೀರ್ಘಾವಧಿಯ ಯೋಜನೆ ಆಗಿದ್ದು, ಒಟ್ಟು 90 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಿದ್ದು, ಒಟ್ಟು ಪೂರ್ಣ ಅವಧಿಗೆ 180GB ಡೇಟಾ ಸಿಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಹ ದೊರೆಯಲಿದೆ. ಹಾಗೆಯೇ ಡೈಲಿ 100 ಎಸ್‌ಎಮ್‌ಎಸ್‌ ಸಹ ಸಿಗುತ್ತದೆ. ಹೆಚ್ಚುವರಿಯಾಗಿ ಬಿಎಸ್‌ಎನ್‌ಎಲ್‌ ಟ್ಯೂನ್ ಮತ್ತು Zing ಪ್ರಯೋಜನ ಲಭ್ಯ.

Best Mobiles in India

English summary
BSNL Telecom Revises Rs. 56, Rs. 57, Rs. 58 Recharge Plans: Details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+