ಬಿಎಸ್‌ಎನ್‌ಎಲ್: ಲ್ಯಾಂಡ್‌ಲೈನ್‌ನಲ್ಲೇ ಉಚಿತ ಮೊಬೈಲ್ ಕರೆ

By Shwetha
|

ಬಿಎಸ್‌ಎನ್‌ಎಲ್ ಮೊಬೈಲ್ ಚಂದಾದಾರರು ಸದ್ಯದಲ್ಲಿಯೇ ಉಚಿತ ಕರೆ ಮಾಡುವಿಕೆ ವ್ಯವಸ್ಥೆಯನ್ನು ತಮ್ಮ ಲ್ಯಾಂಡ್‌ಲೈನ್ ಫೋನ್‌ಗಳಲ್ಲಿ ಪಡೆದುಕೊಳ್ಳಲಿದ್ದಾರೆ. ಇದು ಮೊಬೈಲ್‌ನ ಜೊತೆಗೆ ಫಿಕ್ಸ್ ಮಾಡಿರುವ ಲೈನ್ ಕನೆಕ್ಶನ್‌ಗಳನ್ನು ಶಾಶ್ವತವಾಗಿ ಉಳಿಸಲಿದೆ.

ಓದಿರಿ: ಟೆಲಿಕಾಮ್ ಸಂಸ್ಥೆ ಬಿಎಸ್‌ಎನ್ಎಲ್ ಸಂಕಷ್ಟದಲ್ಲಿ!!!

ದೀಪಾವಳಿಯ ನಂತರ ಮೊಬೈಲ್ ಒಮ್ಮುಖಗೊಳಿಸುವಿಕೆ ಪ್ರಕ್ರಿಯೆಯನ್ನು ಜಾರಿಗೆ ತರುವ ಹಂತದಲ್ಲಿದ್ದೇವೆ. ಇದು ಗ್ರಾಹಕರಿಗೆ ಮೊಬೈಲ್ ಫೋನ್‌ಗಳಲ್ಲಿ ಮೌಲ್ಯ ಆಧಾರಿತ ಸೇವೆಗಳನ್ನು ಸಕ್ರಿಯಗೊಳಿಸಲಿದೆ, ರಾತ್ರಿ ವೇಳೆಯ ಉಚಿತ ಕರೆಗಳನ್ನು ಒದಗಿಸಲಿದೆ ಇದಕ್ಕಾಗಿ ಬಳಕೆದಾರರು ಲ್ಯಾಂಡ್‌ಲೈನ್ ಚಂದಾದಾರಿಕೆ ಅಥವಾ ಇತರ ಆಧುನಿಕ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾಗುತ್ತದೆ ಎಂದು ಬಿಎಸ್ಎನ್‌ಎಲ್ ಚೇರ್‌ಮೆನ್ ಹಾಗೂ ಎಮ್‌ಡಿ ಅನುಪಮ್ ಶ್ರೀವಾಸ್ತವ ತಿಳಿಸಿದ್ದಾರೆ.

ಮೊಬೈಲ್ ಮತ್ತು ಲ್ಯಾಂಡ್‌ಲೈನ್

ಮೊಬೈಲ್ ಮತ್ತು ಲ್ಯಾಂಡ್‌ಲೈನ್

ಈ ವ್ಯವಸ್ಥೆಯಡಿಯಲ್ಲಿ ಗ್ರಾಹಕರಿಗೆ ಮೊಬೈಲ್ ಮತ್ತು ಲ್ಯಾಂಡ್‌ಲೈನ್ ಅನ್ನು ಸಂಪರ್ಕಪಡಿಸಬಹುದು.

ಸಿಂಕ್ ಮಾಡುವ ಸೌಲಭ್ಯ

ಸಿಂಕ್ ಮಾಡುವ ಸೌಲಭ್ಯ

ಎರಡು ಖಾತೆಗಳ ನಡುವೆ ಸಿಂಕ್ ಮಾಡುವ ಸೌಲಭ್ಯವನ್ನು ಇದು ಕಲ್ಪಿಸಲಿದ್ದು, ತಮ್ಮ ಲ್ಯಾಂಡ್‌ಲೈನ್ ಕರೆಗಳನ್ನು ಮೊಬೈಲ್‌ಗಳಲ್ಲಿ ಸ್ವೀಕರಿಸುವ ವಿಶೇಷ ಸೇವೆ ಇದಾಗಿದೆ

ಲ್ಯಾಂಡ್‌ಲೈನ್ ಸೇವೆಗಳನ್ನು ಆಧುನಿಕಗೊಳಿಸಲು

ಲ್ಯಾಂಡ್‌ಲೈನ್ ಸೇವೆಗಳನ್ನು ಆಧುನಿಕಗೊಳಿಸಲು

ತನ್ನ ಲ್ಯಾಂಡ್‌ಲೈನ್ ಸೇವೆಗಳನ್ನು ಆಧುನಿಕಗೊಳಿಸಲು ಬಿಎಸ್ಎನ್‌ಎಲ್ 400 ಕೋಟಿಗಳನ್ನು ಹೂಡಿಕೆ ಮಾಡಿದೆ.

ಬಳಕೆದಾರ ಆಧಾರ

ಬಳಕೆದಾರ ಆಧಾರ

ಏಪ್ರಿಲ್‌ನಲ್ಲಿ ಸಂಸ್ಥೆ ಸಂಪೂರ್ಣ ಬಳಕೆದಾರ ಆಧಾರದಲ್ಲಿ ಆರನೇ ಸ್ಥಾನಕ್ಕೆ ಕುಸಿದಿತ್ತು.

ಮಾಸಿಕ ಬಳಕೆದಾರರ ಸಂಖ್ಯೆ

ಮಾಸಿಕ ಬಳಕೆದಾರರ ಸಂಖ್ಯೆ

ಆಗಸ್ಟ್ ಕೊನೆಯಲ್ಲಿ, ಬಿಎಸ್‌ಎನ್ಎಲ್‌ನ ಸಂಪೂರ್ಣ ಬಳಕೆದಾರ ಮೊತ್ತ 7.8 ಕೋಟಿಯಾಗಿತ್ತು. ದೀರ್ಘ ಅವಧಿಯ ನಂತರ, ಬಿಎಸ್‌ಎನ್‌ಎಲ್ ಜುಲೈ ಮತ್ತು ಆಗಸ್ಟ್‌ 2015 ರಲ್ಲಿ ಮಾಸಿಕ ಬಳಕೆದಾರರ ಸಂಖ್ಯೆಯನ್ನು ಆಧರಿಸಿ ಟಾಪ್ 5 ಮೊಬೈಲ್ ಪ್ಲೇಯರ್‌ಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.

ಉಚಿತ ರಾತ್ರಿ ಕರೆ

ಉಚಿತ ರಾತ್ರಿ ಕರೆ

ತನ್ನ ಲ್ಯಾಂಡ್‌ಲೈನ್ ಬಳಕೆದಾರರನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿಯೇ ಉಚಿತ ರಾತ್ರಿ ಕರೆಗಳನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಸೇವೆಯನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ನಡೆಸಿದೆ.

ಮೊಬೈಲ್ ಒಮ್ಮುಖ ಸೇವೆ

ಮೊಬೈಲ್ ಒಮ್ಮುಖ ಸೇವೆ

ಮೊಬೈಲ್ ಒಮ್ಮುಖ ಸೇವೆಯ ಮೂಲಕ ಕೆಲವೇ ತಿಂಗಳಲ್ಲಿ ನಮ್ಮ ಲ್ಯಾಂಡ್‌ಲೈನ್ ಧನಾತ್ಮಕವಾಗಿ ಪರಿಣಮಿಸಲ್ಪಡಲಿದೆ ಅಂತೆಯೇ ಮೊಬೈಲ್ ಸಂಖ್ಯೆ ಪೋರ್ಟೆಬಿಲಿಟಿ ಸ್ಕೀಮ್ ಅಡಿಯಲ್ಲಿ ಮೊಬೈಲ್ ಚಂದಾದಾರರನ್ನು ನಾವು ಪಡೆದುಕೊಳ್ಳುತ್ತಿದ್ದೇವೆ ಎಂದು ಶ್ರೀವಾಸ್ತವ ತಿಳಿಸಿದ್ದಾರೆ.

ಉಚಿತ ಇನ್‌ಕಮಿಂಗ್ ಕರೆ

ಉಚಿತ ಇನ್‌ಕಮಿಂಗ್ ಕರೆ

ಯಾವುದೇ ಹೆಚ್ಚುವರಿ ದರವಿಲ್ಲದೆ ದೇಶದ ಯಾವ ಭಾಗದಲ್ಲಿದ್ದರೂ ಉಚಿತ ಇನ್‌ಕಮಿಂಗ್ ಕರೆಗಳನ್ನು ಸ್ವೀಕರಿಸುವ ಸೇವೆಯನ್ನು ಬಳಕೆದಾರರಿಗೆ ಒದಗಿಸುವ ಉಚಿತ ರೋಮಿಂಗ್ ಸ್ಕೀಮ್ ಅನ್ನು ಸಂಸ್ಥೆ ಲಾಂಚ್ ಮಾಡಿದೆ.

ಹಿತಾಚಿಯ ಎಟಿಎಮ್ ವ್ಯವಹಾರ

ಹಿತಾಚಿಯ ಎಟಿಎಮ್ ವ್ಯವಹಾರ

ಹಿತಾಚಿಯ ಎಟಿಎಮ್ ವ್ಯವಹಾರದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿದ್ದು, ಇದು ಲ್ಯಾಂಡ್‌ಲೈನ್ ಗ್ರಾಹಕರಿಗೆ ಅಂದರೆ ಆಫ್‌ಲೈನ್‌ನಲ್ಲಿ ಬಿಲ್ ಪಾವತಿಸುವವರಿಗೆ, ದಿನದಲ್ಲಿ ಯಾವಾಗ ಬೇಕಾದರೂ ಪೇಮೆಂಟ್ ಮಾಡುವ ವ್ಯವಸ್ಥೆಯನ್ನು ಒದಗಿಸುತ್ತಿದೆ.

ಬಿಎಸ್‌ಎನ್‌ಎಲ್ ರೆವೆನ್ಯೂ ಶೇರ್

ಬಿಎಸ್‌ಎನ್‌ಎಲ್ ರೆವೆನ್ಯೂ ಶೇರ್

ಹಿತಾಚಿ ಎಟಿಎಮ್ ಮೆಶೀನ್‌ಗಳು ಸಣ್ಣ ನಗರಗಳಲ್ಲಿ ಮಾರ್ಚ್ 2016 ರಿಂದ ಬಿಡುಗಡೆಗೊಳ್ಳಲಿದ್ದು ಬಿಎಸ್‌ಎನ್‌ಎಲ್ ರೆವೆನ್ಯೂ ಶೇರ್ ಅನ್ನು ಪ್ರತೀ ಟ್ರಾನ್ಸಕ್ಶನ್‌ನಲ್ಲಿ ಎಟಿಎಮ್‌ಗಳಲ್ಲಿ ಪಡೆದುಕೊಳ್ಳಲಿದೆ.

Best Mobiles in India

English summary
BSNL mobile subscribers will soon be able to avail free calling benefits offered on their landline phone as the state-run firm is going to roll out a convergence platform that will sync subscribers’ mobile and fixed line connections.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X