BSNLನ ಆಕರ್ಷಕ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳು!.ಆರಂಭಿಕ ಪ್ಲ್ಯಾನ್ 349ರೂ!
ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಗಳು ಬ್ರಾಡ್‌ಬ್ಯಾಂಡ್‌ಯಲ್ಲಿ ಹಲವು ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಲಿದ್ದು, ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತ ಸಾಗಿವೆ. ಜಿಯೋ, ಏರ್‌ಟೆಲ್, ವೊಡಾಫೋನ್, ಹಾತ್‌ವೇ ಸೇರಿದಂತೆ ಇತರೆ ಖಾಸಗಿ ಸಂಸ್ಥೆಗಳಿಗೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಂಸ್ಥೆಯು ಕಠಿಣ ಪೈಪೋಟಿ ನೀಡುತ್ತ ಮುನ್ನುಗುತ್ತಿದೆ. ಬಿಎಸ್‌ಎನ್‌ಎಲ್ ವಿವಿಧ ವಿಭಿನ್ನ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳಿಂದ ಗ್ರಾಹಕರನ್ನು ಸೆಳೆಯುತ್ತಿದೆ.

ಹೌದು, ಬಿಎಸ್‌ಎನ್‌ಎಲ್ ಈಗಾಗಲೇ ಬ್ರಾಡ್‌ಬ್ಯಾಂಡ್ ವಲಯದಲ್ಲಿ ಮಿಂಚಿನ ಸಂಚಲಯ ಹುಟ್ಟುಹಾಕಿದ್ದು, ಆರಂಭಿ 349ರೂ. ಪ್ಲ್ಯಾನ್‌ನಿಂದ 16,999ರೂ.ಗಳ ವರೆಗೂ ವಿವಿಧ ಪ್ಲ್ಯಾನ್‌ಗಳನ್ನು ಒಳಗೊಂಡಿದೆ. ಇಂಟರ್ನೆಟ್ ವೇಗವು ಅಧಿಕ ಎಮ್‌ಬಿಪಿಎಸ್ ವೇಗದಲ್ಲಿದ್ದು, ಕೇಲವು ಪ್ಲ್ಯಾನ್‌ಗಳಿಗೆ ಕಾಂಪ್ಲಿಮೆಂಟರಿಯಾಗಿ ಅಮೆಜಾನ್ ಪ್ರೈಮ್ ಸೇವೆಯ ಸದಸ್ಯತ್ವವನ್ನು ಆಫರ್ ಮಾಡುತ್ತದೆ. ಹಾಗಾದರೇ ಬಿಎಸ್‌ಎನ್‌ಎಲ್‌ನ ಆಕರ್ಷಕ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಭಾರತ್ ಬ್ರಾಡ್‌ಬ್ಯಾಂಡ್ 349ರೂ. ಪ್ಲ್ಯಾನ್
ಬಿಎಸ್‌ಎನ್‌ಎಲ್‌ನ ಭಾರತ್ ಬ್ರಾಡ್‌ಬ್ಯಾಂಡ್‌ನ ಎಂಟ್ರಿ ಲೆವೆಲ್ ಪ್ಲ್ಯಾನ್ ಕೇವಲ 349ರೂ.ಗಳಾಗಿದ್ದು, ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ಲಭ್ಯವಾಗಲಿದೆ. 8 Mbps ವೇಗದಲ್ಲಿ ಇಂಟರ್ನೆಟ್ ಬಳಕೆಗೆ ದೊರೆಯಲಿದ್ದು, ನಿಗದಿತ ಡೇಟಾ ಮುಗಿದ ಬಳಿಕ 1 Mbps ವೇಗದಲ್ಲಿ ಬಳಕೆಗೆ ಲಭ್ಯವಾಗಲಿದೆ. ನೈಟ್ ಕಾಲಿಂಗ್ ಸೌಲಭ್ಯ ಇದ್ದು, ಬಿಎಸ್‌ಎನ್‌ಎಲ್ ನಿಂದ ಬಿಎಸ್‌ಎನ್‌ಎಲ್ ಕರೆಗಳು ಉಚಿತವಾಗಿರಲಿವೆ. ಇತರೆ ನೆಟವರ್ಕ್‌ಗೆ ಸುಮಾರು 300ರೂ. ಮೌಲ್ಯದ ಕರೆಯ ಸೌಲಭ್ಯ ಸಿಗಲಿದೆ.

ಭಾರತ್ ಬ್ರಾಡ್‌ಬ್ಯಾಂಡ್ 599ರೂ. ಪ್ಲ್ಯಾನ್
ಬಿಎಸ್‌ಎನ್‌ಎಲ್‌ನ ಈ 599ರೂ. ಪ್ಲ್ಯಾನಿನಲ್ಲಿ ಪ್ರತಿದಿನ 4GB ಡೇಟಾ ಸೌಲಭ್ಯ ಲಭ್ಯವಾಗಲಿದೆ. 10 Mbps ವೇಗದಲ್ಲಿ ಇಂಟರ್ನೆಟ್ ಬಳಕೆಗೆ ದೊರೆಯಲಿದ್ದು, ನಿಗದಿತ ಡೇಟಾ ಮುಗಿದ ಬಳಿಕ 2 Mbps ವೇಗದಲ್ಲಿ ಬಳಕೆಗೆ ಲಭ್ಯವಾಗಲಿದೆ. ಬಿಎಸ್‌ಎನ್‌ಎಲ್ ನಿಂದ ಬಿಎಸ್‌ಎನ್‌ಎಲ್ ಕರೆಗಳು ಉಚಿತವಾಗಿರಲಿವೆ. ಇತರೆ ನೆಟವರ್ಕ್‌ಗೆ ಸುಮಾರು 700ರೂ. ಮೌಲ್ಯದ ಕರೆಯ ಸೌಲಭ್ಯ ಸಿಗಲಿದೆ.

ಭಾರತ್ ಬ್ರಾಡ್‌ಬ್ಯಾಂಡ್ 899ರೂ.ಪ್ಲ್ಯಾನ್
ಬಿಎಸ್‌ಎನ್‌ಎಲ್‌ನ ಈ 899ರೂ. ಪ್ಲ್ಯಾನಿನಲ್ಲಿ ಪ್ರತಿದಿನ 12GB ಡೇಟಾ ಸೌಲಭ್ಯ ಲಭ್ಯವಾಗಲಿದೆ. 12 Mbps ವೇಗದಲ್ಲಿ ಇಂಟರ್ನೆಟ್ ಬಳಕೆಗೆ ದೊರೆಯಲಿದ್ದು, ನಿಗದಿತ ಡೇಟಾ ಮುಗಿದ ಬಳಿಕ 2 Mbps ವೇಗದಲ್ಲಿ ಬಳಕೆಗೆ ಲಭ್ಯವಾಗಲಿದೆ. ಬಿಎಸ್‌ಎನ್‌ಎಲ್ ನಿಂದ ಬಿಎಸ್‌ಎನ್‌ಎಲ್ ಕರೆಗಳು ಉಚಿತವಾಗಿರಲಿವೆ. ಇತರೆ ನೆಟವರ್ಕ್‌ಗಳಿಗೂ ಉಚಿತ ಕರೆಗಳ ಸೌಲಭ್ಯ ಇದೆ.

ಭಾರತ್ ಬ್ರಾಡ್‌ಬ್ಯಾಂಡ್‌ನ ಜನಪ್ರಿಯ ಪ್ಲ್ಯಾನ್‌ಗಳು
ಎಸ್‌ಎನ್‌ಎಲ್ ಭಾರತ್ ಬ್ರಾಡ್‌ಬ್ಯಾಂಡ್‌ನ ಇತರೆ ಜನಪ್ರಿಯ ಪ್ಲ್ಯಾನ್‌ಗಳು ಇಂತಿವೆ. 1,277ರೂ ಪ್ಲ್ಯಾನ್‌ನಲ್ಲಿ ತಿಂಗಳಿಗೆ ಒಟ್ಟು 750GB ಡೇಟಾ ಸಿಗಲಿದೆ. ಹಾಗೆಯೇ 2,499ರೂ. ಪ್ಲ್ಯಾನ್‌ನಲ್ಲಿ ಪ್ರತಿದಿನ 40GB ಡೇಟಾ ಲಭ್ಯವಾಗಲಿದೆ. 9,999ರೂ. ಪ್ಲ್ಯಾನ್ ಸಂಸ್ಥೆಯ ತಿಂಗಳ ದುಬಾರಿ ಪ್ಲ್ಯಾನ್ ಆಗಿ ಎನಿಸಿಕೊಂಡಿದ್ದು, ಪ್ರತಿದಿನ ಒಟ್ಟು 120GB ಡೇಟಾ ಒಳಗೊಂಡಿದೆ.

ಭಾರತ್ ಫೈಬರ್ ಮತ್ತು ಜಿಯೋ ಫೈಬರ್
ಜಿಯೋ 1,299ರೂ.ಗಳಿಗೆ 500GB ಡೇಟಾ ನೀಡಲಿದೆ ಜೊತೆಗೆ 250GB ಡೇಟಾ ಸಹ ಸಿಗಲಿದೆ. ಹಾಗೆಯೇ 2,499ರೂ. ಪ್ಲ್ಯಾನ್‌ನಲ್ಲಿ 1,250GB ಡೇಟಾ ದೊರೆಯಲಿದ್ದು, ಹೆಚ್ಚುವರಿಯಾಗಿ 250GB ಸಿಗಲಿದೆ. ಇದರೊಂದಿಗೆ ಜಿಯೋ ಆಪ್, ಜಿಯೋ ಟಿವಿ ಮತ್ತು ಅನಿಯಮಿತ ರಾಷ್ಟ್ರೀಯ ಹಾಗೂ ಸ್ಥಳೀಯ ಕರೆಗಳು ಉಚಿತವಾಗಿ ಲಭ್ಯವಾಗಲಿವೆ. ಬಿಎಸ್‌ಎನ್‌ಎಲ್‌ನ 1,999ರೂ ಪ್ಲ್ಯಾನ್ ಜಿಯೋದ 2,499ರೂ ಪ್ಲ್ಯಾನ್‌ಗೆ ಫೈಟ್ ನೀಡಲಿದೆ.


Click it and Unblock the Notifications








